Divorce: ಮದುವೆಯಾಗಿ 3 ನಿಮಿಷಕ್ಕೆ ಡಿವೋರ್ಸ್​ ಪಡೆದ ದಂಪತಿ: ಕಾರಣ 'ಸ್ಟುಪಿಡ್'​

ಇತ್ತೀಚಿಗೆ ವಿಚ್ಛೇದನ ಎನ್ನುವುದು ತೀರಾ ಸಾಮಾನ್ಯವಾದ ವಿಷಯವಾಗಿದೆ. ಚಿತ್ರರಂಗದ ನಟ-ನಟಿಯರು ಸೇರಿದಂತೆ ಜನಸಾಮಾನ್ಯರು ಕೂಡ ಚಿಕ್ಕ ಚಿಕ್ಕ ವಿಚಾರಗಳಿಗೆ ವಿಚ್ಛೇದನ ಪಡೆದು ಮದುವೆ ಎನ್ನುವ ಬಾಂಧವ್ಯದಿಂದ ಹೊರಬರುತ್ತಿದ್ದಾರೆ.

ನನ್ನ ಗಂಡ ಅತಿಯಾಗಿ ಗೊರಕೆ ಹೊಡೆಯುತ್ತಾನೆ, ನನ್ನ ಪತ್ನಿ ಹೆಚ್ಚು ಮೊಬೈಲ್‌ ಬಳಸುತ್ತಾಳೆ, ಪ್ರತಿ ನಿತ್ಯ ಸ್ನಾನ ಮಾಡಲ್ಲ, ಒದ್ದೆ ಬಟ್ಟೆಯನ್ನು ಬೆಡ್‌ ಮೇಲೆ ಹಾಕುತ್ತಾನೆ, ಅತಿಯಾಗಿ ತಿನ್ನುತ್ತಾನೆ, ಮನೆಯಲ್ಲಿ ಅಡುಗೆ ಮಾಡಲ್ಲ, ಹೀಗೆ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೋರಿ ದಂಪತಿ ಕೋರ್ಟ್‌ ಮೆಟ್ಟಿಲೇರುವುದು ಹೆಚ್ಚಾಗುತ್ತಿದೆ. ವಿಚ್ಛೇದನ ಕೋರಿ ಬಂದ ದಂಪತಿಯ ಕಾರಣ ಕೇಳಿ ನ್ಯಾಯಾಧೀಶರು ಹಾಗೂ ವಕೀಲರು ಸುಸ್ತು ಬೀಳುತ್ತಿದ್ದಾರೆ.

Kuwait Couple Divorce Within 3 Minutes Of Getting Married Due To Stupid Reason

ಪ್ರಸ್ತುತ ಪರಿಸ್ಥಿತಿಗಳನ್ನು ನೋಡಿದರೆ ಮದುವೆಯಾಗಿ ನೂರು ದಿನ, ಮೂರು ದಿನ ಅಲ್ಲ, ಮೂರು ನಿಮಿಷಕ್ಕೆ ವಿಚ್ಛೇದನ ಪಡೆದರೆ ಅಚ್ಚರಿ ಇಲ್ಲ ಎಂದು ಕೆಲವರು ತಮಾಷೆಗೆ ಹೇಳುತ್ತಾರೆ. ಈ ತಮಾಷೆಯೇ ಮಾತೇ ಈಗ ಸತ್ಯವಾಗಿದೆ. ಇಲ್ಲೊಂದು ಜೋಡಿ ಮದುವೆಯಾಗಿ ಮೂರು ನಿಮಿಷಕ್ಕೆ ವಿಚ್ಛೇಧನ ಕೋರಿದ್ದಾರೆ. ಅಚ್ಚರಿಯಾದರೂ ಇದು ಸತ್ಯವಾಗಿದೆ.

ಇಂದಿನ ಯುವ ಜನತೆಯ ಮನಸ್ಥಿತಿಗೆ ಮದುವೆ ಎನ್ನುವ ಸಂಬಂಧ 3 ನಿಮಿಷದಲ್ಲಿ ಮುರಿದು ಬಿದ್ದರೂ ಅಚ್ಚರಿಯೇನಿಲ್ಲ ಎಂದು ಹಲವಾರು ಹಿರಿಯರು ಹೇಳುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಕುವೈತ್​ನ ಜೋಡಿ ಮುವೆಯಾಗಿ ಸರಿಯಾಗಿ 3 ನಿಮಿಷಕ್ಕೆ ಬೇರೆಯಾಗಲು ವಿಚ್ಛೇಧನಕ್ಕೆ ಮೊರೆ ಹೋಗಿದ್ದಾರೆ. ಅಚ್ಚರಿ ಎಂದರೆ ಈ ದಂಪತಿ ವಿಚ್ಛೇಧನ ಪಡೆದಿದ್ದಾರೆ ಕೂಡ.

Kuwait Couple Divorce Within 3 Minutes Of Getting Married Due To Stupid Reason

ಕುವೈತ್​ನ ಜೋಡಿ ಮದುವೆಯಾಗಲು ನ್ಯಾಯಾಲಯಕ್ಕೆ ಬಂದಿದ್ದರು. ನ್ಯಾಯಾಲಯದ ಸಮ್ಮುಖದಲ್ಲಿ ಮದುವೆಯಾದರು. ವರನ ಬಗ್ಗೆ ವಧುವಿಗೆ ಸ್ವಲ್ಪಮಟ್ಟಿನ ಅಸಾಮಾಧಾನವಿತ್ತು ಎನ್ನಲಾಗಿದೆ. ಈ ಮಧ್ಯಯೇ ಕೋರ್ಟ್​​ನಿಂದ ಹೊರ ಬರುವಾಗ ವಧು ಕಾಲು ಎಡವಿ ವರನ ಮೇಲೆ ಬಿದ್ದಿದ್ದಾಳೆ.

ಈ ವೇಳೆ ತನ್ನ ಪತ್ನಿಯನ್ನು ಹಿಡಿದುಕೊಂಡು ಕಾಪಾಡದ ವರ ಆಕೆಯನ್ನು ತಳ್ಳಿ ಸ್ಟುಪಿಡ್ ಎಂದು ಬೈದಿದ್ದಾನೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ವಧು ಕೋರ್ಟ್ ಬಾಗಿಲಿನಿಂದ ವಾಪಾಸ್‌ ತೆರಳಿ ವಿಚ್ಛೇಧನ ಕೇಳಿದ್ದಾಳೆ. ಸ್ಟುಪಿಡ್​ ಎಂಬ ಪದ ಹೇಗೆ ಬಳಸಿದ ಎಂದು ಕಿರುಚಾಡಿದ್ದಾಳೆ. ನವ ವಧು-ವರನ ಅಭಿಪ್ರಾಯ ಕೇಳಿದ ಕೋರ್ಟ್ ಜಸ್ಟ್​ ಡಿವೋರ್ಸ್​ ಎಂಬ ಸಿಂಪಲ್​ ಪ್ರಕ್ರಿಯೆ ಮೂಲಕ ಜೋಡಿಗೆ ವಿಚ್ಛೇಧನ ನೀಡಿದ್ದಾರೆ ಎನ್ನಲಾಗಿದೆ. ಮದುವೆ ದಿನವೇ ಈ ಜೋಡಿ ಡಿವೋರ್ಸ್ ಪಡೆದು ಮತ್ತೆ ಬೇರೆ ಬದುಕು ಆರಂಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+