ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka Assembly Election 2023: ಬೆಳಗಾವಿ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು

|
Google Oneindia Kannada News

ರಾಜ್ಯದಲ್ಲಿ ಭೌಗೋಳಿಕ ಹಾಗೂ ರಾಜಕೀಯವಾಗಿ ಪ್ರತಿಷ್ಠೆ ಹೊಂದಿರುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ಒಂದೆಡೆ ಬೆಳಗಾವಿಯು ಗಡಿ ವಿವಾದಕ್ಕೆ ಕುಖ್ಯಾತಿ ಪಡೆದಿದ್ದರೆ, ಇನ್ನೊಂದೆಡೆ ಆ ಜಿಲ್ಲೆಯೊಳಗಿನ ರಾಜಕಾರಣದಿಂದಲೂ ಖ್ಯಾತಿ-ಕುಖ್ಯಾತಿಯನ್ನು ಪಡೆದಿದೆ.

ಬೆಳಗಾವಿ ಜಿಲ್ಲೆಯು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಬೌಗೋಳಿಕವಾಗಿ ಹೆಸರುವಾಸಿಯಾಗಿದೆ. ಮೊದಲು ಹತ್ತಿ ಹಾಗೂ ರೇಷ್ಮೆಯಂತಹ ವಾಣಿಜ್ಯ ಉತ್ಪನ್ನಗಳಿಗೆ ಜಿಲ್ಲೆ ಹೆಚ್ಚು ಪ್ರಸಿದ್ದಿಯಾಗಿತ್ತು. ಆ ನಂತರ ಸಕ್ಕರೆ ಕಾರ್ಖಾನೆಗಳು ಜಿಲ್ಲೆಯಾದ್ಯಂತ ತಲೆ ಎತ್ತಿದವು. ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಒಡೆತನದಲ್ಲಿವೆ. ಅಥವಾ, ಕಾರ್ಖಾನೆಗಳ ಒಡೆಯರು ರಾಜಕಾರಣಕ್ಕೆ ಬರುತ್ತಾರೆ. ಕಬ್ಬು ಈ ಜಿಲ್ಲೆಯ ಪ್ರಮುಖ ಬೆಳೆಯಾಗಿ ಮಾರ್ಪಟ್ಟಿದೆ.

Karnataka Assembly Election -2023 ಬೆಳಗಾವಿ ಜಿಲ್ಲೆ 09 ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳುKarnataka Assembly Election -2023 ಬೆಳಗಾವಿ ಜಿಲ್ಲೆ 09 ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು

ಈ ಜಿಲ್ಲೆಯು ಗೋವಾ ಹಾಗೂ ಮಹಾರಾಷ್ಟ್ರದ ಗಡಿಗಳೊಂದಿಗೆ ಬೆಸೆಯುತ್ತಿದೆ. ಹೀಗಾಗಿ, ಇಲ್ಲಿನ ನಗರ ಭಾಗಗಳಲ್ಲಿ ಮರಾಠಿ ಮಾತನಾಡುವವರ ಸಂಖ್ಯೆಯೂ ಬಹಳಷ್ಟಿದೆ. ಇಲ್ಲಿನ ಪ್ರೇಕ್ಷಣೀಯ ಸ್ಥಳಗಳೆಂದರೆ, ಹಿಡಕಲ್ ಜಲಾಶಯ, ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ, ಗೋಕಾಕ್ ಜಲಪಾತ ಹಾಗೂ ಕಿತ್ತೂರಿನಲ್ಲಿರುವ ರಾಣಿ ಚೆನ್ನಮ್ಮ ಕೋಟೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಖಂಡೇಯ, ಹಿರಣ್ಯಕೇಶಿ, ದೂದಗಂಗೆ-ವೇದಗಂಗೆ ಈ ಜಿಲ್ಲೆಯ ಪ್ರಮುಖ ನದಿಗಳು. ಈ ಜಿಲ್ಲೆಯಲ್ಲಿ ಮೂರು ಜಲಾಶಯಗಳಿವೆ. ನವಿಲುತೀರ್ಥ, ರಾಕಸಕೊಪ್ಪ ಹಾಗೂ ಹಿಡಕಲ್ ಜಲಾಶಯ.

ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಕುಟುಂಬ- ಪರಿವಾರಗಳದ್ದೇ ಹೆಚ್ಚು ಪಾರುಪತ್ಯವಿದೆ. ಜಾರಕಿಹೊಳಿ ಕುಟುಂಬ, ಹುಕ್ಕೇರಿ ಕುಟುಂಬ, ಕತ್ತಿ ಕುಟುಂಬ, ಕೌಜಲಗಿ ಕುಟುಂಬ, ಪಟ್ಟಣ ಕುಟುಂಬ, ಜೊಳ್ಳೆ ಕುಟುಂಬ, ಮಾಮನಿ ಕುಟುಂಬ, ಅಂಗಡಿ ಕುಟುಂಬ ಹಾಗೂ ಹೆಬ್ಬಾಳ್ಕರ್‌ ಕುಟುಂಬಗಳ ಸದಸ್ಯರು ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

ಈ ಕುಟುಂಬಗಳ ಸದಸ್ಯರು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲಿದ್ದಾರೆ. ಇವರಲ್ಲಿ ಕೆಲವರು ಕರ್ನಾಟಕ ರಾಜಕಾರಣದಲ್ಲಿ ಹೆಚ್ಚು ಪ್ರಭಾವವನ್ನು ಹೊಂದಿದ್ದಾರೆ. ಈ ಜಿಲ್ಲೆಯಲ್ಲಿ ಒಟ್ಟು 17 ವಿಧಾನಸಭಾ ಕ್ಷೇತ್ರಗಳ ಬರುತ್ತವೆ. ಅವುಗಳ ಪೈಕಿ 9 ಕ್ಷೇತ್ರಗಳ ಬಗ್ಗೆ ಒಂದು ನೋಟ ಇಲ್ಲಿದೆ..

 ಬೆಳಗಾವಿ ಜಿಲ್ಲೆಯ 9 ಕ್ಷೇತ್ರಗಳ ಈಗಿನ ಶಾಸಕರು ಹಾಗೂ ಪಕ್ಷ

ಬೆಳಗಾವಿ ಜಿಲ್ಲೆಯ 9 ಕ್ಷೇತ್ರಗಳ ಈಗಿನ ಶಾಸಕರು ಹಾಗೂ ಪಕ್ಷ

ಹುಕ್ಕೇರಿ- ದಿವಂಗತ ಉಮೇಶ ಕತ್ತಿ (ಬಿಜೆಪಿ)
ಕಾಗವಾಡ- ಶ್ರೀಮಂತ ಪಾಟೀಲ (ಬಿಜೆಪಿ)
ಖಾನಾಪುರ- ಅಂಜಲಿ ನಿಂಬಾಳ್ಕರ್‌ (ಕಾಂಗ್ರೆಸ್‌)
ಕಿತ್ತೂರು- ಮಹಾಂತೇಶ್ ದೊಡ್ಡಗೌಡರ್ (ಬಿಜೆಪಿ)
ಕುಡುಚಿ- ಪಿ.ರಾಜೀವ್‌ (ಬಿಜೆಪಿ)
ನಿಪ್ಪಾಣಿ- ಶಶಿಕಲಾ ಜೊಲ್ಲೆ (ಬಿಜೆಪಿ)
ರಾಮದುರ್ಗ- ಮಹಾದೇವಪ್ಪ ಯಾದವಾಡ (ಬಿಜೆಪಿ)
ರಾಯಭಾಗ- ದುರ್ಯೋಧನ ಐಹೊಳೆ (ಬಿಜೆಪಿ)
ಸವದತ್ತಿ- ದಿವಂಗತ ಆನಂದ ಮಾಮನಿ (ಬಿಜೆಪಿ)

