ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Friendship Day Wishes: ಇಲ್ಲಿವೆ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದಾದ ಸಂದೇಶಗಳು

|
Google Oneindia Kannada News

ಅತ್ತರೆ ತಾನೂ ಅಳುವ, ನಕ್ಕರೆ ತಾನೂ ನಗುವ, ಸ್ವಾರ್ಥವಿಲ್ಲ, ಕಪಟವಂತೂ ಇಲ್ಲವೇ ಇಲ್ಲ ಅಂತಹ ಸ್ನೇಹಿತನಿಗೆ ನಮಗೆ ಅರಿವಿಲ್ಲದಂತೆ ಪ್ರತಿ ಕ್ಷಣವೂ ನೆನಪಿಸಿಕೊಂಡು ಧನ್ಯವಾದ ಹೇಳುತ್ತಲೇ ಇರುತ್ತೇವೆ.

ಆದರೆ ಅವರನ್ನೂ ನೆನಪಿಸಿಕೊಳ್ಳಲು ಒಂದು ದಿನವಿದೇ ಅದೇ ಅಂತಾರಾಷ್ಟ್ರೀಯ ಸ್ನೇಹಿತರ ದಿನ. ವಿಶ್ವಸಂಸ್ಥೆಯು 2011ರ ಎಪ್ರಿಲ್ 27ರಂದು ತನ್ನ ಅಧಿವೇಶನದಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ ಭಾರತದಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.

ಸ್ನೇಹಿತರಿಲ್ಲದ ಬದುಕು ಆಗಸದಲ್ಲಿ ಇರದ ಚಂದಿರನಂತೆ ಎಂಬ ಮಾತಿದೆ ಹೌದು, ಬಾಲ್ಯದಿಂದ ಹಿಡಿದು ಮುಪ್ಪಿನವರೆಗೂ ನಮಗೆ ತಿಳಿಯದಂತೆ ಹಲವು ಮಂದಿ ಸ್ನೇಹಿತರಾಗುತ್ತಾರೆ. ಆದರೆ ಅದರಲ್ಲಿ ಬೆರಳೆಣಿಕೆಯಷ್ಟು ಮಂದಿ ನಮ್ಮ ಹೃದಯಕ್ಕೆ ಹತ್ತಿರವಿರುತ್ತಾರೆ.

ಅಪರಿಚಿತರು ಪರಿಚಿತರಾಗಿ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸುಂದರ ಬಂಧವೇ ಸ್ನೇಹ. ಸ್ನೇಹಕ್ಕೆ ಯಾವುದೇ ವಯಸ್ಸಿನ, ಜಾತಿಯ, ಧರ್ಮದ ಮಿತಿಯಿಲ್ಲ. ಪರಸ್ಪರ ಅಕ್ಕರೆಯನ್ನು ತೋರುತ್ತಾ ಕೈಲಾದ ನಿಸ್ವಾರ್ಥ ಸಹಾಯ ಮಾಡುವ ಬಂಧ. ಸ್ನೇಹವನ್ನು ಅಂತರ್ವ್ಯಕ್ತೀಯ ಬಂಧದ ರೂಪ ಎಂದು ಸಹ ಹೇಳಬಹುದು.

ರಕ್ತ ಸಂಬಂಧವಲ್ಲದೆ ಇದ್ದರೂ ರಕ್ತ ಸಂಬಂಧಕ್ಕೂ ಮೀರಿದ ರೀತಿಯಲ್ಲಿರುತ್ತದೆ. ಕಷ್ಟಕಾಲದಲ್ಲಿ ಯಾರೂ ಬರದೇ ಹೋದರೂ ಸ್ನೇಹಿತ ಎನಿಸಿಕೊಂಡವರು ಬಂದೇ ಬರುತ್ತಾರೆ.

ಕೆಲವರು ಆತ್ಮೀಯರಾಗಿ ಮಾನಸಿಕ ಸ್ಥೈರ್ಯವನ್ನು ತುಂಬುವರು. ನಿಜ, ಅಗತ್ಯ ಇರುವಾಗ ಸಹಾಯಕ್ಕೆ ಬರುವವನೇ ನಿಜವಾದ ಸ್ನೇಹಿತ. ಅಂತಹ ಸ್ನೇಹಿತರನ್ನು ನಾವು ನಮ್ಮ ಜೀವನದಲ್ಲಿ ಪಡೆದುಕೊಂಡಿದ್ದೇವೆ ಎಂದರೆ ಅದು ನಮ್ಮ ಅದೃಷ್ಟ ಹಾಗೂ ಪುಣ್ಯ ಎನಿಸಿಕೊಳ್ಳುತ್ತದೆ. ಅಂತಹ ಸುಂದರ ಸಂಬಂಧಗಳನ್ನು ನೆನೆದುಕೊಳ್ಳಲು ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ನೇಹಿತರ ದಿನಾಚರಣೆಯನ್ನು ಆಚರಿಸುತ್ತೇವೆ.

ಮಸ್ಯೆಗಳು ತಲೆದೋರಿದಾಗ ಅದನ್ನು ಹಂಚಿಕೊಳ್ಳುವುದು ಮತ್ತು ಸಲಹೆ ಕೇಳುವುದು ಸ್ನೇಹಿತರ ಬಳಿಯೇ ಸರಾಗವೇ ಹೊರತು, ಮಿಕ್ಕವರ ಬಳಿ ಅಷ್ಟಾಗಿ ಅಲ್ಲ ಎಂಬುದು ಅನುಭವಜನ್ಯ ಮಾತು. ಸ್ನೇಹಿತರು ಯಾವಾಗಲೂ ಅತೀವ ಪ್ರಭಾವ ಬೀರುವಂಥವರಾಗಿರುವುದರಿಂದ, ವ್ಯಕ್ತಿಯೋರ್ವನ ಜೀವನ ಕೌಶಲಗಳ ಸುಧಾರಣೆಯಲ್ಲಿ ಸ್ನೇಹದ ಕೊಡುಗೆ ಹೆಚ್ಚೇ ಎನ್ನಬೇಕು. ಜಾತಿ-ಮತ, ಭಾಷೆ-ಬಣ್ಣ, ಸಾಮಾಜಿಕ ಸ್ಥಾನಮಾನ, ಶ್ರೀಮಂತಿಕೆ, ಸಾಧನೆಗಳು- ಈ ಯಾವುದೇ ಸಂಗತಿಗಳಿಗೂ ಮಿಗಿಲಾದದ್ದು ಸ್ನೇಹ.

ಪೋಷಕರಲ್ಲಿ ಹೇಳಲಾಗದ, ಅಥವಾ ಸಹೋದರ ಸಹೋದರಿಯಲ್ಲಿ ಹೇಳಿಕೊಳ್ಳಲಾಗದ ನೂರಾರು ವಿಷಯಗಳನ್ನು ಅವರ ಬಳಿ ಹೇಳಿಕೊಂಡಿರುತ್ತೇವೆ.
1958ರಲ್ಲಿ ವಿಶ್ವ ಸ್ನೇಹಿತರ ದಿನಕ್ಕೆ ಪ್ರಸ್ತಾವನೆ ಮಾಡಿರುವುದು ತಿಳಿದು ಬರುತ್ತದೆ. ಬರ್ಲಿನ್, ಒಹಿಯೊ ಮೊದಲಾದ ಕಡೆಗಳಲ್ಲಿ ಸ್ನೇಹಿತರ ದಿನವನ್ನು ಏಪ್ರಿಲ್ 8ರಂದು ಆಚರಣೆ ಮಾಡಲಾಗುತ್ತದೆ.

ಸ್ನೇಹಿತರ ದಿನಕ್ಕೆ ವಿಶೇಷ ಗೌರವ ಸಲ್ಲಿಸುವ ಅಂಗಾಗಿ 1998ರಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೊಫಿ ಅನ್ನನ್ ಅವರ ಪತ್ನಿ ನಾನೆ ಅನ್ನನ್ ಅವರು ಸ್ನೇಹಿತರ ದಿನದ ರಾಯಭಾರಿಯಾಗಿ ವಿನ್ನಿ ದ ಪೂವನ್ ಹೆಸರಿಸಿದರು.

International Friendship Day 2021: Wishes, Quotes, Messages, Images, WhatsApp and Facebook Status in Kannada

ವಿಶ್ವ ಸ್ನೇಹಿತರ ದಿನದ ಶುಭಾಶಯಗಳು:

* ನನ್ನ ಎಲ್ಲಾ ಸ್ನೇಹಿತರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಗೊಳ್ಳಲಿ. ಕಷ್ಟಗಳು ದೂರವಾಗಲಿ, ಆರೋಗ್ಯ ವೃದ್ಧಿಯಾಗಲಿ. ಎಲ್ಲರಿಗೂ ಗೆಳೆತನದ ದಿನದ ಶುಭಾಶಯಗಳು

* ಸ್ನೇಹ ಎಂಬುದು ಅನನ್ಯ. ನಿನ್ನನ್ನು ಫ್ರೆಂಡ್ ಆಗಿ ಪಡೆದ ನಾನೇ ಧನ್ಯ. ನಿನ್ನ ಸ್ನೇಹವೇ ನನ್ನ ಭಾಗ್ಯ. ಹ್ಯಾಪಿ ಫ್ರೆಂಡ್‌ಶಿಪ್ ಡೇ

