ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Health Tips: ಬೇಸಿಗೆಯಲ್ಲಿ ವೈಯಕ್ತಿಕ ಸ್ವಚ್ಛತೆಗೆ ಇರಲಿ ಆದ್ಯತೆ!

|
Google Oneindia Kannada News

ಬೇಸಿಗೆಯ ದಿನಗಳಲ್ಲಿ ನಾವು ಎಷ್ಟೇ ಸ್ವಚ್ಛತೆ ಕಾಪಾಡಿಕೊಂಡರೂ ಸಾಲದಾಗುತ್ತದೆ. ಕಾರಣ ಬಿಸಿಲಿನ ಧಗೆಗೆ ಶರೀರದಿಂದ ಬೆವರು ನದಿಯಾಗಿ ಹರಿಯುತ್ತದೆ. ಈ ಬೆವರು ದುರ್ವಾಸನೆ ಬೀರುವ ಮೂಲಕ ನಮ್ಮ ಸುತ್ತಮುತ್ತಲಿನವರಿಗೆ ಕಿರಿಕಿರಿ ಮಾಡುವುದರೊಂದಿಗೆ ಅಸಹ್ಯ ಮೂಡಿಸಿಬಿಡುತ್ತದೆ.

ಇದರಿಂದ ನಾವು ನೀಟಾಗಿ ಡ್ರೆಸ್ ಮಾಡಿಕೊಂಡು ಆಕರ್ಷಕವಾಗಿ ಕಾಣುತ್ತಿದ್ದರೂ ಬೆವರಿನಿಂದಾಗಿ ಶರೀರದಿಂದ ಹೊರಬರುವ ದುರ್ಗಂಧಕ್ಕೆ ಕಡಿವಾಣ ಹಾಕದೆ ಹೋದರೆ ಬೇರೆಯವರು ನಮ್ಮ ಬಗ್ಗೆ ಅಸಹ್ಯ ಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ನಮ್ಮನ್ನು ಮುಜುಗರಕ್ಕೀಡು ಮಾಡಿಬಿಡುತ್ತದೆ. ಬೇಸಿಗೆಯ ದಿನಗಳಲ್ಲಿ ಬಹಳಷ್ಟು ಜನ ಮುಖದ ಕಾಳಜಿ ವಹಿಸಿ ಒಂದಷ್ಟು ಕ್ರೀಮ್, ಪೌಡರ್ ಬಳಸಿ ಸುಂದರವಾಗಿ ಕಾಣುವಂತೆ ನೋಡಿಕೊಳ್ಳುತ್ತಾರೆಯಾದರೂ, ಶರೀರದ ಇತರ ಅಂಗಗಳತ್ತ ಗಮನಹರಿಸದ ಕಾರಣದಿಂದಾಗಿ ಶರೀರ ದುರ್ಗಂಧ ಬೀರಿ ಜನರ ನಡುವೆ ಕೆಲವೊಮ್ಮೆ ಕೀಳರಿಮೆಯನ್ನುಂಟು ಮಾಡಿಬಿಡುತ್ತದೆ.

ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

ದುರಭ್ಯಾಸಗಳಿಗೆ ಇತಿಶ್ರೀ ಹಾಡಿ
ನಮ್ಮ ಕೆಟ್ಟ ಚಟಗಳು, ಅಶುಚಿತ್ವ, ಅಶಿಸ್ತು ಎಲ್ಲವೂ ಬೇಸಿಗೆಯಲ್ಲಿ ನಮ್ಮ ಮಾನ ಮರ್ಯಾದೆಯನ್ನು ಜನರ ಮುಂದೆ ಹರಾಜಾಕಿ ಬಿಡುತ್ತದೆ. ಕಾರ್ಯಕ್ರಮಗಳು ಸೇರಿದಂತೆ ಇತರೆ ಸಂದರ್ಭಗಳಲ್ಲಿ ಜನರೊಂದಿಗೆ ಸೇರುವಾಗ ಕೆಲವೊಮ್ಮೆ ಧರಿಸುವ ಬಟ್ಟೆಗಿಂತಲೂ ನಾವು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡದೆ ಹೋದರೆ ಎದುರಿಗಿನ ವ್ಯಕ್ತಿಗೆ ನಾವು ತಲೆನೋವಾಗಿ, ಅಸಹ್ಯ ಹುಟ್ಟಿಸುವ ವ್ಯಕ್ತಿಯಾಗಿ ಗೋಚರಿಸಬಹುದು. ಆದ್ದರಿಂದ ನಾವು ನಮ್ಮ ಬಗ್ಗೆ ಒಂದಷ್ಟು ಆಸಕ್ತಿ ಮತ್ತು ಕಾಳಜಿ ವಹಿಸಿ ಶರೀರವನ್ನು ಶುಚಿಯಾಗಿಟ್ಟುಕೊಳ್ಳುವುದರತ್ತ ಗಮನ ನೀಡಬೇಕು. ಇಲ್ಲದೆ ಹೋದರೆ ನಮ್ಮ ಸೌಂದರ್ಯ, ಆಕರ್ಷಣೆ, ಅಂತಸ್ತು ಎಲ್ಲವೂ ನಮ್ಮ ಶರೀರ ಬೀರುವ ದುರ್ಗಂಧದ ಮುಂದೆ ಗೌಣವಾಗಿ ಬಿಡುವ ಅಪಾಯವಿದೆ.

Health Tips: Give Preference For Personal Cleanliness In the Summer

ಹಾಗಾದರೆ ಬೇಸಿಗೆಯ ದಿನಗಳಲ್ಲಿ ನಾವು ನಮ್ಮ ಶರೀರದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಶರೀರದಿಂದ ದುರ್ಗಂಧ ಬಾರದಂತೆ ನೋಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗಳು ಕಾಡುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ನಮ್ಮಲ್ಲಿಯೇ ಉತ್ತರವಿದೆ. ಮೊದಲಿಗೆ ನಾವು ರೂಢಿಸಿಕೊಂಡಿರುವ ಕೆಲವೊಂದು ದುರಭ್ಯಾಸಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಅಂದರೆ ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು, ನಶೆ ಮುಂತಾದ ಅಭ್ಯಾಸ ಹೊಂದಿರುವವರು ಅದನ್ನು ಮೊದಲು ಬಿಡಬೇಕು. ಏಕೆಂದರೆ ನಾವು ಸೇದಿ ಬಂದ ಸಿಗರೇಟ್‌ನ ವಾಸನೆ ನಮ್ಮ ಎದುರಿಗಿರುವವರ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಅದನ್ನು ಅನುಭವಿಸಿದವರಿಗಷ್ಟೆ ಗೊತ್ತು. ನಮಗೆಲ್ಲರಿಗೂ ಒಂದಲ್ಲ ಒಂದು ಕಾರಣಕ್ಕೆ ಅಂತಹದೊಂದು ಅನುಭವವೂ ಆಗಿರುತ್ತದೆ.

Health Tips: Give Preference For Personal Cleanliness In the Summer

ಒಂದಷ್ಟು ಸಲಹೆಗಳನ್ನು ತಪ್ಪದೆ ಪಾಲಿಸಿ
ಬೇಸಿಗೆಯಲ್ಲಿ ಅತಿಯಾದ ಬೆವರು ಮುಜುಗರ ತರುವುದು ಮಾಮೂಲಿ ಇದರ ಜತೆಗೆ ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಕಂಕುಳಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆಯದ ಕಾರಣ ಕಂಕುಳಿನಿಂದ ದುರ್ವಾಸನೆ ಬರಬಹುದು. ಹೀಗಾಗಿ ಶರೀರದ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಬೇಸಿಗೆ ದಿನಗಳಲ್ಲಿ ಪ್ರತಿದಿನ ಕನಿಷ್ಟ ಎರಡು ಲೀಟರ್‌ನಷ್ಟು ನೀರನ್ನು ಕುಡಿಯಬೇಕು. ತಲೆ ಕೂದಲು ಕೂಡ ವಾಸನೆ ಬೀರುತ್ತದೆ. ಆದ್ದರಿಂದ ಯುವಕರಾದರೆ ಚಿಕ್ಕದಾಗಿ ಕ್ಷೌರ ಮಾಡಿ ತಲೆಯಲ್ಲಿನ ಹೊಟ್ಟನ್ನು ನಿಯಂತ್ರಿಸಲು ಮುಂದಾಗಬೇಕು. ಸ್ನಾನ ಮಾಡುವಾಗ ಕಂಕುಳು, ಕಿವಿ, ಸೇರಿದಂತೆ ಇನ್ನಿತರ ಭಾಗಗಳನ್ನು ಚೆನ್ನಾಗಿ ಸೋಪು ಬಳಸಿ ತೊಳೆಯಬೇಕು. ವ್ಯಾಯಾಮ, ಮುಂಜಾನೆ ವಾಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.