 ಒಂಬತ್ತು ವಿಧಾನಸಭಾ ಕ್ಷೇತ್ರಗಳ ಬಲಾಬಲ, ಟಿಕೆಟ್‌ ಆಕಾಂಕ್ಷಿಗಳು

ಒಂಬತ್ತು ವಿಧಾನಸಭಾ ಕ್ಷೇತ್ರಗಳ ಬಲಾಬಲ, ಟಿಕೆಟ್‌ ಆಕಾಂಕ್ಷಿಗಳು

ಹುಕ್ಕೇರಿ: ರಮೇಶ ಕತ್ತಿಗೆ ಹೆಚ್ಚಿನ ಅವಕಾಶ

ಹುಕ್ಕೇರಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 1,93,274
ಪುರುಷ ಮತದಾರರು: 95,923
ಮಹಿಳಾ ಮತದಾರರು: 94,978

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಉಮೇಶ್‌ ಕತ್ತಿ ಅವರು ಜಯ ಸಾಧಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಅಯ್ಯಪ್ಪಗೌಡ ಬಸನಗೌಡ ಪಾಟೀಲ ಅವರು 15,385 ಮತಗಳಿಂದ ಪರಾಭವಗೊಂಡಿದ್ದರು.

ಈಗ ಉಮೇಶ ಕತ್ತಿ ನಿಧನರಾಗಿದ್ದು, ಅವರ ಸಹೋದರ ರಮೇಶ ಕತ್ತಿ ಅವರನ್ನು ಬಿಜೆಪಿ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಇನ್ನು ಕಾಂಗ್ರೆಸ್‌ನಿಂದ ರವಿ ಬಸವರಾಜ ಕರಾಳೆ, ಅಪ್ಪಯ್ಯಗೌಡ ಬಸಗೌಡ ಪಾಟೀಲ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

 ಅಸೆಂಬ್ಲಿ ಚುನಾವಣೆ

ಅಸೆಂಬ್ಲಿ ಚುನಾವಣೆ

ಕಾಗವಾಡ: ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿ

ಕಾಗವಾಡ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 1,78,735
ಪುರುಷ ಮತದಾರರು: 92,223
ಮಹಿಳಾ ಮತದಾರರು: 85,812

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶ್ರೀಮಂತ ಪಾಟೀಲರು ಆಯ್ಕೆಯಾಗಿದ್ದರು. ಇವರ ಎದುರು ಸ್ಪರ್ಧಿಸಿದ್ದ ಬಿಜೆಪಿಯ ರಾಜು ಕಾಗೆ ಅವರು 13, 306 ಮತಗಳಿಂದ ಸೋಲನ್ನು ಅನುಭವಿಸಿದ್ದರು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಶ್ರೀಮಂತ ಪಾಟೀಲರು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶ್ರೀಮಂತ ಪಾಟೀಲರಿಗೆ ಬಿಜೆಪಿಯಿಂದ ಟಿಕೆಟ್‌ ನೀಡುವುದು ಬಹುತೇಕ ಖಚಿತವಾಗಿದೆ.

ಉಪಚುನಾವಣೆಯಲ್ಲಿ ಸೋಲು ಅನುಭವಿಸಿರುವ ರಾಜು ಕಾಗೆ ಅವರು ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಿರಣಕುಮಾರ್ ತಾತ್ಯಾಗೌಡ ಪಾಟೀಲ ಅವರೂ ಸಹ ಕಾಂಗ್ರೆಸ್‌ ಟಿಕೆಟ್‌ಗಾಗಿ ಯತ್ನ ನಡೆಸಿದ್ದಾರೆ. ಜೆಡಿಎಸ್‌ನಿಂದ ಕಲ್ಲಪ್ಪ ಮಗೆನ್ನವರ್ ಸ್ಪರ್ಧಿಸುವ ಸಾಧ್ಯತೆ ಇದೆ.

 ವಿಧಾನಸಭಾ ಚುನಾವಣೆ

ವಿಧಾನಸಭಾ ಚುನಾವಣೆ

ಖಾನಾಪುರ: ಅಂಜಲಿ ನಿಂಬಾಳ್ಕರ್‌ಗೆ ಒಲಿಯಲಿದೆಯಾ ಟಿಕೆಟ್‌?

ಖಾನಾಪುರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 2,04,694
ಪುರುಷ ಮತದಾರರು: 1,05,247
ಮಹಿಳಾ ಮತದಾರರು: 98,211

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಂಜಲಿ ನಿಂಬಾಳ್ಕರ್‌ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು. ಇವರಿಗೆ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ವಿಠ್ಠಲ್ ಹಲಗೇಕರ್ ಅವರು 5,133 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ನಾಸಿರ್ ಭಗವಾನ್ ಸಹ 27,272 ಮತಗಳನ್ನು ಗಳಿಸುವ ಮೂಲಕ ಪೈಪೋಟಿ ನೀಡಿದ್ದಾರೆ. ಈ ಬಾರಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅಂಜಲಿ ನಿಂಬಾಳ್ಕರ್‌ ಅರ್ಜಿ ಸಲ್ಲಿಸಿದ್ದಾರೆ. ವಿಠ್ಠಲ್ ಹಲಗೇಕರ್, ಅರವಿಂದ್ ಪಾಟೀಲ್, ವಿಲಾಸ್ ಕೃಷ್ಣ ಬೆಳಗಾಂವ್ಕರ್ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಎನ್ನಲಾಗುತ್ತಿದೆ. ನಾಸಿರ್ ಭಗವಾನ್ ಜೆಡಿಎಸ್‌ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

 ಅಸೆಂಬ್ಲಿ ಚುನಾವಣೆ - ಕರ್ನಾಟಕ

ಅಸೆಂಬ್ಲಿ ಚುನಾವಣೆ - ಕರ್ನಾಟಕ

ಕಿತ್ತೂರು: ಕಾಂಗ್ರೆಸ್‌, ಬಿಜೆಪಿ ನೇರ ಹಣಾಹಣಿ

ಕಿತ್ತೂರು ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 1,86,195
ಪುರುಷ ಮತದಾರರು: 93,699
ಮಹಿಳಾ ಮತದಾರರು: 91,296

ಕಳೆದ ಬಾರಿಯ ಚುನಾವಣೆಯಲ್ಲಿ ಮಹಾಂತೇಶ್ ದೊಡ್ಡಗೌಡರ್ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಬಿ. ಡಿ. ಇನಾಂದಾರ್ ಅವರು 32,862 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಈ ಬಾರಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಡಾ. ಬಿ. ಡಿ. ಇನಾಂದಾರ್ ಹಾಗೂ ಬಾಬಾಸಾಹೇಬ್ ದೇವನಗೌಡ ಪಾಟೀಲ್ ಅವರ ನಡುವೆ ಪೈಪೋಟಿ ಇದೆ. ಮಾಜಿ ಸಚಿವ ವಿನಯ್ ಕುಲಕರ್ಣಿಗೂ ಟಿಕೆಟ್‌ ದೊರೆತರ ಅಚ್ಚರಿ ಪಡಬೇಕಿಲ್ಲ. ಬಿಜೆಪಿಯಿಂದ ಮಹಾಂತೇಶ್ ದೊಡ್ಡಗೌಡರ್ ಸ್ಪರ್ಧೆ ಬಹುತೇಕ ನಿಶ್ಚಿತವಾಗಿದೆ.

 ಪಿ.ರಾಜೀವ್ ಗೆ ಮತ್ತೆ ಗೆಲುವು ಸಿಗಲಿದೆಯಾ?

ಪಿ.ರಾಜೀವ್ ಗೆ ಮತ್ತೆ ಗೆಲುವು ಸಿಗಲಿದೆಯಾ?

ಕುಡುಚಿ: ಪಿ.ರಾಜೀವ್‌ಗೆ ಮತ್ತೊಮ್ಮೆ ಗೆಲುವಾಗಲಿದೆಯಾ?

ಕುಡುಚಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 1,76,708
ಪುರುಷ ಮತದಾರರು: 90,846
ಮಹಿಳಾ ಮತದಾರರು: 85,565

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪಿ.ರಾಜೀವ್ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರ ವಿರುದ್ಧ ಕಣಕ್ಕಿಳಿದಿದ್ದ ಅಮಿತ್ ಶಾಮ ಘಾಟಗೆ ಅವರು 15,008 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಕುಡಚಿ ಕ್ಷೇತ್ರದಿಂದ ಈ ಬಾರಿಯೂ ಪಿ. ರಾಜೀವ್ ಅವರೇ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಮಾಜಿ ಶಾಸಕ ಅಮಿತ್‌ ಶಾಮ ಘಾಟಗೆ, ಮಹೇಶ್‌ ತಮ್ಮಣ್ಣನವರ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

 ಶಶಿಕಲಾ ಜೊಲ್ಲೆಗೆ ಮತ್ತೆ ಗೆಲುವು ಸಿಗಲಿದೆಯಾ?

