ಮನೆಮನೆಗೆ ಬಂದು ಹರಸುವ ಕೋಲೆ ಬಸವನ ನೋಡಿದಿರಾ?

By: ಸವಿತಾ ರವಿಶಂಕರ್
Subscribe to Oneindia Kannada

ಬಸವ ಬಸವ ಆಡಿಸುವುದು ಪುರಾತನ ಕಾಲದ ಸಂಪ್ರದಾಯ. ಬಸವ ಕುಣಿಸುವುದು ಕುಲಕಸುಬು, ತಾತ ಮುತ್ತಾತನ ಕಾಲದಿಂದಲೂ ನಡೆಸಿಕೊಂಡು ಬಂದ ಪದ್ಧತಿ ಇಂದಿಗೂ ಜಾರಿಯಲ್ಲಿದೆ.

'ಊರಿಂದೂರಿಗೆ ನಡೆದುಕೊಂಡು ಹೋಗಿ ಬಸವನನ್ನು ಆಡಿಸುತ್ತೇವೆ. ವರ್ಷ ಪೂರ್ತಿ ಇದೆ ನಮ್ಮ ಉದ್ಯೋಗ ಹಾಗೂ ಬಿಡುವಿನ ವೇಳೆಯಲ್ಲಿ ಶುಭ ಸಮಾರಂಭಗಳಿಗೆ ವಾದ್ಯವನ್ನೂ ನುಡಿಸುತ್ತೇವೆ' ಎನ್ನುತ್ತಾರೆ ಬಸವ ಕುಣಿಸುವ ಬಾಲು ಮತ್ತು ಅಪ್ಪಣ್ಣ.

ಬಸವ ಎಂದರೆ ಹೌದು, ಬಸವ ಎಂದರೆ ಇಲ್ಲ ಎಂದು ಮಾತಿಗೆ ತಕ್ಕಂತೆ ತಲೆ ಕುಣಿಸುವ ಕೋಲೆಬಸವ ಮನೆ ಮುಂದೆ ಬಂದು ಕತ್ತಲ್ಲಿರುವ ಗೆಜ್ಜೆಯನ್ನು ಅಲ್ಲಾಡಿಸಿ ಕಾಲೆತ್ತಿ ಶುಭ ಹಾರೈಸುತ್ತಾನೆ.

Kole Basava the tradition of the folk art

ಗೆಜ್ಜೆ, ಕವಡೆ, ಮಣಿ, ಬಣ್ಣದ ಬಟ್ಟೆಗಳಿಂದ ಅಲಂಕೃತನಾದ ಹೋರಿ ಬಸವನ ಗೆಜ್ಜೆಯ ಸದ್ದು ಮನಕ್ಕೊಂದು ಖುಷಿ ತರುತ್ತದೆ. ಅವನೊಡನೆ ಪೀಪಿ ಊದುತ್ತ ನಿಂತ ಅದರ ಯಜಮಾನ, ಮನೆಯವರ ಮನ ಖುಷಿ ಪಡಿಸುವ ಮಾತುಗಳನ್ನಾಡುತ್ತಾನೆ.

Kole Basava the tradition of the folk art

ಖುಷಿ ಪಟ್ಟ ಮನೆ ಮಂದಿ ಅಕ್ಕಿ, ಬೆಲ್ಲ ಬಸವನಿಗೆ ನೀಡಿ, ನಮಸ್ಕರಿಸಿ ಹಣ ನೀಡಿ ಕಳುಹಿಸುತ್ತಾರೆ. ಹೀಗೆ ಮನೆಯಂಗಳಕ್ಕೆ ಬಂದು ಹರಸುವ ಬಸವನಿಗೆ ಗೌರವ ಆತಿಥ್ಯ ದೊರೆಯುತ್ತದೆ.

ಬಸವ ಮನೆಗೆ ಬಂದರೆ ಶುಭ ಲಕ್ಷಣ, ಮನೆಯವರಿಗೆ ಒಳ್ಳೆಯದಾಗುತ್ತದೆ. ಮನೆಯ ಮಕ್ಕಳನ್ನು ಬಸವ ಹರಸಿದರೆ ಮಕ್ಕಳಿಗೆ ಶ್ರೇಯಸ್ಸು ಇಂತಹ ನಂಬಿಕೆ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಇದೆ.

Kole Basava the tradition of the folk art

ಹೀಗೊಂದು ಮುಂಜಾನೆ ನಮ್ಮ ಮೈಸೂರಿನ ಮನೆಯ ಮುಂದೆ ಬಸವನೊಡನೆ ಸಂವಾದ ನಡೆಸಿದ್ದು ನನ್ನ ಭಾಗ್ಯವೇ ಸರಿ, ಏನಂತೀರ?.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kole Basava the tradition of the folk art. Bulls of local Indian breed are trained to entertain people is a time-hounoured practice, which has survived to this day. Kole Basava is an adorned bull accompanying his master.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