ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ ಬ್ಯಾಕ್ ಬೆಂಚರ್ಸ್, 1922 ಕಮಿಟಿ- ಪ್ರಧಾನಿ ರೇಸ್‌ನ ಸೋಜಿಗದ ಸಂಗತಿಗಳು

|
Google Oneindia Kannada News

ಲಂಡನ್, ಜುಲೈ 14: ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಬಳಿಕ ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಸ್ಪರ್ಧೆ ನಡೆಯುತ್ತಿದೆ. ಹನ್ನೊಂದು ಮಂದಿ ಇದ್ದ ರೇಸ್ ಕಣ ಈಗ ಆರಕ್ಕೆ ಇಳಿದಿದೆ. ಭಾರತ ಮೂಲದ ಇಬ್ಬರು ವ್ಯಕ್ತಿಗಳು ಸ್ಪರ್ಧೆಯಲ್ಲಿ ಉಳಿದಿದ್ಧಾರೆ. ರಿಷಿ ಸುನಕ್ ಈ ಸ್ಪರ್ಧಾ ಕಣದಲ್ಲಿ ಮುಂಚೂಣಿಯಲ್ಲಿದ್ದಾರೆ.

ಮೊದಲ ಸುತ್ತಿನಲ್ಲಿ ರಿಷಿ ಸುನಕ್ 88 ಸಂಸದರ ಬೆಂಬಲ ಪಡೆದು ಮೊದಲ ಸ್ಥಾನ ಅಲಂಕರಿಸಿದರು. ಮೊದಲ ಸುತ್ತಿನಲ್ಲಿದ್ದ ಎಂಟು ಸ್ಪರ್ಧಿಗಳಲ್ಲಿ ಇಬ್ಬರು ಹೊರಬಿದ್ದಿದ್ದಾರೆ. ವ್ಯಾಪಾರ ಸಚಿವ ಪೆನ್ನಿ ಮಾರ್ಡಾಂಟ್, ವಿದೇಶಾಂಗ ಮಂತ್ರಿ ಲಿಜ್ ಟ್ರಸ್, ಮಾಜಿ ಸಚಿವ ಕೇಮಿ ಬಡೆನೋಚ್, ಕನ್ಸರ್ವೇಟಿವ್ ಪಕ್ಷದ ಬ್ಯಾಕ್ ಬೆಂಚರ್ ಟಾಮ್ ಟುಗೆನಧಾಟ್ ಮತ್ತು ಭಾರತ ಮೂಲದ ಸುವೆಲಾ ಬ್ರೇವರ್ಮನ್ ಅವರು ಎರಡನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಬ್ರಿಟನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ಬ್ರಿಟನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್

ಇರಾಕ್ ಮೂಲದ ನಧೀಮ್ ಜಹಾವಿ ಮತ್ತು ಮಾಜಿ ಸಚಿವ ಜೆರೆಮಿ ಹಂಟ್ ರೇಸ್‌ನಿಂದ ಹೊರಬಿದ್ದಿದ್ದಾರೆ. ಜುಲೈ 21ರೊಳಗೆ ಸ್ಪರ್ಧಾ ಕಣದಲ್ಲಿ ಇಬ್ಬರು ಉಳಿಯುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ 1922ರ ಕಮಿಟಿ ವೇಳಾಪಟ್ಟಿ ನಿಗದಿ ಮಾಡಿದೆ.

ಸೆಪ್ಟೆಂಬರ್ 5ಕ್ಕೆ ಹೊಸ ಪ್ರಧಾನಿಯ ಘೋಷಣೆ ಆಗಬೇಕೆಂದು ಕಮಿಟಿ ನಿರ್ಧರಿಸಿದೆ. ಅಷ್ಟರೊಳಗೆ ಬ್ರಿಟನ್ ಪ್ರಧಾನಿ ರೇಸ್ ಪ್ರಕ್ರಿಯೆ ಮುಗಿಯುವ ನಿರೀಕ್ಷೆ ಇದೆ.

ಏನಿದು 1922 ಕಮಿಟಿ?

ಏನಿದು 1922 ಕಮಿಟಿ?