ಶಶಿಕಲಾ ಜೊಲ್ಲೆಗೆ ಮತ್ತೆ ಗೆಲುವು ಸಿಗಲಿದೆಯಾ?

ನಿಪ್ಪಾಣಿ: ಸಚಿವ ಶಶಿಕಲಾ ಜೊಲ್ಲೆಗೆ ಸತ್ವಪರೀಕ್ಷೆ?

ನಿಪ್ಪಾಣಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 2,09,099
ಪುರುಷ ಮತದಾರರು: 1,06,134
ಮಹಿಳಾ ಮತದಾರರು: 1,02,342

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಚಿವೆ ಶಶಿಕಲಾ ಜೊಲ್ಲೆ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಕಾಕಾಸಾಹೇಬ ಪಾಟೀಲ ಅವರು 8,506 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಈ ಬಾರಿಯೂ ಇವರಿಬ್ಬರ ನಡುವೆ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಶಶಿಕಲಾ ಜೊಲ್ಲೆ ಬಿಜೆಪಿ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದೆ. ಇನ್ನು ಕಾಂಗ್ರೆಸ್‌ನಿಂದ ಕಾಕಾಸಾಹೇಬ ಪಾಟೀಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

 ಕರ್ನಾಟಕ ವಿಧಾನಸಭಾ ಚುನಾವಣೆ

ಕರ್ನಾಟಕ ವಿಧಾನಸಭಾ ಚುನಾವಣೆ

ರಾಯಭಾಗ: ದುರ್ಯೋಧನ ಐಹೊಳೆಗೆ ಬಿಜೆಪಿಯಿಂದ ಟಿಕೆಟ್‌?

ರಾಯಭಾಗ: ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 1,91,690
ಪುರುಷ ಮತದಾರರು: 99,026
ಮಹಿಳಾ ಮತದಾರರು: 91,978

ಕಳೆದ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ದುರ್ಯೋಧನ ಐಹೊಳೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಪ್ರದೀಪ್ ಕುಮಾರ್ ಮಳಗಿ 16,548 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಈ ಬಾರಿಯೂ ದುರ್ಯೋಧನ ಐಹೊಳೆ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಇನ್ನು ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರದೀಪ್‌ಕುಮಾರ್‌ ಮಾಳಗೆ, ಮಹಾವೀರ್‌ ಮೊಹಿತೆ ಕಸರತ್ತು ನಡೆಸಿದ್ದಾರೆ.

 ಬೆಳಗಾವಿ ಜಿಲ್ಲೆಯ ಅಸೆಂಬ್ಲಿ ಕ್ಷೇತ್ರಗಳು

ಬೆಳಗಾವಿ ಜಿಲ್ಲೆಯ ಅಸೆಂಬ್ಲಿ ಕ್ಷೇತ್ರಗಳು

ಅಥಣಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು - 2,13,935
ಪುರುಷರು - 1,10,447
ಮಹಿಳೆಯರು - 1,03,437
ಇತರೆ - 10


ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಆಡಳಿತವಿದೆ. ಇಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಹೇಶ್ ಕಮಟಳ್ಳಿ ಅವರು ಗೆದ್ದಿದ್ದರು. ಅವರ ವಿರುದ್ಧ ನಿಂತಿದ್ದ ಕಾಂಗ್ರೆಸ್ ಪಕ್ಷ ಗಜಾನನ ಮಂಗಸೂಳಿ ಅವರು ಬರೊಬ್ಬರಿ 39ಸಾವಿರ ಮತಗಳಿಂದ ಪರಾಭವಗೊಂಡಿದ್ದರು.

