India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚೀನಾದ ಇಂಟರ್ ನೆಟ್ ಯುದ್ಧ, ಸುಮ್ಮನಿದ್ದರೆ ಸೋಲು ಶತಸಿದ್ಧ'

By ರಾಜೀವ್ ಚಂದ್ರಶೇಖರ್
|
Google Oneindia Kannada News

ಮೂರು ದಿನದ ಹಿಂದಷ್ಟೇ ಗಣರಾಜ್ಯೋತ್ಸವ ಆಚರಿಸಿದ್ದೇವೆ. ಇಂತಹ ಮಹತ್ತರ ದಿನದ ಹಿನ್ನೆಲೆಯಲ್ಲಿ 'ಒನ್ಇಂಡಿಯಾ ಕನ್ನಡ'ಕ್ಕಾಗಿಯೇ ಲೇಖನವೊಂದನ್ನು ಬರೆದಿದ್ದಾರೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್. ಲೇಖನ ಆಯ್ದ ಭಾಗ ಇಲ್ಲಿದೆ.

ವಿವಿಧತೆಯಲ್ಲೂ ನಮ್ಮ ದೇಶದ ಜನರಿಗೆ ಏಕತೆಯ ಸಾಧ್ಯತೆಯನ್ನು ಸಾಕಾರ ಮಾಡಿದ ಸಂವಿಧಾನವು ಪ್ರಪಂಚದ ಎಷ್ಟೋ ಪ್ರಜಾಪ್ರಭುತ್ವ ದೇಶಗಳಿಗಿಂತ, ಅವುಗಳ ಆರ್ಥಿಕತೆಗಿಂತ ವಿಭಿನ್ನವಾಗಿ ಭಾರತವು ಕಾಣಿಸಿಕೊಳ್ಳುವಂತೆ ಮಾಡಿದೆ. ಈ ಎಪ್ಪತ್ತು ವರ್ಷಗಳಲ್ಲ್ ನಮ್ಮ ಗಣರಾಜ್ಯಕ್ಕೆ ಪ್ರಮುಖವಾದ ಸವಾಲು ಇಲ್ಲದ ಸಮಯವೇ ಇಲ್ಲ.

ಒಂದು ಕಡೆ ಚೀನಾ. ಮತ್ತೊಂದು ಕಡೆ ಭಯೋತ್ಪಾದಕರನ್ನು ಬೆಂಬಲಿಸುತ್ತಾ ಭದ್ರತೆಗೆ ಅಪಾಯವೊಡ್ಡುತ್ತಲೇ ಇರುವ ಪಾಕಿಸ್ತಾನ. ಈ ಏಳು ದಶಕಗಳಲ್ಲಿ ನಮ್ಮ ಗಣತಂತ್ರ ವ್ಯವಸ್ಥೆ ಕುಸಿಯುವಂತೆ ಬಹಳ ಸಲ ಪ್ರಯತ್ನ ಮಾಡಿವೆ. ಆದರೆ ಈಚೆಗೆ ಭಾರತದ ಮತದಾರರು ನರೇಂದ್ರ ಮೋದಿ ಮತ್ತು ಅವರ ತಂಡವನ್ನು ನಾಯಕರನ್ನಾಗಿ ಆರಿಸಿಕೊಂಡರಲ್ಲಾ, ಭದ್ರತಾ ವಿಚಾರವಾಗಿ ನಾವು ಗಟ್ಟಿ, ನಮ್ಮದು ಗಣರಾಜ್ಯ ಎಂಬುದನ್ನು ತೋಳು ತಟ್ಟಿ ಹೇಳಲು ಸಾಧ್ಯವಾಯಿತು.

