• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Opinion Poll: ಕೇರಳದಲ್ಲಿ ಮತ್ತೆ ಪಿಣರಾಯಿ ವಿಜಯನ್ ದಿಗ್ವಿಜಯ

|

ನವದೆಹಲಿ, ಜನವರಿ 18: ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಚುನಾವಣಾ ಸಮರದ ಕಾವೇರಲಿದೆ. ಚುನಾವಣಾ ದಿನಾಂಕ ಘೋಷಣೆಯಾಗದೆ ಇದ್ದರೂ ರಾಜಕೀಯ ಪಕ್ಷಗಳು ಅದಕ್ಕೆ ತಯಾರಿ ನಡೆಸುತ್ತಿವೆ. ಚುನಾವಣೆಗೂ ಮುನ್ನ ವಿವಿಧ ಮಾಧ್ಯಮಗಳು ಹಾಗೂ ಸಂಸ್ಥೆಗಳು ಜನರ ಅಭಿಪ್ರಾಯ ಯಾವ ರೀತಿ ಇದೆ ಎಂಬುದನ್ನು ಅರಿಯುವ ಸಮೀಕ್ಷೆಗಳು ನಡೆಯುತ್ತಿವೆ.

ಎಬಿಪಿ ಸುದ್ದಿ ವಾಹಿನಿ ಮತ್ತು ಸಿ ವೋಟರ್ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಮುಂದಿನ ಚುನಾವಣೆಗೂ ಮುನ್ನ ಜನರ ನಿರೀಕ್ಷೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

ವರ್ಕ್ ಫ್ರಂ ಹೋಂಗೆ ಆದ್ಯತೆ, 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊತ್ತ ಕೇರಳ ಬಜೆಟ್ವರ್ಕ್ ಫ್ರಂ ಹೋಂಗೆ ಆದ್ಯತೆ, 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊತ್ತ ಕೇರಳ ಬಜೆಟ್

ಕೇರಳದಲ್ಲಿ ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮರಳಿ ಅಧಿಕಾರಕ್ಕೆ ಬರಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕೊರೊನಾ ವೈರಸ್ ಸೋಂಕಿನ ನಿರ್ವಹಣೆಯಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳು, ಅವರ ಕಾರ್ಯವೈಖರಿಯೇ ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದೆ.

ಕೇರಳದಲ್ಲಿ 140 ಸೀಟುಗಳಿಗೆ ಚುನಾವಣೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 98 ಸೀಟುಗಳಲ್ಲಿ ಸ್ಪರ್ಧಿಸಿದ್ದು, ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಮುಂದೆ ಓದಿ.

ಯಾರಿಗೆ ಎಷ್ಟು ಮತಗಳು?

ಯಾರಿಗೆ ಎಷ್ಟು ಮತಗಳು?

ಎಲ್‌ಡಿಎಫ್: 81-89

ಯುಡಿಎಫ್: 49-57

ಬಿಜೆಪಿ: 0-2

ಇತರೆ: 0-2

ಮುಖ್ಯಮಂತ್ರಿ ಬಗ್ಗೆ ತೃಪ್ತಿ ಎಷ್ಟಿದೆ?

ಮುಖ್ಯಮಂತ್ರಿ ಬಗ್ಗೆ ತೃಪ್ತಿ ಎಷ್ಟಿದೆ?

ತುಂಬಾ ತೃಪ್ತಿಕರ: 48%

ತೃಪ್ತಿಕರ: 35%

ಅತೃಪ್ತಿಕರ: 16%

ಹೇಳಲು ಅಸಾಧ್ಯ: 01%

ಮೋದಿ ಕಾರ್ಯವೈಖರಿ ಎಷ್ಟು ತೃಪ್ತಿಕರ?

ಮೋದಿ ಕಾರ್ಯವೈಖರಿ ಎಷ್ಟು ತೃಪ್ತಿಕರ?

ತುಂಬಾ ತೃಪ್ತಿಕರ: 33%

ತೃಪ್ತಿಕರ: 28%

ಅತೃಪ್ತಿಕರ: 39

ಹೇಳಲು ಅಸಾಧ್ಯ: 0%

ಕೇಂದ್ರ ಸರ್ಕಾರದ ಆಡಳಿತ ಸಮಾಧಾನಕರವೇ?

ಕೇಂದ್ರ ಸರ್ಕಾರದ ಆಡಳಿತ ಸಮಾಧಾನಕರವೇ?

ತುಂಬಾ ತೃಪ್ತಿಕರ: 30%

ತೃಪ್ತಿಕರ: 28%

ಅತೃಪ್ತಿಕರ: 42%

ಹೇಳಲು ಅಸಾಧ್ಯ: 1%

English summary
Kerala Assembly Election 2021: ABP News and C Voter Opinion Poll has predicted that Pinarayi Vijayan likely to regain power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X