ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಮೆಂಟ್ ಸೌಲಭ್ಯ ಆರಂಭಿಸಿದ ವಾಟ್ಸಾಪ್: ಬಳಸುವುದು ಹೇಗೆ?

|
Google Oneindia Kannada News

ಇಷ್ಟುದಿನ ಲಿಖಿತ ಸಂದೇಶ, ಫೋಟೊ, ವಿಡಿಯೋಗಳು, ಡಾಕ್ಯುಮೆಂಟ್ ಮತ್ತು ಮ್ಯಾಪ್‌ಗಳನ್ನು ಕಲಿಸಲು ಅವಕಾಶ ನೀಡುತ್ತಿದ್ದ ವಾಟ್ಸಾಪ್‌ನಲ್ಲಿ ಹೊಸ ಸೌಲಭ್ಯವನ್ನು ಅಡಕವಾಗಿದೆ. ಭಾರತದಲ್ಲಿ ವಾಟ್ಸಾಪ್ ಪೇ ಸೌಲಭ್ಯವು ಇಂದಿನಿಂದ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಸಂದೇಶ ರವಾನೆಯ ಆಪ್‌ 2018ರಲ್ಲಿಯೇ ವಾಟ್ಸಾಪ್ ಪೇ ಸೌಲಭ್ಯದ ಪರೀಕ್ಷೆಯನ್ನು 1 ಮಿಲಿಯನ್‌ಗೂ ಅಧಿಕ ಬಳಕೆದಾರರ ನಡುವೆ ನಡೆಸಿತ್ತು. ಆದರೆ ವಾಟ್ಸಾಪ್ ಮೂಲಕ ಹಣ ರವಾನೆ ಮಾಡುವ ಈ ಸೌಕರ್ಯಕ್ಕೆ ಸರ್ಕಾರದ ಅನುಮತಿ ಸಿಕ್ಕಿರಲಿಲ್ಲ. ಎರಡು ವರ್ಷಗಳ ಬಳಿಕವಷ್ಟೇ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ವಾಟ್ಸಾಪ್‌ನ ಈ ಹೊಸ ಸೌಲಭ್ಯಕ್ಕೆ ಅನುಮತಿ ನೀಡಿದೆ.

ಯುಪಿಐ ಪಾವತಿ: ಅಮೇಜಾನ್, ಗೂಗಲ್, ಫೇಸ್‌ಬುಕ್, ಕೇಂದ್ರ ಸರ್ಕಾರಕ್ಕೆ ನೋಟಿಸ್ಯುಪಿಐ ಪಾವತಿ: ಅಮೇಜಾನ್, ಗೂಗಲ್, ಫೇಸ್‌ಬುಕ್, ಕೇಂದ್ರ ಸರ್ಕಾರಕ್ಕೆ ನೋಟಿಸ್

'ಪ್ರತಿಯೊಂದೂ ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗುವುದನ್ನು ಖಾತರಿಪಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ ಜತೆಗೆ ನಾವು ಸಮಾಲೋಚನೆ ನಡೆಸುತ್ತಿದ್ದೆವು. ನಾವು ಭಾರತದ ಯುನಿಫೈಡ್ ಪೇಮೆಂಟ್ ಇಂಟರ್‌ಪೇಸ್ ಬಳಸಿ ಪಾವತಿ ಸೌಲಭ್ಯವನ್ನು ನಿರ್ಮಿಸಿದ್ದೇವೆ. ಇದರಿಂದ ವಿಭಿನ್ನ ಆಪ್‌ಗಳಿಂದ, ಕಂಪೆನಿಗಳಿಂದ ತಕ್ಷಣವೇ ಪಾವತಿಯನ್ನು ಸ್ವೀಕರಿಸಲು ಅನುಕೂಲ ಮಾಡುವಂತೆ ಅವಕಾಶ ಸಿಗಲಿದೆ' ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ. ಮುಂದೆ ಓದಿ.

