ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯಾಗಲು ಸಂಬಳ ಎಷ್ಟಿರಬೇಕು? ಪಾಠ ಒಂದು...

By ಅಂಕಿತ್
|
Google Oneindia Kannada News

Recommended Video

ಮದುವೆಯಾಗಲು ಸಂಬಳ ಎಷ್ಟಿರಬೇಕು? | Oneindia Kannada

ಇದೊಂದು ಸಂಗತಿಯನ್ನು ಯಾರ ಮುಂದಾದರೂ ಹೇಳುವುದಕ್ಕೆ ಮೊದಮೊದಲಿಗೆ ಸಂಕೋಚ ಪಟ್ಟೆ. ಆದರೆ ನನಗಿಂತ ಚಿಕ್ಕವರಿಗೆ ಈಗ ಹೇಳಿಕೊಳ್ಳುವ ವಿಚಾರದಿಂದ ಸಹಾಯವೋ ಮಾರ್ಗದರ್ಶನವೋ ಆದರೆ ಆಗಲಿ ಎಂಬ ಧೋರಣೆಯಿಂದ ಅನುಭವ ಹಂಚಿಕೊಳ್ತಿದೀನಿ. ಈ ವಿಚಾರ ನಿಮ್ಮ ಜತೆ ಹೇಳಿಕೊಳ್ಳುವುದರ ಹಿಂದೆ ಯಾರನ್ನೋ ತೆಗಳುವ ಅಥವಾ ಬೇಸರಿಸುವ ಉದ್ದೇಶ ಇಲ್ಲ ಅನ್ನೋದನ್ನು ಮೊದಲಿಗೆ ಸ್ಪಷ್ಟ ಪಡಿಸ್ತಿದೀನಿ.

ಜಾತಿಯಿಂದ ಸ್ಮಾರ್ತ ಬ್ರಾಹ್ಮಣ ನಾನು. ವಯಸ್ಸು ಇಪ್ಪತ್ತೇಳು ವರ್ಷ. ನನ್ನ ತಂದೆ ರಿಟೈರ್ ಬ್ಯಾಂಕ್ ಉದ್ಯೋಗಿ. ನಾನು ಓದಿಕೊಂಡಿರುವುದು ಬಿ.ಕಾಂ., ಜತೆಗೆ ವಿಷಯಲ್ ಮೀಡಿಯಾಗೆ ಸಂಬಂಧಿಸಿದ ಕೋರ್ಸ್ ವೊಂದನ್ನು ಮಾಡಿದ್ದೀನಿ. ಈಗ ಮೂರು ವರ್ಷದಿಂದ ಪತ್ರಿಕೋದ್ಯಮದ ಒಂದು ವಿಭಾಗದಲ್ಲಿ ಕೆಲಸ ಮಾಡ್ತಿದ್ದೀನಿ.

ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್!ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್!

ಸಂಬಳ ಅಂತ ಇಪ್ಪತ್ತೈದರಿಂದ ಇಪ್ಪತ್ತೇಳು ಸಾವಿರ ರುಪಾಯಿ ಬರುತ್ತದೆ. ಈಚೆಗೆ ಮನೆಯಲ್ಲಿ ಮದುವೆಗೆ ವಧು ಅನ್ವೇಷಣೆ ಆರಂಭ ಮಾಡಿದ್ದಾರೆ. ಆ ಸಲುವಾಗಿ ಒಂದು ವಧು-ವರಾನ್ವೇಷಣೆ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಮ್ಮ ವಿವರಗಳನ್ನು ತುಂಬಬೇಕು. ಅಂದರೆ ಹೆಸರು, ಜಾತಕ, ಕುಟುಂಬದ ಹಿನ್ನೆಲೆ, ಸಂಬಳ- ಸವಲತ್ತು, ಸ್ವಂತ ಮನೆ ಅದೂ- ಇದೂ ಹೀಗೆ ಒಂದಷ್ಟು ಮಾಹಿತಿಯನ್ನು ಕೊಡಬೇಕು.

ಕನಿಷ್ಠ ಐವತ್ತು ಸಾವಿರ ಸಂಬಳ

ಕನಿಷ್ಠ ಐವತ್ತು ಸಾವಿರ ಸಂಬಳ

ಹೀಗೆ ಎಲ್ಲವನ್ನೂ ಭರ್ತಿ ಮಾಡಿದ ನಂತರ ಮದುವೆಗಿರುವ ಹೆಣ್ಣುಮಕ್ಕಳ ಆದ್ಯತೆ, ಎಂಥ ವರನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲಕ್ಕೆ ಒಂದಿಷ್ಟು 'ಪ್ರೊಫೈಲ್'ಗಳನ್ನು ನೋಡಿದೆ. ಬಹುತೇಕರ ಆದ್ಯತೆ ಕನಿಷ್ಠ ಐವತ್ತು ಸಾವಿರ ರುಪಾಯಿ ಸಂಬಳ ಪಡೆವ ವರನೇ ಆಗಿತ್ತು. ಇನ್ನೂ ಹಲವರಿಗೆ ವಿದೇಶದಲ್ಲಿ ಅದರಲ್ಲೂ ಅಮೆರಿಕದಲ್ಲೇ ಇರುವ ವರನಾದರೇ ಭೇಷ್.

ನಾನಾ ಕಾರಣಗಳು

ನಾನಾ ಕಾರಣಗಳು

ಇದ್ಯಾಕೆ ಹೀಗೆ ಅಂತ ಅಲ್ಲಿರುವವರನ್ನು ಕೇಳಿದೆ. ಅಲ್ಲಿ ಸಂಪಾದನೆ, ಸಾಮಾಜಿಕ ಭದ್ರತೆ, ಶಿಕ್ಷಣ ಇನ್ನೂ ಏನೇನೋ ಕಾರಣಗಳಿವೆ ಎಂದರು. ಅಲ್ಲೊಂದು ಶೃಂಗೇರಿ ಹುಡುಗಿಯ ಮಾಹಿತಿ ಕಣ್ಣಿಗೆ ಬಿತ್ತು. ಕುತೂಹಲಕ್ಕೆ ಕೈಗೆತ್ತಿಕೊಂಡು, ಒಂದೊಂದೇ ಓದುತ್ತಾ ಹೋದೆ. ಹುಡುಗನ ಸಂಬಳ ಎಷ್ಟಿರಬೇಕು ಎಂಬ ಕಾಲಂನ ಮುಂದಕ್ಕೆ ಓದಲು ಮನಸ್ಸೇ ಆಗಲಿಲ್ಲ. ಅಥವಾ ಧೈರ್ಯವೇ ಬರಲಿಲ್ಲ ಅಂದುಕೊಳ್ಳಿ. ಕಾರಣ ಏನೆಂದರೆ ತಿಂಗಳಿಗೆ ಒಂದು ಲಕ್ಷ ಅಂತ ಅದರಲ್ಲಿ ಬರೆದಿತ್ತು.

ಅರ್ಚಕರ ಮದುವೆಯಾದರೆ ಸರಕಾರದಿಂದ 3 ಲಕ್ಷ, ಮದುವೆ ಖರ್ಚಿಗೆ 1 ಲಕ್ಷಅರ್ಚಕರ ಮದುವೆಯಾದರೆ ಸರಕಾರದಿಂದ 3 ಲಕ್ಷ, ಮದುವೆ ಖರ್ಚಿಗೆ 1 ಲಕ್ಷ

ಗೌರವಯುತ ಜೀವನಕ್ಕೆ ತಕ್ಕಷ್ಟು ಸಂಬಳ

ಗೌರವಯುತ ಜೀವನಕ್ಕೆ ತಕ್ಕಷ್ಟು ಸಂಬಳ

ಇನ್ನೂ ಕೆಲವರು ಬೆಂಗಳೂರಲ್ಲಿ ಗೌರವಯುತವಾದ ಜೀವನ ನಡೆಸುವುದಕ್ಕೆ ಎಷ್ಟು ಸಂಬಳ ಬೇಕೋ ಅಷ್ಟು ಇರಬೇಕು ಎಂದು ತಮ್ಮ ಪ್ರಾಶಸ್ತ್ಯ ತಿಳಿಸಿದ್ದಾರೆ. ಗೌರವಯುತ ಜೀವನ ಅಂದರೆ ಎಷ್ಟು ಸಂಬಳ ಬರಬೇಕು ಎಂಬುದಕ್ಕೆ ನನಗೂ ಉತ್ತರ ಹೊಳೆಯಲಿಲ್ಲ. ಆದರೆ ಎಲ್ಲರ ವಿಚಾರಕ್ಕೂ ಇದೇ ಮಾತು ಅನ್ವಯಿಸುವುದೂ ಇಲ್ಲ.

ನಾನಾ ವಿಚಾರಗಳಿಗೆ ಪ್ರಾಮುಖ್ಯ

ನಾನಾ ವಿಚಾರಗಳಿಗೆ ಪ್ರಾಮುಖ್ಯ

ಅಲ್ಲಿಂದ ಬಂದ ನಂತರ ಒಳ್ಳೆ ಸಂಬಳದ ಕೆಲಸಗಳನ್ನು ಹುಡುಕ್ತಿದೀನಿ. ಅದೇ ರೀತಿ ಅದಕ್ಕೆ ಬೇಕಾದ ಕೋರ್ಸ್, ಕ್ವಾಲಿಫಿಕೇಷನ್ನು ಪಡೆಯುವುದಕ್ಕೂ ಪ್ರಯತ್ನಿಸುತ್ತಾ ಇದ್ದೀನಿ. ನಮ್ಮ ಓದು- ಸಂಬಳ- ಕುಟುಂಬದ ಹಿನ್ನೆಲೆ- ಸ್ವಂತ ಮನೆ, ಗುಣ- ಸ್ವಭಾವ ಹೀಗೆ ನಾನಾ ವಿಚಾರಗಳು ಮದುವೆಯಲ್ಲಿ ಮುಖ್ಯ ಆಗುತ್ತವೆ.

ಉಲ್ಟಾ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ

ಉಲ್ಟಾ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ

ಕಾಲೇಜಿನಲ್ಲಿ ಸಮಯ ಕಳೆದು, ಓದದೆ- ಅಗತ್ಯವಾದ ಕೋರ್ಸ್ ಗಳನ್ನು ಮಾಡದೆ ಇರುವವರು ಇದ್ದರೆ ಈಗಲಾದರೂ ಎಚ್ಚೆತ್ತುಕೊಳ್ಳಿ. ನಾನು ಹಾಗೂ ನನ್ನಂಥವರಿಂದ ಆದ ತಪ್ಪುಗಳು ನೀವು ಮಾಡಬೇಡಿ. ಮದುವೆ ಎಂಬುದು ಸಮಾಜದ ವ್ಯವಸ್ಥೆಯಲ್ಲಿ ಒಂದು ಭಾಗ. ಎಲ್ಲ ವಿಚಾರಗಳು ಒಟ್ಟಾಗಿ, ಎರಡು ಮನಸುಗಳು ಒಪ್ಪಿದರೆ ಮಾತ್ರ ಮದುವೆ. ಆದರೆ ಅದಕ್ಕೆ ಮುಖ್ಯವಾಗಿ ಬೇಕಾದದ್ದು ಸಿದ್ಧತೆ. ಒಳ್ಳೆ ಶಿಕ್ಷಣ, ಉದ್ಯೋಗ ಹಾಗೂ ಸಂಬಳ. ಹಾಗಿದ್ದರೆ ಆರೋಗ್ಯ ಇಲ್ಲದಿದ್ದರೆ, ಮದುವೆ ಆದ ಮೇಲೆ ಕೆಲಸ ಹೋಗಿಬಿಟ್ಟರೆ, ಒಳ್ಳೆತನ ಇಲ್ಲದಿದ್ದರೆ ಎಂದು ಉಲ್ಟಾ ಪ್ರಶ್ನೆ ಕೇಳಿದರೆ ನನ್ನ ಹತ್ತಿರ ಉತ್ತರ ಇಲ್ಲ.

English summary
How salary inter related to marriage proposals? Here is an experience shares by an individual, who is currently working in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X