ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಧ್ಯಾ ಸುರಕ್ಷಾ ಯೋಜನೆ- ಪ್ರಯೋಜನ, ಅರ್ಜಿ, ಅರ್ಹತೆ ಇತ್ಯಾದಿ ಮಾಹಿತಿ

|
Google Oneindia Kannada News

ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಸಂಧ್ಯಾ ಸುರಕ್ಷಾ ಯೋಜನೆ ಜಾರಿಯಲ್ಲಿದೆ. ಅರ್ಹ ಫಲಾನುಭವಿಗಳಿಗೆ ತಿಂಗಳಿಗೆ ಒಂದು ಸಾವಿರ ರೂ ಹಣವನ್ನು ರಾಜ್ಯ ಸರಕಾರ ಒದಗಿಸುತ್ತದೆ.

ಹಿರಿಯ ನಾಗರಿಕರ ಭದ್ರತೆಗೆಂದು ಸರಕಾರ ರೂಪಿಸಿರುವ ಯೋಜನೆಗಳಲ್ಲಿ ಸಂಧ್ಯಾ ಸುರಕ್ಷಾ ಕೂಡ ಒಂದು. ಮಾಸಿಕ ಪಿಂಚಣಿ ಜೊತೆಗೆ ವೈದ್ಯಕೀಯ ನೆರವು, ಬಸ್ ಪಾಸ್ ರಿಯಾಯಿತಿ ಇತ್ಯಾದಿ ಸೌಲಭ್ಯಗಳನ್ನು ಸರಕಾರ ನೀಡುತ್ತದೆ.

ಜನಸೇವಕ ತಿಳಿದಿರಿ; ವೃದ್ಧರ ಪಿಂಚಣಿ ಸೇರಿದಂತೆ 80 ಸರಕಾರಿ ಸೇವೆಗಳು ನಿಮ್ಮ ಮನೆಬಾಗಿಲಿಗೆಜನಸೇವಕ ತಿಳಿದಿರಿ; ವೃದ್ಧರ ಪಿಂಚಣಿ ಸೇರಿದಂತೆ 80 ಸರಕಾರಿ ಸೇವೆಗಳು ನಿಮ್ಮ ಮನೆಬಾಗಿಲಿಗೆ

ಹಾಗೆಯೇ, ವೃದ್ಧಾಶ್ರಮಗಳನ್ನು ಸ್ಥಾಪಿಸಲು ಎನ್‌ಜಿಒಗಳಿಗೆ ಸರಕಾರ ಸಹಾಯ ಮಾಡುತ್ತದೆ. ಎನ್‌ಜಿಒಗಳ ಮೂಲಕ ವೃದ್ಧರಿಗೆ ವೈದ್ಯಕೀಯ ವ್ಯವಸ್ಥೆ ಕೂಡ ಮಾಡುತ್ತದೆ. ಸಾಮಾನ್ಯವಾಗಿ ನಿಗದಿ ಸರಕಾರೇತರ ಸಂಸ್ಥೆಗಳು ಈ ಯೋಜನೆಯನ್ನು ಜಾರಿ ಮಾಡಲು ಸರಕಾರಕ್ಕೆ ಸಹಾಯ ಮಾಡುತ್ತವೆ.

ಈ ಯೋಜನೆಗೆ ಯಾರು ಅರ್ಹರು? ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇದಕ್ಕೆ ಬೇಕಾಗುವ ದಾಖಲೆಗಳೇನು, ಮಾನದಂಡಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ.

ಸಂಧ್ಯಾ ಸುರಕ್ಷಾ ಯೋಜನೆ ಲಾಭ

ಸಂಧ್ಯಾ ಸುರಕ್ಷಾ ಯೋಜನೆ ಲಾಭ

* ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ ತಿಂಗಳಿಗೆ ಒಂದು ಸಾವಿರ ರೂ ಸಿಗುತ್ತದೆ
* ಬಿಎಂಟಿಸಿ ಸೇರಿದಂತೆ ಕೆಎಸ್ಸಾರ್ಟಿಸಿ ಬಸ್‌ ಪಾಸುಗಳು ರಿಯಾಯಿತಿ ದರಕ್ಕೆ ಸಿಗುತ್ತದೆ
* ಫಲಾನುಭವಿಗಳಿಗೆ ಎನ್‌ಜಿಒಗಳ ಮೂಲಕ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತದೆ.
* ಹಿರಿಯ ನಾಗರಿಕರಿಗೆ ಸಹಾಯವಾಗಲೆಂದು ವೃದ್ಧಾಶ್ರಮ ಸ್ಥಾಪನೆಗೆ ಎನ್‌ಜಿಒಗಳಿಗೆ ಸರಕಾರ ನೆರವು ಕೊಡುತ್ತದೆ.
* ಈ ಯೋಜನೆಯ ಜಾರಿ ಮಾಡಲು ಸರಕಾರಕ್ಕೆ ನೆರವಾಗುವ ಎನ್‌ಜಿಒಗಳು ಯೋಜನೆಯ ಫಲಾನುಭವಿಗಳಿಗೆ ಐಡಿ ಕಾರ್ಡ್ ನೀಡುತ್ತದೆ. ಹೀಗೆ ಪ್ರತೀ ಐಡಿ ಕಾರ್ಡ್‌ ವಿತರಣೆ ಮಾಡಿದರೆ ಆ ಎನ್‌ಜಿಒಗೆ ಸರಕಾರ ೨೫ ರೂ ಸಹಾಯ ಒದಗಿಸುತ್ತದೆ
* ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಡೇ ಕೇರ್ ಕೇಂದ್ರಗಳನ್ನು ಸರಕಾರ ಸ್ಥಾಪಿಸುತ್ತದೆ.
* ಹಿರಿಯ ನಾಗರಿಕ ಸಹಾಯಕ್ಕಾಗಿ ವಿವಿಧ ಕಡೆ ಹೆಲ್ಪ್‌ಲೈನ್‌ಗಳನ್ನು ಒದಗಿಸಲಾಗುತ್ತದೆ. ಎನ್‌ಜಿಒಗಳಲ್ಲದೇ ಪೊಲೀಸ್ ಇಲಾಖೆ ಕೂಡ ಇಲ್ಲಿ ನೆರವಾಗುತ್ತದೆ.