ಇದು ಟೋರಿ ಪಕ್ಷದ ಒಂದು ಕಮಿಟಿ. ಟೋರಿ ಎಂದರೆ ಬ್ರಿಟನ್‌ನಲ್ಲಿ ಈಗ ಆಡಳಿತದಲ್ಲಿರುವ ಕನ್ಸರ್ವೇಟಿವ್ ಪಕ್ಷಕ್ಕೆ ಇರುವ ಇನ್ನೊಂದು ಹೆಸರು. 1922ರಲ್ಲಿ ಬ್ಯಾಕ್ ಬೆಂಚರ್ಸ್ ಕಮಿಟಿಯನ್ನು ರಚಿಸಲಾಯಿತು. ಬ್ಯಾಕ್ ಬೆಂಚರ್ಸ್ ಎಂದರೆ ಏನು ಎಂದು ಮುಂದೆ ತಿಳಿಯೋಣ.

1922 ಕಮಿಟಿ ಎಂಬುದು ಕನ್ಸರ್ವೇಟಿವ್ ಪಕ್ಷದ ಖಾಸಗಿ ಸದಸ್ಯರ ಕಮಿಟಿ. ಸರಕಾರದಲ್ಲಿ ಅಥವಾ ವಿಪಕ್ಷದಲ್ಲಿ ಯಾವುದೇ ಸ್ಥಾನಮಾನ ಹೊಂದಿರದ ಕನ್ಸರ್ವೇಟಿವ್ ಪಕ್ಷದ ಸಂಸದರು ಈ ಕಮಿಟಿಯಲ್ಲಿ ಇರುತ್ತಾರೆ.

1922ರಲ್ಲಿ ಬ್ರಿಟನ್‌ನಲ್ಲಿ ವ್ಯಾಪಾರ ನೀತಿ ವಿಚಾರದಲ್ಲಿ ಕನ್ಸರ್ವೇಟಿವ್ ಪಕ್ಷದೊಳಗೆ ಭಿನ್ನಾಭಿಪ್ರಾಯ ಎದ್ದಿತ್ತು. ಆಗ ಈ ವಿಚಾರದಲ್ಲಿ ಪಕ್ಷದ ನಿಲುವನ್ನು ನಿರ್ದಿಷ್ಟಪಡಿಸಲೆಂದು ಬ್ಯಾಕ್ ಬೆಂಚರ್ಸ್‌ನ ಕಮಿಟಿ ಮಾಡಲಾಯಿತು. ಈ ಕಮಿಟಿಗೆ ಸಾಕಷ್ಟು ಪ್ರಭಾವಶಾಲಿ ಎನಿಸುವಷ್ಟು ಅಧಿಕಾರ ಇದೆ.

ಶ್ರೀಲಂಕಾ ಬಿಕ್ಕಟ್ಟು; ಭಾರತದ ಪಾತ್ರವೇನು, ನಮಗೂ ಕಾದಿದೆಯಾ ಗಂಡಾಂತರ?ಶ್ರೀಲಂಕಾ ಬಿಕ್ಕಟ್ಟು; ಭಾರತದ ಪಾತ್ರವೇನು, ನಮಗೂ ಕಾದಿದೆಯಾ ಗಂಡಾಂತರ?

ಬ್ಯಾಕ್ ಬೆಂಚರ್ಸ್ ಎಂದರೇನು?

ಬ್ಯಾಕ್ ಬೆಂಚರ್ಸ್ ಎಂದರೇನು?

ನಮ್ಮ ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಂಬದಿ ಸೀಟುಗಳಲ್ಲಿ ಕೂರುವವರನ್ನು ಬ್ಯಾಂಕ್ ಬೆಂಚರ್ಸ್ ಎಂದು ಕರೆಯುತ್ತೇವೆ. ಹಾಗೆಯೇ, ಬ್ರಿಟನ್ ಸಂಸತ್‌ನಲ್ಲಿ ಹಿಂಬದಿಯಲ್ಲಿ ಕೂರುವ ಸಂಸದರನ್ನು ಬ್ಯಾಕ್ ಬೆಂಚರ್ಸ್ ಎನ್ನುತ್ತಾರೆ. ಪಕ್ಷದ ಪರವಾಗಿ ಅಥವಾ ಸರಕಾರದ ಪರವಾಗಿ ಮಾತನಾಡುವ ಸಂಸದರು ಮುಂದಿನ ಸೀಟುಗಳಲ್ಲಿರುತ್ತಾರೆ. ಸರಕಾರದಲ್ಲಿ ವಿವಿಧ ಹುದ್ದೆಗಳನ್ನು ಪಡೆದವರೂ ಮುಂದಿನ ಸೀಟುಗಳಲ್ಲಿರುತ್ತಾರೆ. ಯಾವುದೇ ಹುದ್ದೆ ಇಲ್ಲದವರಿಗೆ ಹಿಂಬದಿ ಆಸನಗಳು ಇವೆ.

