ರಾಜ್ಯೋತ್ಸವ ಪ್ರಶಸ್ತಿ; ಪ್ರೊ. ನ ವೆಂಕೋಬರಾವ್ ಪರಿಚಯ

ಹಾಸನ, ಅಕ್ಟೋಬರ್ 28: 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಹಾಸನ ಜಿಲ್ಲೆಯ ಪ್ರೊ. ನ. ವೆಂಕೋಬರಾವ್ ಅವರಿಗೆ ಸಂಕೀರ್ಣ ವಿಭಾಗದಲ್ಲಿ ಈ ಬಾರಿ ಪ್ರಶಸ್ತಿ ಸಿಕ್ಕಿದೆ.

ಪ್ರೊ. ನ ವೆಂಕೋಬರಾವ್ ಅವರು ನಿವೃತ್ತ ಇತಿಹಾಸ ಪ್ರಾಧ್ಯಾಪಕರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾಂತರಾಜಪುರದಲ್ಲಿ ಜನಿಸಿದವರು. ತಂದೆ ವಿಜ್ಞಾನಿ ನಂಜಪ್ಪ ತಾಯಿ ಸುಂದರಮ್ಮ.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಂತರಾಜಪುರದಲ್ಲಿ ನಡೆಸಿದ ಅವರು ನಂತರ ಚನ್ನರಾಯಪಟ್ಟಣ ಚಿಂತಾಮಣಿ ದೊಡ್ಡಬಳ್ಳಾಪುರ ಹಾಗೂ ಮೈಸೂರಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

Kannada Rajyotsava Award 2020 N Venkobarao Profile

ಗುರೂಜಿ ಗೋಳವಲ್ಕರ್, ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಶೇಷಾದ್ರಿ ಜಗನ್ನಾಥರಾವ್ ಜೋಶಿ, ಯಾದವರಾವ್ ಜೋಶಿ ಮುಂತಾದ ಗಣ್ಯರ ಜೊತೆ ಒಡನಾಟ ಹೊಂದಿದ್ದು, ದೇಶ ಸೇವೆಯನ್ನು ಮಾಡಿದ್ದಾರೆ. ಶ್ರೀಕಾಂತ ಕಾವ್ಯನಾಮದಲ್ಲಿ ಇವರು ಬರೆದ ಹಲವಾರು ಕಥೆಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ 'ಭೂಮಿ ಕಂಪಿಸಲಿಲ್ಲ' ಎಂಬ ಕಥಾ ಸಂಕಲನವೂ ಒಂದು.

ಪ್ರೊ. ನ ವೆಂಕೋಬರಾವ್ ಲಯನ್ಸ್ ಸಂಸ್ಥೆಯಲ್ಲಿ ಹಲವಾರು ವಿಭಿನ್ನ ಸೇವಾ ಚಟುವಟಿಕೆಗಳನ್ನು ಮಾಡುವ ಮೂಲಕ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸೇವೆಯನ್ನು ಪರಿಗಣಿಸಿ ಲಯನ್ಸ್ ಸಂಸ್ಥೆ ಇವರಿಗೆ ಆಜೀವಷ ಗೌರವ ಸದಸ್ಯತ್ವ ನೀಡಿ ಗೌರವಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಕಟ್ಟುವಲ್ಲಿ ಪ್ರೊ. ನ. ವೆಂಕೋಬರಾವ್ ಯೋಗದಾನವಿದೆ. ಆರ್‌ಎಸ್‌ಎಸ್ ಪ್ರಕಟಿಸುವ ವಿಕ್ರಮ ಪತ್ರಿಕೆಯ ಉಪಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+