ಜಾಗತಿಕ ಮಟ್ಟದಲ್ಲಿ ಭಾರತೀಯ ಉದ್ಯಮಿಗಳು ಮಿಂಚುತ್ತಿರುವ ಗುಟ್ಟೇನು?
ವಿಶ್ವದ ಜಾಗತೀಕರಣ ವ್ಯವಸ್ಥೆಯು ಭಾರತೀಯ ಪ್ರತಿಭೆ ತೋರ್ಪಡಿಸಲು ಒಳ್ಳೆಯ ಅವಕಾಶ ಒದಗಿಸಿದೆ. ಬಹಳಷ್ಟು ಭಾರತೀಯರು ಜಾಗತಿಕ ವೇದಿಕೆಯಲ್ಲಿ ಮಿರಮಿರ ಮಿಂಚುತ್ತಿದ್ದಾರೆ.
ವಿಶ್ವದ ಯಾವುದೇ ದೊಡ್ಡ ಕಂಪನಿ ತೆಗೆದುಕೊಂಡರೂ ಉನ್ನತ ಹಂತದಲ್ಲಿ ಭಾರತೀಯರು ಇದ್ದೇ ಇರುತ್ತಾರೆ. ಕೌಶಲ್ಯದಲ್ಲಾಗಲೀ, ಪ್ರತಿಭೆಯಲ್ಲಾಗಲೀ ಭಾರತೀಯರು ಯಾರಿಗೂ ಕಡಿಮೆ ಅಲ್ಲ. ನಾಸಾದಂಥ ಸಂಸ್ಥೆಯ ಆಯಕಟ್ಟಿನ ಜಾಗದಲ್ಲಿ ಭಾರತ ಮೂಲದವರಿದ್ದಾರೆ. ಅನೇಕ ದೊಡ್ಡ ಸಂಸ್ಥೆಗಳಿಗೆ ಭಾರತೀಯರು ಸಿಇಒ ಇತ್ಯಾದಿ ಮುಖ್ಯಸ್ಥ ಸ್ಥಾನ ಹೊಂದಿದ್ದಾರೆ.
ಮೈಕ್ರೋಸಾಫ್ಟ್, ಗೂಗಲ್, ಟ್ವಿಟ್ಟರ್, ಐಬಿಎಂ, ಅಡೋಬ್, ಪೆಪ್ಸಿಕೋ, ವಿಮಿಯೋ, ವಿಎಂ ವೇರ್ ಇತ್ಯಾದಿ ಸಂಸ್ಥೆಗಳಲ್ಲಿ ಭಾರತೀಯರು ಲೀಡರ್ ಸ್ಥಾನದಲ್ಲಿದ್ದಾರೆ. ಇ್ತೀಚೆಗೆ, ಫೆಡೆಕ್ಸ್ ಎಂಬ ಜಾಗತಿಕ ದೈತ್ಯ ಕೊರಿಯರ್ ಕಂಪನಿಗೆ ರಾಜ್ ಸುಬ್ರಮಣಿಯಮ್ ಸಿಇಒ ಆದರು. ಚಾನೆಲ್ ಎಂಬ ಸಂಸ್ಥೆಗೆ ಲೀನಾ ನಾಯರ್ ಸಿಇಒ ಆಗಿದ್ದಾರೆ.
ರಾಜ್ ಸುಬ್ರಮಣಿಯಮ್, ಲೀನಾ ನಾಯರ್ ಅವರಲ್ಲದೇ, ಸುಂದರ್ ಪಿಚೈ, ಸತ್ಯ ನಾದೆಲ್ಲಾ, ಜಯಶ್ರೀ ಉಲ್ಲಾಳ, ಅರವಿಂದ್ ಕೃಷ್ಣ, ಶಾಂತನು ನಾರಾಯಣ್, ಅಂಜಲಿ ಸೂದ್, ಸಂಜಯ್ ಮೆಹ್ರೋತ್ರಾ ಮೊದಲಾದವರು ವಿವಿಧ ಕಂಪನಿಗಳ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.
