ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಪ್ರದೇಶದ ಮಳೆ, ಹವಾಮಾನ ಮುನ್ಸೂಚನೆ ತಿಳಿಯಲು 'MAUSAM' ಆಪ್ ಡೌನ್‌ಲೋಡ್ ಮಾಡಿ

|
Google Oneindia Kannada News

ಬೆಂಗಳೂರು, ಅಕ್ಟೊಬರ್, 21: ಬೆಂಗಳೂರು, ಕರ್ನಾಟಕ ಮತ್ತು ದೇಶದ ಹವಾಮಾನ ಬದಲಾವಣೆ, ಮಳೆ ಮಾಹಿತಿಯನ್ನು ಕುಳಿತಲ್ಲಿಯೇ ನಿಖರವಾಗಿ ತಿಳಿದುಕೊಳ್ಳಬಹುದು. ನಿಮ್ಮ ಮೊಬೈಲ್‌ನಲ್ಲಿಯೇ ನೀವಿರುವ ಊರು, ಪ್ರದೇಶ, ನಗರ, ರಾಜ್ಯದ ಮಳೆ, ತಾಪಮಾನ, ಸೂರ್ಯೋದಯ, ಚಂಡಮಾರುತ ಸೇರಿದಂತೆ ಒಟ್ಟಾರೆ ಹವಾಮಾನದ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

ಇದಕ್ಕಾಗಿ ಸರ್ಕಾರಿ ಸ್ವಾಮ್ಯದ ಭಾರತೀಯ ಹವಾಮಾನ ಇಲಾಖೆಯ (IMD) ಸಾರ್ವಜನಿಕರಿಗೆ 'ಮೌಸಮ್ (MAUSAM)' ಮೊಬೈಲ್ ಅಪ್ಲಿಕೇಷನ್ ಒಂದನ್ನು ಈಗಾಗಲೇ ಪರಿಚಯಿಸಿದೆ. ಇನ್ನುಮುಂದೆ ಹವಾಮಾನ ವರದಿಯನ್ನು ನಿರ್ದಿಷ್ಟವಾಗಿ ತಿಳಿದುಕೊಳ್ಳುವ ಈ ಅಧಿಕೃತ ಆಪ್ ಸಹಾಯಕ್ಕೆ ಬರುತ್ತದೆ. ಅದನ್ನು ನೀವು ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡು ಲಾಗಿನ್ ಆಗಬಹುದು.

ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶಾದ್ಯಂತ ಮುಂಗಾರು ಋತುವಿನಲ್ಲಿ ಮಳೆ ಆರ್ಭಟ ಜೋರಾಗಿತ್ತು. ಈಗಲೂ ಸಹ ಯಾವಗೆಂದರೆ ಆವಾಗ ಮಳೆ ಬೀಳುತ್ತಿದೆ. ಪದೇ ಪದೆ ಹವಾಮಾನ ವೈಪರಿತ್ಯಗಳು ಘಟಿಸುತ್ತಿವೆ. ಆಗಿಂದಾಗ್ಗೆ ಜನಜೀವನ ಅಸ್ತವ್ಯಸ್ತವಾಗಿ, ಮಳೆ ಯಿಂದ ಜನರು ತೊಂದರೆ ಅನುಭಿಸುತ್ತಿದ್ದಾರೆ. ಈ ಆಪ್ (MAUSAM) ಮೂಲಕ ಜನ ನಿರ್ದಿಷ್ಟವಾಗಿ ಮಳೆ ಮುನ್ಸೂಚನೆ ಅರಿತರೆ ಮಳೆಗಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ.

'ಮೌಸಮ್ (MAUSAM)' ಬಳಕೆ ಹೇಗೆ?

'ಮೌಸಮ್ (MAUSAM)' ಬಳಕೆ ಹೇಗೆ?

ನೀವು ಮೊದಲು ನಿಮ್ಮ ಆಂಡ್ರಯ್ಡ್ ಮೊಬೈಲ್ ಫೋನಿನಲ್ಲಿನ ಪ್ಲೇಸ್ಟೋರ್ ಮೂಲಕ 23ಎಂಬಿ ಗಾತ್ರದ MAUSAM ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ನೇರವಾಗಿ ಲಾಗಿನ್ ಆಗಬಹುದು. ನಂತರ ಕನ್ನಡ, ಇಂಗ್ಲಿಷ್, ಹಿಂದಿ, ತಲುಗು ಸೇರಿದಂತೆ ಒಟ್ಟು 13ಭಾಷೆಗಳಲ್ಲಿ ಇಲ್ಲಿ ಮಾಹಿತಿ ಪಡೆಯಬಹುದಾಗಿದೆ. ನಿಮ್ಮ ಮೊಬೈಲ್ ಲೋಕೇಷನ್ ಆನ್‌ ಮಾಡಿಟ್ಟುಕೊಂಡು ಈ ಅಪ್ಲಿಕೇಷನ್ ಬಳಸಬೇಕಿದೆ.