 ಅಂಗೈ ತೋರಿಸಿ ಹಣ ಪಾವತಿಸಿ: ಅಮೆಜಾನ್‌ನಿಂದ ಹೊಸ ತಂತ್ರಜ್ಞಾನದ ಬಳಕೆ ಅಂಗೈ ತೋರಿಸಿ ಹಣ ಪಾವತಿಸಿ: ಅಮೆಜಾನ್‌ನಿಂದ ಹೊಸ ತಂತ್ರಜ್ಞಾನದ ಬಳಕೆ

ಐದು ಬ್ಯಾಂಕ್‌ಗಳು ಲಭ್ಯ

ಐದು ಬ್ಯಾಂಕ್‌ಗಳು ಲಭ್ಯ

ವಾಟ್ಸಾಪ್ ಭಾರತದ ಐದು ಮುಂಚೂಣಿ ಬ್ಯಾಂಕಿಂಗ್ ವ್ಯವಸ್ಥೆಗಳೊಂದಿಗೆ ಐದು ಸಹಭಾಗಿತ್ವ ಹೊಂದಿದೆ. ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಜಿಯೋ ಪೇಮೆಂಟ್ಸ್ ಬ್ಯಾಂಕ್‌ಗಳು ಯುಪಿಐ ಪಾವತಿಗೆ ಅವಕಾಶ ನೀಡಲಿವೆ. ವಾಟ್ಸಾಪ್ ಪೇ ಮೂಲಕ ಹಣ ಕಳುಹಿಸಲು ಅಥವಾ ಸ್ವೀಕರಿಸಲು ಮೊದಲ ನಿಮ್ಮ ಬಳಿ ಬ್ಯಾಂಕ್ ಖಾತೆ ಮತ್ತು ಡೆಬಿಟ್ ಕಾರ್ಡ್ ಇರಬೇಕು.

ಪೇಮೆಂಟ್ ಸೌಲಭ್ಯ ಪಡೆಯುವುದು ಹೇಗೆ?

ಪೇಮೆಂಟ್ ಸೌಲಭ್ಯ ಪಡೆಯುವುದು ಹೇಗೆ?

* ಪೇಮೆಂಟ್ ಸೌಲಭ್ಯವನ್ನು ಪಡೆದುಕೊಳ್ಳಲು ಮೊದಲು ಪ್ಲೇ ಸ್ಟೋರ್‌ನಲ್ಲಿ ವಾಟ್ಸಾಪ್‌ಅನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು.

* ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ವಾಟ್ಸಾಪ್ ಚಾಟ್ ವಿಂಡೋ ತೆರೆದು ಬಲಭಾಗದಲ್ಲಿ ಲಂಬವಾಗಿರುವ ಮೂರು ಚುಕ್ಕಿಗಳ ಸಾಲಿನ ಮೇಲೆ ಕ್ಲಿಕ್ ಮಾಡಬೇಕು.

* ಆಗ ತೆರೆದುಕೊಳ್ಳುವ ಪಟ್ಟಿಯಲ್ಲಿ ಪೇಮೆಂಟ್ ಆಯ್ಕೆ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಬೇಕು.

* ಪೇಮೆಂಟ್ ವಿಂಡೋ ತೆರೆದುಕೊಂಡ ಬಳಿಕ ಆಡ್ ನ್ಯೂ ಪೇಮೆಂಟ್ ಮಾದರಿಯ ಮೇಲೆ ಒತ್ತಬೇಕು.

* 'ಅಕ್ಸೆಪ್ಟ್' (ಸ್ವೀಕೃತಿ) ಒತ್ತಿ ಮುಂದಿನ ಚಟುವಟಿಕೆಗೆ ಅವಕಾಶ ನೀಡಬೇಕು.

