• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರಾಷ್ಟ್ರೀಯ ಪುರುಷರ ದಿನ 2022 ಯಾವಾಗ? ಇತಿಹಾಸ, ಮಹತ್ವ ಮತ್ತು ಹೇಗೆ ಆಚರಿಸುವುದು

|
Google Oneindia Kannada News

ದಬ್ಬಾಳಿಕೆ, ಹಿಂಸೆ, ಲೈಂಗಿಕ ದೌರ್ಜನ್ಯ, ಶೋಷಣೆ, ಕಿರುಕುಳ, ಮಾನಸಿಕ ಹಾಗೂ ದೈಹಿಕ ಹಿಂಸೆ ಇವೆಲ್ಲವೂ ಕೇವಲ ಮಹಿಳೆಯರಿಗೆ ಮಾತ್ರ ಇರುತ್ತವೆ ಅನ್ನೋದು ಈ ಕಾಲಕ್ಕೆ ಸುಳ್ಳು. ಇಂತೆಲ್ಲಾ ವಿಚಾರದಲ್ಲಿ ಪುರುಷರು ಕೂಡ ಬಲಿಪಶುಗಳಾಗಿದ್ದಾರೆ. ಇದಕ್ಕೆ ಅದೆಷ್ಟೋ ಉದಾಹರಣೆಗಳು ನಮ್ಮ ಸುತ್ತಲು ಕಾಣ ಸಿಗುತ್ತವೆ. ಪುರುಷರ ಮೇಲೂ ಇಂತಹ ದೌರ್ಜನ್ಯಗಳು ನಡೆಯುತ್ತವೆ ಅನ್ನೋದು ಸತ್ಯ ಆದರೆ ಮಹಿಳೆಯರಷ್ಟಲ್ಲ ಅನ್ನೋದು ರೂಢಿಗತ ಮಾತು.

ಅದೇನೇ ಇದ್ದರು ಇಂದಿಗೂ ಪುರುಷರು ಸಮಾಜಮುಖಿ ಕೆಲಸಗಳತ್ತ, ಸುವ್ಯವಸ್ಥಿತಿ ಕುಟುಂಬ ನಿರ್ವಹಣೆ, ಮಕ್ಕಳ ಪೋಷಣೆ, ತಂದೆ ತಾಯಿ ಕಾಳಜಿ, ಮಹಿಳೆಯರ ಬಗ್ಗೆ ಗೌರವ ಹೀಗೆ ಹಲವಾರು ವಿಚಾರದಲ್ಲಿ ಇಂದಿಗೂ ಮಾದರಿಯಾಗಿದ್ದಾರೆ. ಅವರಲ್ಲಿರುವ ಸಮಾನತೆಯ ಮನೋಭಾವ, ಪ್ರೀತಿ, ತಾಳ್ಮೆ, ಸಹನೆಯಿಂದಾಗಿ ಸುಸಜ್ಜಿತ ಜೀವನ ನಡೆಸಲು ಸಾಧ್ಯವಾಗಿದೆ. ಒಂದು ಸುವ್ಯವಸ್ಥಿತ ಕುಟುಂಬ ಹಾಗೂ ಸಮಾಜ ನಿರ್ಮಾಣದಲ್ಲಿ ಮಹಿಳೆಯರೊಂದಿಗೆ ಪುರುಷರೂ ಪಾಲನ್ನು ಹೊಂದಿದ್ದಾರೆ. ಪುರುಷರ ಸಾಂಸಾರಿಕ ಹಾಗೂ ಸಮಾಜದಲ್ಲಿ ನಿಸ್ವಾರ್ಥ ಸೇವೆಯನ್ನು ಸ್ಮರಿಸಲು ಪ್ರತೀ ವರ್ಷ ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ.

ವಿಶಿಷ್ಟ ಸಂಪ್ರದಾಯ: ಗುಜರಾತ್‌ನಲ್ಲಿ ಸೀರೆ ಉಟ್ಟು ನವರಾತ್ರಿ ಆಚರಿಸುವ ಪುರುಷರು ವಿಶಿಷ್ಟ ಸಂಪ್ರದಾಯ: ಗುಜರಾತ್‌ನಲ್ಲಿ ಸೀರೆ ಉಟ್ಟು ನವರಾತ್ರಿ ಆಚರಿಸುವ ಪುರುಷರು

ಅಂತರಾಷ್ಟ್ರೀಯ ಪುರುಷರ ದಿನ ಇತಿಹಾಸ

ಅಂತರಾಷ್ಟ್ರೀಯ ಪುರುಷರ ದಿನ ಇತಿಹಾಸ

ಪ್ರತಿ ವರ್ಷ ನವೆಂಬರ್ 19 ರಂದು ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ತಮ್ಮ ಕುಟುಂಬಗಳು, ಸಮುದಾಯಗಳು ಮತ್ತು ಸಮಾಜಕ್ಕೆ ಪುರುಷರು ನೀಡಿದ ಕೊಡುಗೆಗಳನ್ನು ಗುರುತಿಸಲು ಜಗತ್ತು ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸುತ್ತದೆ.

ವೆಸ್ಟ್ ಇಂಡೀಸ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾದ ಡಾ ಜೆರೋಮ್ ಟೀಲುಕ್‌ಸಿಂಗ್ ಅವರು 1999 ರಲ್ಲಿ ಅಂತರಾಷ್ಟ್ರೀಯ ಪುರುಷರ ದಿನವನ್ನು ಸ್ಥಾಪಿಸುವವರೆಗೂ ಅಂತರರಾಷ್ಟ್ರೀಯ ಪುರುಷರ ದಿನವು ವಿದೇಶದಲ್ಲಿ ಜನಪ್ರಿಯತೆಯನ್ನು ಗಳಿಸಲಿಲ್ಲ. ಅವರು ತಮ್ಮ ತಂದೆಯ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ನವೆಂಬರ್ 19 ಅನ್ನು ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲು ನಿರ್ಧರಿಸಿದರು. ಯುವಕರು ಮತ್ತು ಪುರುಷರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರು ಈ ದಿನದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಕೋರಿದರು.

ಈ ದಿನದ ಆಚರಣೆ ಕೆರಿಬಿಯನ್‌ನಲ್ಲಿ ಬೆಂಬಲವನ್ನು ಪಡೆಯಿತು ಮತ್ತು ನಂತರ ಭಾರತ, ದಕ್ಷಿಣ ಆಫ್ರಿಕಾ, ಘಾನಾ, ಕೆನಡಾ, ಸಿಂಗಾಪುರ್, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಿಗೆ ಹರಡಿತು.

ಅಂತರಾಷ್ಟ್ರೀಯ ಪುರುಷರ ದಿನ ಮಹತ್ವ

ಅಂತರಾಷ್ಟ್ರೀಯ ಪುರುಷರ ದಿನ ಮಹತ್ವ

ಕೇವಲ ಪ್ರಸಿದ್ಧ ವ್ಯಕ್ತಿಗಳಲ್ಲ ಸಾಮಾನ್ಯ ಕಾರ್ಮಿಕ-ವರ್ಗದ ಪುರುಷರು ಕೂಡ ಇಂದಿಗೆ ತುಂಬಾ ಶ್ರಮದ ಯೋಗ್ಯ ಜೀವನವನ್ನು ನಡೆಸುತ್ತಿದ್ದಾರೆ. ಹೀಗೆ ಸಮಾಜಕ್ಕೆ ಮಾದರಿಯಾಗುವ ಪುರುಷರನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ. ಅವರು ಸಮಾಜ, ಸಮುದಾಯ, ಕುಟುಂಬ, ಮದುವೆ, ಮಕ್ಕಳ ಆರೈಕೆ ಮತ್ತು ಪರಿಸರಕ್ಕೆ ನೀಡಿದ ಕೊಡುಗೆಗಳನ್ನು ಆಚರಿಸಲು ಆಚರಿಸಲಾಗುತ್ತದೆ. ಇಂತಹ ಆಚರಣೆಗಳು ಪುರುಷರ ಮಾನಸಿಕ, ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಸಮಾಜ ಸೇವೆ, ಸಾಮಾನ್ಯ ಸಾಮಾಜಿಕ ವ್ಯವಸ್ಥೆ ಮತ್ತು ಕಾನೂನು ಕ್ಷೇತ್ರಗಳಲ್ಲಿ ಪುರುಷರು ಎದುರಿಸುತ್ತಿರುವ ತಾರತಮ್ಯ ಮತ್ತು ನಿಂದನೆಗಳನ್ನು ಎತ್ತಿ ತೋರಿಸಲು ಈ ದಿನ ಮಹತ್ವದ್ದಾಗಿದೆ. ಅಂತರಾಷ್ಟ್ರೀಯ ಪುರುಷರ ದಿನ ಲಿಂಗ ಸಮಾನತೆಯನ್ನು ಉತ್ತೇಜಿಸಲು ಒಂದು ಅವಕಾಶವಾಗಿದೆ. ಇದು ಪ್ರತಿಯೊಬ್ಬರೂ ತಮ್ಮ ಪೂರ್ಣ ಸಾಮರ್ಥ್ಯದಿಂದ ಬೆಳೆಯುತ್ತಾ ಸುರಕ್ಷಿತ ಮತ್ತು ಉತ್ತಮ ಜಗತ್ತನ್ನು ರಚಿಸುವತ್ತ ಗಮನಹರಿಸುವ ದಿನವಾಗಿದೆ.

ಅಂತರಾಷ್ಟ್ರೀಯ ಪುರುಷರ ದಿನ 2022 ಥೀಮ್

ಅಂತರಾಷ್ಟ್ರೀಯ ಪುರುಷರ ದಿನ 2022 ಥೀಮ್

ಈ ವರ್ಷದ ಥೀಮ್ "ಪುರುಷರು ಮತ್ತು ಮಹಿಳೆಯರಿಗೆ ಸಮನಾಗಿ ಸಹಾಯ ಮಾಡುವುದು". ಸೆಮಿನಾರ್‌ಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಮತ್ತು ಪುರುಷರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಿನವನ್ನು ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ಪುರುಷರ ದಿನ ಹೇಗೆ ಆಚರಿಸಬಹುದು?

ಅಂತರಾಷ್ಟ್ರೀಯ ಪುರುಷರ ದಿನ ಹೇಗೆ ಆಚರಿಸಬಹುದು?

ತಮ್ಮ ಜೀವನವನ್ನು ಉತ್ತಮಗೊಳಿಸಲು ಶ್ರಮಿಸುವ ಪುರುಷರಿಗಾಗಿ ದಾನ ಮಾಡಿ. ಅನಾರೋಗ್ಯ ಹೊಂದಿದ ಪುರುಷರು, ಕೌಟುಂಬಿಕ ಹಿಂಸೆಗೆ ಒಳಗಾಗಿರುವವರು ಮತ್ತು ಆರೈಕೆಗಾಗಿ ಕೆಲಸ ಮಾಡುವ ದತ್ತಿಗಳಿಗೆ ನೀವು ದಾನ ಮಾಡಬಹುದು.

ಪ್ರಸಿದ್ಧ ಪ್ರಭಾವಿ ಪುರುಷರ ಬಗ್ಗೆ ತಿಳಿದುಕೊಳ್ಳಿ. ಇದಕ್ಕಾಗಿ ನೀವು ಯಾವುದೇ ದೇಶ, ಸಮುದಾಯ ಅಥವಾ ಧರ್ಮವನ್ನು ಆಯ್ಕೆ ಮಾಡಬಹುದು. ಅವರು ಹೇಗೆ ಪ್ರಭಾವ ಬೀರಿದರು ಮತ್ತು ಧನಾತ್ಮಕ ಬದಲಾವಣೆಗಳನ್ನು ಹೇಗೆ ತಂದರು ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಸ್ವಂತ ಜೀವನದಲ್ಲಿ ಪುರುಷರ ಪರಿಶ್ರಮದ ಬಗ್ಗೆ ತಿಳಿದುಕೊಳ್ಳಿ. ಅವರ ಕಥೆಗಳನ್ನು ಆಲಿಸಿ, ಅವರ ಪ್ರಯತ್ನಗಳು ಮತ್ತು ಕೊಡುಗೆಗಳನ್ನು ಗುರುತಿಸಿ, ಮತ್ತು ಮುಖ್ಯವಾಗಿ ಅವುಗಳನ್ನು ಪರಿಶೀಲಿಸಿ ಮತ್ತು ಅವರು ಹೇಗೆ ಜೀವನ ನಡೆಸುತ್ತಾರೆ ಎಂಬುದನ್ನು ನೋಡಿ.

ಅವರ ಸ್ವಂತ ಸಮಸ್ಯೆಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ಸುರಕ್ಷಿತ ಸ್ಥಳವನ್ನು ರಚಿಸಿ.

ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಅವರಿಗೆ ಅವಕಾಶ ಕೊಡಿ. ಈ ಮೂಲಕ ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಬಹುದು.

English summary
International Men's Day 2022 Date, Theme, History, Significance and Why it is Celebrated in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X