ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುದ್ರಣ ಕಡಿತ: ಈ ಬಾರಿ ಕಾಗದರಹಿತ ಡಿಜಿಟಲ್‌ ಬಜೆಟ್‌

|
Google Oneindia Kannada News

ನವದೆಹಲಿ, ಜನವರಿ 27: ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತದ ಬಜೆಟ್‌ ಮಂಡನೆ ಫೆಬ್ರವರಿ ಒಂದರಂದು ನಡೆಯಲಿದೆ. ಈ ವರ್ಷವೂ ಕೂಡಾ ಈ ಬಜೆಟ್‌ ಡಿಜಿಟಲ್‌ ಆಗಿರಲಿದೆ. ಕೇಂದ್ರ ಹಣಕಾಸು ಸಚಿವೆ ಡಿಜಿಟಲ್‌ ರೂಪದಲ್ಲಿ ಬಜೆಟ್‌ ಅನ್ನು ಮಂಡನೆ ಮಾಡಲಿದ್ದಾರೆ. ಮುದ್ರಣವನ್ನು ಈ ಬಾರಿಗೆ ಕಡಿತಗೊಳಿಸುವ ಮೂಲಕ ಬಜೆಟ್‌ ಅನ್ನು ಹಸಿರಾಗಿಸಲಾಗಿದೆ.

ಬಜೆಟ್ ದಾಖಲೆಗಳು ಬಹುತೇಕ ಡಿಜಿಟಲ್ ರೂಪದಲ್ಲಿ ಲಭ್ಯವಿದ್ದು, ಬೆರಳೆಣಿಕೆಯಷ್ಟು ಮಾತ್ರ ಪ್ರತಿಗಳು ಕಾಗದ ರೂಪದಲ್ಲಿ ಲಭ್ಯವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೃಹತ್ ಬಜೆಟ್ ದಾಖಲೆಗಳ ನೂರಾರು ಪ್ರತಿಗಳ ಮುದ್ರಣವು ಬಹಳ ವಿಸ್ತಾರವಾದ ಒಂದು ಪ್ರಕ್ರಿಯೆಯಾಗಿದೆ. ಹಣಕಾಸು ಸಚಿವಾಲಯದ ಸ್ಥಾನವಾದ ನಾರ್ತ್ ಬ್ಲಾಕ್‌ನ ನೆಲಮಾಳಿಗೆಯಲ್ಲಿರುವ ಮುದ್ರಣಾಲಯದಲ್ಲಿ ಮುದ್ರಣ ಸಿಬ್ಬಂದಿಯನ್ನು ಕನಿಷ್ಠ ಒಂದೆರಡು ವಾರಗಳವರೆಗೆ ಅಲ್ಲಿಯೇ ಇದ್ದ ಮುದ್ರಣವನ್ನು ಮಾಡುತ್ತಾರೆ. ಹೊರಗಿನ ಯಾವುದೇ ಸಂಪರ್ಕವಿಲ್ಲದೆ ಅಲ್ಲೇ ಇದ್ದು ಮುದ್ರಣದಲ್ಲಿ ತೊಡಗಿರುತ್ತಾರೆ.

 ಬಜೆಟ್ ಅಧಿವೇಶನದ ಕುರಿತು ಚರ್ಚಿಸಲು ಜ.31 ರಂದು ಸರ್ವಪಕ್ಷ ಸಭೆ ಕರೆದ ಸರ್ಕಾರ ಬಜೆಟ್ ಅಧಿವೇಶನದ ಕುರಿತು ಚರ್ಚಿಸಲು ಜ.31 ರಂದು ಸರ್ವಪಕ್ಷ ಸಭೆ ಕರೆದ ಸರ್ಕಾರ

ಇನ್ನು ಈ ಮುದ್ರಣಕ್ಕೂ ಮುನ್ನ ಹಲ್ವಾ ಸಮಾರಂಭವನ್ನು ಯಾರು ಮರೆಯುವವರು ಹೇಳಿ?. ಈ ಮುದ್ರಣಕ್ಕೂ ಮುನ್ನ ಕೇಂದ್ರ ಹಣಕಾಸು ಸಚಿವಾಲಯವು ಹಲ್ವಾ ಸಮಾರಂಭವನ್ನು ಮಾಡುತ್ತದೆ. ಇದರಲ್ಲಿ ಹಣಕಾಸು ಸಚಿವರು, ಉಪ ಹಣಕಾಸು ಮಂತ್ರಿಗಳು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಾರೆ. ಈ ಹಲ್ವಾ ಸಮಾರಂಭದ ಬಳಿಕ ಬಜೆಟ್‌ ಪ್ರತಿಯ ಮುದ್ರಣ ಆರಂಭ ಮಾಡಲಾಗುತ್ತದೆ.

 ಭಾರತದ ಬಜೆಟ್‌ ಪ್ರಕ್ರಿಯೆಯು ಇತರ ದೇಶಗಳಿಗಿಂತ ಹೇಗೆ ಭಿನ್ನ? ಭಾರತದ ಬಜೆಟ್‌ ಪ್ರಕ್ರಿಯೆಯು ಇತರ ದೇಶಗಳಿಗಿಂತ ಹೇಗೆ ಭಿನ್ನ?

 ಈ ಬಾರಿ ಸಾಂಕೇತಿಕ ಹಲ್ವಾ ಸಮಾರಂಭ

ಈ ಬಾರಿ ಸಾಂಕೇತಿಕ ಹಲ್ವಾ ಸಮಾರಂಭ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಮುದ್ರಣವನ್ನು ಕಡಿತ ಮಾಡಲಾಗಿದೆ. ಆರಂಭದಲ್ಲಿ ಪತ್ರಕರ್ತರು ಮತ್ತು ಹೊರಗಿನ ವಿಶ್ಲೇಷಕರಿಗೆ ನೀಡುವ ಪ್ರತಿಗಳ ಸಂಖ್ಯೆಯನ್ನು ಕಡಿತ ಮಾಡಲಾಗಿತ್ತು. ಬಳಿಕ ಕೊರೊನಾ ವೈರಸ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಕೋವಿಡ್‌ ಹಿನ್ನೆಲೆಯಿಂದಾಗಿ ಲೋಕಸಭೆ ಮತ್ತು ರಾಜ್ಯಸಭಾ ಸಂಸದರಿಗೆ ಒದಗಿಸಲಾದ ಪ್ರತಿಗಳನ್ನು ಕಡಿಮೆ ಮಾಡಿದೆ. ಈ ವರ್ಷವೂ ಕೂಡಾ ಕೋವಿಡ್‌ ಹಿನ್ನೆಲೆಯಿಂದಾಗಿ ಮುದ್ರಣವನ್ನು ಕಡಿತ ಮಾಡಲಾಗಿದೆ. ಇನ್ನು ಈ ಹಿನ್ನೆಲೆಯಿಂದಾಗಿ ಸಾಂಕೇತಿಕ ಹಲ್ವಾ ಸಮಾರಂಭಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ. ಆದರೂ ಡಿಜಿಟಲ್‌ ಡಾಕ್ಯುಮೆಂಟ್‌ಗಳ ಸಂಗ್ರಹಕ್ಕಾಗಿ ಸಣ್ಣ ಗುಂಪು ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ.

 ಬಜೆಟ್‌ ಹೇಗಿರಲಿದೆ?

ಬಜೆಟ್‌ ಹೇಗಿರಲಿದೆ?

ಬಜೆಟ್ ದಾಖಲೆಗಳು ಸಾಮಾನ್ಯವಾಗಿ ಸಂಸತ್ತಿನಲ್ಲಿ ಹಣಕಾಸು ಸಚಿವರ ಭಾಷಣ, ಮುಖ್ಯಾಂಶಗಳು, ವಾರ್ಷಿಕ ಹಣಕಾಸು ಮಾಹಿತಿ, ತೆರಿಗೆ ಪ್ರಸ್ತಾಪಗಳನ್ನು ಒಳಗೊಂಡಿರುವ ಹಣಕಾಸು ಮಸೂದೆ, ಹಣಕಾಸು ಮಸೂದೆಯಲ್ಲಿನ ನಿಬಂಧನೆಗಳನ್ನು ವಿವರಿಸುವ ಪತ್ರ ಮೊದಲಾದ ಮಾಹಿತಿಯನ್ನು ಹೊಂದಿರುತ್ತದೆ. ಮಧ್ಯಮ-ಅವಧಿಯ ಹಣಕಾಸು ನೀತಿ ಮತ್ತು ಹಣಕಾಸಿನ ನೀತಿ ಕಾರ್ಯತಂತ್ರದ ಹೇಳಿಕೆ, ಯೋಜನೆಗಳಿಗೆ ಫಲಿತಾಂಶದ ಚೌಕಟ್ಟು, ಕಸ್ಟಮ್ಸ್ ಅಧಿಸೂಚನೆ, ಹಿಂದಿನ ಬಜೆಟ್ ಪ್ರಕಟಣೆಗಳ ಅನುಷ್ಠಾನ, ರಶೀದಿ ಬಜೆಟ್, ವೆಚ್ಚದ ಬಜೆಟ್ ಮತ್ತು ಬಜೆಟ್ ಅಂದಾಜುಗಳ ಮಾಹಿತಿಯನ್ನು ಒಳಗೊಂಡಿರುತ್ತದೆ.

