Job Security: ಸಹೊದ್ಯೋಗಿಗೆ ಗೇಟ್‌ಪಾಸ್‌; ಕಚೇರಿಯಲ್ಲೀಗ ಎಲ್ಲರನ್ನೂ ಕಾಡುತ್ತಿದೆ ಜಾಬ್‌ ಸೆಕ್ಯೂರಿಟಿ ಆತಂಕ

Job Security : ಓದು ಮುಗಿಸಿದ ನಂತರ ಕೆಲಸ ಗಿಟ್ಟಿಸಿಕೊಳ್ಳುವುದು ಒಂದು ಸಮಸ್ಯೆಯಾದರೆ ಸಿಕ್ಕಿದ ಕೆಲಸವನ್ನು ಉಳಿಸಿಕೊಳ್ಳುವುದು ಈಗ ಅದಕ್ಕಿಂತ ದೊಡ್ಡ ಸಮಸ್ಯೆಯಾಗಿದೆ. ಎಲ್ಲಾ ಕಂಪನಿಗಳಲ್ಲಿಯೂ ಲೇ ಆಫ್‌ ಸಮಸ್ಯೆ ಕಾಡುತ್ತಿದೆ. ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ವೇಳೆಗೆ ಅವರು ಕೆಲಸ ಕಳೆದುಕೊಂಡು ವಾಪಸಾಗುವ ಸ್ಥಿತಿ. ಯಾರ ಕೆಲಸ ಯಾವ ಹೊತ್ತಿನಲ್ಲಿ ಕಳೆದುಕೊಳ್ಳಬೇಕಾಗುವುದೋ ಯಾರಿಗೂ ಗೊತ್ತಿಲ್ಲ. ಒಬ್ಬ ಕೆಲಸ ಕಳೆದುಕೊಂಡರೆ ಅದರ ಪರಿಣಾಮ ಆತನ ಮೇಲೆ ಮಾತ್ರವಲ್ಲ, ಆತನ ಸಹೋದ್ಯೋಗಿಗಳ ಮೇಲೂ ಆಗುವುದು.

ವೈರಲ್‌ ಆಗುತ್ತಿದೆ ಸೋಶಿಯಲ್‌ ಮಿಡಿಯಾ ಪೋಸ್ಟ್‌

ಹೌದು, ಸಹೋದ್ಯೋಗಿಯನ್ನು ಹಠಾತ್ತಾಗಿ ಕೆಲಸದಿಂದ ವಜಾಗೊಳಿಸಿರಿವುದನ್ನು ನೋಡಿದ ವ್ಯಕ್ತಿಗೆ ಇದೀಗ ತನ್ನ ಭವಿಷ್ಯದ ಚಿಂತೆ ಕಾಡತೊಡಗಿದೆ. ಈ ಬಗ್ಗೆ ಆತ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ. ಈತನ ಪೋಸ್ಟ್‌ ವೈರಲ್‌ ಆಗುತ್ತಿದ್ದು ಜಾಬ್‌ ಸೆಕ್ಯೂರಿಟಿಯ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆ ಶುರುವಾಗಿದೆ.

Job Security Man Questions About Job After His Colleague Fired From Job Without Any Clue Post Goes Viral

ಮೊದಲೇ ಯಾವ ಸೂಚನೆಯನ್ನೂ ನೀಡದೆ ಇದ್ದಕ್ಕಿದ್ದ ಹಾಗೆ ಕೆಲಸ ಬಿಡುವಂತೆ ಉದ್ಯೋಗಿಯನ್ನು ಕೇಳುವ ರೀತಿ ಸಾಮಾನ್ಯ ಎನ್ನುವಂತೆ ಕಂಡರೂ ಉದ್ಯೋಗ ಎಷ್ಟು ಅನಿಶ್ಚಿತವಾಗಿದೆ ಎನ್ನುವುದು ಗೊತ್ತಾಯಿತು ಎಂದು ಆ ವ್ಯಕ್ತಿ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ತಾನು ಕಂಪನಿಗೆ ಎರಡು ವಾರಗಳ ಹಿಂದೆಯಷ್ಟೇ ಸೇರಿದ್ದೆ. ಆದರೆ, ಪರಿಸ್ಥಿತಿ ಎಷ್ಟು ಬೇಗನೆ ಬದಲಾಗಬಹುದು ಎಂಬುದರ ಬಗ್ಗೆ ಈ ಘಟನೆ ಯೋಚಿಸುವಂತೆ ಮಾಡಿತು ಎಂದು ಹೇಳಿದ್ದಾರೆ.

ಕೆಲಸ ಕಳೆದುಕೊಳ್ಳುವ ಆತಂಕ

ತಾನು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಒಬ್ಬ ವ್ಯಕ್ತಿಯನ್ನು ಇವತ್ತು ಕೆಲಸದಿಂದ ತೆಗೆದುಹಾಕಲಾಯಿತು. ಯಾವ ನೊಟೀಸ್‌ ಸೂಚನೆ ಏನೂ ಇರಲಿಲ್ಲ, ನಿಂತಲ್ಲೇ ಕೆಲಸದಿಂದ ತೆಗೆದುಹಾಕಲಾಯಿತು. ಅವರ ವಸ್ತುಗಳನ್ನೆಲ್ಲಾ ಪ್ಯಾಕ್‌ ಮಾಡಿ ಕಳುಹಿಸಿಕೊಡಲಾಯಿತು. ಅವರು ಸೇಲ್ಸ್‌ನಲ್ಲಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲಸದ ಭದ್ರತೆ ಹೇಗಿದೆ ಎನ್ನುವ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ಧಾರೆ. ನನ್ನ ಕೆಲಸವೂ ಅವರಿಗೆ ಇಷ್ಟವಾಗದಿದ್ದರೆ ಯಾವ ಕ್ಷಣದಲ್ಲಿ ಬೇಕಾದರೂ ನನ್ನನ್ನೂ ಮನೆಗೆ ಕಳುಹಿಸಿ ಬಿಡಬಹುದು ಎನ್ನುವುದನ್ನು ಯೋಚಿಸಿದರೆ ಭಯ ಆಗುತ್ತಿದೆ ಎಂದು ಹೇಳಿದ್ದಾರೆ.

ಮನದಲ್ಲಿ ಮೂಡಿರುವ ಗೊಂದಲ

ಒಂದು ಸಣ್ಣ ತಪ್ಪು ಕೂಡಾ ತನ್ನ ಕೆಲಸ ಕಳೆದುಕೊಳ್ಳುವ ಅಪಾಯವನ್ನು ತಂದೊಡ್ಡಬಹುದೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ ಎಂದು ಹೇಳಿದ್ಧಾರೆ. ಒಂದು ಕೋಡ್ ಕ್ರ್ಯಾಶ್ ಆದರೂ ನಾನು ಕಂಪನಿಯಿಂದ ಹೊರ ಹಾಕಲ್ಪಟುತ್ತೇನೆಯೇ ಯಾರಿಗೆ ಗೊತ್ತು? ಅಥವಾ ಯಾವುದೇ ತಪ್ಪಾಗದಿದ್ದರೂ ಕಂಪನಿಯಿಂದ ಹೊರ ಹೋಗಬಹುದು ಎಂದು ಹೇಳಿದ್ದಾರೆ. ಇನ್ನು ಕೆಲಸದಿಂದ ತೆಗೆದು ಹಾಕುವುದನ್ನು ನೋಡುತ್ತಿರುವುದು ಇದೇ ಮೊದಲಲ್ಲ, ಹಿಂದಿನ ಸಂಸ್ಥೆಗಳಲ್ಲಿಯೂ ನೋಡಿದ್ದೇನೆ. ಆದರೆ ಈ ಕಂಒನಿಗೆ ಎರಡು ವಾರಗಳ ಹಿಂದೆ ಸೇರಿದೆ. ಇಲ್ಲಿ ಹಳೆಯದ್ದನ್ನು ಯೋಚಿಸುವುದು ನನಗೆ ಇಷ್ವವಿರಲಿಲ್ಲ. ಆದರೆ ಆ ಘಟನೆಯ ನಂತರ ನಾನು ಇದರ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ ಎಂದಿದ್ದಾರೆ.

Job Security: ಎಲ್ಲಿ ಹೋದರೂ ಕಾಡುತ್ತಿದೆ ಲೇ ಆಫ್‌ ಭೂತ

ಇನ್ನು ಇಲ್ಲಿ ಕೆಲಸ ಕಳೆದುಕೊಂಡರೆ ಏನು? ಕಂಪನಿಗಳನ್ನು ಬದಲಾಯಿಸಿದರಾಯಿತು ಎನ್ನುವುದು ಕೂಡಾ ಪರಿಹಾರವಲ್ಲ. ಏಕೆಂದರೆ ವಜಾಗೊಳಿಸುವುದು ಉದ್ಯಮದ ಒಂದು ವಿಭಾಗಕ್ಕೆ ಸೀಮಿತವಾಗಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾರೆ. ಈಗಂತೂ ಸ್ಟಾರ್ಟ್ಅಪ್‌ಗಳಿಂದ ಹಿಡಿದು FAANG ವರೆಗೆ ಎಲ್ಲಾ ಕಡೆ ಲೇ ಆಫ್‌ ನಡೆಯುತ್ತಿದೆ. ಹೀಗಿರುವಾಗ ಯಾರು ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ಸಾಮಾನ್ಯ ಆರ್ಥಿಕ ಬದ್ಧತೆಗಳು ಯಾವ ರೀತಿಯಲ್ಲಿ ಚಿಂತೆ ಉಂಟು ಮಾಡುತ್ತಿದೆ ಎನ್ನುವುದನ್ನು ಅವರು ವಿವರಿಸಿದ್ದಾರೆ. ಎರಡು ದಿನಗಳ ಹಿಂದೆ ನನಗೆ ಆರು ತಿಂಗಳ ಜಿಮ್ ಸದಸ್ಯತ್ವವೂ ಸಿಕ್ಕಿತು. ಒಂದು ವೇಳೆ ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ, ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಠೇವಣಿಯಾಗಿ ಒಂದು ತಿಂಗಳ ಬಾಡಿಗೆಯನ್ನೂ ನೀಡಿದ್ದೇನೆ. ಕೆಲಸ ಇಲ್ಲ ಎಂದಾದರೆ ಎಲ್ಲವೂ ಬುಡ ಮೇಲಾಗುತ್ತದೆ ಎನ್ನುವ ಕಳವಳ ಆ ವ್ಯಕ್ತಿಯದ್ದು.

Job Security: ಬೇರೆ ಬೇರೆ ರೀತಿಯ ಕಾಮೆಂಟ್‌

ಈ ಪೋಸ್ಟ್‌ಗೆ ರೆಡ್ಡಿಟ್ ಬಳಕೆದಾರರು ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಒಮ್ಮೆಲೆ ಕೆಲಸದಿಂದ ತೆಗೆದು ಹಾಕುವುದು ಆತಂಕಕ್ಕೆ ಕಾರಣವಾಗಬಹುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗ ಭದ್ರತೆಯು ಒಂದು ಪುರಾಣದಂತೆ ಅನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಈ ರೀತಿಯ ಅನಿಶ್ಚಿತತೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಒಬ್ಬ ಸಹೋದ್ಯೋಗಿಯನ್ನು ಈ ರೀತಿ ಕೆಲಸದಿಂದ ತೆಗೆದುಹಾಕುವುದನ್ನು ನೋಡಿದರೆ ಭಯ ಆಗುತ್ತದೆ ಎಂದು ಮತ್ತೊಬ್ಬರು ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+