ಶತಕೋಟಿ ರೂ. ಆಸ್ತಿ ಒಡೆಯ ಬಿಜೆಪಿ ಅಭ್ಯರ್ಥಿ ಆರ್. ಶಂಕರ್

ಬೆಂಗಳೂರು, ಜೂ. 19: ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದ ಅನರ್ಹ ಶಾಸಕ, ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ಆರ್. ಶಂಕರ್ ಅವರು ಶತಕೋಟಿ ರೂಪಾಯಿಗಳ ಆಸ್ತಿ ಒಡೆಯರಾಗಿದ್ದಾರೆ.

Recommended Video

      ಟಿ20 ವಿಶ್ವಕಪ್ ನಡೆಯೋ ಬಗ್ಗೆ ಸುಳಿವು ನೀಡಿದ ಆಸ್ಟ್ರೇಲಿಯಾ | Oneindia Kannada

      ಪತ್ನಿ ಧನಲಕ್ಷ್ಮೀ ಅವರು ಕೂಡ ಶತಕೋಟಿ ರೂ. ಆಸ್ತಿಯ ಒಡತಿಯಾಗಿರುವುದು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಶಂಕರ್ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿದೆ. ವಿಧಾನ ಪರಿಷತ್‌ ಬಿಜೆಪಿ ಅಭ್ಯರ್ಥಿ ಆರ್. ಶಂಕರ್ ಒಟ್ಟು ಆಸ್ತಿಯ ಮೌಲ್ಯವು 301.38 ಕೋಟಿ ರೂಪಾಯಿಗಳು. ಆರ್. ಶಂಕರ್ 195 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಪತ್ನಿ ಧನಲಕ್ಷ್ಮೀ ಹೆಸರಲ್ಲಿ 106 ಕೋಟಿ ರು. ಮೌಲ್ಯದ ಆಸ್ತಿ ಇದೆ.

      ಅದೇ ರೀತಿಯಾಗಿ ಆರ್. ಶಂಕರ್ ಅವರು 35.1 ಲಕ್ಷ ರು. ಹಾಗು ಅವರ ಪತ್ನಿ ಧನಲಕ್ಷ್ಮಿ ಅವರು 27.22 ಲಕ್ಷ ರು. ನಗದು ಹಣವನ್ನು ಹೊಂದಿದ್ದಾರೆ. ಮಾಜಿ ಸಚಿವ ಆರ್. ಶಂಕರ್ 28.9 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 166.3 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆರ್. ಶಂಕರ್ ಪತ್ನಿ ಧನಲಕ್ಷ್ಮೀ 13.9 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 92.25 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯ ಒಡತಿಯಾಗಿದ್ದಾರೆ. ಸಂಪೂರ್ಣ ಆಸ್ತಿ ವಿವರ ಮುಂದಿದೆ.

      ಸಾಲವೂ ಇದೆ

      ಸಾಲವೂ ಇದೆ

      ಇನ್ನು ಶತಕೋಟಿ ಮೌಲ್ಯದ ಆಸ್ತಿ ಹೊಂದಿರುವ ಆರ್. ಶಂಕರ್ ಹಗೂ ಪತ್ನಿ ಧನಲಕ್ಷ್ಮೀ ಅವರಿಗೂ ಸಾಲದ ಕಾಟವಿದೆ. ಶತಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೂ ಸಾಲವೂ ಇದೆ. ಶಂಕರ್ ಅವರು 44.63 ಕೋಟಿ ರೂ. ಮತ್ತು ಪತ್ನಿ ಧನಲಕ್ಷ್ಮೀ ಅವರು 21.93 ಕೋಟಿ ರೂ. ಸಾಲ ಮಾಡಿದ್ದಾರೆ.

      ಐಶಾರಾಮಿ ವಾಹನಗಳು

      ಐಶಾರಾಮಿ ವಾಹನಗಳು

      ಮಾಜಿ ಸಚಿವ ಆರ್. ಶಂಕರ್ ಶಂಕರ್ ಹಾಗೂ ಪತ್ನಿ ಧನಲಕ್ಷ್ಮೀ ಅವರು ವಿವಿಧ ಬಗೆಯ ಒಟ್ಟು 9 ಐಶಾರಾಮಿ ವಾಹನಗಳನ್ನು ಹೊಂದಿದ್ದಾರೆ. ಆರ್. ಶಂಕರ್ ಹೆಸರಿನಲ್ಲಿ 70 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ, 42 ಲಕ್ಷ ಬೆಲೆ ಬಾಳುವ 3 ಇನೋವಾ ಕಾರುಗಳು ಹಾಗೂ 14 ಲಕ್ಷಕ್ಕು ಅಧಿಕ ಬೆಲೆಯ ಸ್ಕಾರ್ಪಿಯೋ ಕಾರ್ ಇವೆ. ಪತ್ನಿ ಹೆಸರಲ್ಲಿ ಬಿಎಂಡಬ್ಲ್ಯೂ ಸೇರಿದಂತೆ ಒಟ್ಟು 81.91 ಲಕ್ಷ ರು. ಮೌಲ್ಯದ ಇನ್ನೋವಾ, ಮಹೀಂದ್ರಾ ಹಾಗೂ ಫೋರ್ಡ್ ಕಾರುಗಳಿವೆ.

      ಚಿನ್ನಾಭರಣದ ವಿವರ

      ಚಿನ್ನಾಭರಣದ ವಿವರ

      ವಿವಿಧ ಬ್ಯಾಂಕ್‌ನ ಖಾತೆಯಲ್ಲಿ 3.57 ಲಕ್ಷ ರು. ಪತ್ನಿಯ ಹೆಸರಲ್ಲಿನ ವಿವಿಧ ಬ್ಯಾಂಕ್‌ನಲ್ಲಿ 94,619 ರೂ ಠೇವಣಿಯಿದೆ. ಶಂಕರ್ ಅವರ ಬಳಿ 74.27 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 11,775 ಸಾವಿರ ರು. ಮೌಲ್ಯದ ಬೆಳ್ಳಿ ಇದೆ. ಶಂಕರ ಅವರ ಪತ್ನಿ ಧನಲಕ್ಷ್ಮೀ ಅವರ ಬಳಿ 61.72 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 4.37 ಲಕ್ಷ ರು. ಮೌಲ್ಯದ 8 ಕೆಜಿ ಬೆಳ್ಳಿ ಮತ್ತು 10 ಲಕ್ಷ ರು. ಮೌಲ್ಯದ ಡೈಮಂಡ್ ನೆಕ್ಲೇಸ್ ಇದೆ ಎಂದು ಮಾಹಿತಿ ನೀಡಿದ್ದಾರೆ.

      ಶಂಕರ್ ಮೇಲಿವೆ 3 ಪ್ರಕರಣಗಳು

      ಶಂಕರ್ ಮೇಲಿವೆ 3 ಪ್ರಕರಣಗಳು

      ಜೊತೆಗೆ ಮಾಜಿ ಸಚಿವ. ಬಿಜೆಪಿಯ ಪರಿಷತ್ ಚುನಾವಣಾ ಅಭ್ಯರ್ಥಿ ಆರ್. ಶಂಕರ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು ಕೆಲವು ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+