• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರು ಪೂರ್ಣಿಮಾ: ಯೋಗ್ಯ ಗುರು ಸಿಗದೆ ಹೋದರೆ ಸಂಕಷ್ಟ ತಪ್ಪಿದಲ್ಲ

By ಲವ ಕುಮಾರ್
|
Google Oneindia Kannada News

ಅಕ್ಷರ ಕಲಿಕೆಯಿಂದ ಆರಂಭವಾಗಿ ದುಡಿದು ಬದುಕುವ ತನಕ ನಮಗೆ ಒಬ್ಬೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಗುರುವಿನ ಸ್ಥಾನವನ್ನು ತುಂಬಿರುತ್ತಾರೆ. ಅಂಥ ಗುರುಗಳನ್ನು ನೆನೆಯುವ ಸಮಯ ಇದಾಗಿದೆ.

ನಾವೆಲ್ಲರೂ ಬೇರೆ ಬೇರೆ ರೀತಿಯಲ್ಲಿ ಬದುಕುತ್ತೇವೆ. ಆದರೆ ಹೇಗೆ ಬದುಕುತ್ತಿದ್ದೇವೆ ಎನ್ನುವುದು ಬಹುಮುಖ್ಯವಾಗುತ್ತದೆ. ಒಂದೊಳ್ಳೆಯ ಸನ್ಮಾರ್ಗದಲ್ಲಿ ಬದುಕುತ್ತಿದ್ದೇವೆ ಎನ್ನುವುದಾದರೆ ಅದರ ಹಿಂದೆ ಒಬ್ಬ ಯೋಗ್ಯ ಗುರು ಇದ್ದಾನೆ ಎಂದರ್ಥ.

ಇವತ್ತು ಶಿಷ್ಯರಿಗೆ ನಾನಾ ವಿದ್ಯೆಗಳನ್ನು ಕಲಿಸುವ ಗುರುಗಳಿದ್ದಾರೆ. ಆದರೆ ಯೋಗ್ಯ ದಾರಿಯಲ್ಲಿ ನಡೆಸುವ ಗುರುವಿನ ಅಗತ್ಯವಿದೆ. ಬದಲಾದ ಜಗತ್ತಿನಲ್ಲಿ ನಾವು ಸಂಪಾದನೆಯ ಹಾದಿಗಾಗಿ ಗುರುವಿನ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದೇವೆ. ಅದರಾಚೆಗೆ ಸನ್ಮಾರ್ಗದ ಬದುಕು ಕಟ್ಟಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ.

ಹಣ ಸಂಪಾದನೆಯಿಂದ ಎಲ್ಲವನ್ನು ಪಡೆಯಬಹುದು ಎಂಬ ಭ್ರಮೆಗಳು ನಮ್ಮ ದಿಕ್ಕು ತಪ್ಪಿಸುತ್ತಿವೆ. ಜತೆಗೆ ಗುರುವನ್ನೇ ನಿಕೃಷ್ಟವಾಗಿ ನೋಡುವ ಮನೋಭಾವ ಬೆಳೆಯುತ್ತಿರುವುದು ಎಲ್ಲೋ ಒಂದು ಕಡೆ ನಮ್ಮ ಬದುಕನ್ನು ಅಧಃಪತನದತ್ತ ಕೊಂಡೊಯ್ಯುತ್ತಿದೆ ಎಂದರೆ ತಪ್ಪಾಗಲಾರದು.

ಜೆಪಿ ನಗರ ದೇಗುಲದಲ್ಲಿ 1 ಲಕ್ಷ ಆಟದ ಸಾಮಗ್ರಿ ಬಳಸಿ ವಿಶೇಷ ಆಲಂಕಾರ

ಹಿಂದಿನ ಕಾಲದಲ್ಲಿ ಗುರುಕುಲಗಳಿದ್ದವು. ಅಲ್ಲಿ ಗುರುಗಳೇ ಸಕಲ ವಿದ್ಯೆಗಳನ್ನು ತನ್ನ ಶಿಷ್ಯಂದಿರಿಗೆ ಧಾರೆ ಎರೆಯುತ್ತಾ ಶಿಷ್ಯರನ್ನು ಸಕಲ ರೀತಿಯಲ್ಲಿ ವಿದ್ಯಾಪಾರಂಗತರನ್ನಾಗಿ ಮಾಡುತ್ತಿದ್ದರು. ಶಿಷ್ಯರು ಗುರುಗಳ ಸೇವೆ ಮಾಡುತ್ತಾ ವಿದ್ಯೆಗಳನ್ನು ಕಲಿಯುತ್ತಿದ್ದರು. ಅಧ್ಯಾತ್ಮದ ಮಾರ್ಗದಲ್ಲಿ ನೋಡಿದ್ದೇ ಆದರೆ ಗುರುವಿನ ಸ್ಥಾನಗಳೇನು?. ನಮಗೇಕೆ ಯೋಗ್ಯ ಗುರುಗಳು ಬೇಕು ಎಂಬ ಪ್ರಶ್ನೆಗಳಿಗೆ ಹಲವು ರೀತಿಯ ಉತ್ತರಗಳು ಸಿಗುತ್ತವೆ.

