Get Updates
Get notified of breaking news, exclusive insights, and must-see stories!

ಮಹಿಳೆಯರು 'ಆ ದಿನ'ಗಳಲ್ಲಿ ಸುಖವಾಗಿರಲು ಏನು ಮಾಡಬೇಕು?

ಹೆಣ್ಣು ಹುಟ್ಟಿದಾಗಿನಿಂದ ದೈಹಿಕ ಬದಲಾವಣೆ ಮತ್ತು ಮಾನಸಿಕ ಕಿರಿಕಿರಿಯನ್ನು ಎದುರಿಸುತ್ತಲೇ ಬದುಕಬೇಕಾಗಿದೆ. ಬದುಕಿನಲ್ಲಿ ಪ್ರತಿಯೊಂದನ್ನು ಸವಾಲ್ ಆಗಿಯೇ ತೆಗೆದುಕೊಳ್ಳಬೇಕಾಗಿದೆ. ಬಾಲ್ಯದಿಂದ ಪ್ರೌಢಾವಸ್ಥೆ, ಆ ನಂತರ ಋತುಬಂಧ ಹೀಗೆ ಬದಲಾವಣೆಯ ಬದುಕನ್ನು ಸಾಗಿಸುವುದು ಅನಿವಾರ್ಯವಾಗಿದೆ.

ಹೀಗಾಗಿ ದೈಹಿಕ ಮತ್ತು ಮಾನಸಿಕವಾಗಿ ಜೀವನದಲ್ಲಿ ಬರಲಿರುವ ಎಲ್ಲ ಕಿರಿಕಿರಿಗಳನ್ನು ಹಿಮ್ಮೆಟ್ಟಿ ಮುನ್ನಡೆಯಲೇ ಬೇಕಾಗಿದೆ. ಇವತ್ತಿನ ಲೈಫ್ ಸ್ಟೈಲ್ ನಲ್ಲಿ ಋತುಬಂಧದ ಹಂತದಲ್ಲಿ ಮಹಿಳೆಯರು ಕೆಲವೊಂದು ಆರೋಗ್ಯದ ಸಮಸ್ಯೆಗಳನ್ನು ಎದುರಿಸಲೇ ಬೇಕಾಗಿದ್ದು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ತಯಾರಾಗಬೇಕಾಗಿದೆ.

Health Tips Women s Health Navigating Menopause For A Happier Life

ಈಗಾಗಲೇ ಭಾರತದಲ್ಲಿ ಋತುಬಂಧಕ್ಕೆ ಒಳಗಾಗುವ ಮಹಿಳೆಯರನ್ನು ಆಧರಿಸಿ ಹಲವು ರೀತಿಯ ಅಧ್ಯಯನಗಳನ್ನು ಮಾಡಲಾಗಿದ್ದು ಇದರಿಂದ ಹಲವು ಸಂಗತಿಗಳು ಹೊರಬಂದಿವೆ. ಋತುಬಂಧದ ಹಂತಕ್ಕೆ ಬಂದಾಗ ಬಹಳಷ್ಟು ಮಹಿಳೆಯರಿಗೆ ತಮಗೆ ವಯಸ್ಸಾಗಿ ಬಿಡ್ತು ಎನ್ನುವ ಮಾನಸಿಕ ನೋವು ಕಾಡಿ ಬಿಡುತ್ತದೆ. ಆದರೆ ಇಂತಹ ಆಲೋಚನೆಗಳಿಂದ ಹೊರ ಬರಬೇಕಾಗುತ್ತದೆ. ಎಲ್ಲರೂ ಎಲ್ಲ ಹಂತಗಳನ್ನು ಅನುಭವಿಸಬೇಕು ಮತ್ತು ಅದನ್ನು ದಾಟಿ ಮುನ್ನಡೆಯಲೇ ಬೇಕು. ಅದುವೇ ನಿಜವಾದ ಬದುಕು.

ತಜ್ಞರು ಹೇಳುವ ಪ್ರಕಾರ ಋತು ಬಂಧ ಎನ್ನುವುದು ಪ್ರತಿ ಮಹಿಳೆಯರು ಅನುಭವಿಸುವ ಬದುಕಿನ ಒಂದು ಹಂತ. ಈ ವೇಳೆ ತಮ್ಮ ಆರೋಗ್ಯದಲ್ಲಿ ಕಂಡು ಬರುವ ಏರುಪೇರುಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ತಕ್ಕ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಬದುಕುವುದಕ್ಕೆ ಆದ್ಯತೆ ನೀಡಬೇಕೇ ಹೊರತು. ಬೇರೆ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು. ಪ್ರಕೃತಿ ನಿಯಮವನ್ನು ಯಾರೂ ಮೀರಿ ಬದುಕಲಾಗುವುದಿಲ್ಲ. ಅದಕ್ಕೆ ನಾವು ಹೊಂದಿಕೊಂಡು ಮುನ್ನಡೆಯಬೇಕಷ್ಟೆ.

Health Tips Women s Health Navigating Menopause For A Happier Life

ಈಸ್ಟ್ರೊಜೆನ್ ಮಟ್ಟದಲ್ಲಿ ಕುಸಿತದಿಂದ ಸಮಸ್ಯೆ

ಎಲ್ಲಾ ಮಹಿಳೆಯರು ತಮ್ಮ ಜೀವನದ ಯಾವುದಾದರೊಂದು ಹಂತದಲ್ಲಿ ಋತುಬಂಧವನ್ನು ಅನುಭವಿಸಬೇಕಾಗುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ವಯಸ್ಸಿನ ಅಂತರದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಬಹುದಷ್ಟೆ. ಜತೆಗೆ ಯಾವುದೇ ದುಶ್ಚಟಗಳಿಲ್ಲದೆ, ವ್ಯಾಯಾಮ, ಶಿಸ್ತು ಬದ್ಧ ಜೀವನ ನಡೆಸುವವರಿಗೆ ಆರೋಗ್ಯದ ವಿಚಾರದಲ್ಲಿ ಸಮಸ್ಯೆಗಳು ಕಡಿಮೆಯಿರಬಹುದು. ಆದರೆ ಸಾಮಾನ್ಯವಾಗಿ ಈ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಕೆಲವೊಂದು ಕಿರಿಕಿರಿಗಳನ್ನು ಎದುರಿಸುತ್ತಾರೆ. ಅದಕ್ಕೆ ಕಾರಣ ಮಹಿಳೆಯ ದೇಹದಲ್ಲಿನ ಬದಲಾವಣೆ ಮತ್ತು ಈಸ್ಟ್ರೊಜೆನ್ ಮಟ್ಟಗಳಲ್ಲಿ ಕುಸಿತವಾಗಿದೆ.

ಋತುಬಂಧದ ಹಂತದಲ್ಲಿ ಆಗುವ ದೈಹಿಕ ಸಮಸ್ಯೆಗಳು, ಆರೋಗ್ಯದಲ್ಲಿ ಏರುಪೇರು ಇದ್ಯಾವುದೂ ಹೆಚ್ಚಿನ ಮಹಿಳೆಯರಿಗೆ ಅರ್ಥವಾಗುವುದಿಲ್ಲ. ಕಾರಣ ಆ ಬಗ್ಗೆ ಅವರು ಗಮನಹರಿಸುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ. ಇದೆಲ್ಲವೂ ಅವರಲ್ಲಿ ಮುಂದಿನ ದಿನಗಳಲ್ಲಿ ಸುಖಮಯ ಜೀವನ ನಡೆಸಲು ಅಡ್ಡಿಯಾಗುತ್ತಿದೆ. ಅಧ್ಯಯನಗಳು ಹೇಳುವ ಪ್ರಕಾರ ಋತುಬಂಧವು ಪ್ರತಿ ಮಹಿಳೆಯಲ್ಲಿ ವೈವಿಧ್ಯಮಯ ಚಿಂತೆಗಳನ್ನು ಹುಟ್ಟುಹಾಕುತ್ತವೆಯಂತೆ.

Health Tips Women s Health Navigating Menopause For A Happier Life

ಅಧ್ಯಯನಗಳಿಂದ ತಿಳಿದು ಬಂದಿದ್ದೇನು?

ಕೆಲವರಿಗೆ ಪ್ರತಿ ತಿಂಗಳ ಕಿರಿಕಿರಿಯಿಂದ ಬಿಡುಗಡೆಯಾಗುವ ಸಮಾಧಾನದ ಭಾವನೆ ಮೂಡಿದರೆ ಮತ್ತೆ ಕೆಲವರಿಗೆ ವಯಸ್ಸಾಗಿ ಬಿಡ್ತಲ್ಲ ಎನ್ನುವ ಸಣ್ಣಗಿನ ನೋವು, ಇನ್ನು ಕೆಲವರಿಗೆ ಮುಂದೇನು ಎಂಬ ಕುತೂಹಲ. ಆದರೆ ಇದೆಲ್ಲದರ ನಡುವೆಯೂ ಮಹಿಳೆಯರು ಋತುಬಂಧದ ನಂತರ ಉಂಟಾಗಬಹುದಾದ ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಅರಿತುಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಮುಖ್ಯವಾಗಿ ಈ ಹಂತದಲ್ಲಿ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟದಲ್ಲಿನ ಇಳಿಕೆಯಿಂದಾಗಿ ಮೂಳೆ ಸವೆತವಾಗುವುದರಿಂದ ಮಂಡಿನೋವು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಹಿರಿಯ ಸಲಹೆಗಾರ್ತಿ ಶೀಲಾ ಮಾನೆ ಅವರ ಪ್ರಕಾರ ಭಾರತದಲ್ಲಿ ಋತುಬಂಧಕ್ಕೆ ಒಳಗಾಗುವ ಮಹಿಳೆಯರನ್ನು ಆಧರಿಸಿ ಮಾಡಿದ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ವರದಿಯಾಗಿರುವ ರೋಗಲಕ್ಷಣಗಳಲ್ಲಿ ಮೈ ಬಿಸಿಯಾಗುವುದು ಮತ್ತು ರಾತ್ರಿಯಲ್ಲಿ ಬೆವರುವಿಕೆ, ಜೊತೆಗೆ ಇತರ ರೋಗಲಕ್ಷಣಗಳಾದ ನಿದ್ರಾಹೀನತೆ, ಆತಂಕ, ಕಿರಿಕಿರಿ, ಕೀಲು ನೋವು ಮತ್ತು ಯೋನಿ ಶುಷ್ಕತೆ ಮುಂತಾದ ಲಕ್ಷಣಗಳು ಕಂಡು ಬಂದಿವೆಯಂತೆ. ಹೀಗಾಗಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿದ್ದು, ಮಹಿಳಾ ತಜ್ಞೆಯರ ಸಲಹೆ ಪಡೆದು ತಕ್ಕ ಚಿಕಿತ್ಸೆ ಪಡೆದರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ ಎನ್ನುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+