ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಪಡೆಯುವ ಸರಿಯಾದ ಕ್ರಮ ಹೇಗೆ ?
ಪೂರ್ವಜರು ದೇವರ ದರ್ಶನದ ಕುರಿತು ಹಲವು ವಿಚಾರಗಳನ್ನ ನಮಗೆ ಹೇಳಿ ಕೊಟ್ಟಿರುತ್ತಾರೆ. ದೇವರ ದರ್ಶನದ ವಿಧಾನ, ದರ್ಶನದ ಕುರಿತು ಇರುವ ನೀತಿ ನಿಯಮಗಳನ್ನ ನಾವು ಅನುಸರಿಸುತ್ತಿರುವುದು ತುಂಬಾ ಕಡಿಮೆಯಾಗಿದೆ.
ದೇವರ ದರ್ಶನವನ್ನು ಪಡೆದುಕೊಳ್ಳಬೇಕೆನ್ನುವ ಬಯಕೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಆದರೆ, ದೇವರ ದರ್ಶನವನ್ನು ಪಡೆದುಕೊಳ್ಳುವುದು ಸುಲಭದ ಕೆಲಸವಲ್ಲ. ದೇವರ ದರ್ಶನ ಪಡೆದುಕೊಳ್ಳುವುದು ಹೇಗೆ..? ದೇವಸ್ಥಾನದಲ್ಲಿ ದೇವರ ದರ್ಶನವನ್ನ ಯಾವ ರೀತಿಯಲ್ಲಿ ಪಡೆಯುವುದರಿಂದ ಆಗುವ ಅನುಕೂಲಗಳು ಏನು? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ದರ್ಶನವನ್ನು ಸಾಮಾನ್ಯವಾಗಿ ಆರಾಧನೆಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಸಾಂಪ್ರದಾಯಿಕ ಹಿಂದೂ ಪೂಜಾ ವಿಧಿಗಳಲ್ಲಿ ಮಂತ್ರಗಳ ದೀರ್ಘ ಪಠಣ, ವಿವಿಧ ಆಚರಣೆಗಳು, ನಿರ್ದಿಷ್ಟ ಧ್ಯಾನಗಳು ಇತ್ಯಾದಿಗಳು ಸೇರಿಕೊಂಡಿರುತ್ತದೆ. ಆದರೆ, ದರ್ಶನವು ಭಕ್ತನಿಂದ ಬಹಳ ಕಡಿಮೆ ನಿರೀಕ್ಷೆಗಳನ್ನು ಹೊಂದಿದ್ದು, ಭಕ್ತನಿಗೆ ದೇವರನ್ನು ಕಂಡರೆ ಸಾಕೆನ್ನುವ ಬಯಕೆಯಿರುತ್ತದೆ.ಯಾವುದಾದರೂ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡಿಬೇಕು ಅನ್ನುವದಕ್ಕೆ ನಮ್ಮ ಪೂರ್ವಜರು ಸರಿಯಾದ ಕ್ರಮವನ್ನು ತಿಳಿಸುತ್ತಾರೆ .ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತದೆ ಎಂದು ಪೂರ್ವಜರು ತಿಳಿಸಿದ್ದಾರೆ.
ಹೌದು, ದೇವರ ದರ್ಶನಕ್ಕಾಗಿ ನಾವು ಯಾವುದೇ ಯಾತ್ರೆಗೆ ಹೋದಾಗ ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ಕೈಮುಗಿದು ಹೀಗೆ ಹೇಳಬೇಕು. ಪರಮಾತ್ಮ "ನೂರು ಕೋಟಿ ತಿರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವರಿಂದ ತತ್ವ ಉಪದೇಶ ಮಾಡಿಸು. ವೈಕುಂಠಕ್ಕೆ ಕರೆದೊಯ್ದು ನಿನ್ನ ದರುಶನ ಮಾಡಿಸು " ಎಂದು ಪ್ರಾರ್ಥಿಸಬೇಕು. ಆ ನಂತರ ಹೊರಗಿನಿಂದಲೇ ದೇವರ ದರ್ಶನ ಮಾಡಬೇಕು.
ಹೀಗೆ ಹೊರಗಿನಿಂದ ದರ್ಶನ ಮಾಡುವುದಕ್ಕೆ ಧೂಳಿದರ್ಶನ ಅಂತಾರೆ. 'ಧೂಳಿ ದರ್ಶನಂ ಪಾಪ ನಾಶನಂ' ಧೂಳಿದರ್ಶನ ದಿಂದ ಪಾಪ ನಾಶವಾಗುತ್ತೆ. ನಂತರ ತಲೆಯಲ್ಲಿರು ಚಿಂತಗಳನ್ನೇಲ್ಲ ಬಿಟ್ಟು ಶಿಖರ ದರ್ಶನ ಮಾಡಿ. 'ಶಿಖರ ದರ್ಶನಂ ಚಿಂತಾನಾಶನಂ'. ಆ ನಂತರ ದೇವಸ್ಥಾನ ಒಳಗೆ ಹೋಗುವಾಗ ಕೈಕಾಲುಗಳನ್ನು ತೊಳೆದು ದೇವಸ್ಥಾನ ಒಳಗಡೆ ಪ್ರವೇಶ ಮಾಡಿ ತಕ್ಷಣ ದೇವರ ವಿಗ್ರಹವನ್ನು ನೋಡ ಬೇಡಿ ಅದಕ್ಕೂ ಒಂದು ಕ್ರಮವಿದೆ .

ಮೊದಲು ಪಾದ ದರ್ಶನ ಮಾಡಿ: 'ಪಾದ ದರ್ಶನಂ ಪಾಪನಾಶನಂ '...ನಂತರ
ಕಟಿ ದರ್ಶನ: 'ಕಟಿ ದರ್ಶನಂ ಕಾಮನಾಶನಂ' ... ನಂತರ
ನಾಭಿ ದರ್ಶನ: 'ನಾಭಿ ದರ್ಶನಂ ನರಕ ನಾಶನಂ' ... ನಂತರ
ಕಂಠ ದರ್ಶನ: 'ಕಂಠ ದರ್ಶನಂ ವೈಕುಂಠ ಸಾಧನಂ' .. ನಂತರ
ಮುಖ ದರ್ಶನ: 'ಮುಖ ದರ್ಶನಂ ಮುಕ್ತಿ ಸಾಧನಂ' .. ನಂತರ
ಕಿರೀಟ ದರ್ಶನ: 'ಕೀರಿಟ ದರ್ಶನಂ ಪುನರ್ಜನ್ಮ ನಾಶನಂ' .. ನಂತರ
ಸರ್ವ ದರ್ಶನ: 'ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ' .ಸರ್ವಾಂಗ ದರ್ಶನ ಮಾಡಬೇಕು..ಇದು ದೇವರ ದರ್ಶನ ಮಾಡುವ ಕ್ರಮವಾಗಿದೆ.
ದೇವರ ದರ್ಶನದ ಬಳಿಕ ಪ್ರದಕ್ಷಣೆ ಹಾಕುವ ಕ್ರಮ ಇಲ್ಲಿದೆ
ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ದೇವರಿಗೆ ಪೂಜೆ ಹಾಗೂ ದೇವರ ದರ್ಶನದ ಬಳಿಕ ಜನರು ಸಾಮಾನ್ಯವಾಗಿ ಪ್ರದಕ್ಷಿಣೆ ಹಾಕುತ್ತಾರೆ. ಈ ಪ್ರದಕ್ಷಣೆಯನ್ನು ಮಾಡುವಾಗ ಧ್ಯಾನಸ್ಥ ಮನಸ್ಥಿತಿಯಲ್ಲಿ ಮಾಡಬೇಕು. ಮನಸ್ಸಿನಿಂದ ಮಾಡಿದ ಪಾಪಗಳು ಮೊದಲ ಹೆಜ್ಜೆಯಿಂದ, ಮಾತಿನಲ್ಲಿ ಮಾಡಿದ ಪಾಪಗಳು ಎರಡನೇ ಹೆಜ್ಜೆಯಿಂದ ಮತ್ತು ದೇಹದಿಂದ ಮಾಡಿದ ಪಾಪಗಳು ಮೂರನೇ ಹೆಜ್ಜೆಯಿಂದ ನಾಶವಾಗುತ್ತವೆ ಎಂದು ಇಂದ ಪುರಾಣ ಹೇಳುತ್ತದೆ.
ಪ್ರದಕ್ಷಣೆಯ ವಿಧಗಳು
ಸಾಮಾನ್ಯವಾಗಿ ಎಲ್ಲಾ ದೇವರಿಗೂ ಒಂದೇ ರೀತಿಯಲ್ಲಿ ಪ್ರದಕ್ಷಿಣೆಯನ್ನು ಹಾಕಲಾಗುವುದಿಲ್ಲ. ದೇವರಿಗೆ ತಕ್ಕಂತೆ ಪ್ರದಕ್ಷಿನ ಹಾಕುವ ಸಂಖ್ಯೆಯು ಭಿನ್ನವಾಗುತ್ತದೆ. ಗಣೇಶನಿಗೆ ಒಂದು, ಸೂರ್ಯ ಮತ್ತು ಶಿವನಿಗೆ ಮೂರು, ದೇವಿ ಮತ್ತು ವಿಷ್ಣುವಿಗೆ ನಾಲ್ಕು ಹಾಗೂ ಅರಳಿ ಮರಕ್ಕೆ ಏಳು ಬಾರಿ ಪ್ರದಕ್ಷಿಣೆಯನ್ನು ಹಾಕಲಾಗುತ್ತದೆ. ಹೀಗಾಗಿ ದೇವರಿಗೆ ಪ್ರದಕ್ಷಣೆ ಹಾಕುವ ಮುನ್ನ ಯೋಚಿಸಿ ಪ್ರದಕ್ಷಣೆ ಹಾಕಬೇಕು. ಮುಂದೆ ನಡೆಯುವಾಗ ಪಾದದ ಹಿಮ್ಮಡಿಯು ಇನ್ನೊಂದು ಕಾರಳುಗಳನ್ನು ಮುಟ್ಟಿಸುತ್ತಾ ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಣೆ ಹಾಕುವ ಮುನ್ನ ದೇವಾಲಯದ ಕೊಳ ಅಥವಾ ಬಾವಿಯಲ್ಲಿ ಸ್ನಾನ ಮಾಡಿದ ನಂತರ, ಒದ್ದೆಯಾದ ಬಟ್ಟೆಯಲ್ಲಿ ದೇವರ ಹೆಸರನ್ನು ಜಪಿಸುತ್ತಾ ದೇವಸ್ಥಾನದ ಸುತ್ತಲೂ ಸುತ್ಬೇಕು. ದೇವರ ನಾಮವನ್ನ ಜಮಿಸುತ್ತಾ ಪ್ರದಕ್ಷಣೆ ಹಾಕಬೇಕು.












Click it and Unblock the Notifications