ಭಾರತ ಮೂಲದ ರಾಧಾ ಅಯ್ಯಂಗಾರ್‌ಗೆ ಅಮೆರಿಕ ರಕ್ಷಣಾ ಇಲಾಖೆಯಲ್ಲಿ ಉನ್ನತ ಹುದ್ದೆ
ವಾಷಿಂಗ್ಟನ್, ಜೂನ್ 16: ಅಮೆರಿಕದಲ್ಲಿ ಭಾರತೀಯ ಮೂಲದ ಸಮುದಾಯದವರು ಸಾಕಷ್ಟು ಮಂದಿ ಉನ್ನತ ಸ್ತರಕ್ಕೆ ಏರಿದ್ದಾರೆ. ಅಮೆರಿಕದ ಅನೇಕ ಕಂಪನಿಗಳಲ್ಲಿ ಸಿಇಒವರೆಗಿನ ಉನ್ನತ ಹುದ್ದೆಗಳನ್ನು ಭಾರತೀಯ ಮೂಲದವರು ಗಿಟ್ಟಿಸಿದ್ದಾರೆ. ಸರಕಾರಿ ಇಲಾಖೆಗಳಲ್ಲೂ ಉನ್ನತ ಹುದ್ದೆ ಹೊಂದಿದ್ಧಾರೆ. ಈ ಪಟ್ಟಿಗೆ ಈಗ ರಾಧಾ ಅಯ್ಯಂಗಾರ್ ಪ್ಲಂಬ್ ಸೇರ್ಪಡೆಯಾಗಿದ್ದಾರೆ. ಭಾರತೀಯ ಅಮೆರಿಕನ್ ಸಮುದಾಯದ ರಾಧಾ ಅಯ್ಯಂಗಾರ್ ಇದೀಗ ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ಉಪ ಅಧೀನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಐದು ವಿವಿಧ ಉನ್ನತ ಹುದ್ದೆಗಳಿಗೆ ಗುರುವಾರ ನೇಮಕಾತಿ ಮಾಡಿಕೊಳ್ಳುವ ವಿಚಾರವನ್ನು ಪ್ರಕಟಿಸಿದ್ಧಾರೆ. ಅಮೆರಿಕ ರಕ್ಷಣಾ ಇಲಾಖೆಯ ಅಕ್ವಿಸಿಶನ್ ಅಂಡ್ ಸಸ್ಟೈನ್ಮೆಂಟ್ ವಿಭಾಗದಲ್ಲಿ ಉಪ ಅಧೀನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಹಾಗೆಯೇ, ಸೈಪ್ರಸ್, ಲಾಟ್ವಿಯಾ, ಆಫ್ರಿಕನ್ ಯೂನಿಯನ್‌ಗಳಿಗೆ ಅಮೆರಿಕದ ರಾಯಭಾರಿ ಕಚೇರಿಯ ಉನ್ನತ ಹುದ್ದೆ ನೇಮಕಾತಿಯೂ ಅಗಿದೆ.
ರಾಧಾ ಅಯ್ಯಂಗಾರ್ ಅವರು ಸದ್ಯ ಅಮೆರಿಕದ ರಕ್ಷಣಾ ಇಲಾಖೆಯ ಉಪಕಾರ್ಯದರ್ಶಿಯವರ ಮುಖ್ಯ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ಧಾರೆ. ಅವರ ದಕ್ಷ ಸೇವೆಯನ್ನು ಗಮನಿಸಿ ಈಗ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತಿದೆ.
ದಕ್ಷಿಣ ಭಾರತ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅವರು ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ಕೆಲಸಕ್ಕೆ ಸೇರುವ ಮೊದಲು ಗೂಗಲ್, ಫೇಸ್‌ಬುಕ್ ಮೊದಲಾದ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಸ್ತರದಲ್ಲಿ ಕೆಲಸ ಮಾಡಿದ ಅನುಭವಿ ಎನಿಸಿದ್ಧಾರೆ. ಶೈಕ್ಷಣಿಕ, ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಅವರು ನೀತಿ ಸಂಶೋಧನೆ ಮತ್ತು ಸುರಕ್ಷತೆ ವಿಶ್ವಾಸಾರ್ಹತೆ ವಿಚಾರಗಳಲ್ಲಿ ಪರಿಣಿತಿ ಹೊಂದಿರುವುದು ಅವರ ಪ್ರೊಫೈಲ್ ಹೇಳುತ್ತದೆ.