ಸರ್ಜಿಕಲ್ ಸ್ಟ್ರೈಕ್ಸ, ದೋಕ್ಲಾಂನಲ್ಲಿನ ಘಟನೆಗಳು ಈ ಮೇಲಿನ ಧ್ವನಿಗೆ ಉದಾಹರಣೆಗಳಷ್ಟೇ. ನಮ್ಮ ಗಟ್ಟಿತನದ ರಾಜಕಾರಣದ ನಾಯಕತ್ವ ಹಾಗೂ ಸಮವಸ್ತ್ರದಲ್ಲಿ ಇರುವ ನಮ್ಮ ಯೋಧರ ಸಾಮರ್ಥ್ಯವನ್ನು ಜಗತ್ತಿಗೆ ಸಾರಿ ಹೇಳಿದ ಘಟನೆಗಳವು. ವಿರೋಧ ಪಕ್ಷದಲ್ಲಿ ಇರುವ ಕೆಲವರ ಉತ್ತೇಜನದ ಹೊರತಾಗಿಯೂ ನಮ್ಮ ಭೂ ಸೇನೆ, ನೌಕಾ ಸೇನೆ ಹಾಗೂ ವಾಯು ಸೇನೆ ಮುಂದಿನ ಕೆಲಸ ವರ್ಷಗಳಲ್ಲಿ ಅದ್ಭುತವಾಗಿ ಸಜ್ಜುಗೊಳ್ಳಲಿದೆ. ಹಿಂದು ಮಹಾ ಸಾಗರ, ಗಡಿ, ಆಕಾಶವನ್ನು ಕಾಪಾಡಲಿದೆ.

ಡಿಜಿಟಲ್ ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಸಂಸದ ರಾಜೀವ್ ಆಗ್ರಹಡಿಜಿಟಲ್ ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಸಂಸದ ರಾಜೀವ್ ಆಗ್ರಹ

ಸೈಬರ್ ದಾಳಿ ಕೂಡ ಅಪಾಯಕಾರಿ

ಆದರೆ, ಭವಿಷ್ಯದ ಬಿಕ್ಕಟ್ಟು ಕೇವಲ ಯುದ್ಧ ಭೂಮಿಗೋ ಅಥವಾ ಭಯೋತ್ಪಾದಕರಿಗಷ್ಟೇ ಸೀಮಿತವಾಗಿಲ್ಲ. ಡಿಜಿಟಲ್ ಮೂಲಸೌಕರ್ಯಕ್ಕೆ ಹಾಗೂ ನಮ್ಮ ಆರ್ಥಿಕತೆಗೆ ಸೈಬರ್ ದಾಳಿ ಕೂಡ ಆತಂಕಕಾರಿಯೇ. ಈವರೆಗೆ ಸರಕಾರಗಳ ಲಕ್ಷ್ಯದಿಂದ ಹೊರಗೆ ಉಳಿದಿದ್ದ ಇಂಟರ್ ನೆಟ್ ನಲ್ಲಿ ಹೆಚ್ಚುತ್ತಿರುವ ಚೀನಾ ದೇಶದ ಪ್ರಾಬಲ್ಯ ನಮ್ಮ ಪಾಲಿಗೆ ನಿಜವಾದ ಆತಂಕ.

ಹೇಗೆ ಚೀನಾದ ಆರ್ಥಿಕತೆ ಹಾಗೂ ವ್ಯಾಪಾರದ ಅಭಿವೃದ್ಧಿಯು ಎಲ್ಲ ದೇಶಗಳ ಭೌಗೋಳಿಕ- ರಾಜಕೀಯ ಹಾಗೂ ಭದ್ರತಾ ವ್ಯವಸ್ಥೆಗೆ ಆತಂಕವೋ ಅದೇ ರೀತಿ ಭಾರತಕ್ಕೂ ಅಪಾಯವೇ. ಶೀತಲ ಸಮರದ ನಂತರ ಕಾಲದಲ್ಲಿ ಜಾಗತಿಕ ವ್ಯಾಪಾರ ನೀತಿಯಲ್ಲಿ ಬದಲಾವಣೆ ಆಯಿತು. ಜಾಗತಿಕ ವ್ಯಾಪಾರಕ್ಕೆ ದಿಢೀರ್ ಮನ್ನಣೆ ಸಿಕ್ಕಿತು.