ಹೊಸದಾಗಿ ಸಂಸದರಾದವರು ಅಥವಾ ಸಚಿವ ಸ್ಥಾನದಿಂದ ಕೈಬಿಟ್ಟಿರುವುವರು ಯಾರು ಬೇಕಾದರೂ ಬ್ಯಾಕ್ ಬೆಂಚರ್‌ಗಳಾಗಬಹುದು. ಅವರನ್ನು ನಿರುಪಯುಕ್ತವಾಗಿ ಬಿಡಬಾರದೆಂದು ಮಾರ್ಗದರ್ಶಕರಾಗಿ ಬ್ಯಾಕ್ ಬೆಂಚರ್ಸ್ ಕಮಿಟಿಯಲ್ಲಿ ಸ್ಥಾನ ಕೊಡಲಾಗಿರುತ್ತದೆ. ಇವರು ಪಕ್ಷದ ನೀತಿ ರೂಪಿಸುವ ಅಥವಾ ಸರಕಾರ ತನ್ನ ಪಕ್ಷದ ನೀತಿ ಬಿಟ್ಟು ಹೋಗದಂತೆ ಈ ಸಮಿತಿ ಎಚ್ಚರವಹಿಸುವ ಕೆಲಸ ಮಾಡುತ್ತದೆ.

ಈಗ ಪ್ರಧಾನಿ ಸ್ಥಾನ ಆಯ್ಕೆ ವಿಚಾರದಲ್ಲಿ ಈ 1922 ಕಮಿಟಿ ಮತ್ತೆ ಸುದ್ದಿಯಲ್ಲಿದೆ.

ಪ್ರಧಾನಿ ಸ್ಥಾನದ ರೇಸ್ ಹೇಗೆ

ಪ್ರಧಾನಿ ಸ್ಥಾನದ ರೇಸ್ ಹೇಗೆ

ಈಗ ಕನ್ಸರ್ವೇಟಿವ್ ಪಕ್ಷದ ಸರಕಾರ ಇದೆ. ಬ್ರಿಟನ್ ಸಂಸತ್‌ನಲ್ಲಿ ಕನ್ಸರ್ವೇಟಿವ್ ಪಕ್ಷದ 358 ಸಂಸದರಿದ್ದಾರೆ. ಪ್ರಧಾನಿಯಾಗುವವರು ತಮ್ಮ ಪಕ್ಷದಲ್ಲಿ ಅತಿ ಹೆಚ್ಚು ಬೆಂಬಲ ಪಡೆಯಬೇಕು. ಆ ಸ್ಪರ್ಧಾ ವಿಧಾನ ತುಸು ಕುತೂಹಲಕಾರಿಯಾಗಿದೆ.

ಪ್ರಧಾನಿ ಸ್ಥಾನಕ್ಕೆ ಯಾರು ಬೇಕಾದರೂ ಆಕಾಂಕ್ಷಿಗಳಾಗಬಹುದು. ಆದರೆ, ಸ್ಪರ್ಧೆಯ ಪ್ರಧಾನ ಹಂತಕ್ಕೆ ಬರಬೇಕಾದರೆ ಕನಿಷ್ಠ 20 ಸಂಸದರ ಬೆಂಬಲವಾದರೂ ಇರಬೇಕು. ಆದರೆ ಸದ್ಯ ಬ್ರಿಟನ್‌ನ ಪ್ರಧಾನಿ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ 11 ಮಂದಿ ಪೈಕಿ ಮೂವರಿಗೆ 20 ಸಂಸದರ ಬೆಂಬಲ ಸಿಗಲಿಲ್ಲ. ಹೀಗಾಗಿ, ಮೊದಲ ಸುತ್ತಿಗೆ ಬರುವ ಮುನ್ನವೇ ಸ್ಪರ್ಧಾ ಕಣ 8 ಮಂದಿಗೆ ಇಳಿದಿತ್ತು.

ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳು ಕನಿಷ್ಠ 30 ಸಂಸದರ ಬೆಂಬಲ ಹೊಂದಿರಬೇಕು. ಎಲ್ಲರೂ 30 ಸಂಸದರ ಬೆಂಬಲ ಪಡೆದಲ್ಲಿ ಯಾರು ಕೊನೆಯ ಸ್ಥಾನ ಪಡೆದಿರುತ್ತಾರೋ ಅವರು ಸ್ಪರ್ಧಾ ಕಣದಿಂದ ನಿರ್ಗಮಿಸುತ್ತಾರೆ. ಇಲ್ಲಿ ಇಬ್ಬರು ಅಭ್ಯರ್ಥಿಗಳಿಗೆ 30 ಮತಗಳು ಸಿಗದೇ ಹೋದ್ದರಿಂದ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. ಈಗ ಉಳಿದಿರುವುದು ಆರು ಮಂದಿ ಮಾತ್ರ.

ಮುಂದಿನ ಸುತ್ತುಗಳಲ್ಲಿ ಇದೇ ರೀತಿಯಲ್ಲಿ ಮತದಾನ ನಡೆಯುತ್ತಾ ಹೋಗುತ್ತದೆ. ಪ್ರತಿ ಸುತ್ತಿನಲ್ಲೂ ಕೊನೆಯ ಸ್ಥಾನಿಗರು ನಿರ್ಗಮಿಸುತ್ತಾ ಹೋಗಿ ಅಂತಿಮವಾಗಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿ ಉಳಿಯುತ್ತಾರೆ. ಬಳಿಕ ಆ ಇಬ್ಬರಲ್ಲಿ ಯಾರಿಗೆ ಹೆಚ್ಚು ಮತ ಸಿಗುತ್ತದೋ ಅವರು ಪ್ರಧಾನಿಯಾಗುತ್ತಾರೆ.

ರಿಷಿ ಸುಣಕ್ ಪ್ರಬಲ ಅಭ್ಯರ್ಥಿ

ರಿಷಿ ಸುಣಕ್ ಪ್ರಬಲ ಅಭ್ಯರ್ಥಿ

ಇನ್‌ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಸದ್ಯ ಅತ್ಯಂತ ಪ್ರಬಲ ಸ್ಪರ್ಧಿ ಎನಿಸಿದ್ದಾರೆ. ಮೊದಲ ಸುತ್ತಿನಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿದ್ಧಾರೆ. ಇವರು 88 ಮತಗಳನ್ನು ಪಡೆದಿದ್ದಾರೆ. ಎರಡನೇ ಸ್ಥಾನ ಪಡೆದ ಪೆನ್ನಿ ಮಾರ್ಡಾಂಟ್ ಅವರಿಗಿಂತ ರಿಷಿ 21 ಮತ ಹೆಚ್ಚು ಪಡೆದಿದ್ದಾರೆ.

ಮತ್ತೊಬ್ಬ ಭಾರತ ಮೂಲದ ಸಂಸದ ಸ್ಯೂಲಾ ಬ್ರೇವರ್‌ಮನ್ 32 ಮತಗಳನ್ನು ಪಡೆದು ಎರಡನೇ ಸುತ್ತಿಗೆ ಬಂದಿದ್ದಾರೆ. ಆದರೆ ಮುಂದಿನ ಸುತ್ತಿನಲ್ಲಿ ಅವರ ನಿರ್ಗಮನವಾದರೂ ಆಗಬಹುದು.

ಸರ್ವರನ್ನೂ ಅಪ್ಪಿಕೊಂಡಿತಾ ಬ್ರಿಟನ್?

ಸರ್ವರನ್ನೂ ಅಪ್ಪಿಕೊಂಡಿತಾ ಬ್ರಿಟನ್?

ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷ ಎಂದರೆ ತುಸ ಬಲಪಂಥೀಯ ವಿಚಾರಧಾರೆಯುಳ್ಳ ಪಕ್ಷ. ರಾಷ್ಟ್ರೀಯವಾದ ಇದರ ಪ್ರಮುಖ ತತ್ವ. ಆದರೂ ಕೂಡ ಕನ್ಸರ್ವೇಟಿವ್ ಪಕ್ಷದಲ್ಲಿ ವಿವಿಧ ದೇಶಗಳ ಮೂಲದ ಸಂಸದರು ಪ್ರಾಮುಖ್ಯತೆಯ ಸ್ಥಾನದಲ್ಲಿದ್ಧಾರೆ.

11 ಮಂದಿ ಪ್ರಧಾನಿ ಆಕಾಂಕ್ಷಿಗಳ ಪೈಕಿ ಏಳು ಮಂದಿ ಏಷ್ಯಾ ಮತ್ತು ಆಫ್ರಿಕಾ ಮೂಲದವರೆಂಬುದು ವಿಶೇಷ. ರಿಷಿ ಸುನಕ್, ಸೂಲಾ ಬ್ರೇವರ್‌ಮನ್, ಸಾಜಿದ್ ಜಾವಿದ್, ಪ್ರೀತಿ ಪಟೇಲ್, ರೆಹಮಾನ್ ಕಿಸ್ತಿ, ಕೆಮಿ ಬಾಡೆನೋಕ್, ನಧೀಮ್ ಜಹಾವಿ ಅವರು ಬ್ರಿಟನ್ ಮೂಲದವರಲ್ಲ. ಸ್ಪರ್ಧಾ ಕಣದಲ್ಲಿರುವ ಸ್ಥಳೀಯ ಜನಾಂಗದವರಲ್ಲೂ ಒಬ್ಬರು ಚೀನೀ ಮಹಿಳೆಯನ್ನು ಮದುವೆಯಾಗಿದ್ಧಾರೆ ಎಂಬುದು ವಿಶೇಷ.

ರಿಷಿ ಸುನಕ್, ಬ್ರಾವರ್ಮನ್ ಮತ್ತು ಪ್ರೀತಿ ಪಟೇಲ್ ಭಾರತ ಮೂಲದವರಾದರೆ, ಸಾಜಿದ್ ಜಾವಿದ್ ಮತ್ತು ರೆಹಮಾನ್ ಖಿಸ್ತಿ ಪಾಕಿಸ್ತಾನ ಮೂಲದವರಾಗಿದ್ದಾರೆ. ಕೆಮಿ ಬಡೆನೋಕ್ ನೈಜೀರಿಯಾ ಮೂಲದವರು.

ಒಂದು ಕಾಲದಲ್ಲಿ ವಿಶ್ವಾದ್ಯಂತ ಅನೇಕ ದೇಶಗಳನ್ನು ಆಳಿದ್ದ ಮತ್ತು ಆಕ್ರಮಿಸಿಕೊಂಡಿದ್ದ ಬ್ರಿಟನ್‌ನಲ್ಲಿ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಆಳಿಸಿಕೊಂಡವರು ಈಗ ಆ ದೇಶವನ್ನು ಆಳುವ ಮಟ್ಟಕ್ಕೆ ಹೋಗುತ್ತಿದ್ದಾರೆ. ಅದೂ ಕನ್ಸರ್ವೇಟಿವ್ ಪಕ್ಷದೊಳಗೆಯೇ ಇಂಥದ್ದೊಂದು ವೈವಿಧ್ಯತೆ ಮತ್ತು ವ್ಯಾಪಕತೆ ಇರುವುದು ಗಮನಾರ್ಹ ಸಂಗತಿ.

(ಒನ್ಇಂಡಿಯಾ ಸುದ್ದಿ)

Recommended Video

Kickboxer Nikhil ಫೈಟ್ ಮಾಡುವಾಗ ಕುಸಿದು ಬಿದ್ದಿದ್ದು ಹೀಗೆ | *Karnataka | OneIndia Kannada

English summary
1922 Committee comprising backbench MPs of conservative party has main role in the Britain PM elections. Many interesting things are shaping out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X