• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೋರಾಟದ ಹಾದಿ: 4000 ಬಾರಿ ಅರೆಸ್ಟ್ ಆಗಿದ್ದ ಕನ್ನಡಿಗನಿಗೆ ರಾಜ್ಯಸಭೆ ಸ್ಥಾನ ನೀಡಿತ್ತಾ ಬಿಹಾರ!

|
Google Oneindia Kannada News

ಪಾಟ್ನಾ, ಮೇ 21: ಬಿಹಾರದಲ್ಲಿ ಹೋರಾಟದ ಹಾದಿ ಹಿಡಿದು ಸಾಗಿದ ಅವರು ಕರುನಾಡು ನೆಲದ ಧೀಮಂತ ನಾಯಕ. ತಮ್ಮ 30ನೇ ವರ್ಷದಲ್ಲಿ ಜನತಾ ದಳ(ಜೆಡಿಯು) ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಆರಂಭಿಸಿದ ಅವರು ಇಂದು ರಾಜ್ಯಸಭೆಯ ಗದ್ದುಗೆ ಏರುವುದಕ್ಕೆ ಸಿದ್ಧರಾಗಿ ನಿಂತಿದ್ದಾರೆ. ಅವರೇ ಕರ್ನಾಟಕದ ಅನಿಲ್ ಹೆಗ್ಡೆ.

ಅದು 1994ರ ಮಾರ್ಚ್ 1ನೇ ತಾರೀಖು ನಡೆದ ಘಟನೆ. ಸಂಸತ್ ಎದುರಿಗೆ ಸೆಕ್ಷನ್ 144ರ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಜೆಡಿಯು ಕಾರ್ಯಕರ್ತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ಅನಿಲ್ ಹೆಗ್ಡೆ ಕೂಡ ಒಬ್ಬರಾಗಿದ್ದರು.

ಉದ್ಯಮಿ, ಪತ್ರಿಕೋದ್ಯಮಿಗಳಿಗೆ ರಾಜ್ಯಸಭೆ ಟಿಕೆಟ್ ಘೋಷಣೆಉದ್ಯಮಿ, ಪತ್ರಿಕೋದ್ಯಮಿಗಳಿಗೆ ರಾಜ್ಯಸಭೆ ಟಿಕೆಟ್ ಘೋಷಣೆ

14 ವರ್ಷಗಳ ಹಿಂದೆ ಮೊದಲ ಬಾರಿಗೆ ಪೊಲೀಸರು ವಶಕ್ಕೆ ಪಡೆದ ಅನಿಲ್ ಹೆಗ್ಡೆ ಅಲ್ಲಿಂದ ಹೋರಾಟದ ಹಾದಿಯಿಂದ ಹಿಂತಿರುಗಿ ನೋಡಲೇ ಇಲ್ಲ. ಇಷ್ಟು ವರ್ಷಗಳಲ್ಲಿ ಬರೋಬ್ಬರಿ 4000ಕ್ಕೂ ಹೆಚ್ಚು ಬಾರಿ ಅವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಜೆಡಿಯು ಪಕ್ಷದಲ್ಲಿ ಕೆಳಹಂತದಿಂದ ಬೆಳೆದು ಬಂದ ನಾಯಕನಿಗೆ ಈಗ ರಾಜ್ಯಸಭೆಯ ಸದಸ್ಯ ಸ್ಥಾನ ಒಲಿವು ಬರುವ ಕಾಲ ಸನ್ನಿಹಿತವಾಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಉಡುಪಿ ಮೂಲದ ಅನಿಲ್ ಹೆಗ್ಡೆ ಕೂಡ ಕನ್ನಡಿಗರು

ಉಡುಪಿ ಮೂಲದ ಅನಿಲ್ ಹೆಗ್ಡೆ ಕೂಡ ಕನ್ನಡಿಗರು

ಕರ್ನಾಟಕದ ಉಡುಪಿ ಜಿಲ್ಲೆಯವರಾದ ಅನಿಲ್ ಹೆಗ್ಡೆಯವರು ಹಲವು ದಶಕಗಳ ಹಿಂದೆ ಮಂಗಳೂರಿನ ಕಾಲೇಜೊಂದರಲ್ಲಿದ್ದಾಗ ಜನತಾ ಪಕ್ಷದ ಯುವ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಪ್ರಯಾಣ ಆರಂಭಿಸಿದರು. ತಮ್ಮ ಹೋರಾಟದ ಹಾದಿಯ ಆರಂಭದಲ್ಲೇ ಅನಿಲ್ ಹೆಗ್ಡೆ, ಪಕ್ಷದ ಮುಖಂಡ ಎಂ.ಪಿ.ಪ್ರಕಾಶ್ ಅವರ ಗಮನ ಸೆಳೆದರು. "ಕರ್ನಾಟಕದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಂದೆ ಎಸ್‌ಆರ್ ಬೊಮ್ಮಾಯಿ, ರಾಮಕೃಷ್ಣ ಹೆಗಡೆ ಶೀಘ್ರವಾಗಿ ಸಿಎಂ ಆಗಿದ್ದರು. ಪಕ್ಷದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನಾನು ಪ್ರತಿದಿನ ಪತ್ರಿಕೆಗಳನ್ನು ಸ್ಕ್ಯಾನ್ ಮಾಡುವ ಮತ್ತು ಅಂಚಿನಲ್ಲಿರುವ ಮತ್ತು ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಸತ್ಯಶೋಧನಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದೆ. ಆಗಾಗ ಇದು ನಮ್ಮದೇ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡುತ್ತಿದ್ದರೂ, ನಾವು ಪಟ್ಟು ಹಿಡಿಯುತ್ತಿದ್ದೆ," ಎಂದು ಅನಿಲ್ ಹೆಗ್ಡೆ ಹೇಳಿದರು.

ಜಾರ್ಜ್ ಫರ್ನಾಂಡೀಸ್ ಸಹಾಯಕರಾಗಿ ಅನಿಲ್ ಹೆಗ್ಡೆ ಪರಿಚಿತ

ಜಾರ್ಜ್ ಫರ್ನಾಂಡೀಸ್ ಸಹಾಯಕರಾಗಿ ಅನಿಲ್ ಹೆಗ್ಡೆ ಪರಿಚಿತ

ದಿವಂಗತ ಸಮಾಜವಾದಿ ದಿಗ್ಗಜ ಜಾರ್ಜ್ ಫರ್ನಾಂಡಿಸ್ ದೀರ್ಘಕಾಲೀನ ಸಹಾಯಕರಾಗಿ ಜೆಡಿಯು ಪಕ್ಷದ ಕೆಳ ಹಂತದಲ್ಲಿ ಗುರುತಿಸಿಕೊಂಡಿದ್ದ ಅನಿಲ್ ಹೆಗ್ಡೆ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಮನಿರ್ದೇಶನ ಮಾಡಿದ್ದಾರೆ. ರಾಜ್ಯಸಭೆ ಉಪ ಚುನಾವಣೆಯಲ್ಲಿ ಬಿಹಾರದಿಂದ ಇವರ ಹೆಸರನ್ನು ಆಯ್ಕೆ ಮಾಡಲಾಗಿದೆ. GATT -ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದದ ಕುರಿತು ಜಾಗತಿಕ ವ್ಯಾಪಾರ ನೀತಿಗಳ ವಿರುದ್ಧ ಇದೇ ಅನಿಲ್ ಹೆಗ್ಡೆ ಸಾಮಾನ್ಯ ಕಾರ್ಯಕರ್ತರೊಂದಿಗೆ ಸಾಮಾನ್ಯರಂತೆ ಪ್ರತಿಭಟಿಸಿದ್ದರು. ಅದಕ್ಕಾಗಿಯೇ 4000ಕ್ಕೂ ಹೆಚ್ಚು ಬಾರಿ ಪೊಲೀಸರು ಇವರನ್ನು ಬಂಧಿಸಿದ್ದರು.

ಸಂಸತ್ ಎದುರು ಪ್ರತಿನಿತ್ಯ ಕಾರ್ಯಕರ್ತರ ಬಂಧನ

ಸಂಸತ್ ಎದುರು ಪ್ರತಿನಿತ್ಯ ಕಾರ್ಯಕರ್ತರ ಬಂಧನ

"ಕಳೆದ 2008 ರವರೆಗೆ 5,100 ದಿನಗಳ ಕಾಲ ನಡೆದ ಪ್ರತಿಭಟನೆಯ ಸಮಯದಲ್ಲಿ ಸಂಸತ್ತಿನ ಹೊರಗೆ ಅಥವಾ ಜಂತರ್ ಮಂತರ್‌ನಲ್ಲಿ ನಮ್ಮ ಕಾರ್ಯಕರ್ತರನ್ನು ಪ್ರತಿನಿತ್ಯ ಬಂಧಿಸಲಾಗುತ್ತಿತ್ತು. ಕೆಲವು ಬಾರಿ ಹೊರತುಪಡಿಸಿ, ನಾನು ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾದಾಗ, ನಾನು ಪ್ರತಿದಿನ ಬಂಧನಕ್ಕೊಳಗಾಗುತ್ತಿದ್ದೆ. ನಮ್ಮನ್ನು ಬಂಧಿಸಲು ಮತ್ತು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ಯಲು ಪೊಲೀಸರು ಅಕ್ಷರಶಃ ಕಾಯುತ್ತಿದ್ದರು," ಎಂದು ಸ್ವತಃ ಅನಿಲ್ ಹೆಗ್ಡೆ ತಿಳಿಸಿದ್ದಾರೆ.

ತಮ್ಮ ಹೇಳಿಕೆಯು ಅಪನಂಬಿಕೆಯನ್ನು ಹುಟ್ಟುಹಾಕಬಹುದು ಎಂದು ಅರ್ಥ ಮಾಡಿಕೊಂಡಿರುವ ಅನಿಲ್ ಹೆಗ್ಡೆ, ಅವರ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೂಕ್ಷ್ಮವಾಗಿ ನಿರ್ವಹಿಸಿರುವುದಾಗಿ ನಗುತ್ತಾ ಹೇಳಿದ್ದಾರೆ.

ಅನಿಲ್ ಹೆಗ್ಡೆ-ಫರ್ನಾಂಡೀಸ್ ನಡುವಿನ ಬಾಂಧವ್ಯ ಗಾಢ

ಅನಿಲ್ ಹೆಗ್ಡೆ-ಫರ್ನಾಂಡೀಸ್ ನಡುವಿನ ಬಾಂಧವ್ಯ ಗಾಢ

1993ರ ಹೊತ್ತಿಗೆ ಜಾರ್ಜ್ ಫೆರ್ನಾಂಡಿಸ್ ಅವರೊಂದಿಗಿನ ಅನಿಲ್ ಹೆಗ್ಡೆಯವರ ಬಾಂಧವ್ಯ ಗಾಢವಾಯಿತು. ನಂತರ ಕಾರ್ಗಿಲ್ ಐಎನ್‌ಸಿ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದರು, ಇದು ಅಮೆರಿಕಾದ ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು, ಕರಾವಳಿ ಪಟ್ಟಣವಾದ ಗುಜರಾತ್‌ನ ಕಾಂಡ್ಲಾದಲ್ಲಿ ಮೆಗಾ ಉಪ್ಪು ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುತ್ತಿತ್ತು. "ನಾನು ಗಾಂಧಿನಗರ ಮತ್ತು ಕಾಂಡ್ಲಾದಲ್ಲಿ ನೆಲೆಸಿದ್ದು, ದೇಶಾದ್ಯಂತ ಜನರ ಪ್ರತಿಭಟನೆಗಳನ್ನು ಸಂಘಟಿಸಿದ್ದೇನೆ," ಎಂದು ನೆನಪಿಸಿಕೊಂಡರು.

ಹೆಗ್ಡೆ ಆಂದೋಲನದ ಯಶಸ್ವಿ ಮಾರ್ಗದರ್ಶನವು ಅವರಿಗೆ ಹೆಸರು ತಂದುಕೊಟ್ಟಿತು. ಫರ್ನಾಂಡಿಸ್ ಅವರು ಡಂಕೆಲ್-ಗ್ಯಾಟ್ ನೀತಿಗಳ ವಿರುದ್ಧ ಚಳುವಳಿ ಮುನ್ನಡೆಸುವಂತೆ ಕೇಳಿಕೊಂಡರು. ಸಂಸತ್ತಿನ ಹೊರಗೆ ಮತ್ತು ನಂತರ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿನಿತ್ಯ ಬಂಧನದ ಹೊರತಾಗಿಯೂ GATT ವಿಷಯದ ಮೇಲೆ ಸತ್ಯಾಗ್ರಹವನ್ನು ಪ್ರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಜನವರಿ 20, 1994 ರಂದು ಕಾನ್ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾದ ಮಾವಲಂಕರ್ ಸಭಾಂಗಣದಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು," ಎಂದು ಹೇಳಿದರು.

ಬಿಹಾರದ ಪಾಟ್ನಾಗೆ ತೆರಳಿದ ಅನಿಲ್ ಹೆಗ್ಡೆ ಹಿಂದಿನ ಕಥೆ

ಬಿಹಾರದ ಪಾಟ್ನಾಗೆ ತೆರಳಿದ ಅನಿಲ್ ಹೆಗ್ಡೆ ಹಿಂದಿನ ಕಥೆ

ಕಳೆದ 1994 ರಿಂದ 2008ರ ಅವಧಿಯಲ್ಲಿ, ಅನಿಲ್ ಹೆಗ್ಡೆ ಅವರು ಜಾರ್ಜ್ ಫೆರ್ನಾಂಡಿಸ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಕ್ರಿಶಾ ಮೆನನ್ ಮಾರ್ಗದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ವಾಸವಾಗಿದ್ದರು. 2007ರಲ್ಲಿ ಜಾರ್ಜ್ ಫರ್ನಾಂಡಿಸ್‌ಗೆ ಆಲ್‌ಝೈಮರ್ ಕಾಯಿಲೆ ಇರುವುದು ಪತ್ತೆಯಾಯಿತು. ಫೆರ್ನಾಂಡಿಸ್ ಕುಟುಂಬದಲ್ಲಿನ ವೈಷಮ್ಯಗಳು ಅವರ ವಿಚ್ಛೇದಿತ ಪತ್ನಿ ಲೀಲಾ ಕಬೀರ್ ಮತ್ತು ಆಪ್ತ ಜಯಾ ಜೇಟ್ಲಿ ನಡುವಿನ ಸಂಬಂಧ ಮುರಿದು ಬಿದ್ದಿತು. ಅನಿಲ್ ಹೆಗ್ಡೆ ಪಾಟ್ನಾಗೆ ಸ್ಥಳಾಂತರಗೊಳ್ಳುವ ಮೊದಲು ದೆಹಲಿಯ ಜೆಡಿಯು ಕಚೇರಿಗೆ ಒಮ್ಮೆ ಭೇಟಿ ನೀಡಿದ್ದರು. ಇನ್ನೊಂದು ಕಡೆ 2019 ಜನವರಿಯಲ್ಲಿ ಜಾರ್ಜ್ ಫೆರ್ನಾಂಡಿಸ್ ನಿಧನರಾದರು.

ಬಿಹಾರದಲ್ಲಿ 12 ವರ್ಷದ ಬದುಕು

ಬಿಹಾರದಲ್ಲಿ 12 ವರ್ಷದ ಬದುಕು

ಕಳೆದ 12 ವರ್ಷಗಳಿಗೂ ಹೆಚ್ಚು ಕಾಲ ಬಿಹಾರದಲ್ಲಿ ನೆಲೆಸಿರುವ ಅನಿಲ್ ಹೆಗ್ಡೆ, ಜೆಡಿಯುನ ಪಾಟ್ನಾ ಕಚೇರಿಯಲ್ಲಿ ಉಳಿದುಕೊಂಡಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ಚುನಾವಣಾ ಅಧಿಕಾರಿಯಾಗಿದ್ದಾರೆ. ಸಾಂಸ್ಥಿಕ ಚುನಾವಣೆಗಳು ಮತ್ತು ಸದಸ್ಯತ್ವ ಅಭಿಯಾನಗಳು ಸೇರಿದಂತೆ ಇತರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. "ನನ್ನ ತಂದೆ ವಕೀಲರಾಗಿದ್ದರು. ನನ್ನ ಕುಟುಂಬ ತೋಟಗಾರಿಕೆ ಮಾಡುತ್ತಿದೆ. ಆದರೆ ನನ್ನ ಜೀವನದಲ್ಲಿ ನಾನು ಬಹಳ ಮುಂಚೆಯೇ ಸಮಾಜವಾದಿ ರಾಜಕಾರಣಕ್ಕೆ ಹೊಂದಿಕೊಂಡಿದ್ದೆನು. ಈ ಮಧ್ಯೆ ನಾನು ಎಂದಿಗೂ ಯಾವುದೇ ಹುದ್ದೆಗಳನ್ನು ಬಯಸಿದವನಲ್ಲ,"ಎಂದು ಹೇಳಿದರು.

English summary
The 62-year-old Anil Hegde, a long-term aide of late socialist stalwart George Fernandes, is all set to get elected to the Rajya Sabha from Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X