ನಿಮ್ಮ ಇಷ್ಟದ ಭಾಷೆ ಆಯ್ಕೆ ಮಾಡಿಕೊಂಡ ಮೇಲೆ ಅಪ್ಲಿಕೇಷನ್ ಹೋಮ್ ಪೇಜ್‌ನಲ್ಲಿ ಭಾರತದ ನಕಾಶೆ ಸಹಿತ ಪ್ರಮುಖ ಹವಾಮಾನ ಕೇಂದ್ರಗಳ ಪರದೆ ಕಾಣಸುತ್ತದೆ. ಹೋಮ್ ಪೇಜಿನ ಎಡಭಾಗದ ಮೇಲೆ ಮೂರು ಗೆರೆಗಳ ಮೇಲೆ ಟ್ಯಾಪ್ ಮಾಡಿದರೆ ಅಲ್ಲಿ 'ಮೆಚ್ಚಿನವುಗಳು(Favourite), ಎಚ್ಚರಿಕೆ (Warning), ಚಂಡಮಾರುತ (Cyclone) ಮತ್ತು ಮಿಂಚಿನ ಎಚ್ಚರಿಕೆ (Lightning Alert)'ಯ ಉಪ ಆಯ್ಕೆಗಳ ಪರದೆ ತೆರೆದುಕೊಳ್ಳತ್ತದೆ.

ದೇಶದ ಪ್ರಮುಖ ನಗರ/ಜಿಲ್ಲೆಗಳ ಹವಾಮಾನ ಮುನ್ಸೂಚನೆ

ದೇಶದ ಪ್ರಮುಖ ನಗರ/ಜಿಲ್ಲೆಗಳ ಹವಾಮಾನ ಮುನ್ಸೂಚನೆ

'ಮೆಚ್ಚಿನವುಗಳು(Favourite)' ಆಯ್ಕೆ ಮಾಡಿಕೊಂಡರೆ ಸರ್ಚ್ ಆಯ್ಕೆ ಮೂಲಕ ನೀವು ಭಾರತದ ಪ್ರಮುಖ ನಗರಗಳು, ಎಲ್ಲ ರಾಜ್ಯಗಳು ಹಾಗೂ ಬೆಂಗಳೂರು ನಗರ, ಬಾಗಲಕೋಟೆ, ಬೆಳಗಾವಿ, ಹಾಸನ ಸೇರಿದಂತೆ ಪ್ರಮುಖ ಜಿಲ್ಲೆಗಳನ್ನು ನೀವು ನಿಮ್ಮ ಮೆಚ್ಚಿನ ಪ್ರದೇಶಗಳೆಂದು ಹುಡುಕಿಟ್ಟುಕೊಳ್ಳಬಹುದು. ಹೀಗೆ ಮಾಡಿದ ನಂತರ ನಿಮ್ಮ ಇಷ್ಟದ ಪ್ರದೇಶಗಳ ಮಳೆ, ಗರಿಷ್ಠ-ಕನಿಷ್ಠ ತಾಪಮಾನ , ಸೂರ್ಯೋದಯ-ಸೂರ್ಯಾಸ್ತ, ಮಳೆ ಯಾವ ಪ್ರಮಾಣದಲ್ಲಿ ಬರಲಿದೆ, ಅದರ ಸಮಯ, ಗಾಳಿಯ ವೇಗ, ನೀರಿನ ಆರ್ದ್ರತೆ ಸೇರಿದಂತೆ ವಿವಿಧ ಮುನ್ಸೂಚನೆ ನಿಮಗೆ ಸಿಗಲಿದೆ. ಮುಖ್ಯವಾಗಿ ನಿಮ್ಮಿಷ್ಟದ ಸ್ಥಳದ ಒಂದು ವಾರದ ಹವಾಮಾನ ಮುನ್ಸೂಚನೆ ಬಗ್ಗೆಯು ಈ ಆಪ್ ಮಾಹಿತಿ ಒದಗಿಸಲಿದೆ.

ಫೇವ್‌ರೀಟ್ ಆಯ್ಕೆಯಲ್ಲಿ 7 ದಿನ ಮುನ್ಸೂಚನೆ

ಫೇವ್‌ರೀಟ್ ಆಯ್ಕೆಯಲ್ಲಿ 7 ದಿನ ಮುನ್ಸೂಚನೆ

'ಮೆಚ್ಚಿನವುಗಳು(Favourite)' ವಿಭಾಗದಲ್ಲಿ ಇಂದಿನಿಂದ ಮುಂದಿನ ಏಳುದಿನಗಳ ವರೆಗೆ ನಿಮ್ಮ ಪ್ರದೇಶದಲ್ಲಿನ ಮಳೆ, ಚಂಡಮಾರುತ, ಮಿಂಚು ಕುರಿತು ಮಾಹಿತಿ ಪ್ರದರ್ಶನವಾಗುತ್ತದೆ. ಬಿಸಿಲು ಅಥವಾ ಮೋಡ ಕವಿದ ವಾತಾವರಣ ಇದಲ್ಲಿ ಅದನ್ನು ಸಾಂಕೇತಿಕವಾಗಿ ತೋರಿಸುತ್ತದೆ.