Vehicle Fitness Certificate: ನಿಮ್ಮ ವಾಹನದ ಎಫ್‌ಸಿ ಮಾಡಿಸುವುದು ಹೇಗೆ?Vehicle Fitness Certificate: ನಿಮ್ಮ ವಾಹನದ ಎಫ್‌ಸಿ ಮಾಡಿಸುವುದು ಹೇಗೆ?

ಸಂಧ್ಯಾ ಸುರಕ್ಷಾ ಯೋಜನೆ ಯಾರಿಗೆ?

ಸಂಧ್ಯಾ ಸುರಕ್ಷಾ ಯೋಜನೆ ಯಾರಿಗೆ?

* ಈ ಯೋಜನೆಯ ಫಲಾನುಭವಿಯಾಗಿರುವವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ಇವರು 65ವರ್ಷ ಮೇಲ್ಪಟ್ಟ ವಯಸ್ಸಿನವರಾಗಬೇಕು
* ಅರ್ಜಿದಾರ ಮತ್ತವರ ದಂಪತಿಯ ಒಟ್ಟು ವಾರ್ಷಿಕ ಆದಾಯ 20 ಸಾವಿರ ರೂ ಮೀರಬಾರದು. ಇದನ್ನು ಸ್ಥಳೀಯ ರೆವೆನ್ಯೂ ಅಧಿಕಾರಿಯಿಂದ ಪ್ರಮಾಣ ಪತ್ರ ಪಡೆಯಬೇಕು.
* ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು ಈ ಪಂಗಡಗಳಲ್ಲಿನ ಬಡ ಕುಟುಂಬದ ವೃದ್ಧರಿಗೆ ಈ ಯೋಜನೆ ಇದೆ.
* ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ವಿಕಲಚೇತನರ ಪಿಂಚಣಿ ಅಥವಾ ಇತರ ಯೋಜನೆಗಳಿಂದ ಪಿಂಚಣಿ ಪಡೆಯುತ್ತಿರುವ ವ್ಯಕ್ತಿಗಳು ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.

ದಾಖಲೆಗಳು ಏನು ಬೇಕು?

ದಾಖಲೆಗಳು ಏನು ಬೇಕು?

* ವಾಸಸ್ಥಳ ದಾಖಲೆ
* ಆದಾಯ ಪ್ರಮಾಣಪತ್ರ
* ವಯಸ್ಸಿನ ದಾಖಲೆ (ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಾಸ್‌ಪೋರ್ಟ್, ಡಿಎಲ್, ರೇಷನ್ ಕಾರ್ಡ್, ವೋಟರ್ ಐಡಿ, ಟ್ರಾನ್ಸ್‌ಫರ್ ಸರ್ಟಿಫಿಕೇಟ್ ಆಗಬಹುದು)
* ಬ್ಯಾಂಕ್ ಪಾಸ್‌ಬುಕ್
* ತಹಶೀಲ್ದಾರರಿಂದ ಆಕ್ಯುಪೇಶನ್ ಸರ್ಟಿಫಿಕೇಟ್

ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಅರ್ಜಿ ನಮೂನೆ ಸಿಗುತ್ತದೆ. ಅದು ಬಿಟ್ಟರೆ ಉಳಿದಂತೆ ಪ್ರತಿಯೊಂದು ಕ್ರಮವೂ ಆಫ್‌ಲೈನ್‌ನಲ್ಲೇ ಮಾಡಬೇಕು. ಆನ್‌ಲೈನ್‌ನಲ್ಲಿ, ಅಥವಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಬೇಕು.

ನಂತರ ಅಗತ್ಯ ದಾಖಲೆಗಳ ಸಮೇತ ಅರ್ಜಿಯನ್ನು ಗ್ರಾಪಂ ಕಚೇರಿ, ಮುನಿಸಿಪಾಲ್ಟಿ ಕಚೇರಿ ಅಥವಾ ಬ್ಲಾಕ್ ಕಚೇರಿಯಲ್ಲಿ ಸಲ್ಲಿಸಬೇಕು.

(ಒನ್ಇಂಡಿಯಾ ಸುದ್ದಿ)

English summary
Karnataka government's Social Welfare department has this Sandhya Suraksha scheme that caters to senior citizens of poor family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X