• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳ ಕಾಯಿಲೆ ಚಿಕಿತ್ಸೆಗಾಗಿ ಗಾಂಜಾ ಬಳಕೆ ಕಾನೂನುಬದ್ದಗೊಳಿಸಲು ಹೋರಾಡುತ್ತಿರುವ ತಾಯಿ

|
Google Oneindia Kannada News

ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಆಡಿಕೊಂಡಿದ್ದ ಮಗು ಪಿಕಾ ಸಸಿ ಕಿರಣ. ಅಂಬೆಗಾಲು ಇಡುವ ಪುಟ್ಟ ಹುಡುಗಿಯಾಗಿ ನಂತರ ಶಿಶು ವಿಹಾರವನ್ನು ತಲುಪಿದಾಗಲೂ ಆಕೆ ಉತ್ಸಾಹದ ಚಿಲುಮೆಯಾಗಿದ್ದಳು. ತನ್ನ ತರಗತಿಯ ಇತರ ಮಕ್ಕಳಂತೆಯೇ ಇದ್ದಳು. ಅತ್ಯಾಸಕ್ತಿಯ ಗಾಯಕಿ, ನೃತ್ಯ ಮಾಡಲು ಮತ್ತು ಮಧ್ಯಾಹ್ನ ತನ್ನ ಸೈಕಲ್ ಸವಾರಿ ಮಾಡಿ ಸಂಭ್ರಮಿಸುತ್ತಿದ್ದಳು. ಮಗಳ ತುಂಟಾಟವನ್ನು ನೋಡಿದ ತಾಯಿ ಸಂತಿ ವಾರಸ್ತುತಿ ಮತ್ತು ತಂದೆ ಸುನರ್ತಾ ಸಂಭ್ರಮಿಸುತ್ತಿದ್ದರು. ಆದರೆ ಅವರ ಖುಷಿ ಹೆಚ್ಚು ದಿನ ಉಳಿಯಲಿಲ್ಲ.

ಪಿಕಾ ಸಸಿ ಕಿರಣ ಐದು ವರ್ಷದವಳಿದ್ದಾಗ ಅವಳ ಆರೋಗ್ಯ ಹಠಾತ್ ಹದಗೆಟ್ಟಿತು. ಶಾಲೆಯಲ್ಲಿ ವಾಂತಿ ಮಾಡಲು ಪ್ರಾರಂಭಿಸಿದಳು, ಹಲವು ಬಾರಿ ಮೂರ್ಛೆ ಹೋಗುತ್ತಿದ್ದಳು. ವಾರಸ್ತುತಿ ತನ್ನ ಮಗಳನ್ನು ಇಂಡೋನೇಷಿಯಾದ ಬಾಲಿ ದ್ವೀಪದ ಡೆನ್‌ಪಾಸರ್ ನಲ್ಲಿರುವ ವೈದ್ಯರ ಬಳಿಗೆ ಕರೆದೊಯ್ದಾಗ, ಪಿಕಾಗೆ ಅಪಸ್ಮಾರ ಔಷಧಿ ನೀಡುವಂತೆ ಸೂಚಿಸಲಾಯಿತು.

ಗಾಂಜಾ ಎಲೆ ಆಕಾರದಲ್ಲಿ ಬೈಕ್‌ಗಳನ್ನು ನಿಲ್ಲಿಸಿದ ಬೆಂಗಳೂರು ಪೊಲೀಸರು!ಗಾಂಜಾ ಎಲೆ ಆಕಾರದಲ್ಲಿ ಬೈಕ್‌ಗಳನ್ನು ನಿಲ್ಲಿಸಿದ ಬೆಂಗಳೂರು ಪೊಲೀಸರು!

ಆದರೆ ತಮ್ಮ ಮಗಳಿಗೆ ಬಂದಿರುವುದು "ಸೆರೆಬ್ರಲ್ ಪಾಲ್ಸಿ" ಎನ್ನುವ ಕಾಯಿಲೆ ಎಂದು ವಾರಸ್ತುತಿಗೆ ಯಾರೂ ಹೇಳಿಲ್ಲ. ಆದರೆ ವೈದ್ಯರ ಟಿಪ್ಪಣಿಯಲ್ಲಿ ಅವರು ಅದನ್ನು ನೋಡಿದ್ದಾರೆ. ಸೆರೆಬ್ರಲ್ ಪಾಲ್ಸಿ ರೋಗನಿರ್ಣಯದ ನಂತರ, ಪಿಕಾ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ರೋಗ ಉಲ್ಬಣವಾಗುವುದನ್ನು ತಪ್ಪಿಸಲು ಪಿಕಾಳ ಆರೋಗ್ಯ ಸುಧಾರಣೆಗೆ ಯಾವುದೇ ಪರಿಹಾರ ದೊರೆಯಲಿಲ್ಲ.