ವಿಶ್ವದ ಹಲವು ದೇಶಗಳಲ್ಲಿ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ನೆಲಸಿದ್ದಾರೆ ಅಥವಾ ಕೆಲಸ ಮಾಡುತ್ತಿದ್ದಾರೆ. ಅಲ್ಲೆಲ್ಲಾ ಭಾರತೀಯರು ಮುಖ್ಯ ಹಂತಕ್ಕೆ ಹೋಗಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ದೇಶಗಳ ಕೆಲ ರಾಜ್ಯಗಳಲ್ಲಿ ಭಾರತೀಯರು ಗವರ್ನರ್ ಆಗಿದ್ದಾರೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್. ಬ್ರಿಟನ್‌ನಲ್ಲಿ ರಿಷಿ ಸುನಕ್ ಪ್ರಧಾನಿ ಸ್ಥಾನದ ರೇಸ್‌ನಲ್ಲಿದ್ದಾರೆ. ಭಾರತೀಯರು ಇಷ್ಟು ಯಶಸ್ಸು ಸಾಧಿಸಲು, ಪ್ರವರ್ಧಮಾನಕ್ಕೆ ಬರಲು ಏನು ಕಾರಣ?

ವೈವಿಧ್ಯತೆ
ಭಾರತ ಒಂದು ರೀತಿಯಲ್ಲಿ ಬಹುಸಂಸ್ಕೃತಿಯ ವಾತಾವರಣ ಇರುವ ದೇಶ. ಎಲ್ಲಾ ರೀತಿಯ ವೈವಿಧ್ಯತೆಗೆ ಭಾರತೀಯರು ಒಗ್ಗಿರುತ್ತಾರೆ. ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ವಿವಿಧ ಭಾಷೆ, ಜಾತಿ, ಮತ, ಪಂಥಗಳ ಜನರು ಪರಸ್ಪರ ಬೆರೆತು ನೆಲಸುತ್ತಾರೆ. ಪರಸ್ಪರ ಗೌರವ ಹೊಂದಿರುತ್ತಾರೆ. ಭಾರತೀಯರ ಈ ಗುಣ ಬಹುರಾಷ್ಟ್ರೀಯ ಕಂಪನಿಗೆ ಹೇಳಿಮಾಡಿಸಿದ್ದಿದೆ. ಹೀಗಾಗಿ, ಸಿಇಒ ಸ್ಥಾನಗಳಿಗೆ ಭಾರತೀಯರಿಗೆ ಹೆಚ್ಚು ಆದ್ಯತೆ ಸಿಗುತ್ತಿರುವಂತಿದೆ.
ಸಂಕಷ್ಟದಲ್ಲಿ ಜೈಸುವ ಸಾಮರ್ಥ್ಯ
ಸಿಇಒಗಳಾಗಿರುವ ಭಾರತೀಯರು ಅಷ್ಟು ಸುಲಭಕ್ಕೆ ಆ ಹಂತಕ್ಕೆ ಏರಿದವರಲ್ಲ. ಬಹಳ ಕಷ್ಟಪಟ್ಟು ಕೆಳ ಸ್ತರದಿಂದ ಬೆಳೆದು ಹೋಗುತ್ತಾರೆ. ಗೂಗಲ್ ಸಿಇಒ ಸುಂದರ್ ಪಿಚೈ ಯಾವುದೇ ತಂತ್ರಜ್ಞಾನದ ಸೌಲಭ್ಯ ಇಲ್ಲದೇ ಬೆಳೆದವರು. ಅವರು ಸ್ಟಾನ್ಫೋರ್ಡ್ ವಿವಿಗೆ ಓದಲು ಹೋದಾಗ ವಿಮಾನ ಟಿಕೆಟ್ ಖರೀದಿಸಿಲು ಅವರ ತಂದೆ ತಮ್ಮ ಒಂದು ವರ್ಷದ ಸಂಬಳವನ್ನು ಖರ್ಚು ಮಾಡಬೇಕಾಯಿತು. ಅಷ್ಟು ಮಧ್ಯಮ ಕುಟುಂಬದಿಂದ ಬಂದವರು ಪಿಚೈ.
