ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಫ್ಟ್‌ ಬಳಸಿದ್ದಕ್ಕೆ ಡೆಲಿವರಿ ಬಾಯ್‌ಗಳಿಗೆ 300ರೂ. ದಂಡ!

|
Google Oneindia Kannada News

ಹೈದರಾಬಾದ್‌, ಜನವರಿ 13: ಭಾರತದಲ್ಲಿ ವರ್ಗೀಕರಣ ಮತ್ತು ತಾರತಮ್ಯ ಹೊಸದೇನಲ್ಲ. ದುಃಖಕರವೆಂದರೆ, ದೈನಂದಿನ ಆಧಾರದ ಮೇಲೆ ಗೃಹ ಕೆಲಸಗಳು, ಡೆಲಿವರಿ ಬಾಯ್‌ಗಳ ವಿರುದ್ಧವಾಗಿ ತಾರತಮ್ಯ ನಡೆಸುವ ಹಲವಾರು ಘಟನೆಗಳು ನಡೆದಿದೆ.

ಹೈದರಾಬಾದಿನ ಹೌಸಿಂಗ್ ಸೊಸೈಟಿಯೊಂದು ಸಾಮಾಜಿಕ ಮಾಧ್ಯಮದಲ್ಲಿ 'ಮೇಡ್‌ಗಳು, ಡ್ರೈವರ್‌ಗಳು ಮತ್ತು ಡೆಲಿವರಿ ಬಾಯ್‌ಗಳು' ಮೇನ್‌ ಲಿಫ್ಟ್‌ ಅನ್ನು ಬಳಸಬಾರದು ಎಂದು ನೋಟಿಸ್‌ ಹಾಕಿದೆ. ಇನ್ನು ಈ ಲಿಫ್ಟ್‌ ಬಳಸಿದರೆ ಮುನ್ನೂರು ರೂಪಾಯಿ ದಂಡ ಹಾಕಲಾಗುವುದು ಎಂದು ಕೂಡಾ ನೋಟಿಸ್‌ನಲ್ಲಿ ಇದೆ. ಈ ನೋಟಿಸ್‌ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಟ್ವಿಟ್ಟರ್‌ನಲ್ಲಿ ಈ ಚಿತ್ರವು ವೈರಲ್‌ ಆಗಿದೆ. ಲಿಫ್ಟ್‌ನ ಹೊರಗೆ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. "ಸೇವಕರು, ಚಾಲಕರು ಅಥವಾ ಡೆಲಿವರಿ ಬಾಯ್‌ಗಳು ಮೇನ್‌ ಲಿಫ್ಟ್‌ ಅನ್ನು ಬಳಸಬಾರದು, ಬಳಸಿದರೆ 300 ರೂಪಾಯಿ ದಂಡ ವಿಧಿಸಲಾಗುವುದು," ಎಂದು ಇದರಲ್ಲಿ ಬರೆಯಲಾಗಿದೆ.

Hyderabad Housing Society Imposes Rs 300 Fine On Maids & Delivery Guys For Using Main Lift

ಕಟ್ಟಡದ ಮಾಲೀಕರ ವಿರುದ್ಧ ನೆಟ್ಟಿಗರ ಆಕ್ರೋಶ

ಈ ಪೋಸ್ಟರ್ ಇದೀಗ ವೈರಲ್ ಆಗಿದ್ದು, ಕಟ್ಟಡದ ಅಧಿಕಾರಿಗಳ ತಾರತಮ್ಯ ಧೋರಣೆಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಕೆಲವರು ಈ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ಕೊರೊನಾ ವೈರಸ್‌ನ ಮುನ್ನೆಚ್ಚರಿಕೆಯ ಕ್ರಮ ಎಂದು ಕರೆದಿದ್ದಾರೆ. ಕೆಲವರು ಇದನ್ನು ದೊಡ್ಡ ವಿಚಾರವೆಂದು ಭಾವಿಸಿಲ್ಲ. ಇದು ಸಾಮಾನ್ಯ ಎಂದು ಹೇಳಿದ್ದಾರೆ. ಯಾರು ಮನೆ ಕೆಲಸಗಾರರು ಎಂದು ಖಚಿತಪಡಿಸಿಕೊಳ್ಳಲು ಈ ಕ್ರಮ ಎಂದು ಇನ್ನು ಕೆಲವರು ಹೇಳಿಕೊಂಡಿದ್ದಾರೆ. ಇನ್ನು ಕೆಲವರು ಡೆಲವರಿ ಮಾಡುವವರು ಲಿಫ್ಟ್‌ನಲ್ಲಿ ಉಗುಳುವುದಿಲ್ಲ ಹಾಗೂ ಲಿಫ್ಟ್‌ ಅನ್ನು ಕೊಳಕು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ನೋಟಿಸ್‌ ಅನ್ನು ಸಮರ್ಥನೆ ಮಾಡುವವರ ವಿರುದ್ಧ ಕಿಡಿ