* ಅಕ್ಸೆಪ್ಟ್ ಮೇಲೆ ಕ್ಲಿಕ್ ಮಾಡಿದ ಬಳಿಕ ಅದು ಮತ್ತೊಂದು ಹೊಸ ಗವಾಕ್ಷಿಗೆ ನಿಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ವಾಟ್ಸಾಪ್ ಜತೆ ಪಾಲುದಾರಿಕೆ ಹೊಂದಿರುವ ಬ್ಯಾಂಕ್‌ಗಳ ಪಟ್ಟಿ ಕಾಣಿಸಲಿದೆ.

ಮೊಬೈಲ್ ಸಂಖ್ಯೆ ಅಗತ್ಯ

ಮೊಬೈಲ್ ಸಂಖ್ಯೆ ಅಗತ್ಯ

* ಈ ಪಟ್ಟಿಯಿಂದ ನಿಮ್ಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ ಫೋನ್ ನಂಬರ್ ಬಳಿ ಖಾತೆಯನ್ನು ಖಾತರಿಪಡಿಸಿ. ಬ್ಯಾಂಕ್‌ನಲ್ಲಿ ನೀವು ನೋಂದಾಯಿಸಿರುವ ಮೊಬೈಲ್ ಸಂಖ್ಯೆಯನ್ನೇ ಬಳಸಬೇಕು.

* ವಾಟ್ಸಾಪ್‌ಗೆ ನಿಮ್ಮ ಖಾತೆಯನ್ನು ಪರಿಶೀಲಿಸಲು ಅವಕಾಶ ನಡೆಸಿ, ಅಧಿಕೃತತೆಗಾಗಿ ಸಂದೇಶ ಕಳುಹಿಸಬೇಕು.

* ನೀವು ನಿಮ್ಮ ಸಂಖ್ಯೆಯನ್ನು ದಾಖಲಿಸಿದಾಗ ವಾಟ್ಸಾಪ್ ನಿಮ್ಮ ಬ್ಯಾಂಕ್‌ಅನ್ನು ಪರಿಶೀಲಿಸುತ್ತದೆ ಮತ್ತು ಪೇಮೆಂಟ್ ಸೆಟ್‌ಅಪ್ ಮಾಡುತ್ತದೆ.

* ಈ ಪ್ರಕ್ರಿಯೆ ಅಂತ್ಯಗೊಂಡು ನಿಮಗೆ ಪೇಮೆಂಟ್ ಪುಟಕ್ಕೆ ಅವಕಾಶ ನೀಡುತ್ತದೆ.

ಹಣ ಕಳುಹಿಸುವುದು ಹೇಗೆ?

ಹಣ ಕಳುಹಿಸುವುದು ಹೇಗೆ?

*ಯಾರಿಗೆ ಹಣ ಕಳುಹಿಸಬೇಕೋ ಅವರ ಸಂಪರ್ಕ ಆಯ್ಕೆ ಮಾಡಿಕೊಳ್ಳಿ

* ಚಾಟ್ ವಿಂಡೋದಲ್ಲಿ ವಾಟ್ಸಾಪ್ ಪೇಮೆಂಟ್ ಐಕಾನ್ ಕ್ಲಿಕ್ ಮಾಡಿ

* ರೂಪಾಯಿ ಐಕಾನ್ ಆಯ್ಕೆ ಮಾಡಿ

* ಕಳುಹಿಸಬೇಕಾದ ಹಣದ ಮೊತ್ತ ದಾಖಲಿಸಿ, ಅಗತ್ಯವಿದ್ದರೆ ಟಿಪ್ಪಣಿ ಬರೆಯಬಹುದು.

* ನಿಮ್ಮ ಚಾಟ್ ವಿಂಡೋದಲ್ಲಿ ಖಚಿತತೆಯ ಸಂದೇಶ ಬರುವವರೆಗೂ ಕಾಯಿರಿ.

English summary
Whatsapp has launched WhatsApp Pay feature in India. Here we explained how to setup and use the feature in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X