Get Updates
Get notified of breaking news, exclusive insights, and must-see stories!

ಗದಗ ಜಿಲ್ಲೆಯ ಭೈರಾಪುರದಲ್ಲಿ ಹಿಟ್ಲರ್ ಮುಖ ಹೋಲುವ ಅಪರೂಪದ ಕೀಟ ಪತ್ತೆ

ಗದಗ, ನವೆಂಬರ್‌, 14: ಗದಗ ಜಿಲ್ಲೆಯ ಭೈರಾಪುರ ಬೆಟ್ಟದಲ್ಲಿ ಮನಷ್ಯನ ಮುಖ ಹೊಲುವ ಹಿಟ್ಲರ್ ಕೀಟವೊಂದು ಪತ್ತೆ ಆಗಿದೆ. ಪೆಂಟ್ಯಾಟೊಮಿಡೆ(Pentatomidae) ಜಾತಿಗೆ ಸೇರಿದ ಮಾನವನ ಮುಖ ಹೊಲುವ ಅಪರೂಪದ ಕೀಟ ಇದಾಗಿದೆ.

ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಮಾನವನ ಮುಖ ಹೊಲುವ ಅಪರೂಪದ ಕೀಟ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಭೈರಾಪೂರ ಬೆಟ್ಟದಲ್ಲಿ ಪತ್ತೆ ಆಗಿದೆ. ಮೈ ಹಳದಿ ಬಣ್ಣದಿಂದ ಕೂಡಿರುವ ಈ ಕೀಟ ಸುಂದರವಾಗಿ ಗೋಚರಿಸಿದೆ. ಈ ಕೀಟವನ್ನು ವೈಜ್ಞಾನಿಕವಾಗಿ ''ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್'' ಎಂದು ಕರೆಯುವರು. ಸಾಮಾನ್ಯ ಭಾಷೆಯಲ್ಲಿ ಹಿಟ್ಲರ್ ಕೀಟ ಅಂತಲೂ ಕರೆಯುತ್ತಾರೆ.

ಇಕ್ಸೋರಾ, ಗೋಡಂಬಿ ಗಿಡ, ಗುಲ್‌ಮೋಹರ್ ಮತ್ತು ಶಿವನಿ ಮರಗಳು ಈ ಕೀಟಗಳಿಗೆ ಆಥಿತೇಯ ಸಸ್ಯಗಳಾಗಿವೆ. ಕೀಟವು 30 ಎಂ.ಎ ಗಾತ್ರದಾಗಿರುತ್ತದೆ. ಸಸ್ಯಗಳ ಎಲೆಗಳ ಅಡಿಯಲ್ಲಿ ಹೆಣ್ಣು ಕೀಟವು 150-200 ಮೊಟ್ಟೆಗಳನ್ನು ಇಡುತ್ತದೆ. ಕೀಟವು 7 ರಿಂದ 9 ತಿಂಗಳ ಜೀವಿತಾ ಅವಧಿಯನ್ನು ಹೊಂದಿದ್ದು, ಇವು ತಮ್ಮ ಜೀವನ ಚಕ್ರದಲ್ಲಿ ಎರಡು ಪೀಳಿಗೆಗಳನ್ನು ಉತ್ಪಾದಿಸುತ್ತವೆ.

Hitler face Rare bug found in Bhairapura village of Gadag district

ಆತಿಥೇಯ ಸಸ್ಯದ ಕಾಂಡದ ಮೇಲೆ ವಾಸ
ಪೆಂಟ್ಯಾಟೊಮಿಡೆ ಕೀಟಗಳು ನಿಸರ್ಗದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಫೇರಮೊನ್ ಸ್ರವಿಸಿ ಗುಂಪುಗುಂಪಾಗಿ (ಅಗ್ರಿಗೇಶನ್) ಆತಿಥೇಯ ಸಸ್ಯದ ಕಾಂಡದ ಮೇಲೆ ವಾಸಿಸುತ್ತವೆ. ಈ ರಕ್ಷಣಾ ತಂತ್ರವು ಸಂತಾನೋತ್ಪತ್ತಿಗೆ ಕೂಡ ಸಹಾಯವಾಗಿದೆ. ಇವು ಆಥಿತೇಯ ಸಸ್ಯದ ಎಲೆ ರಸ ಮತ್ತು ಹಣ್ಣುಗಳ ರಸವನ್ನು ಹೀರುತ್ತವೆ. ಕ್ಯಾಟಕ್ಯಾಂಥಸ್ ಇನ್‌ಕಾರ್ನೇಟಸ್ ಭಾರತ, ಮಡಗಾಸ್ಕರ್, ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್ ಚೀನಾ, ಇಂಡೋನೇಷ್ಯಾ ಮಲೇಷ್ಯಾ, ಫಿಲಿಪೈನ್ಸ್, ಪಾಪುವಾ ನ್ಯೂಗಿನಿಯಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಪಾಕಿಸ್ತಾನ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಸಂಶೋಧಕರಿಂದ ಹಿಟ್ಲರ್ ಕೀಟ ಪತ್ತೆ
ಕೀಟಗಳು ಉನ್ನತ ಸ್ತರದ ಜೀವಿಗಳಿಗೆ ಆಹಾರ ಒದಗಿಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೀಟಗಳು ನಿಸರ್ಗದಲ್ಲಿ ನೈಸರ್ಗಿಕವಾಗಿ ನಿಯಂತ್ರಿಸಲ್ಪಡುತ್ತವೆ. ಜೀವ ವೈವಿಧ್ಯ ಸಂಶೋಧಕರಾದ ಮಂಜುನಾಥ ಎಸ್. ನಾಯಕ, ಸಂಗಮೇಶ ಕಡಗದ, ಶರಣು ಗೌಡರು ಈ ಕೀಟವನ್ನು ಗುರುತಿಸಿದ್ದಾರೆ ಎನ್ನಲಾಗಿದೆ.

Hitler face Rare bug found in Bhairapura village of Gadag district

ಕಳೆದ ತಿಂಗಳು ಭೈರಾಪುರ ಗುಡ್ಡದಲ್ಲಿ ಮೊದಲು ಕಾಣಿಸಿಕೊಂಡಿತ್ತು. ಕೆಲವು ವನ್ಯಜೀವಿ ಉತ್ಸಾಹಿಗಳು ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಕೀಟಗಳ ಸಂಖ್ಯೆ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಹೇಗೆ ಮತ್ತು ಏಕೆ? ಇದ್ದಕ್ಕಿದ್ದಂತೆ ಕೀಟಗಳು ಬಂದಿವೆ ಎಂಬುದನ್ನು ಕಂಡುಹಿಡಿಯಲು ವಿವರವಾದ ಸಂಶೋಧನೆ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೀಟಗಳು ಹೆಚ್ಚಾಗಿ ಕಂಡುಬರುವ ದೇಶಗಳು?
ಕೆಲವು ವನ್ಯಜೀವಿ ಉತ್ಸಾಹಿಗಳು ಮೊದಲು ಕೀಟಗಳನ್ನು ಗುರುತಿಸಿ, ಛಾಯಾಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ. ಮತ್ತು ಗದಗ ಮತ್ತು ಬೆಂಗಳೂರಿನ ಕೆಲವು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್, ಇಂಡೋನೇಷ್ಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾದೇಶಗಳಲ್ಲಿ ಈ ಕೀಟಗಳು ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ಹೇಳಲಾಗುತ್ತದೆ. ಇವು ಮೆಮೆಸೈಕ್ಲಾನ್ ಅಂಬ್ರೆಲೇಟಮ್, ಗ್ಲೋಚಿಡಾನ್ ಎಲಿಪ್ಟಿಕಮ್ ಮತ್ತು ಓಲಿಯಾ ಡಿಯೋಸಿಯಾ ಮುಂತಾದ ಸಸ್ಯಗಳನ್ನು ತಿಂದು ಬದುಕುತ್ತವೆ.

ಕೀಟದ ಬಗ್ಗೆ ಜನರು ಹೇಳಿದ್ದೇನು?
ಕೀಟದ ಜೀವಿತಾವಧಿಯು ಏಳು ತಿಂಗಳಿಂದ ಒಂಬತ್ತು ತಿಂಗಳವರೆಗೆ ಇರುತ್ತದೆ. ಇರುವ ಪ್ರದೇಶಗಳಲ್ಲಿ ಆಹಾರ ಸರಪಳಿಯನ್ನು ರೂಪಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಕೀಟಗಳನ್ನು ಮೊದಲು ನೋಡಿದ ಸಂಗಮೇಶ್ ಕಡಗದ್ ಮತ್ತು ಮಂಜುನಾಥ್ ನಾಯಕ್ ಅವರು ಈ ಬಗ್ಗೆ ಮಾತನಾಡಿ, ''ಕರ್ನಾಟಕದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಬೆಂಗಳೂರಿನಲ್ಲಿ ಇವುಗಳು ಹೆಚ್ಚಾಗಿ ಕಂಡುಬರುತ್ತವೆ. ಆದರೆ ಉತ್ತರ ಕರ್ನಾಟಕದಲ್ಲಿ ಇವುಗಳ ಸಂಖ್ಯೆ ವಿರಳ. ಗದಗ ಜಿಲ್ಲೆಯ ಗಜೇಂದ್ರಗಡದಂತಹ ಸ್ಥಳಗಳಲ್ಲಿ ಇಂತಹ ಕೀಟಗಳನ್ನು ಕಂಡರೆ ನಮಗೆ ಆಶ್ಚರ್ಯವಾಗುತ್ತದೆ. ವ್ಯಾಪಕವಾದ ಸಂಶೋಧನೆಯು ಮಾತ್ರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತದೆ," ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+