ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದ ಮೊದಲ ಮಹಿಳಾ ಇ- ಆಟೋ ಚಾಲಕಿ ಇವರು

|
Google Oneindia Kannada News

ಶ್ರೀನಗರ, ನವೆಂಬರ್‌ 3: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಮೊದಲ ಮಹಿಳಾ ಇ-ರಿಕ್ಷಾ ಚಾಲಕಿ ಸೀಮಾ ದೇವಿ ಅವರು ತಮ್ಮ ಪತಿಗೆ ಆರ್ಥಿಕವಾಗಿ ಸಹಾಯ ಮಾಡುವ ಹಾಗೂ ತನ್ನ ಜೀವನ ಆದಾಯ ಮೂಲವನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ಇ ಆಟೋ ಓಡಿಸುತ್ತಿದ್ದಾರೆ.

ಜಮ್ಮುವಿನ ನಗ್ರೋಟಾ ಪ್ರದೇಶದ ಸೀಮಾ ದೇವಿ ಅವರು ತನ್ನ ಜೀವನದ ಸಂಪಾದನೆಗೆ ಮತ್ತು ತನ್ನ ಪತಿಯನ್ನು ಬೆಂಬಲಿಸುವ ಮಾರ್ಗವನ್ನು ಕಂಡುಕೊಳ್ಳುವವರೆಗೂ ಜಗತ್ತಿನಿಂದ ಮುಖ್ಯವಾಹಿನಿಯಿಂದ ಹೊರಗಿದ್ದರು.

Breaking: ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಹತ್ಯೆBreaking: ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಹತ್ಯೆ

ಇ- ರಿಕ್ಷಾಗಳು ಸಬ್ಸಿಡಿ ದರದಲ್ಲಿ ಖರೀದಿಸಲು ಲಭ್ಯವಿದೆ ಎಂದು ತನ್ನ ಪತಿಗೆ ತಿಳಿಯುವವರೆಗೂ ತಾನು ಜೀವನೋಪಾಯಕ್ಕಾಗಿ ಹಲವು ಮಾರ್ಗಗಳನ್ನು ಹುಡುಕಾಡಿದ್ದರು. ಬಳಿಕ ದಂಪತಿ ಇಎಂಐ (ಸುಲಭ ಮಾಸಿಕ ಕಂತು) ಯೋಜನೆಯಲ್ಲಿ ಮೂರು ಚಕ್ರದ ವಾಹನವನ್ನು ಖರೀದಿಸಿದರು. ಬಳಿಕ ಸೀಮಾಗೆ ವಾಹನವನ್ನು ಚಾಲನೆ ಮಾಡುವ ಪಾಠವನ್ನು ಆಕೆಯ ಪತಿಯೇ ಹೇಳಿಕೊಟ್ಟರು.

Know about Jammu Kashmirs first woman e-auto driver Seema Devi

ತನ್ನ ಸಂಗಾತಿಯಿಂದ ಚಾಲನಾ ತರಬೇತಿವನ್ನು ಶ್ರದ್ಧೆಯಿಂದ ಕಲಿತ ಸೀಮಾ ಈಗ ವೃತ್ತಿಪರ ಇ-ರಿಕ್ಷಾ ಚಾಲಕಿಯಾಗಿದ್ದು, ನಗ್ರೋಟಾದಲ್ಲಿ ಅವರು ಬಯಸಿದ ಸ್ಥಳಗಳಿಗೆ ಪ್ರಯಾಣಿಕರನ್ನು ತಲುಪಿಸುತ್ತಿದ್ದಾರೆ. ಅಲ್ಲದೆ ಅದರಿಂದ ಉತ್ತಮ ಹಣವನ್ನು ಗಳಿಸುತ್ತಿದ್ದಾರೆ. ಆದರೆ, ಮೊದಲ ಮಹಿಳಾ ಇ-ರಿಕ್ಷಾ ಸೀಮಾ ಚಾಲಕರಾಗುವ ಹಾದಿ ಸುಲಭವಾಗಿರಲಿಲ್ಲ ಎಂದು ಹೇಳಿದರು. ಅವರು ಮಹಿಳೆಯಾದ್ದರಿಂದ ಕೆಲವು ನಿರ್ಬಂಧಗಳನ್ನು ಜಯಿಸಬೇಕಾಗಿತ್ತು ಮತ್ತು ದಾರಿಹೋಕರು ಮತ್ತು ಪ್ರಯಾಣಿಕರು ವ್ಯಂಗ್ಯವಾಗಿ ಅವರನ್ನು ಟೀಕೆ ಮಾಡುತ್ತಿದ್ದರು.

ಜಮ್ಮು ಕಾಶ್ಮೀರದ ಹಳ್ಳಿಯಲ್ಲಿ ಬೆಂಕಿಗೆ ಆಹುತಿಯಾದ 20 ಮನೆಗಳುಜಮ್ಮು ಕಾಶ್ಮೀರದ ಹಳ್ಳಿಯಲ್ಲಿ ಬೆಂಕಿಗೆ ಆಹುತಿಯಾದ 20 ಮನೆಗಳು

ಮೂರು ಮಕ್ಕಳ ತಾಯಿಯಾಗಿರುವ ಸೀಮಾ ಅವರು ಆರಂಭಿಕ ತೊಂದರೆಗಳಿಂದ ಈಗ ಹೊರಬಂದಿದ್ದಾರೆ. ಈಗ ಅವರ ಕುಟುಂಬ ಮತ್ತು ಮಕ್ಕಳಿಗಾಗಿ ಸಂಪಾದಿಸುತ್ತಿರುವುದು ಸಂತೋಷವಾಗಿದೆ ಎಂದ ಅವರು, ಈ ಕೆಲಸದಲ್ಲಿ ತನ್ನ ಕುಟುಂಬ ಸದಸ್ಯರು ತನಗೆ ಬೆಂಬಲ ನೀಡುವುದರಲ್ಲಿ ನಿಸ್ಸೀಮರು. ತನ್ನ ನೆರೆಯ ನಿವಾಸಿಗಳು ತನಗಾಗಿ ಬದುಕುವ ನನ್ನ ಸಂಕಲ್ಪವನ್ನು ಶ್ಲಾಘಿಸಿದ್ದಾರೆ ಎಂದು ಅವರು ಹೇಳಿದರು.

Know about Jammu Kashmirs first woman e-auto driver Seema Devi

ತಮ್ಮ ಹಾಗೂ ತಮ್ಮ ಮನೆಯವರಿಗಾಗಿ ಬದುಕುವ ಹಂಬಲ ಹೊಂದಿರುವ ಇತರ ಮಹಿಳೆಯರಿಗೆ ಸೀಮಾದೇವಿ ಸ್ಪೂರ್ತಿಯಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ದಿನನಿತ್ಯದ ಈ ಕೆಲಸವು ತನ್ನ ನಿತ್ಯದ ಮನೆಕೆಲಸಗಳನ್ನು ನಿರ್ವಹಿಸಲು ಅಡ್ಡಿಯಾಗಿಲ್ಲ. ಮುಂಜಾನೆ ತನ್ನ ವಾಹನದೊಂದಿಗೆ ಹೊರಡುವ ಅವರು ಮಧ್ಯೆ ಸಮಯ ಸಿಕ್ಕಾಗ ತನ್ನ ಮನೆಯ ಕರ್ತವ್ಯಗಳನ್ನು ಮಾಡುವುದಾಗಿ ಹೇಳಿದರು.

English summary
Seema Devi, the first woman e-rickshaw driver in the valley state of Jammu and Kashmir, is driving an e-auto to help her husband financially and form a source of income for her marital life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X