ಬ್ರಿಟನ್‌ನಲ್ಲಿ ಭಾರತದ ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್ ಕೋಲ್ಕತಾದಲ್ಲಿ ಬಾಡಿಗೆ ಮನೆಯಲ್ಲಿದ್ದವರು. ಹಂತ ಹಂತವಾಗಿ ಶ್ರಮ ಹಾಕಿ ದೊಡ್ಡ ಉದ್ಯಮಿಯಾಗಿ ಬೆಳೆದರು. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಆ ಸಂಸ್ಥೆಯಲ್ಲಿ ತಮ್ಮ ಅನೇಕ ಪ್ರಯೋಗಗಳು ವಿಫಲವಾದರೂ ಎದೆ ಗುಂದದೆ ಪ್ರಯತ್ನಗಳನ್ನು ಹಾಕುತ್ತಲೇ ಹೋಗಿ ಕೊನೆಗೆ ಯಶಸ್ಸು ಕಂಡರು. ಹೀಗಾಗಿ, ಭಾರತೀಯರ ಛಲದ ಸ್ವಭಾವ ಅವರನ್ನು ಉನ್ನತ ಹಂತದಲ್ಲಿ ಯಶಸ್ಸಿಗೆ ತಳ್ಳುತ್ತಿದೆ.

ಸ್ಪರ್ಧಾತ್ಮಕತೆ
ಒಂದು ಗುಂಪಿನಲ್ಲಿ ಹತ್ತು ಜನ ಇದ್ದರೆ ಅದೆಷ್ಟು ಸ್ಪರ್ಧೆ ಏರ್ಪಡುತ್ತದೆ. ಅದೇ 140 ಕೋಟಿ ಜನಸಂಖ್ಯೆ ಇದ್ದರೆ ಹೇಗಿರಬೇಡ. ಭಾರತದ ಅಪಾರ ಜನಸಂಖ್ಯೆ ಹಲವು ರೀತಿಯಲ್ಲಿ ವರದಾನವಾಗಿದೆ. ಇಲ್ಲಿ ವಿವಿಧ ಸ್ತರದಲ್ಲಿ ಸ್ಪರ್ಧಾತ್ಮಕತೆ ವಿಪರೀತವಾಗಿರುತ್ತದೆ. ಐಐಟಿಗೆ ಸೇರಲು ಪ್ರವೇಶ ಪರೀಕ್ಷೆ ಬರೆಯುವವರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚು. 12 ಸಾವಿರ ಸೀಟುಗಳಿಗಾಗಿ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ ಬರೆಯುತ್ತಾರೆ. ಹೀಗಾಗಿ, ಸ್ಪರ್ಧಾತ್ಮಕತೆಗೆ ಭಾರತೀಯರು ಒಗ್ಗಿಹೋಗಿರುತ್ತಾರೆ.
ಸಂವಹನ
ಯಾವುದೇ ನಾಯಕನಾದರೂ ತನ್ನ ವಿಚಾರವನ್ನು ಸಮರ್ಥವಾಗಿ ಮಂಡಿಸುವ ಮತ್ತು ತಿಳಿಸುವ ಗುಣ ಹೊಂದಿರಬೇಕು. ಈ ವಿಚಾರದಲ್ಲೂ ಭಾರತೀಯರು ಸಿದ್ಧಿ ಹೊಂದಿದ್ದಾರೆ. ಭಾರತದ ಬಹು ಭಾಷೆಯ ಸಂಸ್ಕೃತಿ ಇಲ್ಲಿ ವರದಾನವಾಗಿದೆ. ವಿವಿಧ ಭಾಷಿಕರೊಂದಿಗಿನ ಸಂವಹನವು ಭಾರತೀಯರಲ್ಲಿ ಈ ಗುಣವನ್ನು ಜಾಗೃತಗೊಳಿಸಿದೆ. ಭಾರತೀಯರ ಸಂವಹನ ಸಾಮರ್ಥ್ಯಕ್ಕೆ ಭಾಷೆ ಅಡ್ಡಿ ಆಗುವುದಿಲ್ಲ. ವಿವಿಧ ಸಂಸ್ಕೃತಿ, ಭಾಷಿಕರು ಇರುವ ಕಂಪನಿಗೆ ಸಿಇಒ ಆದವರಲ್ಲಿ ಇಂಥದ್ದೊಂದು ಗುಣ ಇರಬೇಕು. ಅಂತೆಯೇ, ಭಾರತೀಯರಿಗೆ ಒಳ್ಳೆಯ ಬೇಡಿಕೆ ಇದೆ.
(ಒನ್ಇಂಡಿಯಾ ಸುದ್ದಿ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications