• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು (49-O) ಏಕೆ ನೀಡುತ್ತಿಲ್ಲ?

By ಮಹೇಶ್ ಮಲ್ನಾಡ್
|

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬ ಕರ್ತವ್ಯ ನಿರ್ವಹಣೆ ಬಗ್ಗೆ ಎಲ್ಲರೂ ಪಾಠ ಹೇಳುವವರೇ, ಮತದಾನ ನಿಮ್ಮ ಹಕ್ಕು, ನಿಮ್ಮ ಕರ್ತವ್ಯ, ಜವಾಬ್ದಾರಿ ಹೀಗೆ ಆಯೋಗ ಕೂಡಾ ವರ್ಷಾನುವರ್ಷದಿಂದ ಚುನಾವಣಾ ಪ್ರಕ್ರಿಯೆ ನಡೆಸಿಕೊಂಡು ಬಂದಿದೆ. ಆದರೆ, ನಾಗರಿಕ ಸಮಾಜದ ಜವಾಬ್ದಾರಿಯುತ ಮತದಾರನೊಬ್ಬನಿಗೆ ತನ್ನ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಮಾತ್ರ ನೀಡಲು ಸರ್ಕಾರವಾಗಲಿ, ಆಯೋಗವಾಗಲಿ ಹಿಂದೇಟು ಹಾಕುತ್ತಾ ಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ) ಗಳಲ್ಲಿ ಅಭ್ಯರ್ಥಿ ತಿರಸ್ಕರಿಸಲು ಒಂದು ಪ್ರತ್ಯೇಕ ಬಟನ್ ವಿನ್ಯಾಸಗೊಳಿಸುವಂತೆ ಚುನಾವಣಾ ಆಯೋಗಕ್ಕೆ 2013ರಲ್ಲೇ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ನಂತರ ನಡೆದ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಈ ಬಗ್ಗೆ ಪ್ರಸ್ತಾಪ ಬಂದರೂ ಅನುಷ್ಠಾನಗೊಳಿಸಲು ಯಾರು ಮನಸ್ಸು ಮಾಡಲಿಲ್ಲ.

ಚುನಾವಣಾ ಅಕ್ರಮ ವರದಿ : ಸಿ-ವಿಜಿಲ್ ಆಪ್ ಬಳಸುವುದು ಹೇಗೆ?

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಆಗ್ರಹಿಸಿರುವ right to reject ಬಗ್ಗೆ ಗೊಂದಲವಿದೆ. ಆದರೆ, ನೆಗಟಿವ್ ವೋಟಿಂಗ್ ಎಂಬುದು ಹೊಸ ವಿಷಯವೇನಲ್ಲ. ಈಗ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಒಬ್ಬ ಅಭ್ಯರ್ಥಿ ಬಿಟ್ಟು ಮಿಕ್ಕವರು ನಾಮಪತ್ರ ಹಿಂಪಡೆದುಕೊಂಡು ಅವಿರೋಧ ಆಯ್ಕೆಯಾಗುವ ಸಂದರ್ಭವಿರುವಾಗ, ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆ ಏಕೆ ನೀಡುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ.

49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ

49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡು ಬಂದಲ್ಲಿ 49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ ಎಂದು ಮತದಾನ ಮಾಡಬಹುದು. ಆದರೆ, ಈ ಬಗ್ಗೆ ಪ್ರಶ್ನಿಸಿದರೆ ಸಿಕ್ಕ ಉತ್ತರ ಆಶಾದಾಯಕವಾಗೇನು ಇರಲಿಲ್ಲ. ಇವಿಎಂ ಬಳಕೆಯೇ ಎಲ್ಲೆಡೆ ಇರುವುದರಿಂದ ಬ್ಯಾಲೆಟ್ ಪೇಪರ್ ಜೊತೆಗೆ 49 ಒ ಅರ್ಜಿ ತುಂಬಲು ಆಸ್ಪದ ಸಿಗಲಿಲ್ಲ. ನೋಟಾ ತನ್ನ ಪವರ್ ಕಳೆದುಕೊಂಡಿದ್ದು, 49 ಒ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಲು ಆಗದ ಮತದಾರನ ನಿಸ್ಸಹಾಯ ಪರಿಸ್ಥಿತಿ ಮೇಲೆ ಜನಪ್ರತಿನಿಧಿಗಳ ವಿಜಯ ಪ್ರಜಾಪ್ರಭುತ್ವದ ಕುಹಕ ಎನ್ನಬಹುದು.

ಬಿಜೆಪಿ ಬಹುಮತದ ಕನಸು ಭಗ್ನಗೊಳಿಸಿದ್ದು 'ನೋಟಾ'

ಕರ್ನಾಟಕದಲ್ಲಿ 49 ಒ ಆಯ್ಕೆಗೆ ಅವಕಾಶವಿತ್ತು.

ಕರ್ನಾಟಕದಲ್ಲಿ 49 ಒ ಆಯ್ಕೆಗೆ ಅವಕಾಶವಿತ್ತು.

ಕುತೂಹಲದ ಸಂಗತಿ ಎಂದರೆ ಕರ್ನಾಟಕದಲ್ಲಿ 2013ರ ನಂತರ ಅಸೆಂಬ್ಲಿ ಚುನಾವಣೆಯಲ್ಲಿ 49 ಒ ನಿಯಮ ಬಳಕೆ ಮಾಡಲು ಮತದಾರರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅರ್ಜಿ ನಮೂನೆ ಗೊಂದಲದ ಕಾರಣ ಅನೇಕ ಮತದಾರರು ಇಷ್ಟವಿಲ್ಲದಿದ್ದರೂ ಕಡ್ಡಾಯ ಮತದಾನ ಮಾಡಬೇಕಾಯಿತು.

2011 ರಲ್ಲೇ 49 ಒ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಿದರೂ 2013 ರಲ್ಲೂ ಇನ್ನೂ ಗೊಂದಲ ಮುಂದುವರೆದಿತ್ತು. ಅದರೆ, ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ಗೊಂದಲ ನಿವಾರಣೆಯಾಗಿತ್ತು.

ನೆಗಟಿವ್ ಮತದಾನ ಪ್ರಕ್ರಿಯೆ: 1961ರ ನಿಯಮದ ಪ್ರಕಾರ ಅರ್ಜಿ 17 ಎ ನಲ್ಲಿ ಮತದಾರರ ಹೆಸರು ಸೇರಿಸಬೇಕು. 49 ಎಲ್ ನಂತೆ ಸಹಿ ಹಾಕಬೇಕು. ನಂತರ 49 ಒ ಅರ್ಜಿ ಮೂಲಕ right to reject ಚಲಾವಣೆ ಬಗ್ಗೆ ಕೇಳಬೇಕು.

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಅಡ್ಡ ನಿಂತ 'ನೋಟಾ'

ಮತದಾರನ ಗೌಪ್ಯತೆ ಉಳಿಸಿಕೊಳ್ಳಲಾಗುತ್ತಿಲ್ಲ

ಮತದಾರನ ಗೌಪ್ಯತೆ ಉಳಿಸಿಕೊಳ್ಳಲಾಗುತ್ತಿಲ್ಲ

* ಸದ್ಯದ ವ್ಯವಸ್ಥೆಯಲ್ಲೂ ಅಭ್ಯರ್ಥಿಯನ್ನು ನಿರಾಕರಿಸುವ ಹಕ್ಕು ಇದೆಯಾದರೂ ಅಭ್ಯರ್ಥಿ ತಿರಸ್ಕರಿಸುವ ಮತದಾರನ ಗೌಪ್ಯತೆ ಉಳಿಸಿಕೊಳ್ಳಲಾಗುತ್ತಿಲ್ಲ.

* ಈ ಮತದಾನ ಮಾಡಬೇಕಾದರೆ ಯಾವ ಕಾರಣಕ್ಕಾಗಿ ಯಾವ ಅಭ್ಯರ್ಥಿಯೂ ಹಿಡಿಸಿಲ್ಲ ಎಂದು ನಮೂದಿಸಬೇಕು ಮತದಾರನ ಹೆಸರು ವಿಳಾಸವನ್ನು ಚುನಾವಣಾ ಆಯೋಗ ಗುಪ್ತವಾಗಿರಿಸುತ್ತಿಲ್ಲ.

* ರಿಜೆಕ್ಟ್ ಆದ ಮತಗಳನ್ನು ಮತ ಎಣಿಕೆ ಸಂದರ್ಭದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಕೂಡಾ ಸ್ಪಷ್ಟತೆ ಇಲ್ಲ. ಶೇ 40ಕ್ಕಿಂತ ಹೆಚ್ಚು ಮತಗಳು ನಿರಾಕರಣೆ ಮತಗಳಾಗಿದ್ದರೆ ಅಥವಾ ಇಬ್ಬರು ಅಭ್ಯರ್ಥಿಗಳ ಎಣಿಕೆ ಟೈ ಆದರೆ ಮಾತ್ರ ಪರಿಶೀಲಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಹೇಳಿದರು.

ರಾಷ್ಟ್ರೀಯ ಪಕ್ಷಗಳನ್ನೇ ಹಿಂದಿಕ್ಕಿದ 'ನೋಟಾ' ಪವರ್ ಫಲಿತಾಂಶ

ಅಣ್ಣಾ ಹಜಾರೆ ಹೋರಾಟ

ಅಣ್ಣಾ ಹಜಾರೆ ಹೋರಾಟ

ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ ಅವರು ನಕರಾತ್ಮಕ ಮತದಾನ(right to reject) ಹಾಗೂ ವ್ಯರ್ಥ ಜನಪ್ರತಿನಿಧಿ ಹಿಂದಕ್ಕೆ ಕರೆಸಿಕೊಳ್ಳುವುದು(right to recall) ಜಾರಿಗೆ ತರಲು ಶ್ರಮಿಸಿದವರಾಗಿದ್ದಾರೆ.

* right to recall ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಇನ್ನೂ ಚರ್ಚೆ ನಡೆಯುತ್ತಲೇ ಇದೆ. right to reject ಗೆ ಸದ್ಯಕ್ಕೆ ಬೆಲೆ ಸಿಕ್ಕಿದೆ. ರಷ್ಯಾದಲ್ಲಿ ಈ ರೀತಿ ಆಯ್ಕೆಗೆ ಅವಕಾಶವಿದೆ.

ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ

ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ

* ನಕಾರಾತ್ಮಕ ಮತದಾನದಿಂದಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬಹುದಾಗಿದ್ದು, ಪಕ್ಷಗಳು ಸಚ್ಚಾರಿತ್ರ್ಯವುಳ್ಳ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಒತ್ತಡ ಉಂಟಾಗಲಿದೆ.

* ಈ ಹೊಸ ವ್ಯವಸ್ಥೆಗೆ ಕಾರಣವಾದ ಎನ್ ಜಿಒ ಸಲ್ಲಿಸಿದ್ದ ಅರ್ಜಿ ಪ್ರಕಾರ ಎಲ್ಲಾ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡುವ ಹಕ್ಕು ಮತದಾರನಿಗೆ ಇದೆ ಎಂಬುದನ್ನು ಕೋರ್ಟ್ ಎತ್ತಿ ಹಿಡಿದಿದೆ.

* ಆದರೆ, ಒಮ್ಮೆ ನೆಗಟಿವ್ ಮತದಾನದ ಮೂಲಕ ಗೆದ್ದ ಅಭ್ಯರ್ಥಿಗಿಂತ 49 ಒ ಮತಗಳು ಅಧಿಕವಾದರೂ ಮರು ಚುನಾವಣೆ ನಡೆಸುವ ಬಗ್ಗೆ ಸ್ಪಷ್ಟ ನಿಯಮ ರೂಪಿಸಿಲ್ಲ.

ಮತ ನಿರಾಕರಣೆ ವ್ಯವಸ್ಥೆ

ಮತ ನಿರಾಕರಣೆ ವ್ಯವಸ್ಥೆ

ಯುಪಿಎ ಸರ್ಕಾರವಿದ್ದಾಗನಿಂದಲೂ ಮತ ನಿರಾಕರಣೆ ವ್ಯವಸ್ಥೆಯನ್ನು ಕಾಂಗ್ರೆಸ್ ವಿರೋಧಿಸುತ್ತಾ ಬಂದಿದೆ. ಚುನಾವಣೆ ಎಂದರೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ತಿರಸ್ಕರಿಸುವ ಪ್ರಕ್ರಿಯೆ ಅಲ್ಲ. ಹೊಸ ಬಟನ್ ಗೊಂದಲ ಮೂಡಿಸುತ್ತದೆ ಎಂದು ಪ್ರತಿ ಪಾದಿಸಿದೆ. ಆದರೆ, ಕೆಲವು ಕಾಂಗ್ರೆಸ್ ಶಾಸಕರು ಈ ವ್ಯವಸ್ಥೆಯನ್ನು ಸ್ವಾಗತಿಸಿ ಅಚ್ಚರಿ ಮೂಡಿಸಿದ್ದರು.

49 ಒ ಗೆ ಬೆಲೆ ಯಾವಾಗ ಸಿಗಲಿದೆ

49 ಒ ಗೆ ಬೆಲೆ ಯಾವಾಗ ಸಿಗಲಿದೆ

ಆದರೆ, ಇವಿಎಂನಲ್ಲಿ 49 ಒ ಬಟನ್ ಆಯ್ಕೆ ನೀಡುವಂತೆ ಚುನಾವಣಾ ಆಯೋಗ ಮಾಡಿದ್ದ ಮನವಿಯನ್ನು ಅಂದಿನ ಯುಪಿಎ ಹಾಗೂ ಇಂದಿನ ಎನ್ಡಿಎ ಸರ್ಕಾರ ತಿರಸ್ಕರಿಸಿವೆ. 1961ರ ಚುನಾವಣಾ ಪ್ರಕ್ರಿಯೆ ಕಾಯ್ದೆಯ 22ನೇ ನಿಯಮ ಹಾಗೂ 49ಬಿ ನಿಯಮಕ್ಕೆ ಸರ್ಕಾರಗಳು ತಿದ್ದುಪಡಿ ತಂದರೆ ಮಾತ್ರ 49 ಒ ಗೆ ಬೆಲೆ ಸಿಗಲಿದೆ. ಇಲ್ಲದಿದ್ದರೆ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ಮುಂದುವರೆಯಲಿದೆ.

English summary
Know more about 49-O Right Not To Vote, Why not it is implemented. 49-O provides an option to the voter to reject all candidates. But on 11 October 2013, the Election Commission released a notification declaring that the None of the above option would be provided on voting machines and the option under rule 49-O would not be available any longer. Activist Anna Hazare supports the 'Right Not To Vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X