* ಸ್ನೇಹ ಶುದ್ಧ ಮತ್ತು ನಿಸ್ವಾರ್ಥ ಸಂಬಂಧಗಳಲ್ಲಿ ಒಂದು. ನನ್ನ ಎಲ್ಲಾ ಸ್ನೇಹಿತರಿಗೆ ಸ್ನೇಹದ ದಿನಾಚರಣೆಯ ಶುಭಾಶಯಗಳು

* ನೀನು ನನ್ನ ಎದುರಿಗೆ ಇಲ್ಲದೆ ದೂರ ಇರಬಹುದು. ಆದರೆ, ಸದಾ ಕಾಲ ನೀನು ನನ್ನ ಹೃದಯದಲ್ಲಿಯೇ ನೆಲೆಯಾಗಿದ್ದಿ. ಗೆಳೆತನದ ದಿನದ ಶುಭಾಶಯಗಳು

* ನಿಮ್ಮನ್ನು ಸದಾ ಕಾಲ ಪ್ರೀತಿಸುವ, ಕಾಳಜಿ ತೋರುವ ಸ್ನೇಹಿತರನ್ನು ಹೊಂದುವುದು ಜೀವನದ ಅತ್ಯಂತ ಸುಂದರ ವಿಷಯ. ಅಂತಹ ಸ್ನೇಹಿತರನ್ನು ಪ್ರೀತಿಸಿ, ಗೌರವಿಸಿ, ಕಾಪಾಡಿ. ಎಲ್ಲರಿಗೂ ಸ್ನೇಹದ ದಿನಾಚರಣೆಯ ಶುಭಾಶಯಗಳು.

International Friendship Day 2021: Wishes, Quotes, Messages, Images, WhatsApp and Facebook Status in Kannada

ಸ್ನೇಹಿತರ ದಿನ ಆಚರಣೆ ಹಿಂದಿನ ಇತಿಹಾಸವೇನು?

1930ರ ಬಳಿಕ ಸ್ನೇಹಿತರ ದಿನವೆನ್ನುವುದು ಆಚರಣೆಗೆ ಬಂದಿದೆ. ಮೊದಲ ವಿಶ್ವಯುದ್ಧದ ಬಳಿಕ ಶಾಂತಿ ಅಭಿಯಾನ ಮತ್ತು ಜನರು ಪರಸ್ಪರ ಬೆರೆಯುವುದು ಬೇಕಾಗಿತ್ತು. ಹಾಲ್ ಮಾರ್ಕ್ ಕಾರ್ಡ್ ತಯಾರಕರಾಗಿದ್ದ ಜೊಯ್ಸ್ ಹಾಲ್ ಎಂಬವರು ಸ್ನೇಹಿತರ ದಿನ ಆರಂಭಿಸಿದರು.

ಆಗಸ್ಟ್ 2ರಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. 1935ರಲ್ಲಿ ಅಮೆರಿಕಾದಲ್ಲಿ ಸ್ನೇಹಿತರ ದಿನ ಆಚರಣೆಯು ಆರಂಭವಾಯಿತು. ಅಗಸ್ಟ್ ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಬೇಕೆಂದು ಅಮೆರಿಕಾ ಕಾಂಗ್ರೆಸ್ ನಿರ್ಧರಿಸಿತು.

ಸ್ನೇಹಿತರಿಗೆ ಗೌರವ ಸೂಚಿಸಲು ಮತ್ತು ಸ್ನೇಹಕ್ಕೆ ಗೌರವ ನೀಡಲು ಇದನ್ನು ಆಚರಿಸಲಾಯಿತು. ಯುವ ಜನಾಂಗವು ತಮ್ಮ ಸ್ನೇಹವನ್ನು ತುಂಬಾ ಸಂಭ್ರಮದಿಂದ ಆಚರಿಸಲು ಆರಂಭಿಸಿದಾಗ ಇದು ಒಂದು ರಾಷ್ಟ್ರೀಯ ಹಬ್ಬವಾಯಿತು.

ಸ್ನೇಹಿತರು ಮತ್ತು ಸ್ನೇಹವನ್ನು ಈ ದಿನ ಗೌರವಿಸಲಾಗುತ್ತದೆ. ಇದರಿಂದ ಅಮೆರಿಕಾದಲ್ಲಿ ಸ್ನೇಹಿತರ ದಿನವು ಒಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಮೆರಿಕಾದಲ್ಲಿ ಯುವಜನಾಂಗದ ಸಂಭ್ರಮಾಚರಣೆಯನ್ನು ನೋಡಿದ ದಕ್ಷಿಣ ಅಮೆರಿಕಾದ ಮತ್ತು ಇತರ ಕೆಲವು ರಾಷ್ಟ್ರಗಳು ಕೂಡ ಇದನ್ನು ಆಚರಿಸಲು ಆರಂಭಿಸಿದವು.

