Karnataka 7th Pay Commission; ಭತ್ಯೆ, ನಿವೃತ್ತಿ, ರಜೆ ಸೌಲಭ್ಯಗಳು
ಕರ್ನಾಟಕ ಸರ್ಕಾರ ರಚನೆ ಮಾಡಿರುವ ರಾಜ್ಯ 7ನೇ ರಾಜ್ಯ ವೇತನ ಆಯೋಗ ವಿವಿಧ ಭತ್ಯೆಗಳು, ಸರ್ಕಾರಿ ನೌಕರರ ರಜೆ, ನಿವೃತ್ತಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದೆ.
ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ವರದಿ ನೀಡಲು ರಾಜ್ಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿದೆ.
ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯೋಗ ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು ಅಲ್ಲದೇ, ಇಲಾಖೆ, ಸಂಸ್ಥೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆಗಳನ್ನು ವಿವಿಧ ವಿಚಾರಗಳ ಕುರಿತು ಪಡೆಯುತ್ತಿದೆ. ಫೆಬ್ರವರಿ 10ರ ತನಕ ಸ್ವೀಕಾರ ಮಾಡಲು ಅವಕಾಶವಿದ್ದು, ದಿನಾಂಕ ವಿಸ್ತರಣೆಯಾಗುವ ಸಾಧ್ಯತೆಯೂ ಇದೆ.
ಇದಕ್ಕಾಗಿ ಆಯೋಗವು ಪ್ರಶ್ನಾವಳಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಯಾರಿಸಿ ಬಿಡುಗಡೆ ಮಾಡಿದೆ. ಸರ್ಕಾರಿ ನೌಕರರು ಮತ್ತು ಪಿಂಚಣಿದಾರು, ಸರ್ಕಾರದ ಅಮುಕಾ/ ಪ್ರಕಾ/ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರಿಗೆ, ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿ ವರ್ಗದವರಿಗೆ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ಬೇರೆ ಬೇರೆ ಪ್ರಶ್ನಾವಳಿ ಸಿದ್ಧಗೊಳಿಸಿದೆ.
ಆಸಕ್ತರು ಪ್ರಶ್ನಾವಳಿಯಲ್ಲಿನ ಅಂಶಗಳಿಗೆ ಉತ್ತರಗಳನ್ನು ತಮ್ಮ ಅನಿಸಿಕ ಹಾಗೂ ಮುಕ್ತ ಸಲಹೆಗನ್ನು ನೀಡಬಹುದಾಗಿದೆ. ಸ್ವಯಂ ನಿವೃತ್ತಿ, ನಿಯಮ, ಭತ್ಯೆ, ರಜೆ ಸೌಲಭ್ಯ, ಸಮೂಹ ವಿಮಾ ಯೋಜನೆ ಮುಂತಾದವುಗಳ ಕುರಿತು ಪ್ರಶ್ನಾವಳಿಗಳು ಹೀಗಿವೆ...

ಭತ್ಯೆಗಳಿಗೆ ಇರುವ ಅರ್ಹತಾ ಷರತ್ತು
7ನೇ ರಾಜ್ಯ ವೇತನ ಆಯೋಗ ಈ ಕೆಳಕಂಡ ಭತ್ಯೆಗಳಿಗೆ ಇರುವ ಅರ್ಹತಾ ಷರತ್ತು ಮತ್ತು ಮೊತ್ತದ ಕುರಿತು ಸಲಹೆಗಳೇನಾದರೂ ಇದೆಯೆ? ಎಂದು ಪ್ರಶ್ನಾವಳಿಯಲ್ಲಿ ಕೇಳಿದೆ.
ವಾಹನ ಭತ್ಯೆ, ಸಮವಸ್ತ್ರ ಭತ್ಯೆ, ಅಪಾಯ ಸಂಭವ ಭತ್ಯೆ, ಪ್ರಭಾರ ಭತ್ಯೆ, ನಿಗಧಿತ ಪ್ರಯಾಣ ಭತ್ಯೆ, ಅನ್ಯ ಸೇವೆ ಭತ್ಯೆ, ವಿಶೇಷ ಭತ್ಯೆಗಳನ್ನು ಈ ಪ್ರಶ್ನಾವಳಿಯಲ್ಲಿ ಸೇರಿಸಲಾಗಿದೆ.
