ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕನ್ನಡ: ಕಸ ಎಸೆದವರ ಮಾಹಿತಿ ನೀಡಿ 500 ರೂ. ಗೆಲ್ಲಿ; ಯಶಸ್ವಿಯಾದ ಗ್ರಾ.ಪಂ ಉಪಾಯ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 25: ರಸ್ತೆ ಬದಿಗಳಲ್ಲಿ ಕಸ ಎಸೆಯಬೇಡಿ ಅಂದರೆ ಜನ ಕೇಳಲ್ಲ. ಸಿಸಿಟಿವಿ ಹಾಕಿದರೂ ಏನೂ ಪ್ರಯೋಜನವಾಗಲ್ಲ. ಎಷ್ಟೇ ಬ್ಯಾನರ್ ಹಾಕಿದರೂ, ಎಚ್ಚರಿಕೆ ನೀಡಿದರೂ ಜನ ಮಾತ್ರ ಬದಲಾಗಲೇ ಇಲ್ಲ. ಹೀಗಾಗಿ ಜನರ ವರ್ತನೆಯಿಂದ ಬೇಸತ್ತು ಹೋದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತಿಯೊಂದು ಈಗ ಹೊಸ ಐಡಿಯಾ ರೂಪಿಸಿದೆ.

ಕಸ ಬಿಸಾಡುವವರ ಮಾಹಿತಿ ನೀಡಿ 500 ರೂಪಾಯಿ ಗೆಲ್ಲಿ ಎಂಬ ಹೊಸ ಆಫರ್ ಅನ್ನು ಗ್ರಾಮದ ಜನರಿಗೆ ನೀಡಿತ್ತು. ಗ್ರಾಮ ಪಂಚಾಯತ್‌ನ ನೂತನ ಆಫರ್ ಸಕ್ಸಸ್ ಆಗಿದ್ದು, ಬೇಕಾಬಿಟ್ಟಿ ಕಸ ಎಸೆಯುವುದು ನಿಂತೇ ಹೋಗಿದೆ.

 ಸ್ಥಳೀಯ ಆಡಳಿತಕ್ಕೆ ತೊಂದರೆ

ಸ್ಥಳೀಯ ಆಡಳಿತಕ್ಕೆ ತೊಂದರೆ

ಗ್ರಾಮೀಣ ಭಾಗದಲ್ಲಿ ರಸ್ತೆ ಬದಿ ಕಸ, ತ್ಯಾಜ್ಯಗಳನ್ನು ಎಸೆಯುವುದು ಕಾಮನ್ ಆಗಿಬಿಟ್ಟಿದೆ. ನಮ್ಮನೆ ಕಸ ಇಲ್ಲದೆ ಸ್ವಚ್ಛವಾಗಿ ಇದ್ದರೆ ಸಾಕು, ಹೊರಗಿನ ಸ್ಥಿತಿ ಹೇಗಿದ್ದರೂ ತೊಂದರೆ ಇಲ್ಲ ಅನ್ನುವವರು ಕಸ ಎಸೆಯೋದು ರಸ್ತೆಯಲ್ಲೇ ಆಗಿರುವುದರಿಂದ ಈ ಸ್ಥಿತಿಯನ್ನು ನಿಭಾಯಿಸುವುದು ಕೂಡಾ ಸ್ಥಳೀಯ ಆಡಳಿತಕ್ಕೆ ತೊಂದರೆ ನೀಡಿದೆ.

 ಮಂಗಳೂರಿನ ಕುಪ್ಪೆಪದವು ಗ್ರಾಮ ಪಂಚಾಯತ್

ಮಂಗಳೂರಿನ ಕುಪ್ಪೆಪದವು ಗ್ರಾಮ ಪಂಚಾಯತ್

ಈ ಹಿನ್ನಲೆಯಲ್ಲಿ ಮಂಗಳೂರಿನ ಕುಪ್ಪೆಪದವು ಗ್ರಾಮ ಪಂಚಾಯತ್ ಗ್ರಾಮದ ಜನರಿಗೆ ಹೊಸ ಆಫರ್ ಅನ್ನು ನೀಡಿತ್ತು. ಈ ಆಫರ್ ಈಗ ಭರ್ಜರಿ ಯಶಸ್ಸನ್ನು ತಂದಿಟ್ಟಿದ್ದು. ರಸ್ತೆ ಬದಿ ಕಸ ಎಸೆಯುವವರ ಸಂಖ್ಯೆ ಕಡಿಮೆಯಾಗಿದೆ. ರಸ್ತೆ ಬದಿ ಕಸ ಎಸೆಯುವವರನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯತ್ ಅಧಿಕಾರಿಗಳು ಮಾಡಿದ ಉಪಾಯ ಫಲ ನೀಡಿದೆ.

ಅಕ್ಟೋಬರ್‌ 28ರಂದು ಗ್ರಾಮ ಪಂಚಾಯತ್ ಸಭೆಯಲ್ಲಿ ಈ ನಿರ್ಧಾರವನ್ನು ಮಾಡಲಾಗಿತ್ತು. ಕಸ‌ ಎಸೆದವರ ಮಾಹಿತಿಯನ್ನು ನೀಡಿದರೆ 500 ರೂಪಾಯಿ ಗೆಲ್ಲಬಹುದು. ಕಸ ಎಸೆದವರು 1000 ರೂಪಾಯಿ ದಂಡ ಕಟ್ಟಬೇಕೆಂಬ ಖಡಕ್ ಆದೇಶವನ್ನು ಗ್ರಾಮ‌ ಪಂಚಾಯತ್‌ನಲ್ಲಿ ಮಾಡಲಾಗಿತ್ತು.

 ವಿಡಿಯೋ ಕಳುಹಿಸಿದರೆ 500 ರೂ. ಗೆಲ್ಲಬಹುದು

ವಿಡಿಯೋ ಕಳುಹಿಸಿದರೆ 500 ರೂ. ಗೆಲ್ಲಬಹುದು

ಕಸ ಎಸೆದವರ ಫೋಟೋ ಮತ್ತು ವಿಡಿಯೋ ಕಳುಹಿಸಿದರೆ 500 ರೂಪಾಯಿ ಹಣ ಗೆಲ್ಲಬಹುದು ಎಂಬ ಆಫರ್ ನೀಡಲಾಗಿದೆ. ಈ ಆಫರ್ ಕಸ ಎಸೆಯುವವರಲ್ಲಿ ಅಂಜಿಕೆ ಹುಟ್ಟಿಸಿದೆ. ಫೋಟೋ, ವಿಡಿಯೋ ಮಾಡಿ ಮರ್ಯಾದೆ ಹೋಗಬಹುದು ಎನ್ನುವ ಭಯದಿಂದ ಈಗ ಕಸ ಎಸೆಯುವವರ ಸಂಖ್ಯೆ ಕಡಿಮೆಯಾಗಿದೆ. ಗ್ರಾಮ‌ ಪಂಚಾಯತ್‌ನ ಈ ಆದೇಶ ಸಕಾರಾತ್ಮಕ ಫಲಿತಾಂಶ ನೀಡಿದೆ. ಇದರ ಪರಿಣಾಮ ರಸ್ತೆ ಬದಿಗಳಲ್ಲಿ, ಖಾಲಿ ಸೈಟ್‌ಗಳಲ್ಲಿ ಕಸ ಎಸೆಯುವುದು ನಿಂತಿದೆ.

 ಗ್ರಾಮ ಪಂಚಾಯತ್ ಪಿಡಿಒ ಹೇಳಿದ್ದೇನು?

ಗ್ರಾಮ ಪಂಚಾಯತ್ ಪಿಡಿಒ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಪ್ಪೆಪದವು ಗ್ರಾಮ ಪಂಚಾಯತ್ ಪಿಡಿಒ ಸವಿತಾ, ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಕಸದ ರಾಶಿಯೇ ಸುರಿದು ಹೋಗುತ್ತಿದ್ದರು. ಈ ಪ್ರದೇಶಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ನೆರವಿನಿಂದ ಸ್ವಚ್ಛ ಮಾಡಿದ್ದೆವು. ಕಸ ವಿಲೇವಾರಿ ಮಾಡಿದ ಬಳಿಕವೂ ಜನ ಕಸ ಸುರಿಯಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಸಭೆ ಮಾಡಿ ಕಸ ಎಸೆದವರ ಮಾಹಿತಿ ನೀಡಿದರೆ 500 ರೂಪಾಯಿ ಹಣ ಗೆಲ್ಲುವ ಆಫರ್ ಅನ್ನು ಜನರಿಗೆ ನೀಡಿ ಆ ಬಗ್ಗೆ ಬೋರ್ಡ್ ಕೂಡಾ ಹಾಕಿದೆವು. ನಮ್ಮ ಈ ನಿರ್ಧಾರ ಈಗ ಫಲ ನೀಡಿದೆ. ಕಸ ಎಸೆಯುವವರ ಸಂಖ್ಯೆ ಬಹಳ ಕಡಿಮೆಯಾಗಿದೆ ಅಂತಾ ಹೇಳಿದ್ದಾರೆ.

ಈ ಹಿಂದೆ ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೈದು ಪ್ರದೇಶದಲ್ಲಿ ಜನ ರಾಶಿ ರಾಶಿ ಕಸವನ್ನು ಎಸೆಯುತ್ತಿದ್ದರು. ಆದರೆ ಈ ಆದೇಶದ ಬಳಿಕ ಆ ಜಾಗಗಳು ಸ್ವಚ್ಛವಾಗಿದೆ. ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡುವುದಕ್ಕೂ ಅವಕಾಶ ಇಲ್ಲದಂತಾಗಿದೆ ಎಂದು ಪಿಡಿಒ ಸವಿತಾ ಖುಷಿ ವ್ಯಕ್ತಪಡಿಸಿದ್ದಾರೆ.

Recommended Video

ಹಾರ್ದಿಕ್ ಪಾಂಡ್ಯಾಗೆ ಪಾಕ್ ಆಟಗಾರನ ಟಿಪ್ಸ್ | Oneindia Kannada

English summary
Dakshina Kannada District's Kuppepadavu Gram Panchayat's Rs 500 reward to share information on people throwing waste in public places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X