 'ಬಹಿ-ಖಾತಾ' ಬದಲಿಗೆ ಗ್ಯಾಜೆಟ್

'ಬಹಿ-ಖಾತಾ' ಬದಲಿಗೆ ಗ್ಯಾಜೆಟ್

ದಾಖಲೆಗಳು ಎಷ್ಟು ದೊಡ್ಡದಾಗಿರುತ್ತದೆ ಎಂದರೆ ಅದಕ್ಕಾಗಿ ಒಂದು ಚೀಲವನ್ನು ಒಗಿಸಲಾಗಿರುತ್ತದೆ. 2019 ರಲ್ಲಿ ತಮ್ಮ ಚೊಚ್ಚಲ ಬಜೆಟ್ ಮಂಡನೆಯಲ್ಲಿ ಪತ್ರಗಳನ್ನು ಹಿಡಿದಿರುವ 'ಬಹಿ-ಖಾತಾ' (ಬಜೆಟ್‌ ಪುಸ್ತಕ) ಬ್ರೀಫ್‌ಕೇಸ್‌ನಲ್ಲಿ ಭಾಷಣ ಮತ್ತು ಬಜೆಟ್ ದಾಖಲೆಯನ್ನು ಸಾಗಿಸುವ ದೀರ್ಘಕಾಲದ ಅಭ್ಯಾಸವನ್ನು ಬದಿಗೊತ್ತಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಭಾಷಣವನ್ನು ಓದಲು ಹ್ಯಾಂಡ್‌ಹೆಲ್ಡ್ ಟ್ಯಾಬ್ಲೆಟ್ ಅನ್ನು ಬಳಸಿದರು. ಕೆಂಪು ಬಣ್ಣದ 'ಬಹಿ-ಖಾತಾ' ಬಟ್ಟೆಯೊಳಗೆ ಗ್ಯಾಜೆಟ್ ಅನ್ನು ಹೊತ್ತುಕೊಂಡು ಸಂಸತ್ತಿಗೆ ಬಂದಿದ್ದರು.

 ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್

ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್

ನವೆಂಬರ್ 26, 1947 ರಂದು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆಯಾದ ನಂತರ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಕಳೆದ ವರ್ಷ ಬಜೆಟ್‌ ಅನ್ನು ಕೋವಿಡ್‌ ಹಿನ್ನೆಲೆಯಿಂದಾಗಿ ಮುದ್ರಣ ಮಾಡಿಲ್ಲ. ಅಲ್ಲದೆ, ಅನುಕೂಲಕ್ಕಾಗಿ, ಹಣಕಾಸು ಸಚಿವಾಲಯವು 2021 ರಲ್ಲಿ ಸಂಸತ್ತಿನ ಸದಸ್ಯರು (ಸಂಸದರು) ಮತ್ತು ಸಾರ್ವಜನಿಕರಿಂದ ಬಜೆಟ್ ದಾಖಲೆಗಳನ್ನು ಪರಿಶೀಲಿಸಲು 'ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್' ಅನ್ನು ಪ್ರಾರಂಭಿಸಿತು. ಆಚರಣೆಯ ಭಾಗವಾಗಿ, 'ಹಲ್ವಾ' ಅನ್ನು ದೊಡ್ಡ 'ಕಢೈ' (ದೊಡ್ಡ ಹುರಿಯಲು ಪಾತ್ರೆ) ನಲ್ಲಿ ತಯಾರಿಸಲಾಯಿತು. ಸಿಬ್ಬಂದಿಗಳಿಗೆ ಹಂಚಲಾಗಿತ್ತು. (ಒನ್‌ಇಂಡಿಯಾ ಸುದ್ದಿ)

English summary
India's Budget again goes green, cuts down on printing to bare minimum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X