ವರ್ಗಾವಣೆಯಾದ ಒಬ್ಬ ನೌಕರನಿಗೆ ಮಂಜೂರು ಮಾಡುವ ಈಗಿರುವ ವರ್ಗಾವಣೆ ಅನುದಾನ ಮತ್ತು ಸಾಮಾನು ಸರಂಜಾಮು ಸಾಗಣೆ ಭತ್ಯೆಗಳ ಬಗ್ಗೆಯೂ ಅಭಿಪ್ರಾಯಗಳೇನು? ಎಂದು ಉತ್ತರ ಬಯಸಲಾಗಿದೆ.

ಸರ್ಕಾರಿ ನೌಕರರ ರಜೆ ಸೌಲಭ್ಯಗಳು
ಜಂಟಿ ಕಾರ್ಯದರ್ಶಿ 7ನೇ ರಾಜ್ಯ ವೇತನ ಆಯೋಗ ಜಿ. ಬಿ. ಹೇಮಣ್ಣ ರಾಜ್ಯಪತ್ರದಲ್ಲಿ ಪ್ರಕಟಿಸಿದಂತೆ ಅಧಿಕೃತ ಪ್ರಯಾಣ/ ಪ್ರವಾಸದ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆಗಳ ದರಗಳನ್ನು ಮಾರ್ಪಡಿಸುವ ಅಗತ್ಯವಿದೆಯೆಂದು ಭಾವಿಸುವಿರಾ?. ಹೌದಾದಲ್ಲಿ ಸೂಕ್ತ ಭತ್ಯೆ ಎಷ್ಟೆಂದು ಸೂಚಿಸುವುದು? ಎಂದು ಮಾಹಿತಿ ಕೇಳಲಾಗಿದೆ.
ಈ ಕೆಳಕಂಡ ಸೌಲಭ್ಯಗಳಲ್ಲಿ ಅಗತ್ಯವಿರುವ ಯಾವುದಾದರೂ ಬದಲಾವಣೆಗಳ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ತಿಳಿಸಿ ಎಂದು ಕೇಳಿದ್ದು, ಅದರಲ್ಲಿ ರಜೆ ಸೌಲಭ್ಯಗಳು ಮತ್ತು ಸೇವೆಯಲ್ಲಿ ಇರುವಾಗ ಮತ್ತು ನಿವೃತ್ತಿ ಸಂದರ್ಭದಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯ, ಬೈಸಿಕಲ್, ಮೋಟಾರು ವಾಹನ, ಗೃಹ ನಿರ್ಮಾಣ, ಗೃಹ ರಿಪೇರಿ ಮುಂಗಡ ಇತ್ಯಾದಿ, ಅಂಧ ಮತ್ತು ಅಂಗವಿಕಲ ನೌಕರರಿಗೆ ಈಗ ನೀಡಲಾಗುತ್ತಿರುವ ಮಾಹೆಯಾನ ಮೂಲ ವೇತನದ ಶೇಕಡ 6 ರಂತೆ ವಾಹನ ಭತ್ಯೆಯನ್ನು ಸೇರಿಸಲಾಗಿದೆ.

ಸರ್ಕಾರಿ ನೌಕರರ ಪಿಂಚಣಿ ಯೋಜನೆಗಳು
7ನೇ ರಾಜ್ಯ ವೇತನ ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳಲ್ಲಿ ಈ ಅಂಶಗಳು ಸಹ ಸೇರಿವೆ. ಸರ್ಕಾರಿ ನೌಕರರಿಗೆ ಅನ್ವಯಿಸುವ ಪ್ರಸಕ್ತ ಸಮೂಹ ವಿಮಾ ಯೋಜನೆಯನ್ನು ಇನ್ನಷ್ಟು ಸುಧಾರಣೆ ಮಾಡಲು ನಿಮ್ಮ ಸಲಹೆಗಳೇನಾದರೂ ಇದೆಯೇ?.
ಸ್ವಇಚ್ಛಾ ನಿವೃತ್ತಿಗೆ ಸಂಬಂಧಪಟ್ಟ ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?. ಪಿಂಚಣಿ ಪ್ರಯೋಜನಗಳಿಗೆ ಸಂಬಂಧಿಸಿದಂತೆ, ದಯವಿಟ್ಟು ಕಳಕಂಡ ಅಂಶಗಳನ್ನು ಓದಿಕೊಂಡು ತಮ್ಮ ಸೂಕ್ತ ಪ್ರತಿಕ್ರಿಯೆಯನ್ನು ಒದಗಿಸುವುದು ಎಂದು ತಿಳಿಸಲಾಗಿದ್ದು, ಇದರಲ್ಲಿ
ಪ್ರಸ್ತುತ, 30 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ ಮಾತ್ರ ಪೂರ್ಣನಿವೃತ್ತಿ ವೇತನ ಸಂದಾಯವಾಗುತ್ತದೆ. ನಿವೃತ್ತಿಯ ಉಪದಾನವನ್ನು ಲೆಕ್ಕ ಹಾಕುವಾಗ ಮೂಲ ವೇತನವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದರ ಮಾರ್ಪಾಡಿಗೆ ಏನಾದರೂ ಸಲಹ ನೀಡುವಿರಾ? ಈ ಮಾರ್ಪಾಡಿಗೆ ಕಾರಣಗಳನ್ನು ನೀಡಿ ಎಂದು ವಿವರಣೆ ಕೇಳಲಾಗಿದೆ.

ನಿವೃತ್ತರಿಗೆ ನೀಡುವ ಸೌಲಭ್ಯಗಳು
7ನೇ ರಾಜ್ಯ ವೇತನ ಆಯೋಗಕ್ಕೆ ಈ ಅಂಶಗಳ ಕುರಿತು ವರದಿ ನೀಡಲು ಸಹ ನೌಕರರು, ಸಾರ್ವಜನಿಕರು ಸಲಹೆಗಳನ್ನು ನೀಡಬಹುದಾಗಿದೆ.
ಪ್ರಸ್ತುತ ಕನಿಷ್ಠ ಪಿಂಚಣಿ ಮತ್ತು ಕುಟುಂಬ ವಿಶ್ರಾಂತಿ ವೇತನವು ಮಾಹೆಯಾನ ರೂ. 8,500 ಆಗಿದ್ದು, ತುಟ್ಟಿ ಭತ್ಯೆಯನ್ನು ಸಹ ಸೇರಿಸಲಾಗುತ್ತದೆ. ನಿವೃತ್ತಿ ವೇತನದ ಗರಿಷ್ಠ ಮೊತ್ತವು ರೂ. 45,180 ಆಗಿರುತ್ತದೆ. ಈ ಮೊತ್ತವು ತಕ್ಕುದಾಗಿದೆಯೆಂದು ತಾವು ಭಾವಿಸುವಿರಾ? ಇಲ್ಲವಾದಲ್ಲಿ ಕನಿಷ್ಟ ಮತ್ತು ಗರಿಷ್ಠ ಕುಟುಂಬ ಪಿಂಚಣಿಯು ಎಷ್ಟಿರಬೇಕು?.
ನಿವೃತ್ತಿದಾರರಿಗೆ ನೀಡುವುದು ಯುಕ್ತವೆಂದು ಭಾವಿಸುವ ಇತರ ಸೌಲಭ್ಯಗಳಾವುವು?. ನಿವೃತ್ತಿ ವೇತನದ ಗರಿಷ್ಠ 1/3 ನೇ ಭಾಗವನ್ನು ಹಾಲಿ ಪರಿವರ್ತನಗೊಳಿಸಬಹುದಾಗಿದ್ದು (ಪಿಂಚಣಿ ಪರಿವರ್ತನ), 15 ವರ್ಷಗಳ ನಂತರ ಇದರ ಪುನಃ ಸ್ಥಾಪನೆಯ ವ್ಯವಸ್ಥೆ ಇರುತ್ತದೆ. ಇದರ ಮಾರ್ಪಾಡಿಗೆ ಸಲಹೆ ಏನಾದರೂ ಇದೆಯೇ? ಎಂದು ಮಾಹಿತಿಯನ್ನು ಆಯೋಗ ಕೇಳಿದೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications