• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕಲ್‌ ಅನ್ನು ಎಲೆಕ್ಟ್ರಿಕ್ ಸೈಕಲ್‌ ಆಗಿ ಪರಿವರ್ತಿಸುವ ಸಾಧನ ಕಂಡುಹಿಡಿದ ಹರಿಯಾಣದ ವ್ಯಕ್ತಿ

|
Google Oneindia Kannada News

ದೊಡ್ಡ ಪ್ರಮಾಣದ ತಾಂತ್ರಿಕ ಆವಿಷ್ಕಾರಗಳ ಬದಲಾಗಿ, ಸಣ್ಣ ಪ್ರಮಾಣದ ಪ್ರಮುಖ ಆವಿಷ್ಕಾರಗಳು ಭಾರತದಲ್ಲಿ ಕಂಡು ಬರುತ್ತಿವೆ. ಈ ಆವಿಷ್ಕಾರಗಳಲ್ಲಿ ಹೆಸರು ಮಾಡಿದವರು ಕೆಲವರು ಮಾತ್ರ ಇದ್ದಾರೆ. ಹರಿಯಾಣದ ವ್ಯಕ್ತಿಯೊಬ್ಬರು ಮಾಡಿದ ಅದ್ಭುತ ಆವಿಷ್ಕಾರದ ಬಗ್ಗೆ ನೀವು ತಿಳಿಯಬೇಕಿದೆ. ಅವರು ಕೇವಲ 20 ನಿಮಿಷಗಳಲ್ಲಿ ಯಾವುದೇ ಬೈಸಿಕಲ್‌ನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸುವ ಹೊಸ ಸಾಧನೆ ಮಾಡಿದ್ದಾರೆ.

ಈ ಆವಿಷ್ಕಾರಕ ಮಾಡಿದವರು ಹರಿಯಾಣದ ಹಿಸಾಲ್‌ಗೆ ಸೇರಿದ ಗುರುಸೌರಭ್. ಗುರುಸೌರಭ್ ಅವರು ಎಲೆಕ್ಟ್ರಿಕ್ ಕಿಟ್ ತಯಾರಿಸಿ ಸಿದ್ಧ ಪಡಿಸಿದ್ದಾರೆ. ಈ ಕಿಟ್‌ ಯಾವುದೇ ಸೈಕಲ್‌ನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸುತ್ತದೆ. ಹೌದು, ಅವರು ಕಂಡುಹಿಡಿದಿರುವ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‌ ಅನ್ನು ಯಾವುದೇ ಸೈಕಲ್ ಅಥವಾ ಸೈಕಲ್ ರಿಕ್ಷಾಗೆ ಸುಲಭವಾಗಿ ಅಳವಡಿಸಬಹುದು. ಪೆಡಲ್ ಇಲ್ಲದೆ ನೀವು ಮೋಟಾರ್ ಸೈಕಲ್‌ನ ಅನುಭವವನ್ನು ಪಡೆಯಬಹುದು. ಗುರುಸೌರಭ್ ಈ ವಿಶೇಷ ಆವಿಷ್ಕಾರಕ್ಕೆ 'ಧ್ರುವ ವಿದ್ಯುತ್' ಎಂದು ಹೆಸರಿಟ್ಟಿದ್ದಾರೆ.

ಆಂಬುಲೆನ್ಸ್‌ ಸೇವೆ ವ್ಯತ್ಯಯ: 108ಗೆ ಕರೆ ಹೋಗ್ತಿಲ್ಲ, ತಾಂತ್ರಿಕ ಸಮಸ್ಯೆ ಒಪ್ಪಿಕೊಂಡ ಸಚಿವರು ಆಂಬುಲೆನ್ಸ್‌ ಸೇವೆ ವ್ಯತ್ಯಯ: 108ಗೆ ಕರೆ ಹೋಗ್ತಿಲ್ಲ, ತಾಂತ್ರಿಕ ಸಮಸ್ಯೆ ಒಪ್ಪಿಕೊಂಡ ಸಚಿವರು

ಸ್ಫೂರ್ತಿ ಹೇಗೆ ಬಂತು

ಸ್ಫೂರ್ತಿ ಹೇಗೆ ಬಂತು

ಈ ಧ್ರುವ್ ವಿದ್ಯುತ್ ಸೈಕಲ್‌ನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಬಹುದು. ಗುರುಸೌರಭ್ ತಯಾರಿಸಿದ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಕೇವಲ 20 ನಿಮಿಷಗಳಲ್ಲಿ ಸೈಕಲ್‌ಗೆ ಹೊಂದಿಕೊಳ್ಳುತ್ತದೆ ಮತ್ತು ಸೈಕಲ್‌ಗೆ ಉತ್ತಮ ವೇಗವನ್ನು ನೀಡುತ್ತದೆ. ಗುರುಸೌರಭ್ ಅವರು ಈ ವಿಶೇಷ ಕಿಟ್‌ನ್ನು ರೆಟ್ರೊಫಿಟ್ಟಿಂಗ್‌ನಿಂದ ತಯಾರಿಸುವ ಆಲೋಚನೆಯನ್ನು ಪಡೆದರು. ಇದರಲ್ಲಿ ವಾಹನಗಳ ಮೋಟಾರ್‌ಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಬಹುದು.

ಗ್ರಾಮದಲ್ಲಿ ಸಂಚಾರ ಸಮಸ್ಯೆ

ಗ್ರಾಮದಲ್ಲಿ ಸಂಚಾರ ಸಮಸ್ಯೆ

ಈ ಯುವಕ ಗುರುಸೌರಭ್ ಸಿಂಗ್ ಹಿಸಾರ್ ಹರಿಯಾಣದ ಹಳ್ಳಿಯೊಂದಕ್ಕೆ ಸೇರಿದವರು. ತಮ್ಮ ಗ್ರಾಮಕ್ಕೆ ಪ್ರಯಾಣಿಸಲು ಆಗುತ್ತಿರುವ ತೊಂದರೆಯನ್ನು ಕಂಡು ಈ ಕಿಟ್ ತಯಾರಿಸುವ ಯೋಚನೆ ಮಾಡಿದರು. ನನ್ನ ಹಳ್ಳಿಯ ಮಕ್ಕಳು ಓದಲು ದೂರದ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗುರುಸೌರಭ್. ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಒಬ್ಬ ವ್ಯಕ್ತಿಯ ಪ್ರಪಂಚವು ಕೇವಲ 4-5 ಕಿ.ಮೀ ನಡಿಗೆಯಿಂದ ಸೀಮಿತವಾಗಿದೆ ಎಂದು ನಾನು ಅರಿತುಕೊಂಡೆ ಎಂದು ತಮ್ಮ ಅನುಭವನ್ನು ಹೇಳಿ ಕೊಂಡಿದ್ದಾರೆ ಗುರುಸೌರಭ್. ಅಲ್ಲದೆ, ಆವಿಷ್ಕಾರದ ಬಗ್ಗೆ ಮಾತನಾಡಿ, ಈ ಕಿಟ್ ಪ್ರಯಾಣದ ಸಮಸ್ಯೆ ಪರಿಹರಿಸುತ್ತದೆ ಎಂದು ತಿಳಿಸಿದ್ದಾರೆ.

ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ

ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ

ಗುರುಸೌರಭ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಮತ್ತು ರೆಟ್ರೋ-ಫಿಟ್ಟಿಂಗ್‌ನ್ನು ಸಹ ಅಧ್ಯಯನ ಮಾಡಿದ್ದಾರೆ. ಈ ವಿಶೇಷ ಕಿಟ್ ತಯಾರಿಸುವ ಮೊದಲು ಗುರುಸೌರಭ್ ಅವರು ತಯಾರಿಕೆಯ ಜೊತೆಗೆ ಚಲನಚಿತ್ರ ತಯಾರಿಕೆಯಲ್ಲಿ ಪ್ರಯತ್ನ ಮಾಡಿದ್ದಾರೆ. ಗುರುಸೌರಭ್ ಈ ಕಿಟ್ ಸ್ಥಾಪಿಸಲು ಯಾವುದೇ ಸೈಕಲ್‌ಗಳನ್ನು ಮಾರ್ಪಾಡು ಮಾಡುವ ಅಗತ್ಯವಿಲ್ಲ, ಬದಲಾಗಿ ಅದು ಸುಲಭವಾಗಿ ಸೈಕಲ್‌ಗಳ ಚಕ್ರದಲ್ಲಿ ಹೊಂದಿಕೊಳ್ಳುತ್ತದೆ. ಚಕ್ರವು ಕೆಸರು ಮಣ್ಣಿನಲ್ಲೂ ಹಾದು ಹೋಗುವಂತೆ ಮಾಡಲು ಸಾಕಷ್ಟು ಪ್ರಬಲವಾಗಿದೆ. ಇದಲ್ಲದೆ ಇದು ಫೈರ್ ಪ್ರೂಫ್ ಆಗಿದೆ.

ಪ್ರತಿ ಗಂಟೆಗೆ 25 kmph ವೇಗ

ಪ್ರತಿ ಗಂಟೆಗೆ 25 kmph ವೇಗ

ಗುರುಸೌರಭ್ ತಯಾರಿಸಿದ ಕಿಟ್ ಗಂಟೆಗೆ 25 ಕಿ.ಮೀ ವೇಗದಲ್ಲಿ ಸೈಕಲ್ ಓಡಿಸಬಹುದು. ಇದು 170 ಕೆಜಿ ತೂಕದ ಸಾಮರ್ಥ್ಯವನ್ನು ಹೊಂದಿದೆ ಮತ್ತು ಒಮ್ಮೆ ಚಾರ್ಜ್ ಮಾಡಿದರೆ ಸಾಕು ಸೈಕಲ್ 40 ಕಿ.ಮೀ ವರೆಗೆ ಸೈಕಲ್‌ ಓಡಬಹುದು.ಈ ಕಿಟ್ ಜಲನಿರೋಧಕ ಹಾಗೂ ಅಗ್ನಿ ನಿರೋಧಕವಾಗಿದೆ. ಇದರಲ್ಲಿ ಚಾರ್ಜಿಂಗ್ ಪೋರ್ಟ್ ಕೂಡ ಅಳವಡಿಸಲಾಗಿದ್ದು, ಫೋನ್ ಬ್ಯಾಟರಿಯನ್ನೂ ಕೂಡ ಚಾರ್ಜ್ ಮಾಡಬಹುದಾಗಿದೆ. ಗುರುಸೌರಭ್ ತನ್ನ ಈ ಆವಿಷ್ಕಾರವು ಭಾರತದ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನನ್ನು ತಲುಪಬೇಕೆಂದು ಕನಸು ಕಂಡಿದ್ದಾರೆ.

English summary
Gursaurabh Singh's invention 'Dhruv Vidyut' is a revolution in itself! He has invented a device that can turn any ordinary bicycle into a batter powered electric cycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X