Childrens: ನಿಮ್ಮ ಮಗುವಿನಲ್ಲಿರುವ ಕ್ರಿಯೇಟಿವಿಟಿಗೆ ಇರಲಿ ಪ್ರೋತ್ಸಾಹ

ಮಕ್ಕಳ ಮನಸು ಬಿಳಿ ಹಾಳೆ ಇದ್ದಂಗೆ. ಹುಟ್ಟಿದ ಮಗುವೊಂದು ಎರಡು ಮೂರು ವರ್ಷಗಳವರೆಗೆ ತಾನು ನೋಡುವುದನ್ನು, ಕೇಳುವುದನ್ನು ಬಣ್ಣ ಹಾಗೂ ಚಿತ್ರದ ರೂಪದಲ್ಲಿಯೇ ಅರ್ಥ ಮಾಡಿಕೊಳ್ಳಲು, ಪ್ರತಿಕ್ರಿಯಿಸಲು ಮುಂದಾಗುತ್ತದೆ. ಈ ಸೃಜನಶೀಲತೆಯನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳುವುದು ಹೇಗೆಂಬುದರ ಕುರಿತು ಈ ಸ್ಟೋರಿಯಲ್ಲಿ ನೋಡೋಣ.

ತನ್ನಿಷ್ಟದಂತೆ ಗೀಚುವುದಕ್ಕೆ ಬಿಡಿ

ಮಗುವೊಂದು ಪ್ರಾರಂಭದಲ್ಲಿ ತನ್ನ ಕೈಬೆರಳುಗಳಲ್ಲೆ ಆಟವಾಡುತ್ತಾ ಪ್ರತಿಕ್ರಿಯಿಸುತ್ತಿರುತ್ತದೆ. ನಂತರ ಮಗು ತನ್ನ ಕೈ ಬೆರಳುಗಳಲ್ಲಿ ವಸ್ತುವೊಂದನ್ನು ಹಿಡಿದುಕೊಳ್ಳಲು ಸಾಧ್ಯವಾದಾಗ ಆ ವಸ್ತುವಿನ ಮೂಲಕವೇ ತನ್ನ ಆಲೋಚನೆಯನ್ನು ಅಭಿವ್ಯಕ್ತಿಸುತ್ತದೆ. ಇಂತಹ ಸಂದರ್ಭದಲ್ಲಿ ಪೆನ್ನು, ಪೆನ್ಸಿಲ್ ಮೂಲಕ ಮಕ್ಕಳು ಮನೆಯ ಗೋಡೆಯ ಮೇಲೆ, ನೆಲ ಹೀಗೆ ತನಗೆ ಎಟಕುವ ಕಡೆಗಳಲ್ಲಿ ತನ್ನ ಗೀಚುತ್ತಾರೆ.

How to Keep Children s Creativity Alive Here Are the Tips

ಹಿರಿಯರಾದ ನಾವು ಮಕ್ಕಳು ಮೂಡಿಸುವ ಗೆರೆಗಳನ್ನು ತಾತ್ಸಾರವಾಗಿ ಕಾಣುತ್ತೇವೆ. ಗೋಡೆ ಹಾಳಾಯಿತೆಂದು ಭಾವಿಸಿ ಮಕ್ಕಳಿಗೆ ಗೋಡೆಯ ಮೇಲೆ ಬರೆಯಬಾರದೆಂದು ಎಚ್ಚರಿಕೆ ನೀಡುತ್ತೇವೆ. ಇದರಿಂದಾಗಿ ಮಕ್ಕಳಿಗೆ ಅಭಿವ್ಯಕ್ತಿಗೆ ಇರುವ ಏಕೈಕ ಮಾಧ್ಯಮವನ್ನು ಹಿರಿಯರಾದ ನಾವು ಮೊಟಕುಗೊಳಿಸುತ್ತೇವೆ. ಹೀಗಾಗಿ ಪೋಷಕರಾದ ನಾವು ಮಕ್ಕಳ‌ ಸೃಜನಶೀಲತೆಯ ಸ್ವರೂಪಗಳ ಕುರಿತು ಜಾಗೃತಿಗೊಳ್ಳಬೇಕಿದೆ.

ನಿಮ್ಮ ಅಭಿಪ್ರಾಯ ಹೇರಬೇಡಿ

ಮಕ್ಕಳಿಗೂ ಹಲವಾರು ವಿಷಯಗಳ ಕುರಿತು ಹೇಳಲಿಕ್ಕೆ ಅಭಿಪ್ರಾಯಗಳಿರುತ್ತವೆ ಎಂಬುದನ್ನು ಹಿರಿಯರಾದ ನಾವು ಅರ್ಥ ಮಾಡಿಕೊಳ್ಳುವುದಿಲ್ಲ. ಹಿರಿಯರು ಹೇಳಿದನ್ನು ಚಾಚು ತಪ್ಪದೆ ಪಾಲಿಸುವುದಷ್ಟೆ ಮಕ್ಕಳ ಕರ್ತವ್ಯವೆಂದು ಭಾವಿಸುವವರೇ ಹೆಚ್ಚಾಗಿದ್ದಾರೆ. ಇದರಿಂದ ಮಕ್ಕಳು ಕ್ರಮೇಣವಾಗಿ ಆಲೋಚಿಸುವುದನ್ನೆ ನಿಲ್ಲಿಸಿಬಿಡುತ್ತಾರೆ. ಆಲೋಚಿಸುವುದಿಲ್ಲವೆಂದರೆ ಪ್ರಶ್ನೆಗಳೇ ಇರುವುದಿಲ್ಲ, ಇಂತಹ ಮನಃಸ್ಥಿತಿ ಸೃಜನಶೀಲತೆಗೆ ಮಾರಕವಾದದ್ದು. ಹೀಗಾಗಿ ಪಾಲಕರಾದ ನಾವು ಮಕ್ಕಳ ಅಭಿಪ್ರಾಯಕ್ಕೆ ಮೊದಲ ಆದ್ಯತೆ ಕೊಡಬೇಕು.

ಅವರ ಸಾಮರ್ಥ್ಯವನ್ನು ಗುರುತಿಸಿ

ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಅನ್ನುವ ಹಾಗೆ ಪ್ರತಿಯೊಂದು ಮಗುವಿನಲ್ಲಿಯೂ ಸೃಜನಶೀಲತೆ ಎನ್ನುವುದು ಸ್ವಾಭಾವಿಕವಾಗಿಯೇ ಇರುವಂತಹದ್ದು. ಆದರೆ, ಒಂದೊಂದು ಮಗುವಿನಲ್ಲಿ ಒಂದು ರೀತಿಯಲ್ಲಿ‌ ಇರುತ್ತದೆ. ಒಂದು ಮಗು ಓದುವುದರಲ್ಲಿ ತುಂಬಾ ಆಸಕ್ತಿ ವಹಿಸಿದ್ದರೆ, ಮತ್ತೊಂದು ಮಗು ಚಿತ್ರಕಲೆಯಲ್ಲಿ, ಡ್ಯಾನ್ಸ್ ಮಾಡುವುದರಲ್ಲಿ ಹೆಚ್ಚು ಕ್ರಿಯಾಶೀಲನಾಗಿರಬಹುದು. ಇಂತಹ ಮಕ್ಕಳಲ್ಲಿ ಸೂಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸುವಂತಹ ಜವಾಬ್ದಾರಿ ಪೋಷಕರ, ಶಿಕ್ಷಕರದಾಗಿರುತ್ತದೆ ಎಂಬುದನ್ನು ಮರೆಯಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+