Health Tips: Give Preference For Personal Cleanliness In the Summer

ಬಿಗಿಯಾದ ಉಡುಪುಗಳನ್ನು ಧರಿಸದೆ, ಶರೀರಕ್ಕೆ ಗಾಳಿಯಾಡುವ ಹಾಗೂ ಹತ್ತಿಬಟ್ಟೆಗೆ ಆದ್ಯತೆ ನೀಡಬೇಕು. ಬೇರೆಯವರು ಬಳಸಿದ ಟವೆಲ್ ಬಳಸದೆ ಒಗೆದು ಒಣಗಿಸಿ ಬಳಸಬೇಕು. ಬೇರೆಯವರಿಗೆ ಅಸಹ್ಯ ಎನಿಸದ ಉತ್ತಮ ಸುವಾಸನೆ ಬೀರುವ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳಬೇಕು. ಅವು ಶರೀರಕ್ಕೆ ಒಗ್ಗುವಂತಿದ್ದರೆ ಮಾತ್ರ ಬಳಸಬೇಕು. ಇಲ್ಲಿ ವೈದ್ಯರ ಸಲಹೆಯೂ ಅಗತ್ಯವಾಗಿರುತ್ತದೆ.

Health Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು!Health Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು!

ಶಿಸ್ತಿನ ಜೀವನ ಶೈಲಿ ಅಳವಡಿಸಿಕೊಳ್ಳಿ
ಹಲ್ಲಿನ ಅಥವಾ ಒಸಡುಗಳ ತೊಂದರೆಯಿದ್ದರೆ ದಂತ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅಗತ್ಯ. ಹಲ್ಲಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಕೆಲವು ಚುಯಿಂಗಮ್ ಅಗೆಯುವುದರಿಂದ ಬಾಯಿಯಲ್ಲಿ ಜೊಲ್ಲುರಸದೊಂದಿಗೆ ದುರ್ವಾಸನೆ ಸಮಸ್ಯೆ ಕಡಿಮೆಯಾಗಲು ಸಾಧ್ಯವಾಗುತ್ತದೆ. ಬಾಯಿಯಲ್ಲಿ ಲವಂಗದ ಚೂರುಗಳನ್ನು ಚಪ್ಪರಿಸುವುದರಿಂದ ದುರ್ವಾಸನೆ ತಡೆಯಬಹುದು.

ದೇಹದ ದುರ್ಗಂಧ ರೋಗವಲ್ಲ ಅದು ನಾವು ಶುಚಿತ್ವಕ್ಕೆ ಗಮನ ನೀಡದ್ದರಿಂದ ಬಂದಿರುವ ತೊಂದರೆ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ನಮ್ಮ ಶರೀರದ ಬಗ್ಗೆ ಕಾಳಜಿ ವಹಿಸಿ, ಶಿಸ್ತಿನ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಬೇಸಿಗೆಯ ದಿನಗಳಲ್ಲಿ ಜನರ ನಡುವೆ ನಾವು ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ಸಾ‍ಧ್ಯವಾಗಲಿದೆ.

English summary
During the hot summer days, we need to keep our body healthy and Cleanly on top of our priorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X