ಅಯ್ಯಂಗಾರ್ ಶೈಕ್ಷಣಿಕ ಸಾಧನೆ
ರಾಧಾ ಅಯ್ಯಂಗಾರ್ ಅವರು ಅಮೆರಿಕದ ಎಂಐಟಿ ವಿವಿಯಲ್ಲಿ ಬಿಎಸ್ ಪದವಿ ಪಡೆದಿದ್ದಾರೆ. ಬಳಿಕ ಪ್ರಿನ್ಸ್‌ಟನ್ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಮತ್ತು ಎಂಎಸ್ ಮಾಡಿದ್ದಾರೆ. ಹಾರ್ವರ್ಡ್ ವಿವಿಯಲ್ಲಿ ಸಂಶೋಧನೆ ನಡೆಸಿದ್ದಾರೆ. ಬಳಿಕ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ದೊಡ್ಡ ಖಾಸಗಿ ಕಂಪನಿಗಳಲ್ಲಿ ಕೆಲಸ
ರಾಧಾ ಅಯ್ಯಂಗಾರ್ ಪ್ಲಂಬ್ ಈ ಹಿಂದೆ ಫೇಸ್‌ಬುಕ್ ಸಂಸ್ಥೆಯ ನೀತಿ ವಿಶ್ಲೇಷಣೆ ವಿಭಾಗದ ಜಾಗತಿಕ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದರು. ಫೇಸ್‌ಬುಕ್‌ನಲ್ಲಿ ಅವರು ಪ್ರಮುಖವೆನಿಸುವ ಅಂತಾರಾಷ್ಟ್ರೀಯ ಸುರಕ್ಷತೆ ವಿಷಯಗಳತ್ತ ಹೆಚ್ಚಿನ ಗಮನ ನೆಟ್ಟಿದ್ದರು.
ಗೂಗಲ್‌ನಲ್ಲೂ ಅವರು ಟ್ರಸ್ಟ್ ಅಂಡ್ ಸೇಫ್ಟಿಯ ಸಂಶೋಧನಾ ವಿಭಾಗದ ನಿರ್ದೇಶಕರಾಗಿದ್ದರು. ಅಲ್ಲಿ ಬ್ಯುಸಿನೆಸ್ ಅನಾಲಿಟಿಕ್ಸ್, ಡಾಟಾ ಸೈನ್ಸ್ ಮತ್ತು ಟೆಕ್ನಿಕಲ್ ರೀಸರ್ಚ್‌ನಲ್ಲಿರುವ ತಂಡಗಳನ್ನು ನಿರ್ವಹಿಸುತ್ತಿದ್ದರು. ಹಾಗೆಯೇ ರಾಂಡ್ ಕಾರ್ಪೊರೇಶನ್‌ನಲ್ಲಿ (RAND Corporation) ಅವರು ಹಿರಿಯ ಅರ್ಥಶಾಸ್ತ್ರಜ್ಞರಾಗಿಯೂ ಕೆಲಸ ಮಾಡಿದ್ಧಾರೆ.

ಅಮೆರಿಕದಲ್ಲಿರುವ ಭಾರತೀಯ ಸಾಧಕರು
ಅಮೆರಿಕದಲ್ಲಿ ದೊಡ್ಡ ಹೆಸರು ಮಾಡಿದ ಮತ್ತು ಉನ್ನತ ಸ್ತರಕ್ಕೆ ಏರಿದ ಭಾರತೀಯ ಸಮುದಾಯದವರ ಪಟ್ಟಿ ದೊಡ್ಡದೇ ಇದೆ. ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆಯಾಗಿ ಏರಿದ್ದು ಒಂದು ಮೈಲಿಗಲ್ಲು. ಭವಿಷ್ಯದಲ್ಲಿ ಕಮಲಾ ಅವರು ಅಧ್ಯಕ್ಷ ಸ್ಥಾನಕ್ಕೆ ಏರಿದರೂ ಅಚ್ಚರಿ ಇಲ್ಲ. ದಶಕಗಳ ಹಿಂದೆಯೇ ಬಾಬಿ ಜಿಂದಾಲ್ ಅವರು ಲೂಸಿಯಾನ ರಾಜ್ಯದ ರಾಜ್ಯಪಾಲರಾಗಿ ಆಯ್ಕೆಯಾಗಿದ್ದರು. ಕಾಶ್ಯಪ್ ಪಟೇಲ್ ಅವರು ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಮುಖ್ಯಸಿಬ್ಬಂದಿಯಾಗಿ ಆಯ್ಕೆಯಾಗಿದ್ದರು. ವಿವೇಕ್ ಮೂರ್ತಿ ಅವರು ಅಮೆರಿಕದ ಮುಖ್ಯ ಸರ್ಜನ್ ಆಗಿ ನೇಮಕವಾಗಿದ್ದರು.

ಉನ್ನತ ಹುದ್ದೆಗಳನ್ನೇರಿದ ಇತರ ಭಾರತೀಯರು
ಅಮೆರಿಕದ ಕಾರ್ಪೊರೇಟ್ ಕಂಪನಿಗಳಲ್ಲಿ ಭಾರತೀಯರು ಇನ್ನೂ ಹೆಚ್ಚು ಪ್ರಭಾವಿಗಳೆನಿಸಿದ್ದಾರೆ. ಫೇಸ್‌ಬುಕ್, ಗೂಗಲ್, ಐಬಿಎಂ, ಟ್ವಿಟ್ಟರ್ ಇತ್ಯಾದಿ ದೈತ್ಯ ಕಂಪನಿಗಳ ಅತ್ಯುನ್ನತ ಹುದ್ದೆಗಳಲ್ಲಿ ಭಾರತೀಯರು ಇದ್ದಾರೆ. ಅದರ ಒಂದು ಪಟ್ಟಿ ಇಲ್ಲಿದೆ.
ಪರಾಗ್ ಅಗರ್ವಾಲ್: ಟ್ವಿಟ್ಟರ್ ಸಿಇಒ
ಅರವಿಂದ್ ಕೃಷ್ಣ: ಐಬಿಎಂ ಸಿಇಒ
ಸುಂದರ್ ಪಿಚೈ: ಗೂಗಲ್ ಸಿಇಒ
ಸತ್ಯ ನಾದೆಲ್ಲಾ: ಮೈಕ್ರೋಸಾಫ್ಟ್ ಸಿಇಒ
ಅಜಯಪಾಲ್ ಬಾಂಗಾ: ಮಾಸ್ಟರ್‌ಕಾರ್ಡ್ ಸಿಇಒ
ಸುಬ್ರಾ ಸುರೇಶ್: ನ್ಯಾಷನಲ್ ಸೈನ್ಸ್ ಫೌಂಡೇಶನ್‌ನ ನಿರ್ದೇಶಕ
ದೇವೇನ್ ಶರ್ಮಾ: ಸ್ಟಾಂಡರ್ ಅಂಡ್ ಪೂರ್ಸ್‌ನ ಅಧ್ಯಕ್ಷ
(ಒನ್ಇಂಡಿಯಾ ಸುದ್ದಿ)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications