ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಮಾನಗಳನ್ನು ಮೆಟ್ಟಿನಿಂತ ರಾಧಿಕಾ ಗುಪ್ತಾ ದೇಶದ ಅತ್ಯಂತ ಕಿರಿಯ ಸಿಇಒ

|
Google Oneindia Kannada News

ಬೆಂಗಳೂರು ಜೂನ್ 7: ಹಲವಾರು ಉದ್ಯೋಗ ನಿರಾಕರಣೆಗಳನ್ನು ಎದುರಿಸಿದ ಆದರೆ ಈಗ ಭಾರತದ ಅತ್ಯಂತ ಕಿರಿಯ CEO ಗಳಲ್ಲಿ ಒಬ್ಬರಾಗಿರುವ ರಾಧಿಕಾ ಗುಪ್ತಾ ಅವರನ್ನು ಭೇಟಿ ಮಾಡಿ, ಜೀವನ ಅನೇಕ ಏಳು ಬೀಳುಗಳಿಂದ ಕೂಡಿರುತ್ತದೆ. ಅನೇಕ ಅಡೆತಡೆಗಳು, ಅವಮಾನಗಳು, ತೊಂದರೆಗಳನ್ನು ಎದುರಿಸಿದಾಗಲೇ ಸಾಧಿಸಲು ಸಾಧ್ಯ. ಹೀಗೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ ರಾಧಿಕಾ ಗುಪ್ತಾ. ಅಷ್ಟಕ್ಕೂ ಯಾರಿವರು? ಇವರ ಹಿನ್ನೆಲೆ ಏನು? ತಿಳಿಯೋಣ.

ರಾಧಿಕಾ ಗುಪ್ತಾ ಅವರು ಎಡೆಲ್ವೀಸ್ MF ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO). ಆದರೆ ಅವರ 'ಬಾಗಿದ ಕುತ್ತಿಗೆ'ಗಾಗಿ ಅವರ ಜೀವನವೇ ನರಕವಾಗಿತ್ತು. ಇದರಿಂದಾಗಿ ಅವರ ಏಳನೇ ಉದ್ಯೋಗ ನಿರಾಕರಣೆಯಾಗಿತ್ತು. ಜೀವನದಲ್ಲಿ ಜಿಗುಪ್ಸೆ ಹೊಂದಿದ ಅವರು ತಮ್ಮ 22 ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಯೋಚಿಸಿದ್ದರಂತೆ. ದೇಶದ ಅತ್ಯಂತ ಕಿರಿಯ ಸಿಇಒಗಳಲ್ಲಿ ಒಬ್ಬರಾಗಿರುವ ಗುಪ್ತಾ ಅವರು ತಮ್ಮ ಸ್ಪೂರ್ತಿದಾಯಕ ಪ್ರಯಾಣವನ್ನು ಹಂಚಿಕೊಂಡಿದ್ದಾರೆ.

ನಡೆದು ಬಂದ ಹಾದಿ ಹೇಗಿತ್ತು?

ನಡೆದು ಬಂದ ಹಾದಿ ಹೇಗಿತ್ತು?

ಆನ್‌ಲೈನ್ ಪೋರ್ಟಲ್ ಹ್ಯೂಮನ್ಸ್ ಆಫ್ ಬಾಂಬೆ ಪೋಸ್ಟ್‌ನಲ್ಲಿ ಗುಪ್ತಾ ತಾವು ನಡೆದು ಬಂದ ಹಾದಿಯ ಬಗ್ಗೆ ವಿವರವಾಗಿ ಬರೆದಿದ್ದಾರೆ. "ನಾನು ವಕ್ರ ಕುತ್ತಿಗೆಯೊಂದಿಗೆ ಹುಟ್ಟಿದ್ದೇನೆ. ಅದನ್ನು ಬದಲಾಯಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಯಾವಾಗಲೂ ಶಾಲೆಗೆ ಹೊಸ ಮಗುವಾಗಿದ್ದೆ. ಪ್ರತಿನಿತ್ಯ ನನ್ನನ್ನು ವಿಚಿತ್ರವಾಗಿ ನೋಡಲಾಗುತ್ತಿತ್ತು. ತಂದೆ ರಾಜತಾಂತ್ರಿಕರಾಗಿದ್ದರು. ನಾನು ನೈಜೀರಿಯಾ ಬರುವ ಮೊದಲು ಪಾಕಿಸ್ತಾನ, ನ್ಯೂಯಾರ್ಕ್ ಮತ್ತು ದೆಹಲಿಯಲ್ಲಿ ವಾಸಿಸುತ್ತಿದ್ದೆ. ನನ್ನನ್ನು ಭಾರತದಲ್ಲಿ 'ಅಪು' ಎಂದು ಕರೆಯುತ್ತಿದ್ದರು" ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

 ಆತ್ಮವಿಶ್ವಾಸ ಕಳೆದುಕೊಂಡಿದ್ದ ಗುಪ್ತಾ

ಆತ್ಮವಿಶ್ವಾಸ ಕಳೆದುಕೊಂಡಿದ್ದ ಗುಪ್ತಾ

39ರ ಹರೆಯದ ಗುಪ್ತಾ ತಮ್ಮ ಶಾಲಾ ದಿನಗಳ ಅವಮಾನವನ್ನು ಹಂಚಿಕೊಂಡಿದ್ದಾರೆ. "ನನ್ನನ್ನು ನನ್ನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಗೆ ಹೋಲಿಸುತ್ತಿದ್ದರು. ಅವಳೊಂದಿಗೆ ಹೋಲಿಸಿ ನಾನು ಎಷ್ಟು ಕೊಳಕು ಎಂದು ಜನರು ಯಾವಾಗಲೂ ನನಗೆ ಹೇಳುತ್ತಿದ್ದರು. ಇದರಿಂದ ನನ್ನ ಆತ್ಮವಿಶ್ವಾಸ ಕುಸಿಯುತ್ತಿತ್ತು" ಎಂದು ಅವರು ಬರೆದಿದ್ದಾರೆ.

'ಏಳನೇ ಕೆಲಸ ಕೈ ಹಿಡಿಯಲಿಲ್ಲ'

'ಏಳನೇ ಕೆಲಸ ಕೈ ಹಿಡಿಯಲಿಲ್ಲ'

ಆದರೂ ನಾನು 'ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಪ್ರಯತ್ನಿಸಿದೆ. ಆದರೆ ನನ್ನ ಭಾಗಿದ ಕುತ್ತಿಗೆಯಿಂದ ತನ್ನ ಏಳನೇ ಕೆಲಸ ಕೂಡ ನನ್ನ ಕೈ ಹಿಡಿಯಲಿಲ್ಲ. ಹೀಗಾಗಿ ಬೇಸತ್ತು 22 ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಯೋಚಿಸಿದೆ' ಎಂದು ಗುಪ್ತಾ ಹೇಳುತ್ತಾರೆ. ಸಂದರ್ಶನಕ್ಕೆ ಹೋದಾಗ

"ನಾನು ಕಿಟಕಿಯಿಂದ ಹೊರಗೆ ನೋಡಿ ಜಿಗಿಯಲು ಮುಂದಾಗಿದ್ದೆ, ಆದರೆ ಅಲ್ಲಿನ ಸಹೋದ್ಯೋಗಿಗಳು ನನ್ನನ್ನು ರಕ್ಷಿಸಿದರು. ನನ್ನನ್ನು ಮನೋವೈದ್ಯಕೀಯ ವಾರ್ಡ್‌ಗೆ ಸೇರಿಸಲಾಯಿತು ಮತ್ತು ಖಿನ್ನತೆಗೆ ಒಳಗಾಗಿದ್ದೇನೆ ಎಂದು ರೋಗನಿರ್ಣಯ ಮಾಡಲಾಯಿತು" ಎಂದು ಗುಪ್ತ ತಮ್ಮ ಅಗ್ನಿ ಪರೀಕ್ಷೆಯನ್ನು ಹಂಚಿಕೊಂಡಿದ್ದಾರೆ. "ವೈದ್ಯರು ನನ್ನನ್ನು ಹೋಗಲು ಬಿಟ್ಟ ಏಕೈಕ ಕಾರಣವೆಂದರೆ, 'ನನಗೆ ಉದ್ಯೋಗ ಸಂದರ್ಶನವಿದೆ - ಇದು ನನ್ನ ಏಕೈಕ ಅವಕಾಶ' ಎಂದು ನಾನು ಹೇಳಿದ್ದೆ, ಇದರಿಂದ ವೈದ್ಯರು ನನಗೆ ಹೋಗಲು ಅನುಮತಿ ನೀಡಿದರು" ಎಂದು ಅವರು ಹೇಳಿದರು. ನಂತರ ಅವರು ಮೆಕಿನ್ಸೆಯಲ್ಲಿ ಕೆಲಸವನ್ನು ಪಡೆದುಕೊಂಡರು.

ಗುಪ್ತಾ ಸಿಇಒ ಆಗಿದ್ದು ಹೇಗೆ?

ಗುಪ್ತಾ ಸಿಇಒ ಆಗಿದ್ದು ಹೇಗೆ?

ಬಳಿಕ ಗುಪ್ತಾ ಜೀವನ ಸರಿಯಾದ ಹಾದಿಯಲ್ಲಿತ್ತು. ಆದರೆ 3 ವರ್ಷಗಳ ನಂತರ 2008 ರ ಆರ್ಥಿಕ ಬಿಕ್ಕಟ್ಟಿನಿಂದ ಬದುಕುಳಿದ ಗುಪ್ತಾ ಬದಲಾವಣೆಯನ್ನು ಬಯಸಿದ್ದರು. ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಮುಂದಾದರು. ಆದ್ದರಿಂದ 25 ನೇ ವಯಸ್ಸಿನಲ್ಲಿ ಭಾರತಕ್ಕೆ ತೆರಳಿದರು. ಪತಿ ಹಾಗೂ ಸ್ನೇಹಿತನೊಂದಿಗೆ ಸ್ವಂತ ಆಸ್ತಿ ನಿರ್ವಹಣೆ ಸಂಸ್ಥೆಯನ್ನು ಪ್ರಾರಂಭಿಸಿದರು. ಕೆಲವು ವರ್ಷಗಳ ನಂತರ, ಅವರ ಕಂಪನಿಯನ್ನು ಎಡೆಲ್ವೀಸ್ MF ಸ್ವಾಧೀನಪಡಿಸಿಕೊಂಡಿತು. "ನಾನು ಕಾರ್ಪೊರೇಟ್ ಏಣಿಯನ್ನು ಏರಿದೆ. ಅವಕಾಶಗಳು ನನ್ನ ಸುತ್ತ ಸುಳಿದಾಡ ತೊಡಗಿದವು"ಎಂದು ಗುಪ್ತಾ ಹೇಳಿದರು.

ಮುಂದೆ Edelweiss MF CEO ಗಾಗಿ ಹುಡುಕಲಾರಂಭಿಸಿದಾಗ, ಗುಪ್ತಾ ಆರಂಭದಲ್ಲಿ ಅರ್ಜಿ ಹಾಕಲು ಹಿಂಜರಿದರು. ಆದರೆ ಪತಿ ಪ್ರೋತ್ಸಾಹದೊಂದಿಗೆ ಅವರು ಅರ್ಜಿ ಸಲ್ಲಿಸಲು ನಿರ್ಧರಿಸಿದರು. ಅದು ಅವರ ಕೈ ಹಿಡಿಯಿತು. ಕೆಲವು ತಿಂಗಳುಗಳ ನಂತರ, ರಾಧಿಕಾ ಗುಪ್ತಾ ಅವರು 33 ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ CEO ಗಳಲ್ಲಿ ಒಬ್ಬರಾದರು.

English summary
One of the youngest CEOs in the country, Gupta shares his inspirational journey. What are the challenges she has faced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X