ವೈದ್ಯರನ್ನು ಭೇಟಿ ಮಾಡಿದಾಗ ಪ್ರತಿ ಬಾರಿ ಔಷಧಿಗಳನ್ನು ಬದಲಾಯಿಸುತ್ತಿದ್ದರು ಆದರೂ ಏನೂ ಸುಧಾರಣೆಯಾಗಲಿಲ್ಲ ಎಂದು ವಾರಸ್ತುತಿ ಹೇಳಿದರು.

 ಮಗಳ ಕಾಯಿಲೆಗೆ ಗಾಂಜಾದಲ್ಲಿದೆ ಔಷಧಿ!

ಮಗಳ ಕಾಯಿಲೆಗೆ ಗಾಂಜಾದಲ್ಲಿದೆ ಔಷಧಿ!

ಮಗಳ ಸಮಸ್ಯೆಗೆ ಪರಿಹಾರ ಹುಡುಕಲು ಇತರ ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಿದರು. 24 ಗಂಟೆಗಳ ಕಾಲ ಮಗಳಿಗೆ ಆರೈಕೆ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ ಮಗಳ ಕಾಯಿಲೆಯ ಪ್ರಭಾವವನ್ನು ಕಡಿಮೆ ಮಾಡುವ ಔಷಧವೊಂದರ ಬಗ್ಗೆ ಆಕೆ ತಿಳಿದುಕೊಂಡಳು. ಅದೇ ಗಾಂಜಾ ಸೊಪ್ಪು, ಹೌದು, ಗಾಂಜಾವನ್ನು ಔಷಧಿಯಾಗಿ ಸೆರೆಬ್ರಲ್ ಪಾಲ್ಸಿ ಕಾಯಿಲೆಗೆ ಹಲವು ದೇಶಗಳಲ್ಲಿ ಉಪಯೋಗಿಸುತ್ತಿರುವುದು ಆಕೆಗೆ ಗೊತ್ತಾಯಿತು.

ಆದರೆ, ಸಮಸ್ಯೆ ಶುರುವಾಗಿದ್ದು ಇಲ್ಲೇ. ಇಂಡೋನೇಷ್ಯಾದಲ್ಲಿ ಗಾಂಜಾವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದೇ ವಾರಸುತ್ತಿಯನ್ನು ಹೋರಾಟದ ಹಾದಿಗೆ ಕರೆತಂದಿತು. ಮಗಳಿಗಾಗಿ ತಾಯಿಯೊಬ್ಬಳು ಒಂದು ದೇಶದ ಕಾನೂನನ್ನೇ ಬದಲಾಯಿಸುವ ಹೋರಾಟಕ್ಕೆ ಮುಂದಾದಳು.

ವಾರಸ್ತುತಿ ಅವರು ಡೆನ್‌ಪಾಸರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ವೈದ್ಯಕೀಯ ಉದ್ದೇಶಕ್ಕಾಗಿ ಗಾಂಜಾ ಬಳಕೆಯ ಬಗ್ಗೆ ಮಾಹಿತಿ ಪಡೆದರು. ಯುರೋಪ್ ಮತ್ತು ಇತರ ದೇಶಗಳಲ್ಲಿ ಔಷಧವನ್ನು ಹೇಗೆ ಬಳಸುತ್ತಾರೆ ಎಂದು ಅವರ ಯೂರೋಪಿನ ಉದ್ಯೋಗದಾತರು ಹೇಳಿದರು.

 ಗಾಂಜಾ ಔಷಧಿ ಕೊಡಿಸಲು ವಿದೇಶ ಪ್ರಯಾಣ

ಗಾಂಜಾ ಔಷಧಿ ಕೊಡಿಸಲು ವಿದೇಶ ಪ್ರಯಾಣ

ಪಿಕಾಗೆ ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಕೊಳ್ಳುವ ಭರವಸೆಯಲ್ಲಿ ಅವಳು ತನ್ನ ತವರು ಯೋಗಿಕರ್ತಾಗೆ ಹಿಂದಿರುಗಿದಾಗ, ವಾರಸ್ತುತಿ ದ್ವಿ ಪ್ರತಿವಿ ಎನ್ನುವ ಮಹಿಳೆಯನ್ನು ಭೇಟಿಯಾದರು. ಅವರು ಕೂಡ ತಮ್ಮ ಮಗ ಮೂಸಾ ಎನ್ನುವವನಿಗೆ ಗಾಂಜಾ ಚಿಕಿತ್ಸೆಗಾಗಿ ಅನುಮತಿ ನೀಡಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ನಂತರ ಚಿಕಿತ್ಸೆಗಾಗಿ ಆಸ್ಟ್ರೇಲಿಯಾಗೆ ಮಗನನ್ನು ಕರೆದೊಯ್ದರು.

