ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಹೆಚ್ಚಿನ ಸ್ಥಾನ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 09: ಕೇರಳದಲ್ಲಿ ಎಡಪಕ್ಷಗಳ ಆಡಳಿತ ಪ್ರಭಾವ ಹೆಚ್ಚಾಗಿದ್ದರೂ ಇತ್ತೀಚಿನ ಸ್ಥಳೀಯ ಟಿವಿ ಸಮೀಕ್ಷೆಯಂತೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಿಂದ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ವರದಿ ಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮನೋರಮಾ ನ್ಯೂಸ್, ಕಾರ್ವಿ ಏಜೆನ್ಸಿ, ಮಾತೃಭೂಮಿ ಟಿವಿ- ಎಸಿ ನೀಲ್ಸನ್ ಏಜೆನ್ಸಿ ನಡೆಸಿದ ಸಮೀಕ್ಷೆಯಂತೆ ಕಾಂಗ್ರೆಸ್ ತನ್ನ 2014ರ ಫಲಿತಾಂಶವನ್ನು ಉತ್ತಮಗೊಳಿಸಲಿದೆ. 2014ರಲ್ಲಿ 20 ಸ್ಥಾನಗಳ ಪೈಕಿ 12 ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು.

ಕೇರಳದ ಪ್ರಮುಖ ಎರಡು ಟಿವಿ ಮಾಧ್ಯಮಗಳ ವರದಿಯಂತೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (ಯುಡಿಎಫ್) 13 ಸ್ಥಾನ ಪಡೆಯಲಿದ್ದು, ಇನ್ನೆರಡು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯೂ ಇದೆ. ಅಂದರೆ, ಸಿಪಿಎಂ ನೇತೃತ್ವದ ಎಲ್ ಡಿಎಫ್ 3 ಸ್ಥಾನ ಪಡೆಯಬಹುದು. ಕಾಂಗ್ರೆಸ್ 4 ಸ್ಥಾನ ಗಳಿಸುವ ನಿರೀಕ್ಷೆಯಿದೆ

Kerala’s leading television channels predict near-sweep for Congress-led UDF

ಕುತೂಹಲ ಕೆರಳಿಸಿರುವ ತಿರುವನಂತಪುರಂ ಕ್ಷೇತ್ರದಲ್ಲಿ ಬಿಜೆಪಿ ಒಂದು ಸ್ಥಾನ ಗೆಲ್ಲಬಹುದು. ಮಾರ್ಚ್ 27 ರಿಂದ 31ರ ಅವಧಿಯಲ್ಲಿ ಸಮೀಕ್ಷೆ ನಡೆಸಿದ್ದರಿಂದ ನಾಲ್ಕೈದು ಸ್ಥಾನಗಳು ಅದಲು ಬದಲಾಗುವ ನಿರೀಕ್ಷೆ ಹೆಚ್ಚಿದೆ. 2014ರಲ್ಲಿ 9 ಸಿಪಿಐಎಂನ 9 ಸಂಸದರ ಪೈಕಿ 6 ಮಂದಿ ಕೇರಳದಿಂದ ಆಯ್ಕೆಯಾದವರು ಎಂಬುದನ್ನು ಮರೆಯುವಂತಿಲ್ಲ.

English summary
The surveys carried out by Manorama News in conjunction with Karvy agency and Mathrubhumi TV in conjunction with AC Nielsen agency point to the Congress and its allies improving their performance from the 2014 Lok Sabha polls when it won 12 of the 20 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X