Karnataka Assembly Election 2023: ಗದಗ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು

ಅಖಂಡ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟ ಗದಗ 1997 ರಲ್ಲಿ ಜಿಲ್ಲೆಯಾಯಿತು. ಅಂದಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲರು ಗದಗ ಜಿಲ್ಲೆಯನ್ನು ಘೋಷಣೆ ಮಾಡಿದರು. ಗದಗ ಜಿಲ್ಲೆಯು ಐತಿಹಾಸಿಕ ಮಹತ್ವ ಪಡೆದಿದ್ದು, ಗದಗ ನಗರದಲ್ಲಿರುವ ವೀರ ನಾರಾಯಣ ದೇವಸ್ಥಾನ, ತ್ರಿಕುಟೇಶ್ವರ ದೇವಸ್ಥಾನ, ಲಕ್ಕುಂಡಿಯ ದೇವಾಲಯಗಳು ಪ್ರಸಿದ್ಧಿ ಪಡೆದಿವೆ.

ಈ ಜಿಲ್ಲೆಯಲ್ಲಿ ಒಟ್ಟು ಐದು ತಾಲ್ಲೂಕುಗಳಿವೆ. ಗದಗ, ನರಗುಂದ, ರೋಣ, ಶಿರಹಟ್ಟಿ ಹಾಗೂ ಮುಂಡರಗಿ. ಇದರಲ್ಲಿ ಒಟ್ಟು ನಾಲ್ಕು ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಗದಗ, ನರಗುಂದ, ರೋಣ ಸಾಮಾನ್ಯ ಕ್ಷೇತ್ರಗಳು. ಶಿರಹಟ್ಟಿ ಮೀಸಲು ಕ್ಷೇತ್ರವಾಗಿದೆ.

ಗದಗದಲ್ಲಿ ಕೃಷಿ ಕ್ಷೇತ್ರ ಪ್ರಧಾನವಾಗಿದೆ. ಈರುಳ್ಳಿ, ಹತ್ತಿ, ಜೋಳ, ಮೆಣಸಿನಕಾಯಿ, ಶೇಂಗಾ, ಕಡಲೆ ಬೆಳೆಗಳನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ಜಿಲ್ಲೆಯಲ್ಲಿ ಒಣ ಬೇಸಾಯಿ ಪದ್ದತಿ ಹೆಚ್ಚಿದೆ. ಮುಂಡರಗಿ ತಾಲ್ಲೂಕಿನ ಸಿಂಗಟಾಲೂರು ನೀರಾವರಿಗೆ ಅನುಕೂಲ ಮಾಡಿಕೊಟ್ಟಿದೆ. ಮಲಪ್ರಭಾ, ತುಂಗ ಭದ್ರಾ ನದಿಗಳು ಹಾಗೂ ಬೆಣ್ಣಿ ಹಳ್ಳಗಳು ಜಮೀನುಗಳಿಗೆ ನೀರು ಒದಗಿಸುತ್ತವೆ.

ಗದಗ ನಗರವು ಆಧ್ಯಾತ್ಮಿಕ ಕೇಂದ್ರವೂ ಹೌದು. ಇಲ್ಲಿ ಪುಟ್ಟರಾಜ ಗವಾಯಿಗಳ ಮಠ, ತೋಂಟದಾರ್ಯ ಮಠ ಹಾಗೂ ಶಿವಾನಂದ ಮಠಗಳಿವೆ. ಈ ಮೂರು ಮಠಗಳು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತವೆ. ಗದಗ ನಗರಕ್ಕೆ ಮುದ್ರಣ ಕಾಶಿ ಎಂದೇ ಕರೆಯುತ್ತಾರೆ.

 ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದೆ

ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದೆ

ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದೆ. ಲಿಂಗಾಯತ ಸಮುದಾಯದ ಮತಗಳೇ ನಿರ್ಣಾಯಕವೆಂದು ಹೇಳಬಹುದು. ಕಾಂಗ್ರೆಸ್ ನಾಯಕರಾದ ಕೆ ಎಚ್‌ ಪಾಟೀಲ, ಎಚ್‌ ಕೆ ಪಾಟೀಲ ಜಿಲ್ಲೆಯ ಪ್ರಮುಖ ಕೈ ನಾಯಕರು. ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ಬಿಜೆಪಿಯ ಪ್ರಬಲ ರಾಜಕಾರಣಿ. ಅವರು ನರಗುಂದ ಕ್ಷೇತ್ರದ ಶಾಸಕರು. ಜಿಲ್ಲೆಯ ವಿಧಾನಸಭೆ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪ್ರಮುಖ ನೋಟ ಇಲ್ಲಿದೆ.

ಗದಗ ಜಿಲ್ಲೆಯ 4 ಕ್ಷೇತ್ರಗಳ ಈಗಿನ ಶಾಸಕರು ಹಾಗೂ ಪಕ್ಷ

ಗದಗ- ಎಚ್‌. ಕೆ. ಪಾಟೀಲ ( ಕಾಂಗ್ರೆಸ್‌)
ನರಗುಂದ- ಸಿ. ಸಿ. ಪಾಟೀಲ ( ಬಿಜೆಪಿ)
ರೋಣ- ಕಳಕಪ್ಪ ಬಂಡಿ ( ಬಿಜೆಪಿ)
ಶಿರಹಟ್ಟಿ- ರಾಮಣ್ಣ ಲಮಾನಿ ( ಕಾಂಗ್ರೆಸ್‌)

ಗದಗ ಜಿಲ್ಲೆಯ ಒಟ್ಟು 4 ವಿಧಾನಸಭಾ ಕ್ಷೇತ್ರಗಳ ಬಲಾಬಲ, ಟಿಕೆಟ್‌ ಆಕಾಂಕ್ಷಿಗಳು ಯಾರು ಎಂಬುದರ ಒಳನೋಟ ಮುಂದಿನ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

 ಕರ್ನಾಟಕ ಅಸೆಂಬ್ಲಿ ಚುನಾವಣೆ

ಕರ್ನಾಟಕ ಅಸೆಂಬ್ಲಿ ಚುನಾವಣೆ

ಗದಗ ವಿಧಾನಸಭೆ ಮತಕ್ಷೇತ್ರದಲ್ಲಿ ಕೆ.ಎಚ್‌. ಪಾಟೀಲ ಕುಟುಂಬದ ಪ್ರಭಾವವೇ ಹೆಚ್ಚಿದೆ. ಕೆ.ಎಚ್. ಪಾಟೀಲರು ಮಾಜಿ ಸಹಕಾರಿ ಸಚಿವರು. ಅವರು ತೀರಿಹೋದ ಬಳಿಕ, ಅವರ ಸಹೋದರನ ಪುತ್ರ ಡಿ ಆರ್‌ ಪಾಟೀಲ ಗದಗಕ್ಕೆ ಮೂರು ಬಾರಿ ಶಾಸಕರಾಗಿದ್ದರು. ಪ್ರಸ್ತುತ, ಮಾಜಿ ಸಚಿವ ಎಚ್‌ ಕೆ ಪಾಟೀಲ ಶಾಸಕರಾಗಿದ್ದಾರೆ. ಈ ಹಿಂದೆ ನೀರಾವರಿ, ಗ್ರಾಮೀಣ ಅಭಿವೃದ್ಧಿ ಹಾಗೂ ಸಹಕಾರಿ ಸಚಿವರಾಗಿ ಎಚ್‌ ಕೆ ಪಾಟೀಲ ಕಾರ್ಯನಿರ್ವಹಿಸಿದ್ದಾರೆ.

ಎಚ್‌ ಕೆ ಪಾಟೀಲರು ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಾರಿಯೂ ಕಾಂಗ್ರೆಸ್‌ನಿಂದ ಅವರಿಗೇ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿದೆ. ಅವರಿಗೆ ಸ್ಪರ್ಧೆ ಒಡ್ಡಲು ಬಿಜೆಪಿ ಮುಂದಾಗಿದೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಕೇವಲ 1850 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅವರು ಈ ಸಾರಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉದ್ಯಮಿ ವಿಜಯಕುಮಾರ ಗಡ್ಡಿ ಸಹ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

 ಬಿಜೆಪಿ ಮತ್ತು ಕಾಂಗ್ರೆಸ್ ನೇರ ಪೈಪೋಟಿ

ಬಿಜೆಪಿ ಮತ್ತು ಕಾಂಗ್ರೆಸ್ ನೇರ ಪೈಪೋಟಿ

ನರಗುಂದ- ಬಂಡಾಯದ ನಾಡಿನಲ್ಲಿ ಬಿಜೆಪಿ- ಕಾಂಗ್ರೆಸ್‌ ಹಣಾಹಣಿ

ನರಗುಂದ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಇದೆ. ಪ್ರಸ್ತುತ ನರಗುಂದ ಕ್ಷೇತ್ರದ ಶಾಸಕರು ಈಗಿನ ಬಿಜೆಪಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಬಿಜೆಪಿ ಟಿಕೆಟ್‌ ನೀಡುವುದು ಖಚಿತವಾಗಿದೆ. ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.

ಐದು ಬಾರಿ ಶಾಸಕರಾಗಿರುವ ಬಿ ಆರ್‌ ಯಾವಗಲ್‌ ಅವರು ಮತ್ತೆ ಟಿಕೆಟ್‌ ಪಡೆಯಲು ಯತ್ನ ನಡೆಸಿದ್ದಾರೆ. ಆದರೆ, ಅವರಿಗೆ ವಯಸ್ಸಾಗಿರುವ ಕಾರಣ, ಯುವಕರಿಗೆ ಕಾಂಗ್ರೆಸ್‌ ಮಣೆ ಹಾಕುವ ಸಾಧ್ಯತೆ ಇದೆ. ಯುವ ಮುಖಂಡ ಹಾಗೂ ಕೆಪಿಸಿಸಿ ಸಂಯೋಜಕ ಡಾ ಸಂಗಮೇಶ ಕೊಳ್ಳಿ ಕಾಂಗ್ರೆಸ್‌ ಟಿಕೆಟ್‌ ಪಡೆಯುವದಕ್ಕಾಗಿ ಹರಸಾಹಸ ನಡೆಸಿದ್ದಾರೆ.

 ರೋಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್

ರೋಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್

ರೋಣ: ಬಿಜೆಪಿ ಶಾಸಕ ಕಳಕಪ್ಪ ಬಂಡಿಗೆ ಅಗ್ನಿಪರೀಕ್ಷೆ

ರೋಣ ಕ್ಷೇತ್ರದಲ್ಲಿ ಪ್ರಸ್ತುತ ಕಳಕಪ್ಪ ಬಂಡಿ ಶಾಸಕರಾಗಿದ್ದಾರೆ. ಅವರು ಜಗದೀಶ ಶೆಟ್ಟರ್‌ ನೇತೃತ್ವದ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಎದುರಾಗಿದೆ. ಇಲ್ಲಿ ಒಂದು ಸಾರಿ ಬಿಜೆಪಿಗೆ ಅವಕಾಶ ಸಿಕ್ಕರೆ, ಮತ್ತೊಂದು ಸಾರಿ ಕಾಂಗ್ರೆಸ್‌ನ ಶಾಸಕರು ಚುನಾಯಿತರಾಗಿದ್ದಾರೆ. ಕಳಕಪ್ಪ ಬಂಡಿ ಅವರಿಗೆ ಈ ಚುನಾವಣೆ ಅಗ್ನಿಪರೀಕ್ಷೆ ಎನ್ನಲಾಗುತ್ತಿದೆ.

ಕಾರಣ, ಬಿಜೆಪಿ ಟಿಕೆಟ್‌ಗಾಗಿಯೇ ಹಲವರು ಪ್ರಯತ್ನ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಯುವ ಮೋರ್ಚಾ ಅಧ್ಯಕ್ಷ ರವಿ ದಂಡಿನ, ಅಂದಪ್ಪ ಸಂಕನೂರ ಹಾಗೂ ಬಂಡಿ ಸಹೋದರ ಸಿದ್ದಣ್ಣ ಬಂಡಿ ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಶಾಸಕ ಜಿ ಎಸ್‌ ಪಾಟೀಲರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಯಾರೂ ಪೈಪೋಟಿ ಒಡ್ಡಿಲ್ಲ.

 ಪ್ರಸ್ತುತ ರಾಮಣ್ಣ ಲಮಾಣಿ ಅವರು ಶಾಸಕರಾಗಿದ್ದಾರೆ

ಪ್ರಸ್ತುತ ರಾಮಣ್ಣ ಲಮಾಣಿ ಅವರು ಶಾಸಕರಾಗಿದ್ದಾರೆ

ಶಿರಹಟ್ಟಿ: ರಾಮಣ್ಣ ಲಮಾಣಿಗೆ ಪಕ್ಷದಲ್ಲೇ ಸವಾಲು

ಶಿರಹಟ್ಟಿ ಕ್ಷೇತ್ರದಲ್ಲಿ ಪ್ರಸ್ತುತ ರಾಮಣ್ಣ ಲಮಾಣಿ ಅವರು ಶಾಸಕರಾಗಿದ್ದಾರೆ. ಶಿರಹಟ್ಟಿ ಕ್ಷೇತ್ರವು ಮುಂಡರಗಿ ತಾಲ್ಲೂಕನ್ನೂ ಒಳಗೊಂಡಿದೆ. ಇದು ಮೀಸಲು ಕ್ಷೇತ್ರವಾಗಿದೆ. ಕಳೆದ ಬಾರಿ ರಾಮಣ್ಣ ಲಮಾಣಿ ಹಾಗೂ ಕಾಂಗ್ರೆಸ್‌ ಮುಖಂಡ ರಾಮಕೃಷ್ಣ ದೊಡ್ಡಮನಿ ಅವರ ನಡುವೆ ಹಣಾಹಣಿ ಏರ್ಪಟ್ಟಿತ್ತು.

ರಾಮಣ್ಣ ಲಮಾಣಿ ಅವರು 29 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈಗ ಉದ್ಯಮಿ ಗುರುನಾಥ ದಾನಪ್ಪನವರ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಯತ್ನ ನಡೆಸಿದ್ದಾರೆ. ಕ್ಷೇತ್ರದಲ್ಲಿ ಜನಸಂಪರ್ಕ ಸಾಧಿಸಲು ಕೆಲ ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ. ಈ ಸಾರಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಿದೆ ಎಂಬ ಮಾತುಗಳೂ ದಟ್ಟವಾಗಿವೆ.

ಇನ್ನು ಸಂಜಯ ಚವುಡಾಳ, ಡಾ ಚಂದ್ರು ಲಮಾಣಿ, ಭೀಮಸಿಂಗ್‌ ರಾಠೋಡ ಸಹ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಸುಜಾತ ದೊಡ್ಡಮನಿ ಹಾಗೂ ಭರತ್‌ ನಾಯಕ ಅವರೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+