ಇನ್ನು ಕೆಲವರು ಈ ನೋಟಿಸ್‌ ಅನ್ನು ಕೋವಿಡ್‌ ನಿಟ್ಟಿನಲ್ಲಿ ಕೈಗೊಂಡ ಕ್ರಮ ಎಂದೆಲ್ಲಾ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಸಮರ್ಥನೆ ಮಾಡಿಕೊಂಡವರ ವಿರುದ್ಧವು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. "ಈ ನೋಟಿಸ್‌ ಅನ್ನು ಸಮರ್ಥನೆ ಮಾಡುವವರು ಕೂಡಾ ಇದ್ದಾರೆ. ಈ ನೋಟಿಸ್‌ ಹಾಕಿದವರಿಗೆ ಎಚ್ಚರಿಕೆಯನ್ನು ನೀಡಬೇಕಾಗಿದೆ. ಈ ನೋಟಿಸ್‌ ತೆಗೆದು ಹಾಕುವಂತೆ ಸೂಚನೆ ನೀಡಬೇಕಾಗಿದೆ. ಇದರಲ್ಲಿ ಸ್ಪಷ್ಟವಾದ ವರ್ಣಭೇದ ನೀತಿ/ಜಾತಿಭೇದ/ವರ್ಗವಾದವಿದ್ದು, ಇದು ಅಸಹ್ಯಕರ," ಎಂದು ತಿಳಿಸಿದ್ದಾರೆ.

ಇನ್ನು ಕೆಲವರು ಈ ರೀತಿಯ ಬಿಲ್ಡಿಂಗ್‌ ಅನ್ನು ಪತ್ತೆ ಹಚ್ಚಿ ಅಲ್ಲಿರವು ಜನರಲ್ಲಿ ಈ ರೀತಿಯ ನೋಟಿಸ್‌ ಅನ್ನು ತೆಗೆಯುವಂತೆ ಹೇಳಬೇಕಾಗಿದೆ. ಇಂತಹ ಜಾತಿವಾದ ಸರಿಯಲ್ಲ ಎಂದು ಇನ್ನೋರ್ವರು ಹೇಳಿದ್ದಾರೆ. "ವರ್ಣಭೇದ ನೀತಿ ಇರುವ ಭಾರತ: ಅಲ್ಲಿ ಧರ್ಮ, ವೃತ್ತಿ, ಹಣಕಾಸು, ಲಿಂಗ ಮತ್ತು ಚರ್ಮದ ಬಣ್ಣದ ಆಧಾರದ ಮೇಲೆ ತಾರತಮ್ಯವನ್ನು ಮಾಡಲಾಗುತ್ತದೆ," ಎಂದಿದ್ದಾರೆ.

ಈ ಮನಸ್ಥಿತಿಯು ಹೆಚ್ಚಿನ ಭಾರತೀಯ ಮೇಲ್ವರ್ಗದ ಸಮಾಜದಲ್ಲಿ ಪ್ರಚಲಿತವಾಗಿದೆ. ಇಲ್ಲಿ ಸ್ಪಷ್ಟವಾದ ಆರ್ಥಿಕ ಪ್ರತ್ಯೇಕತೆ ನಡೆಯುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಮಾಲೀಕರು ನಿರ್ವಹಣೆ ಮತ್ತು ಅಪಾರ್ಟ್‌ಮೆಂಟ್‌ ಹಣ ಪಾವತಿ ಮಾಡುತ್ತಾರೆ ಎಂದು ಹೇಳುತ್ತಾರೆ. ಇದು ಭಾರತದ ಅತ್ಯಾಧುನಿಕ ಅಸ್ಪೃಶ್ಯತೆ," ಎಂದು ಹೇಳಿದ್ದಾರೆ.

ಇನ್ನೋರ್ವರು, ನಿವಾಸಿಗಳ ಅತಿಥಿಗಳ ಬಗ್ಗೆ ಏನು ವಿಚಾರ? "ಸಂದರ್ಶಕ" ವರ್ಗಕ್ಕೆ ಸೇರಿದವರು ಆಗಿದ್ದರೆ ಅದೇ ಲಿಫ್ಟ್‌ ಅನ್ನು ಬಳಸಲು ಅವರಿಗೆ ಅನುಮತಿಸಲಾಗಿದೆ ಎಂದು ನಾನು ಭಾವಿಸುತ್ತೇನೆ? ಎಂದಿದ್ದಾರೆ. ಇನ್ನು ಈ ನಡುವೆ ಮತ್ತೋರ್ವರು, "ಅವರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸಾಮಾನ್ಯ ಉದ್ದೇಶಕ್ಕಾಗಿ ಬಳಸಬಹುದು. ಉಳಿದ ಲಿಫ್ಟ್‌ಗಳನ್ನು ಆಗಾಗ್ಗೆ ಸ್ಯಾನಿಟೈಸ್ ಮಾಡಲಾಗುತ್ತದೆ. ಕೆಲವು ಸಮಾಜಗಳಲ್ಲಿ ಇದು ರೂಢಿಯಲ್ಲಿದೆ ಎಂದು ನಾನು ಉಲ್ಲೇಖಿಸುತ್ತಿದ್ದೇನೆ," ಎಂದು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Hyderabad Housing Society Imposes Rs 300 Fine On Maids & Delivery Guys For Using Main Lift.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X