1958ರಲ್ಲಿ ಪರಾಗ್ವೆಯು ತನ್ನದೇ ಆಗಿರುವ ರಾಷ್ಟ್ರೀಯ ಸ್ನೇಹಿತರ ದಿನವನ್ನು ಜುಲೈ 30ರಂದು ಆಚರಿಸಲು ಆರಂಭಿಸಿತು. ದಕ್ಷಿಣ ಏಶ್ಯಾದ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ನ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ ನಲ್ಲಿ ಇದನ್ನು ಜುಲೈ 20ರಂದು ಆಚರಿಸಲ್ಪಡುವುದು. ಫಿನ್ ಲ್ಯಾಂಡ್ ಮತ್ತು ಇಸ್ಟೊನಿಯಾದಲ್ಲಿ ಸ್ನೇಹಿತರ ದಿನದಂದೇ ಪ್ರೇಮಿಗಳ ದಿನ ಕೂಡ ಆಚರಿಸಲಾಗುತ್ತದೆ.

International Friendship Day 2021: Wishes, Quotes, Messages, Images, WhatsApp and Facebook Status in Kannada

ಗೆಳೆತನದ ದಿನದ ಸಂದೇಶಗಳು:

*ಮತ್ತೊಬ್ಬರ ಏಳ್ಗೆಗಾಗಿ ನಿಷ್ಕಲ್ಮಶ ಮನಸ್ಸಿನಿಂದ ಸಹಕರಿಸುವ ಸ್ನೇಹಿತರು ಬಹುಬೇಗ ಸಾಧನೆಯ ಶಿಖರವನ್ನು ಏರುವರು.

* ಈ ಸ್ನೇಹದ ದಿನದಂದು ನಮ್ಮೆಲ್ಲರ ಮಾನವೀಯತೆಯನ್ನು ಬಲಪಡಿಸೋಣ ಮತ್ತು ಸ್ವಸ್ಥ ಸಮಾಜ, ಆದರ್ಶ ಪ್ರೀತಿ ವಿಶ್ವಾಸವನ್ನು ಉತ್ತೇಜಿಸುವ ಅಪೂರ್ವ ಸಂಬಂಧಗಳನ್ನು ಬೆಳೆಸಿಕೊಳ್ಳೋಣ.

* ಸ್ನೇಹ ಅಮೂಲ್ಯ ಉಡುಗೊರೆ. ಇದನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ. ಆದರೆ, ಇದರ ಮೌಲ್ಯ ಚಿನ್ನದ ಪರ್ವತಕ್ಕಿಂತಲೂ ಹೆಚ್ಚು. ಅದೇ ಸ್ನೇಹದ ತಾಕತ್ತು.

* ನಿಜವಾದ ಸ್ನೇಹ ಸುಲಭವಾಗಿ ಸಿಗುವುದಿಲ್ಲ. ಅದನ್ನು ನಾವು ಪ್ರೀತಿಯಿಂದ ಸಂಪಾದಿಸಿಕೊಳ್ಳಬೇಕು. ನಿನ್ನ ಸ್ನೇಹವನ್ನು ನಾನು ಗಳಿಸಿದ್ದೇನೆ. ಹೀಗಾಗಿ, ನಿನ್ನ ಸ್ನೇಹವೇ ನನಗೆ ಅತ್ಯಂತ ಅಮೂಲ್ಯ.

* ಒಂದು ಮೇಣದ ಬತ್ತಿ ಇಡೀ ಕೋಣೆಯನ್ನು ಬೆಳಗಿಸುತ್ತದೆ. ನಿಜವಾದ ಸ್ನೇಹಿತರು ಇಡೀ ಜೀವಿತಾವಧಿಯನ್ನು ಬೆಳಗಿಸುತ್ತಾರೆ. ನಿಮ್ಮ ಸ್ನೇಹದ ಪ್ರಕಾಶಮಾನ ಬೆಳಕಿಗೆ ಧನ್ಯವಾದಗಳು.

* ಒಂದು ವರ್ಷದಲ್ಲಿ ನೂರು ಸ್ನೇಹಿತರನ್ನು ಸಂಪಾದಿಸುವುದು ಸಾಧನೆಯಲ್ಲ. ಆದರೆ, ನೂರು ವರ್ಷಗಳ ಕಾಲ ಜೊತೆಗಿರುವ ಸ್ನೇಹಿತರನ್ನು ಸಂಪಾದಿಸುವುದೇ ಸಾಧನೆ.

English summary
National Best Friend Day is celebrated on June 8 every year The day celebrates the best friend that you have. A best friend is someone who becomes your family - with whom you can laugh and cry, who will support you in both good and bad times. They are the Jai to your Veeru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X