ಈ ಅಥಣಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಲಕ್ಷ್ಮಣ ಸವದಿ, ಈಗ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಸದ್ಯ ಹಾಲಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಅವರೇ ಮತ್ತೆ ಈ ಸಲು ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆ. ಇವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು.

ಈಕ್ಷೇತ್ರ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಯಾಗಿರುವ ಎಸ್‌.ಕೆ.ಬುಟಾಳಿ ಅವರನ್ನು ಚುನಾವಣೆಗೆ ಕಣಕ್ಕಿಳಿಸಲು ಶಾಸಕ ಸತೀಶ್ ಜಾರಕಿಹೊಳಿ ಯೋಜಿಸಿದ್ದಾರೆ. ಇತ್ತ ಕಾಂಗ್ರೆಸ್‌ನ ಬಸವರಾಜ ಬೀಸನಕೊಪ್ಪ ಮತ್ತು ಕಳೆದ ಬಾರಿ ಸೋತ ಗಜಾನನ ಮಂಗಸೂಳಿ ಅವರು ಟಿಕೆಟ್ ಪಡೆಯಲು ತೆರೆಮರೆಯ ಕಸರತ್ತು ನಡೆಸಿದ್ದಾರೆ. ಇಲ್ಲಿ ಈ ಭಾರಿ ತೀವ್ರ ಪೈಪೋಟಿ ನಡೆಯಲಿದೆ.

 ಬೆಳಗಾವಿಯ ಎಲ್ಲಾ ಕ್ಷೇತ್ರಗಳಲ್ಲೂ ತುರುಸಿನ ಸ್ಪರ್ಧೆ

ಬೆಳಗಾವಿಯ ಎಲ್ಲಾ ಕ್ಷೇತ್ರಗಳಲ್ಲೂ ತುರುಸಿನ ಸ್ಪರ್ಧೆ

ಚಿಕ್ಕೋಡಿ-ಸದಲಗ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು - 2,10,480
ಪುರುಷರು - 1,06,671
ಮಹಿಳೆಯರು - 1,03,796
ಇತರೆ - 13

ಚಿಕ್ಕೋಡಿ ಸದಲಗ ಭಾಗದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗಣೇಶ್‌ ಹುಕ್ಕೇರಿ ಅವರು ಗೆದ್ದ ಬೀಗಿದ್ದರು. ಇದು ಕಾಂಗ್ರೆಸ್‌ ಭದ್ರಕೋಟೆ ಎಂದರೆ ತಪ್ಪಾಗದು. ಅವರ ಎದುರು ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆಯವರು ಕಡಿಮೆ ಅಂತರ (10,569)ದಲ್ಲಿ ಸೋಲು ಅನುಭವಿಸಿದ್ದರು.

ಈ ಭಾರಿ ವಿಧಾನ ಪರಿಷತ್‌ ಸದಸ್ಯ, ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ ಮತ್ತೆ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಇವರ ವಿರದ್ಧ ಬಿಜೆಪಿ ರಣ ತಂತ್ರ ನಡೆಸಿದ್ದಿ, ಪ್ರಬಲ ಅಭ್ಯರ್ಥಿಯನ್ನೇ ಸ್ಪರ್ಧೆಗೆ ಇಳಿಸಲು ಹುಡುಕಾಟ ನಡೆಸಿದೆ.

ಈ ಪೈಕಿ ಜಗದೀಶ್ ಕವಟಗಿಮಠ ಇಲ್ಲವೇ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಪುತ್ರ ಅಮಿತ ಕೋರೆ ಅವರಿಗೆ ಟಿಕೆಟ್ ನೀಡಿ ಕಾಂಗ್ರೆಸ್‌ ಮಣಿಸಲು ಸಜ್ಜಾಗುತ್ತಿದೆ. ಗಣೇಶ್ ಹುಕ್ಕೇರಿಯವರನ್ನು ಸೋಲಿಸುವ ಲೆಕ್ಕಾಚಾರ ಬಿಜೆಪಿಯದು.

English summary
Karnataka Assembly Elections 2023 : Here are the list of probables will get Belagavi North District constituencies ticket from BJP, Congress, JDS and Other Parties. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X