ಸೆರೆಬ್ರಲ್ ಪಾಲ್ಸಿ ಸಹ ಹೊಂದಿದ್ದ ಮೂಸಾ ನಂತರ ನಿಧನರಾದರು. ಆದರೆ ಗಾಂಜಾ ವೈದ್ಯಕೀಯ ಬಳಕೆ ಅಸ್ವಸ್ಥತೆ ಹೊಂದಿರುವವರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಾರಸ್ತುತಿ ತಿಳಿದುಕೊಳ್ಳಲು ಸಾಧ್ಯವಾಯಿತು. ಗಾಂಜಾ ಚಿಕಿತ್ಸೆಯಿಂದ ಚಲಿಸುವ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಸ್ನಾಯುವಿನ ಕ್ಷೀಣತೆಯನ್ನು ಸರಾಗಗೊಳಿಸುವ ಮತ್ತು ಹೆಚ್ಚು ಆರಾಮದಾಯಕವಾದ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

 ಗಾಂಜಾ ಬಳಕೆ ಕಾನೂನುಬದ್ದಗೊಳಿಸಲು ವಾರುಸ್ತಿತಿ ಹೋರಾಟ

ಗಾಂಜಾ ಬಳಕೆ ಕಾನೂನುಬದ್ದಗೊಳಿಸಲು ವಾರುಸ್ತಿತಿ ಹೋರಾಟ

ವೈದ್ಯಕೀಯ ಉದ್ದೇಶಗಳಿಗಾಗಿ ಇಂಡೋನೇಷ್ಯಾದಲ್ಲಿ ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕೆಂಬ ಅವರ ಮನವಿಗೆ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಜುಲೈ 20 ರಂದು ವಾರಸ್ತುತಿ, ಪ್ರತಿವಿ ಮತ್ತು ಮಗುವಿಗೆ ಸೆರೆಬ್ರಲ್ ಪಾಲ್ಸಿ ಹೊಂದಿರುವ ಇನ್ನೊಬ್ಬ ತಾಯಿ 2009 ರ ಇಂಡೋನೇಷ್ಯಾದ ಮಾದಕ ದ್ರವ್ಯ ಕಾನೂನಿನ ನ್ಯಾಯಾಂಗ ಪರಿಶೀಲನೆಗಾಗಿ ಸಲ್ಲಿಸಿದ ಮನವಿಯನ್ನು ಇಂಡೋನೇಷ್ಯಾದ ಸಾಂವಿಧಾನಿಕ ನ್ಯಾಯಾಲಯವು ತಿರಸ್ಕರಿಸಿತು. ಯಾವುದೇ ಕಾರಣಕ್ಕಾಗಿ ಗಾಂಜಾ ಬಳಕೆಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿತು.

ಇಂಡೋನೇಷ್ಯಾದಲ್ಲಿ, ಗಾಂಜಾ ಬಳಕೆ ವಿರುದ್ಧ ಕಠಿಣವಾದ ನಿರ್ಬಂಧಗಳನ್ನು ಹೊಂದಿದೆ. ಸಾಮಾನ್ಯವಾಗಿ ಕಿಕ್ಕಿರಿದ ಮತ್ತು ಅಮಾನವೀಯವಾದ ಜೈಲುಗಳಲ್ಲಿ ಹೆಚ್ಚಿನ ದಿನಗಳನ್ನು ಕಳೆಯಬೇಕಾಗುತ್ತದೆ. ಗಾಂಜಾ ಬಳಕೆದಾರರ ವಿರುದ್ಧ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಿಂದ ಈ ಶಿಕ್ಷೆಗಳು ಗಾಂಜಾ ಬಳಕೆಗಿಂತ ವ್ಯಕ್ತಿಯ ಆರೋಗ್ಯ, ಯೋಗಕ್ಷೇಮ ಮತ್ತು ಜೀವನದ ಗುಣಮಟ್ಟಕ್ಕೆ ಹೆಚ್ಚು ಹಾನಿಕಾರಕವಾಗಿದೆ.

ವೈದ್ಯಕೀಯ ಉದ್ದೇಶಗಳಿಗಾಗಿ ಗಾಂಜಾವನ್ನು ಕಾನೂನುಬದ್ಧಗೊಳಿಸುವ ತಾಯಂದಿರ ಪ್ರಯತ್ನವನ್ನು ಸಾಂವಿಧಾನಿಕ ನ್ಯಾಯಾಲಯ ತಿರಸ್ಕರಿಸಿದರೂ ಆಶ್ಚರ್ಯವಿಲ್ಲ ಎಂದು ವಾರಸ್ತುತಿ ಹೇಳುತ್ತಾರೆ, ಆದರೆ ಗಾಂಜಾದ ವೈದ್ಯಕೀಯ ಬಳಕೆಗಳ ಕುರಿತು ಹೆಚ್ಚಿನ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲು ಇಂಡೋನೇಷ್ಯಾ ಸರ್ಕಾರಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.

"ಕಾನೂನು ಸವಾಲನ್ನು ತಿರಸ್ಕರಿಸಲಾಗುವುದು ಎಂದು ನನಗೆ ತಿಳಿದಿತ್ತು, ಆದರೆ ನ್ಯಾಯಾಧೀಶರು ಗಾಂಜಾದ ವೈದ್ಯಕೀಯ ಸಂಶೋಧನೆಗೆ ಸೂಚನೆ ನೀಡಿದ್ದಾರೆ. ಇಂಡೋನೇಷ್ಯಾದಲ್ಲಿ ಜನರು ಗಾಂಜಾವನ್ನು ವೈದ್ಯಕೀಯ ಉದ್ದೇಶಕ್ಕಾಗಿ ಕಾನೂನುಬದ್ಧಗೊಳಿಸುವುದನ್ನು ಒಪ್ಪಿಕೊಳ್ಳುವುದು ಕಷ್ಟ ಏಕೆಂದರೆ ಗಾಂಜಾವು ನಿಮ್ಮನ್ನು ನಶೆಗೆ ತಳ್ಳುತ್ತದೆ ಎಂದು ಅವರು ಭಾವಿಸುತ್ತಾರೆ, ಆದರೆ ಅದನ್ನು ಬಳಸಲು ಒಳ್ಳೆಯ ಮತ್ತು ಕೆಟ್ಟ ಮಾರ್ಗಗಳಿವೆ." ಎಂದು ವಾರಸ್ತುತಿ ಹೇಳುತ್ತಾರೆ.

ವಾರಿಸ್ತುತಿ ಗಾಂಜಾವನ್ನು ಚಾಕುವಿಗೆ ಹೋಲಿಸುತ್ತಾರೆ. ಚಾಕುವನ್ನು ವಸ್ತುಗಳನ್ನು ಕತ್ತರಿಸಲು ಬಳಸಲಾಗುತ್ತದೆ. ಆದರೆ ಇದೇ ಚಾಕುವನ್ನು ಬಳಸಿ ನೀವು ಯಾರನ್ನಾದರೂ ಇರಿದು ಕೊಲ್ಲಬಹುದು, ಆದರೂ ಚಾಕುಗಳನ್ನು ಎಲ್ಲೆಡೆ ಮಾರಾಟ ಮಾಡಲು ಅನುಮತಿ ಇದೆ. ಗಾಂಜಾ ಕೂಡ ಇದೇ ರೀತಿ ನಾವು ಯಾವ ಉದ್ದೇಶಕ್ಕೆ ಬಳಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

 ಗಾಂಜಾ ಬಳಕೆಗೆ ಅನುಮತಿ ನೀಡಲು ಒತ್ತಾಯ

ಗಾಂಜಾ ಬಳಕೆಗೆ ಅನುಮತಿ ನೀಡಲು ಒತ್ತಾಯ

ಇಂಡೋನೇಷ್ಯಾದ ಮೊನಾಶ್ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆರೋಗ್ಯದ ಸಹಾಯಕ ಪ್ರಾಧ್ಯಾಪಕರಾದ ಕ್ಲೌಡಿಯಾ ಸ್ಟೊಯಿಸ್ಕು ಅವರ ಪ್ರಕಾರ, ಗಾಂಜಾದ ಮೇಲಿನ ಕಾನೂನು ವಿಚಾರಕ್ಕೆ ಬಂದಾಗ ದೇಶವು ತನ್ನ ನೆರೆಹೊರೆ ದೇಶಗಳಿಗಿಂತ ಭಿನ್ನವಾದ ನಿಲುವು ಹೊಂದಿದೆ ಎಂದು ಹೇಳಿದರು. "2022ರ ಜೂನ್‌ನಲ್ಲಿ ಥೈಲ್ಯಾಂಡ್ ಗಾಂಜಾ ಸೇವನೆಯನ್ನು ಕಾನೂನುಬದ್ಧಗೊಳಿಸಿತು ಮತ್ತು ಮಲೇಷ್ಯಾದಲ್ಲಿ ವೈದ್ಯಕೀಯ ಉದ್ದೇಶಗಳಿಗಾಗಿ ಗಾಂಜಾ ಬಳಕೆಯನ್ನು ಕಳೆದ ವರ್ಷದಿಂದ ಕಾನೂನುಬದ್ಧವಾಗಿ ನಿಯಂತ್ರಿಸಲಾಗಿದೆ" ಎಂದು ಅವರು ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆ 2019 ರಿಂದ ಶಿಫಾರಸು ಮಾಡಿರುವ ಪ್ರಕಾರ, ದೇಶವು ಗಾಂಜಾ ಬಳಕೆಗೆ ಅವಕಾಶ ನೀಡಬೇಕು ಎಂದು ಹೇಳುತ್ತಾರೆ.

ಉತ್ತರ ಸುಮಾತ್ರದ ಮೆಡಾನ್‌ನಲ್ಲಿರುವ ಅಡಿಕ್ಷನ್ ರಿಕವರಿ ಕಮ್ಯುನಿಟಿ ಅಸೋಸಿಯೇಷನ್‌ನ ಶಾಖಾ ವ್ಯವಸ್ಥಾಪಕ ಎಕಾ ಪ್ರಹಾಡಿಯನ್ ಅಬ್ದುರಹ್ಮಾನ್ ಪ್ರಕಾರ, "ಕಾನೂನುಬದ್ಧಗೊಳಿಸುವಿಕೆಯ ವಿರುದ್ಧ ಇರುವವರು ಮನೋರಂಜನಾ ಉದ್ದೇಶಗಳಿಗಾಗಿ ಗಾಂಜಾವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ವಾದಿಸುತ್ತಾರೆ" .

"ಸರ್ಕಾರವು ಗಾಂಜಾ ಸಂಶೋಧನೆಯಲ್ಲಿ ವೈದ್ಯಕೀಯ ಔಷಧಿಯಾಗಿ ಹೂಡಿಕೆ ಮಾಡಲು ಇನ್ನೂ ಸಿದ್ಧವಾಗಿಲ್ಲ, ವೈಜ್ಞಾನಿಕವಾಗಿ ಸಾಬೀತಾಗಿರುವ ಅನೇಕ ಸಾಗರೋತ್ತರ ಅಧ್ಯಯನಗಳು ಗಾಂಜಾವನ್ನು ಹೊರತುಪಡಿಸಿ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಔಷಧಿಗಳ ಪರವಾಗಿ ಸರ್ಕಾರದಿಂದ ಕಡಿಮೆ ಬಳಕೆಯಾಗಿವೆ." ಎಂದು ಅವರು ಹೇಳಿದರು.

ಅಬ್ದುರಹ್ಮಾನ್ ಮತ್ತು ಅವರ ಸಂಘವು ಗಾಂಜಾ ಕಾನೂನುಬದ್ಧಗೊಳಿಸುವಿಕೆಯನ್ನು ಬೆಂಬಲಿಸುತ್ತದೆ, ವೈದ್ಯಕೀಯ ಸಂದರ್ಭಗಳಲ್ಲಿ ಗಾಂಜಾವನ್ನು ಬಳಸಲು ಅನುಮತಿಸಲು ಕಾನೂನನ್ನು ಮರುರೂಪಿಸುವುದು ಸರಳವಲ್ಲ ಎಂದು ಅವರು ಹೇಳುತ್ತಾರೆ.

ದೇಶದಲ್ಲಿ ಪೂರ್ಣ ಪ್ರಮಾಣದ ಕಾನೂನುಬದ್ಧಗೊಳಿಸುವಿಕೆಯನ್ನು ಅನುಮತಿಸದಿದ್ದರೆ ಕಾನೂನು ಕ್ರಮದ ಭಯವಿಲ್ಲದೆ ಇಂಡೋನೇಷ್ಯಾದಲ್ಲಿ ಬಳಸಲು ಇತರ ದೇಶಗಳಿಂದ ವೈದ್ಯಕೀಯ ಗಾಂಜಾವನ್ನು ಖರೀದಿಸಲು ವ್ಯಕ್ತಿಗಳಿಗೆ ಅವಕಾಶ ನೀಡುವುದನ್ನು ಸರ್ಕಾರ ಪರಿಗಣಿಸಬೇಕೆಂದು ವಾರಸ್ತುತಿ ಒತ್ತಾಯಿಸಿದ್ದಾರೆ. ವಾರಸ್ತುತಿ ಅವರು ಸಾಂವಿಧಾನಿಕ ನ್ಯಾಯಾಲಯದ ನಿರ್ಧಾರವು ತನಗೆ ಮತ್ತು ಈಗ 14 ವರ್ಷದ ಪಿಕಾಗೆ ಕೊನೆಯಲ್ಲ ಎಂದು ಹೇಳಿದ್ದಾರೆ.

"ನನ್ನ ಮಗಳಿಗೆ ಸಹಾಯ ಮಾಡಲು ನಾನು ಎಲ್ಲವನ್ನೂ ಪ್ರಯತ್ನಿಸಬೇಕಾಗಿದೆ ಮತ್ತು ನಾವು ಹೋರಾಡುತ್ತೇವೆ ಮತ್ತು ಎಂದಿಗೂ ಬಿಟ್ಟುಕೊಡುವುದಿಲ್ಲ" ಎಂದು ಅವರು ಹೇಳಿದರು.

ಬಹುಶಃ ನನ್ನ ಮಗಳಿಗೆ ವೈದ್ಯಕೀಯ ಗಾಂಜಾವನ್ನು ಪಡೆಯುವುದು ನನ್ನ ಅದೃಷ್ಟವಲ್ಲ, ಆದರೆ ಆಶಾದಾಯಕವಾಗಿ ನಾವು ಏನನ್ನಾದರೂ ಪ್ರಾರಂಭಿಸಿದ್ದೇವೆ ಮತ್ತು ಭವಿಷ್ಯದಲ್ಲಿ ನನ್ನ ಕ್ರಿಯೆಗಳ ಪರಿಣಾಮವಾಗಿ ಇತರರು ತಮ್ಮ ಮಕ್ಕಳಿಗೆ ಈ ಔಷಧಿಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

 ಏನಿದು ಸೆರೆಬ್ರಲ್ ಪಾಲ್ಸಿ?

ಏನಿದು ಸೆರೆಬ್ರಲ್ ಪಾಲ್ಸಿ?

ಹುಟ್ಟುವಾಗಲೇ ದೇಹದಲ್ಲಿ ಅಸ್ವಸ್ಥತೆಯನ್ನು ಹೊಂದಿದ್ದು, ದೇಹದ ಭಾಗಗಳು ಚಲನೆಗೆ ಸಾಧ್ಯವಾಗದಿದ್ದರೆ ಅದನ್ನ ಸೆರೆಬ್ರಲ್ ಪಾಲ್ಸಿ ಎಂದು ಕರೆಯುತ್ತಾರೆ. ಅಸಹಜ ಮೆದುಳಿನ ಬೆಳವಣಿಗೆಯಿಂದ ಸ್ನಾಯು, ಮೂಳೆಗಳು ಸ್ವಾಧೀನ ಕಳೆದುಕೊಳ್ಳುತ್ತದೆ.

ಮೈಕ್ರೋಸಾಪ್ಟ್​ ಸಿಇಒ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್​ ಕೂಡ 26 ನೇ ವಯಸ್ಸಿಗೆ ಇದೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಸಾವನ್ನಪ್ಪಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಜಗತ್ತಿನಲ್ಲಿ ಹಲವರು ಬಳಲುತ್ತಿದ್ದಾರೆ. ಆದರೆ ಸೆರೆಬ್ರಲ್ ಪಾಲ್ಸಿ ಕಾಣಿಸಿಕೊಳ್ಳಲು ನಿರ್ದಿಷ್ಟ ಕಾರಣಗಳು ಪತ್ತೆಯಾಗಿಲ್ಲ ಆದರೂ ಈ ಕೆಲವು ಕಾರಣಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

English summary
Warastuti call to legalize marijuana for medical purposes in Indonesia met with fierce resistance. On July 20, Indonesia's Constitutional Court rejected a request for a judicial review of Indonesia's 2009 drug law by Warastuti, Prativi and another mother with a child with cerebral palsy. It said that it will not allow the use of cannabis for any reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X