ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್ ಓಡಲು ಕಿಮೀಗೆ ಎಷ್ಟು ವೆಚ್ಚ? ಇ-ಬಸ್ ಸಾಧಕ, ಬಾಧಕಗಳು

|
Google Oneindia Kannada News

ಬೆಂಗಳೂರು, ಸೆ. 01: ನಗರದಲ್ಲಿ ವಿವಿಧ ಸೌಕರ್ಯಗಳು ಏನೇ ಇದ್ದರೂ ಬಸ್ಸುಗಳ ವಿಚಾರದಲ್ಲಿ ವಿವಿಧ ಪ್ರಯೋಗಗಳಾಗುತ್ತಿರುತ್ತವೆ. ಕೆಲವು ಕೈಹಿಡಿಯುತ್ತವೆ, ಕೆಲವು ಕೈಕೊಡುತ್ತವೆ. ಪರಿಣಾಮವಾಗಿ ಬಿಎಂಟಿಸಿ, ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣಿಸುವುದು ಬೇರೆ ನಗರಗಳಿಗೆ ಹೋಲಿಸಿದರೆ ಬಹಳ ದುಬಾರಿಯಾಗಿಬಿಟ್ಟಿದೆ. ಇದೀಗ ಬೆಂಗಳೂರಿನಲ್ಲಿ ಇ-ಬಸ್‌ಗಳ ಯುಗ ಆರಂಭವಾಗುತ್ತಿದೆ. ಎಲೆಕ್ಟ್ರಿಕ್ ಬಸ್ಸುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ.

ಅಕ್ಟೋಬರ್ ತಿಂಗಳಷ್ಟರಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳು ಸಂಚರಿಸಲಿವೆ. ಈಗಾಗಲೇ ನೂರು ಇ-ಬಸ್ಸುಗಳು ವಿವಿಧ ಮಾರ್ಗಗಳಲ್ಲಿ ಓಡಾಡುತ್ತಿವೆ. ತುಸು ದೂರ ಮಾರ್ಗಗಳಿಗೂ ಇ-ಬಸ್ಸುಗಳನ್ನು ಬಿಡಲಾಗುತ್ತಿದೆ.

 ಉಪಚುನಾವಣೆ; ಬಸ್ಸುಗಳ ಕೊರತೆ, ಪ್ರಯಾಣಿಕರಿಗೆ ಬೈಎಲೆಕ್ಷನ್ ಬಿಸಿ ಉಪಚುನಾವಣೆ; ಬಸ್ಸುಗಳ ಕೊರತೆ, ಪ್ರಯಾಣಿಕರಿಗೆ ಬೈಎಲೆಕ್ಷನ್ ಬಿಸಿ

ಆಟೊಮೊಬೈಲ್ ತಯಾರಕ ಅಶೋಕ್ ಲೇಲ್ಯಾಂಡ್ ಕಳೆದ ವರ್ಷ 300 ಇ-ಬಸ್ಸುಗಳ ತಯಾರಿಕೆ ಮತ್ತು ನಿರ್ವಹಣೆಗೆ ನಡೆದ ಬಿಡಿಂಗ್ ಅನ್ನು ಪಡೆದುಕೊಂಡಿತು. ‌ಅಶೋಕ್ ಲೇಲ್ಯಾಂಡ್‌ನ ಉಪಸಂಸ್ಥೆಯಾದ ಸ್ವಿಚ್ ಮೊಬಿಲಿಟಿ ಈ 300 ಬಸ್ಸುಗಳನ್ನು ಒದಗಿಸುತ್ತಿದೆ. ಈಗಾಗಲೇ ನೂರು ಬಸ್ಸುಗಳನ್ನು ಬಿಎಂಟಿಸಿಗೆ ಕೊಡಲಾಗಿದೆ.

ಅಷ್ಟಕ್ಕೂ ಎಲೆಕ್ಟ್ರಿಕ್ ಬಸ್ಸುಗಳ ವೆಚ್ಚ ಎಷ್ಟು, ಡೀಸೆಲ್ ವಾಹನಗಳಿಗೆ ಹೋಲಿಸಿದರೆ ನಿರ್ವಹಣೆ ಹೇಗೆ, ಪರಿಸರ ಹಾನಿಯನ್ನು ಎಷ್ಟರಮಟ್ಟಿಗೆ ಇದು ತಡೆಯಬಲ್ಲುದು ಎಂಬಿತ್ಯಾದಿ ವಿವರ ಇಲ್ಲಿದೆ.

ಇವಿ ವೆಚ್ಚ

ಇವಿ ವೆಚ್ಚ

ಒಪ್ಪಂದದ ಪ್ರಕಾರ, ಅಶೋಕ್ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ಬಸ್ಸುಗಳ ನಿರ್ವಹಣೆಗೆ ಪ್ರತೀ ಕಿಮೀಗೆ 48.95 ರೂ ತಗುಲುತ್ತದೆ. ಈ ಬಸ್ಸುಗಳು 12 ಮೀಟರ್ ಉದ್ದ ಇವೆ.

ಇನ್ನು, ಜೆಬಿಎಂ ಮತ್ತು ಎನ್‌ಟಿಪಿಸಿ ತಯಾರಿಸಿರುವ 90 ಇ ಬಸ್ಸುಗಳು ಈಗಾಗಲೇ ನಗರದಲ್ಲಿ ಸಂಚಾರ ನಡೆಸುತ್ತಿವೆ. ಈ ಬಸ್ಸುಗಳ ನಿರ್ವಹಣೆಗಾಗಿ ಈ ಸಂಸ್ಥೆಗಳಿಗೆ ಬಿಎಂಟಿಸಿ ಪ್ರತೀ ಕಿಮೀಗೆ 51 ರೂನಂತೆ ಹಣ ಪಾವತಿ ಮಾಡಬೇಕು.

ಆದರೆ, ಸದ್ಯ ಈ 90 ಎಲೆಕ್ಟ್ರಿಕ್ ಬಸ್ಸುಗಳಿಂದ ಸರಾಸರಿ ಗಳಿಕೆ ಪ್ರತೀ ಕಿಮೀಗೆ 30 ರೂ ಇದೆಯಂತೆ. ಅಂದರೆ ಒಂದೊಂದು ಬಸ್ಸಿಂದ ಒಂದು ಕಿಮೀಗೆ 20 ರೂ ನಷ್ಟ ಆಗುತ್ತಿದೆ.

ಡೀಸೆಲ್ ಬಸ್ಸುಗಳಿಗೆ ಹೋಲಿಸಿದರೆ ನಷ್ಟ ಹೆಚ್ಚು ಅನಿಸಲ್ಲ. ಬಿಎಂಟಿಸಿಯ ಡೀಸೆಲ್ ಬಸ್ ಸಂಚಾರಕ್ಕೆ ಒಂದು ಕಿಮೀಗೆ ಬರೋಬ್ಬರಿ 78.29 ರೂ ತಗುಲುತ್ತದೆ. ಅದರೆ, ಅದರಿಂದ ಬರುತ್ತಿರುವ ಆದಾಯ ಕೇವಲ 47.08 ಮಾತ್ರ. ಅಂದರೆ ಒಂದು ಡೀಸೆಲ್ ಬಸ್ಸಿಂದ ಬಿಎಂಟಿಸಿಗೆ ಪ್ರತಿ ಕಿಲೋಮೀಟರ್‌ಗೆ 31ರೂ ಗೂ ಹೆಚ್ಚು ಹಣದ ನಷ್ಟ ಆಗುತ್ತಿದೆ.

ಪರಿಸರಕ್ಕೆ ಒಳಿತು

ಪರಿಸರಕ್ಕೆ ಒಳಿತು

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ಸುಗಳಿಂದ ಪರಿಸರ ಹಾನಿ ತಡೆ ಕಾರ್ಯಕ್ಕೆ ಪುಷ್ಟಿ ಸಿಕ್ಕಂತಾಗುತ್ತದೆ. ಒಂದು ಅಂದಾಜು ಪ್ರಕಾರ ಇ ಬಸ್ಸುಗಳಿಂದ ಬೆಂಗಳೂರಿನಲ್ಲಿ ಪ್ರತೀ ವರ್ಷ 14,500 ಟನ್ ಕಾರ್ಬನ್ ಡೈ ಆಕ್ಸೈಡ್ ಅನಿಲ ಹೊರಸೂಸುವುದು ತಪ್ಪುತ್ತದೆ. ಈ ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳಲು 87 ಸಾವಿರ ಮರಗಳು ಬೇಕು. ಅಂದರೆ 300 ಇ ಬಸ್ಸುಗಳ ಸಂಚಾರವು 87 ಸಾವಿರ ಮರಗಳನ್ನು ನೆಡುವುದಕ್ಕೆ ಸಮ ಎಂದು ತಜ್ಞರು ಹೇಳುತ್ತಾರೆ.

ಎಷ್ಟು ಕಿಮೀ ಓಡುತ್ತೆ?

ಎಷ್ಟು ಕಿಮೀ ಓಡುತ್ತೆ?

ಸ್ವಿಚ್ ಮೊಬಿಲಿಟಿ ಸರಬರಾಜು ಮಾಡುತ್ತಿರುವ 300 ಇ ಬಸ್ಸುಗಳು 41 ಸೀಟರ್‌ನದ್ದಾಗಿವೆ. ಒಮ್ಮೆ ಚಾರ್ಜ್ ಮಾಡಿದರೆ 150 ಕಿಮೀವರೆಗೂ ಇದು ಓಡುತ್ತದೆ. ಮಧ್ಯದಲ್ಲಿ ಯಾವಾಗಲಾದರೂ 45 ನಿಮಿಷ ಹೆಚ್ಚುವರಿಯಾಗಿ ಚಾರ್ಜ್ ಮಾಡಿದರೆ ಹೆಚ್ಚುವರಿ 75 ಕಿಮೀ ಓಡುತ್ತದೆ. ಒಂದು ಎಲೆಕ್ಟ್ರಿಕ್ ಬಸ್ಸು 225 ಕಿಮೀವರೆಗೂ ಓಡಬಹುದು. ಬೆಂಗಳೂರಿನ ಪ್ರಮುಖ ಬಸ್ ಡಿಪೋಗಳಲ್ಲಿ ಇಂಥ ಆಪೋರ್ಚುನಿಟಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಬಿಎಂಟಿಸಿ ಸ್ಥಾಪಿಸುತ್ತಿದೆ. ಅಕ್ಟೋಬರ್‌ನಷ್ಟರಲ್ಲಿ ಈ ಎಲ್ಲಾ ಸೌಕರ್ಯ ವ್ಯವಸ್ಥೆ ಅಳವಡಿಕೆಯಾಗಲಿದೆ.

ವೋಲ್ವೋ ನಷ್ಟ

ವೋಲ್ವೋ ನಷ್ಟ

ಬೆಂಗಳೂರಿನಲ್ಲಿ ಬಸ್‌ಗಳ ವಿಚಾರದಲ್ಲಿ ಬಹಳ ಪ್ರಯೋಗ ಮಾಡಲಾಗಿರುವುದು ಹೌದು. ಹಲವು ಪ್ರಯೋಗಗಳು ಕೈಕೊಟ್ಟಿವೆ. ಅಂಥವುಗಳಲ್ಲಿ ವೋಲ್ವೋ ಬಸ್ ಒಂದು. ಬಿಎಂಟಿಸಿಗೆ ವೋಲ್ವೊ ಒಂದು ರೀತಿಯಲ್ಲಿ ಬಿಳಿ ಆನೆಯಂತಾಗಿದೆ. ಒಂದೆರಡು ರೂಟು ಬಿಟ್ಟರೆ ಉಳಿದಂತೆ ವೋಲ್ವೊ ಬಸ್ಸುಗಳಿಂದ ಬಿಎಂಟಿಸಿಗೆ ನಷ್ಟದ ಹೊರೆ ಹೆಚ್ಚಾಗಿದೆ.

ಬಿಎಂಟಿಸಿ ಬಳಿ ಇರುವ 850 ಬಸ್ಸುಗಳ ಪೈಕಿ ಬರೋಬ್ಬರಿ 50 ಬಸ್ಸುಗಳು ಡಿಪೋದಲ್ಲಿ ಧೂಳಿಡಿದು ಕೂತಿವೆ. ಈಗ ಓಡುತ್ತಿರುವ ಕೆಲ ಬಸ್ಸುಗಳಿಂದಲೂ ಬಿಎಂಟಿಸಿಗೆ ಆದಾಯ ಸಿಗುತ್ತಿಲ್ಲ. ಬೇರೆ ಸಾರಿಗೆ ನಿಗಮಗಳಿಂದಲೂ ಈ ವೋಲ್ವೋ ಬಸ್ಸುಗಳಿಗೆ ಬೇಡಿಕೆ ಬಂದಿಲ್ಲ. ಹೀಗಾಗಿ, ಹತ್ತಾರು ವೋಲ್ವೊ ಬಸ್ಸುಗಳು ಮಾತ್ರ ಬೆಂಗಳೂರಿನಲ್ಲಿ ಉಳಿದುಕೊಂಡು ಉಳಿದವು ಗುಜರಿ ಸೇರಬಹುದು, ಇಲ್ಲವೇ ಬೇರೆ ರಾಜ್ಯಗಳ ಸಾರಿಗೆ ನಿಗಮಗಳಿಗೆ ಕೊಡಬಹುದು.

(ಒನ್ಇಂಡಿಯಾ ಸುದ್ದಿ)

English summary
BMTC will have to spend more than 49 rupees per KM for an electric bus to run, according to the officials. And once fully charged, ebus can run upto 150 km in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X