ಬನ್ನೇರುಘಟ್ಟದಲ್ಲಿ ಗಣಿಗಾರಿಕೆ ನಿರ್ಬಂಧಿಸುವಂತೆ ರಾಜೀವ್ ಮನವಿಬನ್ನೇರುಘಟ್ಟದಲ್ಲಿ ಗಣಿಗಾರಿಕೆ ನಿರ್ಬಂಧಿಸುವಂತೆ ರಾಜೀವ್ ಮನವಿ

ಹಾಗೆ ನೋಡಿದರೆ ಇದರಿಂದ ಆರ್ಥಿಕತೆಗಳ ಮಧ್ಯೆ ಪಾರದರ್ಶಕವಾದ ವ್ಯಾಪಾರ ಹಾಗೂ ಜಾಗತಿಕವಾದ ಸ್ಪರ್ಧಾತ್ಮಕತೆ ಸಾಧ್ಯವಾಗಬೇಕಿತ್ತು. ಜಾಗತಿಕ ಮಾರುಕಟ್ಟೆಗೆ ಹಾಗೂ ಗ್ರಾಹಕರಿಗೆ ತೆರೆದುಕೊಳ್ಳಬೇಕಿತ್ತು. ಅದರ ಬದಲಿಗೆ ಚೀನಾದಂಥ ದೇಶಗಳಿಗೇ ಹೆಚ್ಚು ಪ್ರಯೋಜನ ಆಯಿತು. ಜಾಗತಿಕ ವ್ಯಾಪಾರದಿಂದ ಅತಿ ದೊಡ್ಡ ಲಾಭ ಪಡೆದಿದ್ದು ಚೀನಾ.

ಪಾಕಿಸ್ತಾನ, ಉತ್ತರ ಕೊರಿಯಾವನ್ನು ಬೆಂಬಲಿಸುತ್ತಿದೆ

ಈಗ ನೋಡಿದರೆ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ದೇಶಗಳಾದ ಪಾಕಿಸ್ತಾನ, ಉತ್ತರ ಕೊರಿಯಾದಂಥ ದೇಶಗಳಿಗೆ ಚೀನಾದಿಂದ ಹಣಕಾಸು ನೆರವು ದೊರೆಯುತ್ತಿದೆ. ಯಾವ ಪ್ರಜಾಪ್ರಭುತ್ವ ಹಾಗೂ ಮಾರುಕಟ್ಟೆ ಚೀನಾ ಪಾಲಿಗೆ ನೆರವಾಯಿತೋ ಅವುಗಳಿಗೆ ಈಗ ಚೀನಾ ಮಾರಕ. ಇದು ಜಾಗತಿಕ ವ್ಯಾಪಾರದ ವಿಪರ್ಯಾಸಗಳಲ್ಲಿ ಒಂದು. ಇದು ಇನ್ನು ಮುಂದೆ ಯಾವ ಕಾರಣಕ್ಕೂ ಉಚಿತ ಹಾಗೂ ತೆರೆದ ಜಾಗತಿಕ ವ್ಯಾಪಾರ ವ್ಯವಸ್ಥೆಯ ಭಾಗ ಆಗಬಾರದು.

ಅಗ್ಗದ ಫೋನ್, ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇತ್ತೀಚಿನ ಅಪ್ಲಿಕೇಷನ್ ಗಳ ಮೂಲಕ ಚೀನಾ ಕೂಡ ಉಚಿತ ವ್ಯಾಪಾರ ಪರಿಸರದ ಲಾಭವನ್ನು ಚೆನ್ನಾಗಿಯೇ ಪಡೆದು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವ ಸಾಧಿಸಿದೆ. ಈ ತಂತ್ರಜ್ಞಾನ ಉತ್ಪನ್ನಗಳು ಹಾಗೂ ಅಪ್ಲಿಕೇಷನ್ ಗಳು ಯಾವುದೇ ರಾಷ್ಟ್ರಕ್ಕೆ ಅದೆಷ್ಟು ಅಪಾಯಕಾರಿ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯ ಸಿಕ್ಕಿವೆ.

ಆಧಾರ್ ತೀರ್ಪು ಭಷ್ಟಾಚಾರ ಮುಕ್ತ ಭಾರತಕ್ಕೆ ಪೂರಕ: ರಾಜೀವ್ಆಧಾರ್ ತೀರ್ಪು ಭಷ್ಟಾಚಾರ ಮುಕ್ತ ಭಾರತಕ್ಕೆ ಪೂರಕ: ರಾಜೀವ್

ಚೀನಾದ ಮೊಬೈಲ್ ಫೋನ್ ಗಳು ಅವುಗಳ ಬಳಕೆದಾರರ ಖಾಸಗಿ ಮಾಹಿತಿಯನ್ನು ತನ್ನ ಸರ್ವರ್ ಗಳಿಗೆ ಕಳಿಸುತ್ತಿದ್ದವು ಎಂಬುದು ಕೂಡ ಈಚೆಗೆ ಸಾಕ್ಷ್ಯ ಸಮೇತ ಸಿಕ್ಕಿದೆ. ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಇರುವ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇದು ಆಗುತ್ತಿದೆ. ಕೆಲವು ಪಾಶ್ವಾತ್ಯ ರಾಷ್ಟ್ರಗಳು ಎಚ್ಚೆತ್ತುಕೊಂಡಿವೆ.

ಬೇಹುಗಾರಿಕೆ-ಗೂಢಚಾರಿಕೆ ಮಾಡಿದ ಆರೋಪದಲ್ಲಿ ಬಂಧನ

ಬೀಜಿಂಗ್ ಪರವಾಗಿ ಬೇಹುಗಾರಿಕೆ- ಗೂಢಚಾರಿಕೆ ಮಾಡಿದ ಚೀನಾದ ಕಂಪನಿ ಹುವೈನ ನೌಕರರನ್ನು ಬಂಧಿಸಿದೆ. ಈಚೆಗೆ ಪೋಲೆಂಡ್ ನಲ್ಲಿ ಹುವೈನ ಉದ್ಯೋಗ ಸೇರಿದಂತೆ ಇಬ್ಬರು ಚೀನಾದವರನ್ನು ಬಂಧಿಸಲಾಗಿದೆ. ಹಲವು ದೇಶಗಳಾಲ್ಲಿ ಹುವೈನಂಥ ಕಂಪನಿಗಳ ಮೇಲೆ ನಿಷೇಧ ಹೇರಲಾಗಿದೆ. ಸರಕಾರದ ಪರವಾಗಿ ಬೇಹುಗಾರಿಕೆ ಮಾಡಿದ ಆರೋಪದ ಕಾರಣಕ್ಕೆ ಹೀಗೆ ಮಾಡಲಾಗಿದೆ.

ಏಳು ವರ್ಷಗಳ ಹಿಂದೆ ಅಮೆರಿಕ ಕಾಂಗ್ರೆಸ್ ನಿಂದ ಹುವೈ ಹಾಗೂ ಜೆಡ್ ಟಿಇ ಕಾರ್ಪ್ ಕಂಪನಿ ಮೇಲೆ ತನಿಖೆ ನಡೆಸಲಾಗಿತ್ತು. ಹುವೈ ಪೂರ್ಣ ಸಹಕಾರ ನೀಡುತ್ತಿಲ್ಲ, ಚೀನಾ ಸರಕಾರ ಅಥವಾ ಚೀನಾ ಕಮ್ಯುನಿಸ್ಟ್ ಪಕ್ಷದ ಜತೆ ಅದಕ್ಕೆ ಎಂಥ ನಂಟು ಎಂದು ವಿವರಿಸಲು ಸಾಧ್ಯವಾಗಿಲ್ಲ. ಅಮೆರಿಕದ ಕಾನೂನು ಅನುಸರಿಸಿಲ್ಲ ಎಂದು ನಿರ್ಧರಿಸಲಾಯಿತು.

ಅದೇ ರೀತಿಯಾಗಿ ಗ್ರೇಟ್ ಬ್ರಿಟನ್, ಕೆನಡಾ ಮತ್ತು ಜಪಾನ್ ಸೇರಿದಂತೆ ಹಲವು ದೇಶಗಳು ಹುವೈ ಉತ್ಪನ್ನಗಳ ಮೇಲೆ ನಿಷೇಧ ಹೇರಿವೆ. ಈ ಎಲ್ಲ ಹಿನ್ನೆಲೆಯಲ್ಲಿ ನೋಡುವುದಾದರೆ ಭಾರತವು ಗಂಭೀರವಾದ ಆತಂಕ ಎದುರಿಸುತ್ತಿದೆ. ಡಿಜಿಟಲ್ ಇಂಡಿಯಾ ಯೋಜನೆ ಮೂಲಕ ಇಂಟರ್ ನೆಟ್ ಅನ್ನು ಆಡಳಿತದಲ್ಲಿ ಪ್ರಮುಖವಾಗಿ ಬಳಸಿಕೊಳ್ಳುವ ಆಲೋಚನೆ ಸರಕಾರದ್ದು.

5G ಸೇವೆ ಒದಗಿಸುವ ಪ್ರಸ್ತಾವ ಸಲ್ಲಿಸಿದೇ ಹುವೈ

ಆದ್ದರಿಂದ ಇಂಟರ್ ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗುತ್ತಿದೆ. 2021ರ ಹೊತ್ತಿಗೆ ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರ ಜನಸಖ್ಯೆಯ ಪ್ರಮಾಣದಲ್ಲಿ 59% ಇರುತ್ತಾರೆ. 2016ರಲ್ಲಿ ಈ ಪ್ರಮಾಣ 28% ಇತ್ತು. ಇದೀಗ ಭಾರತ್ ನೆಟ್ ಕಾರ್ಯಕ್ರಮದ ಅಡಿಯಲ್ಲಿ ಬ್ರ್ಯಾಡ್ ಬಾಂಡ್ ಮೂಲಕ ಗ್ರಾಮೀಣ ಭಾರತವನ್ನು ಬೆಸೆಯಲು ಮುಂದಾಗಿದೆ ಕೇಂದ್ರ ಸರಕಾರ.

ಭಾರತದ ಬಹುಭಾಗ ಅವಲಂಬಿತ ಆಗಿರುವುದು ಮೊಬೈಲ್ ಇಂಟರ್ ನೆಟ್ ಮೇಲೆ. ಅದರಲ್ಲೂ ಕಡಿಮೆ ಬೆಲೆಯ ಚೀನಾದ ಸ್ಮಾರ್ಟ್ ಫೋನ್ ಗಳ ಮೇಲೆ. ಅದರಲ್ಲೂ ಫೋನ್ ತಯಾರಕರಾದ ಹುವೈನಂಥ ಕಂಪನಿಗಳು ನೆಟ್ ವರ್ಕ್ ಮ್ಯಾನೇಜ್ ಮೆಂಟ್ ಹಾಗೂ ಕಾರ್ಯನಿರ್ವಹಣೆಯಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುತ್ತವೆ.

ವೊಡಾಫೋನ್ ಐಡಿಯಾ ಲಿಮಿಟೆಡ್ ಸಹಭಾಗಿತ್ವದ ಮೂಲಕ ಭಾರತದಲ್ಲಿ ಪ್ರಾಯೋಗಿಕವಾಗಿ 5G ಸೇವೆ ಒದಗಿಸುವ ಪ್ರಸ್ತಾವ ಸಲ್ಲಿಸಿದೇ ಹುವೈ. ಇದರಿಂದಾಗಿ ಹುವೈಗೆ ಮತ್ತು ಆ ಮೂಲಕ ಚೀನಾದ ಸರಕಾರಕ್ಕೆ ಹಲವು ಸೂಕ್ಷ್ಮ ಸಂಗತಿಗಳು, ಮಾಹಿತಿ ಹಾಗೂ ಅತಿ ಮುಖ್ಯ ವಿಚಾರಗಳು ತಾನಾಗಿಯೇ ಸಿಕ್ಕಂತಾಗುತ್ತದೆ.

ಎಚ್ಚೆತ್ತುಕೊಳ್ಳಬೇಕಾದ ಸಮಯ ಇದು

ಈಗಾಗಲೇ ವಿವರಿಸಿದ ಹಾಗೆ ನಾವು ಎಚ್ಚೆತ್ತುಕೊಳ್ಳಬೇಕಾದ ಸಮಯ ಇದು. ಅಮೆರಿಕ, ಜಪಾನ್ ಹಾಗೂ ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಭವಿಷ್ಯದಲ್ಲಿ ಇಂಟರ್ ನೆಟ್ ಬಳಕೆ ಹೇಗಿರಬೇಕು ಮತ್ತು ಇದನ್ನು ಇನ್ನೂ ಹೆಚ್ಚು ಸುರಕ್ಷಿತ ಹಾಗೂ ಉಪಯುಕ್ತವನ್ನಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಚಿಂತಿಸಬೇಕಿದೆ.

ನೆಟ್ ನ್ಯೂಟ್ರಾಲಿಟಿ, ಖಾಸಗಿತನ, ಸೈಬರ್ ಸೆಕ್ಯೂರಿಟಿ, ಸೈಬರ್ ಕ್ರೈಮ್ ಮುಂತಾದ ಸಮಸ್ಯೆಗಳು ಕಣ್ಣೆದುರಿಗೆ ಇವೆ. ಇವೆಲ್ಲಕ್ಕೂ ಜಾಗತಿಕ ಮಟ್ಟದಲ್ಲೇ ಒಂದು ಪರಿಹಾರ ಕಂಡುಕೊಳ್ಳಬೇಕಿದೆ. ಅಮೆರಿಕ, ಜಪಾನ್, ಭಾರತ ಒಟ್ಟಾಗಿ ಕೆಲಸ ಮಾಡಿದರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮಷೀನ್ ಲರ್ನಿಂಗ್ ನಂಥ ಸಮಾನ ಆಸಕ್ತ ಕ್ಷೇತ್ರಗಳೂ ಇವೆ. ಚೀನಾದಂಥ ವಂಚಕ ರಾಷ್ಟ್ರದ ಕೈಲಿ ಭವಿಷ್ಯದ ಇಂಟರ್ ನೆಟ್ ವ್ಯವಸ್ಥೆಯನ್ನು ನೀಡಿ, ಪರಿತಪಿಸುವುದರಿಂದ ತಪ್ಪಿಸಿಕೊಳ್ಳಬೇಕು.

ಈಗಲಾದರೂ ಎಚ್ಚೆತ್ತು ಈ ಎಲ್ಲ ಹೊಸ ಸವಾಲುಗಳನ್ನು ಎದುರಿಸಿ, ಕಾಲಡಿ ಹೊಸಕಿ, ಮೆಟ್ಟಿ ನಿಲ್ಲಬೇಕಿದೆ.

English summary
On the 70th Republic Day , as we celebrated and honour our nation and our sovereignty, India must work together with Democracies like the US and Japan in shaping policy and regulatory approach that will decide the future of the Internet and protect it from the threat of Chinas growing dominance in science- technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X