'ಚಂಡಮಾರುತ (Cyclone) ಆಯ್ಕೆಗೆ ಬಳಸಿದರೆ ಎಲ್ಲರಿಗಿಂತ ಮೊದಲೇ ನೀವು ಸಂಭವನೀಯ ಸೈಕ್ಲೋನ್ ಬಗ್ಗೆ ತಿಳಿದುಕೊಳ್ಳಬಹುದು. ಈ ಆಯ್ಕೆಯು ಚಂಡಮಾರುತದ ಸಂಕೇತ ಭಾರತದ ಭೂಪಟ, ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯ ನಕ್ಷೆ ಸಹಿತ ಚಂಡಮಾರುತ ಮುನ್ಸೂಚನೆ ತಿಳಿಸುತ್ತದೆ. ಸೈಕ್ಲೋನ್, ವಾಯುಭಾರತ ಕುಸಿತದ ಮುನ್ಸೂಚನೆ ಇದ್ದರೆ, ನಕ್ಷೆಯಲ್ಲಿ ಮಾರ್ಕ್ ಮಾಡಲಾಗಿರುತ್ತದೆ. ಜೊತೆಗೆ ಚಡಮಾರುತ ರಾಷ್ಟ್ರೀಯ ಬುಲೆಟಿನ್ ಸಹ ನೀವು ನೋಡಬಹುದಾಗಿದೆ.

20-40ಕಿ.ಮೀಟರ್‌ ವ್ಯಾಪ್ತಿಯ 'ಮಿಂಚಿನ ಎಚ್ಚರಿಕೆ'

20-40ಕಿ.ಮೀಟರ್‌ ವ್ಯಾಪ್ತಿಯ 'ಮಿಂಚಿನ ಎಚ್ಚರಿಕೆ'

ಅಪ್ಲಿಕೇಷನ್‌ ಹೋಮ್‌ ಪೇಜ್‌ನ ಬಲಭಾಗದ ಮೇಲೆ ಕಾಣುವ ಮೂರು ಗೆರೆ ಟ್ಯಾಪ್ ಮಾಡಿದರೆ ನಿವು ಕೊನೆಯದಾಗಿ ನೋಡಿದ ಇಷ್ಟ ಪ್ರದೇಶಗಳ ಹವಾಮಾನದ ಒಟ್ಟಾರೆ ಮುನ್ಸೂಚನೆ ಹಾಗೂ ಹಾಲಿ ವಾತಾವರಣದ ಚಾಟ್‌ ತೆರೆದುಕೊಳ್ಳುತ್ತದೆ. ಅದೇ ಪುಟದಲ್ಲಿ ನೀವು ಬೇರೆ ಬೇರೆ ಇಷ್ಟ ಸ್ಥಳದ ಮಾಹಿತಿ ಪಡೆಯಬಹುದು. ಮುಖಪುಟದಲ್ಲಿ ಅಲಾರಾಮ್ ಸಂಕೇತದಿಂದ ಎಚ್ಚರಿಕೆಯ ಅಂಶಗಳನ್ನು ಗಮನಿಸಬಹುದು.

ಅದೇ ರೀತಿ 'ಮಿಂಚಿನ ಎಚ್ಚರಿಕೆ' ವಿಭಾಗದಲ್ಲಿ ನೀವಿರುವ ಸ್ಥಳದ 20-40ಕಿ.ಮೀಟರ್‌ವರೆಗೆ ಮಳೆಗೂ ಮುನ್ನ ಅಥವಾ ಮಳೆಯ ಜೊತೆಗೆ ಮಿಂಚು ಬೀಳುವುದಿದ್ದರೆ ಅದರ ಮಾಹಿತಿಯನ್ನು ಈ ವಿಭಾಗ ನೀಡುತ್ತದೆ. ಮುಂದಿನ 5 ನಿಮಿಷದವರೆಗೆ, 5-10 ನಿಮಿಷದವರೆಗೆ ಹಾಗೂ 10ರಿಂದ 15 ನಿಮಿಷದವರೆಗಿನ ಮಿಂಚಿನ ಮಾಹಿತಿ ನೀಡುತ್ತದೆ. ಒಂದು ವೇಳೆ ಯಾವುದೇ ಮುನ್ಸೂಚನೆ ಇಲ್ಲದಿದ್ದರೆ ಇಲ್ಲ (No lightning warning) ಎಂದು ತಿಳಿಸುತ್ತದೆ.

English summary
Indian Meteorological Department (IMD) MAUSAM mobile App provides to full information about rain and weather of your place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X