ಸನ್ಮಾರ್ಗದ ಹಾದಿ ತೋರಲು ಗುರು ಅಗತ್ಯ

ಸನ್ಮಾರ್ಗದ ಹಾದಿ ತೋರಲು ಗುರು ಅಗತ್ಯ

ಈ ಗುರುವಿನ ಬಗ್ಗೆ ಸ್ವಾಮಿ ವಿವೇಕಾನಂದರು ಹೇಳುವುದೇನೆಂದರೆ? ಪ್ರತಿಯೊಂದು ಜೀವಿಯೂ ಅಂತಿಮವಾಗಿ ಪರಿಪೂರ್ಣತೆ ಪಡೆಯಲೇ ಬೇಕು. ನಾವು ಈಗ ಏನಾಗಿದ್ದೇವೆಯೋ ಅದಕ್ಕೆ ನಮ್ಮ ಹಿಂದಿನ ಕರ್ಮಗಳು ಹಾಗೂ ಆಲೋಚನೆಗಳೇ ಕಾರಣ. ನಾಳೆ ಏನಾಗುವೆವೋ ಅದಕ್ಕೆ ಈಗ ನಾವು ಏನು ಮಾಡುವೆವೋ, ಆಲೋಚಿಸುವೆವೋ ಅದೇ ಕಾರಣವಾಗಿ ಬಿಡುತ್ತದೆ. ಹೀಗಾಗಿ ನಾಳೆಯ ಸನ್ಮಾರ್ಗದ ಹಾದಿ ತೋರಿಸಬೇಕಾದರೆ ನಮಗೆ ಒಬ್ಬರು ಒಳ್ಳೆಯ ಗುರು ಬೇಕಾಗುತ್ತದೆ. ಈ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ ಎನಿಸದಿರದು.

ಗುರುಪೂರ್ಣಿಮಾ 2022: ಯಾವ ರಾಶಿಯವರಿಗೆ ದಾನ ಮುಖ್ಯವಾಗಿದೆ?ಗುರುಪೂರ್ಣಿಮಾ 2022: ಯಾವ ರಾಶಿಯವರಿಗೆ ದಾನ ಮುಖ್ಯವಾಗಿದೆ?

ಪರಿಪೂರ್ಣ ಜೀವನ ಪ್ರಾಪ್ತಿ

ಪರಿಪೂರ್ಣ ಜೀವನ ಪ್ರಾಪ್ತಿ

ನಾವೆಲ್ಲರೂ ಸಂಘಜೀವಿಗಳು ನಮಗೆ ಯಾವುದಾದರೊಂದು ರೀತಿಯಲ್ಲಿ ಅನ್ಯರ ಸಹಾಯ ಬೇಕೇ ಬೇಕಾಗುತ್ತದೆ. ಆ ಸಹಾಯ ಒದಗಿದಾಗ ಜೀವನದ ಉತ್ತಮ ಶಕ್ತಿಗಳು, ಸಾಧ್ಯತೆಗಳು ಬಹುಬೇಗ ವೃದ್ಧಿಯಾಗುತ್ತವೆ. ಬದುಕಿನ ಬೆಳವಣಿಗೆ ಚುರುಕಾಗುತ್ತದೆ. ಪರಿಪೂರ್ಣ ಜೀವನ ಪ್ರಾಪ್ತಿಯಾಗುತ್ತದೆ. ಬಹುಶಃ ಇಂತಹ ಉತ್ತೇಜಕ ಶಕ್ತಿಯು ಗ್ರಂಥಗಳನ್ನು ಓದುವುದರಿಂದ ದೊರಕಲಾರದು. ಅದು ಒಂದು ಜೀವಿಯಿಂದ ಮತ್ತೊಂದು ಜೀವಿಗೆ ದೊರಕಬೇಕಾದರೆ ಗುರುವಿನಿಂದಷ್ಟೆ ಸಾಧ್ಯವಾಗುತ್ತದೆ.

ಉತ್ತೇಜನ ಶಕ್ತಿಯನ್ನು ಶಿಷ್ಯರಿಗೆ ಧಾರೆಯೆರೆಯಬೇಕು

ಉತ್ತೇಜನ ಶಕ್ತಿಯನ್ನು ಶಿಷ್ಯರಿಗೆ ಧಾರೆಯೆರೆಯಬೇಕು

ಗುರು-ಶಿಷ್ಯರ ಸಂಬಂಧ ಎನ್ನುತ್ತೇವೆ. ಈ ಸಂಬಂಧ ಇದೆಯಲ್ವಾ ಇದು ಎಲ್ಲಾ ಸಂಬಂಧಗಳಿಗೂ ಮಿಗಿಲಾದದ್ದು. ಹಾಗಾಗಿ ಗುರು ಎಂದೆನಿಸಿಕೊಳ್ಳುವನು ಶಿಷ್ಯನಿಗೆ ಅದ್ಭುತ ಉತ್ತೇಜನ ಶಕ್ತಿಯನ್ನು ಧಾರೆಯೆರೆಯುವ ಶಕ್ತಿಯಿರಬೇಕು ಆಗ ಅದನ್ನು ಸ್ವೀಕರಿಸುವ ಶಿಷ್ಯ ಯೋಗ್ಯನಾಗಿರುತ್ತಾನೆ. ಅಥವಾ ಆತನನ್ನು ಯೋಗ್ಯದಾರಿಯಲ್ಲಿ ನಡೆಯುವಂತೆ ಮಾಡಲು ಸಾಧ್ಯವಾಗುತ್ತದೆ.

ಸರ್ವಜ್ಞರೆಂಬಂತೆ ವರ್ತಿಸುವ ಗುರು ಅಪಾಯ

ಸರ್ವಜ್ಞರೆಂಬಂತೆ ವರ್ತಿಸುವ ಗುರು ಅಪಾಯ

ಗುರು ಮತ್ತು ಶಿಷ್ಯ ಹೇಗಿರಬೇಕು ಎಂದರೆ 'ಆಶ್ವರ್ಯೋ ವಕ್ತಾ ಕುಶಲೋ ಅಸ್ಯಲಬ್ದಾ' ಎನ್ನುವಂತೆ ಗುರುವು ಅದ್ಭುತ ವ್ಯಕ್ತಿಯಾಗಿರಬೇಕು. ಶಿಷ್ಯನು ಜಾಣನಾಗಿರಬೇಕು. ಇಬ್ಬರೂ ಅದ್ಭುತ ವ್ಯಕ್ತಿಗಳಾದಾಗ ಒಂದು ಜಾಗೃತ ಸಮಾಜ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಯೋಗ್ಯ ಗುರುವು ದೊರೆಯದೇ ಹೋದಾಗ ಹಲವು ರೀತಿಯ ಅಪಾಯಗಳು ಎದುರಾಗುತ್ತವೆ. ಅಜ್ಞಾನದಲ್ಲಿ ಮುಳುಗಿ ಹೋದ ಗುರುಗಳು ಅಹಂಕಾರದಿಂದ ಉನ್ನತರಾಗಿ ತಾವೇ ಸರ್ವಜ್ಞರೆಂಬಂತೆ ವರ್ತಿಸುತ್ತಾರೆ. ಜತೆಗೆ ಇತರರ ಜವಾಬ್ದಾರಿಯನ್ನೂ ಕೂಡ ತಾವೇ ಸ್ವೀಕರಿಸುತ್ತಾರೆ.

ಆಗ ಕುರುಡ ಕುರುಡನಿಗೆ ಮಾರ್ಗದರ್ಶಕನಾಗಿ ಇಬ್ಬರೂ ಹಳ್ಳಕ್ಕೆ ಬಿದ್ದಂತಾಗುತ್ತದೆ. ತಾವೇ ಅರಿತವರೆಂಬಂತೆ ಅಹಂಪಡುತ್ತಾ ಗುರುವಾಗಲು ಇಚ್ಛೆಪಡುತ್ತಾ ಮುನ್ನಡೆದರೆ ಅವರಿಂದ ಶಿಷ್ಯರಿಗೆ ಅದೆಂತಹ ವಿದ್ಯೆ ದೊರೆಯಬಹುದು? ಶಿಷ್ಯರೂ ಕೂಡ ಗುರುವಿನ ಮಾರ್ಗ ಹಿಡಿಯಬಹುದು. ಹಾಗಾಗದಂತೆ ನೋಡಿಕೊಳ್ಳಬೇಕಾದರೆ ಪ್ರತಿಯೊಬ್ಬರಿಗೆ ಯೋಗ್ಯ ಗುರುವಿನ ಅಗತ್ಯವಿರುವುದಂತು ಸತ್ಯ.

English summary
Guru Purnima 2022: Read on to know the importance of having good teachers in life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X