ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 15ರಂದು ಪ್ರಮುಖ ಔಷಧಗಳ ಬೆಲೆ ಇಳಿಸಲಿದೆ ಸರಕಾರ

|
Google Oneindia Kannada News

ನವದೆಹಲಿ ಜುಲೈ 24: ಭಾರತದಲ್ಲಿ ಜನಸಾಮಾನ್ಯರಿಗೆ ತೀರಾ ಹೊರೆಯಾಗಿರುವ ವೆಚ್ಚದಲ್ಲಿ ಔಷಧ ಪ್ರಮುಖವಾದುದು. ಆಹಾರದಂತೆ ಔಷಧವೂ ಅಗತ್ಯವಸ್ತುವಾಗಿದೆ. ಸುದೀರ್ಘ ಕಾಲ ಔಷಧ ಸೇವಿಸುವ ರೋಗಿಗಳಿಗಂತೂ ತಿಂಗಳಿಗೆ ಸಾವಿರಾರು ರೂ ಹಣದ ಹೊರೆಯಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೆಲ ಪ್ರಮುಖ ಔಷಧಗಳ ಬೆಲೆ ಇಳಿಸಲು ಕ್ರಮಗಳಿಗೆ ಮುಂದಾಗಿದೆ.

ಕ್ಯಾನ್ಸರ್, ಡಯಾಬಿಟಿಸ್, ಹೃದ್ರೋಗ ಇತ್ಯಾದಿ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಔಷಧ ಬಿಟ್ಟರೆ ಬೇರೆ ಗತಿ ಇಲ್ಲ. ಇಂಥ ಔಷಧಗಳ ಬೆಲೆ ಇಳಿಸಲಾಗುವಂತೆ ಸರಕಾರ ಕೆಲ ಕ್ರಮಗಳನ್ನು ರೂಪಿಸಿಸಿದೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಅಲರ್ಜಿಯಾ, ಕೋವಿಡ್ ರೋಗವಾ? ಗೊಂದಲ ನಿವಾರಿಸಿಕೊಳ್ಳಿಅಲರ್ಜಿಯಾ, ಕೋವಿಡ್ ರೋಗವಾ? ಗೊಂದಲ ನಿವಾರಿಸಿಕೊಳ್ಳಿ

ಆಗಸ್ಟ್ 15ರಂದು ಔಷಧಗಳ ಬೆಲೆ ಇಳಿಸುವ ಘೋಷಣೆ ಮಾಡುವುದು ಸರಕಾರದ ಗುರಿ. ಔಷಧದ ಬೆಲೆ ಅಷ್ಟಿಷ್ಟು ಇಳಿಯುವುದಲ್ಲ. ಮೂಲಗಳ ಪ್ರಕಾರ ಕೆಲ ಪ್ರಮುಖ ಔಷಧಗಳ ಬೆಲೆ ಶೇ. 70ರಷ್ಟು ಇಳಿಕೆ ಆಗಬಹುದು ಎನ್ನಲಾಗುತ್ತಿದೆ.

ಹಾಗೆಯೇ, 2015ರ ರಾಷ್ಟ್ರೀಯ ಅಗತ್ಯ ಔಷಧದ ಪಟ್ಟಿಯನ್ನು ಪರಿಷ್ಕರಿಸಲು ಕೇಂದ್ರ ಚಿಂತಿಸಿದೆ. ಸಾಕಷ್ಟು ವಹಿವಾಟು ಆಗುತ್ತಿರುವ ಔಷಧಗಳನ್ನೂ ಈ ಪಟ್ಟಿಗೆ ಸೇರಿಸುವ ಪ್ರಯತ್ನವಾಗುತ್ತದೆ.

ಅಧಿಕ ಲಾಭದ ಔಷಧಗಳು

ಅಧಿಕ ಲಾಭದ ಔಷಧಗಳು

ರೋಗಿಗಳು ದೀರ್ಘಕಾಲ ಬಳಸುವ ಔಷಧದ ಮೇಲೆ ವ್ಯಾಪಾರಿಗಳು ಲಾಭದ ಅಂತರ ಹೆಚ್ಚು ಇಟ್ಟುಕೊಳ್ಳದಂತೆ ನಿಯಂತ್ರಿಸಲು ಸರಕಾರ ಮುಂದಾಗಿದೆ. ಅಂದರೆ ಇಂಥ ಔಷಧಗಳನ್ನು ಹೆಚ್ಚು ಲಾಭಕ್ಕೆ ಮಾರುವಂತಿಲ್ಲ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಜುಲೈ 26ರಂದು ಫಾರ್ಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ.

ಕೆಲ ಔಷಧಗಳಲ್ಲಿ ಲಾಭದ ಮಾರ್ಜಿನ್ ಶೇ. 1000ದಷ್ಟಿದೆ. ಅಂದರೆ ಮೂಲಬೆಲೆಗಿಂತ ಹತ್ತು ಪಟ್ಟು ಹೆಚ್ಚು ಬೆಲೆಗೆ ಮಾರಲಾಗುತ್ತಿರುವುದು ಕಂಡು ಬಂದಿದೆ.

ಈಗಾಗಲೇ ಇರುವ ಅಗತ್ಯ ಔಷಧಗಳ ಪಟ್ಟಿಯಲ್ಲಿ (ಎನ್‌ಎಲ್‌ಇಎಂ) ಇರುವ 355 ಔಷಧಗಳ ಬೆಲೆಗೆ ಲಕ್ಷ್ಮಣ ರೇಖೆ ಹಾಕುವ ಕೆಲಸವನ್ನು ಎನ್‌ಪಿಪಿಎ (ಔಷಧ ಬೆಲೆ ನಿಯಂತ್ರಣ ಸಂಸ್ಥೆ) ಮಾಡುತ್ತಿದೆ. ಈ ಪಟ್ಟಿಯಲ್ಲಿರುವ ಔಷಧಗಳನ್ನು ಸಗಟು ವ್ಯಾಪಾರಿಗಳು ಶೇ. 8ಕ್ಕಿಂತ ಹೆಚ್ಚು ಲಾಭಕ್ಕೆ ಮಾರುವಂತಿಲ್ಲ. ರೀಟೇಲ್ ಮಾರಾಟಗಾರರು ಶೇ. 16ಕ್ಕಿಂತ ಹೆಚ್ಚು ಲಾಭ ಇಟ್ಟುಕೊಳ್ಳುವಂತಿಲ್ಲ.

ಪಟ್ಟಿಯಲ್ಲಿಲ್ಲದ ಔಷಧಗಳ ಕಥೆ

ಪಟ್ಟಿಯಲ್ಲಿಲ್ಲದ ಔಷಧಗಳ ಕಥೆ

ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯಲ್ಲಿರುವ 355 ಔಷಧಗಳ ಬೆಲೆಗೆ ಸರಕಾರವೇನೋ ಅಂಕುಶ ಹಾಕಿದೆ. ಆದರೆ, ಈ ಪಟ್ಟಿಯಲ್ಲಿಲ್ಲದ ಔಷಧಗಳ ಬೆಲೆಯನ್ನು ಕಂಪನಿಗಳು ಮನಸೋಯಿಚ್ಛೆ ಏರಿಸುತ್ತಿರುವುದು ಕಂಡುಬರುತ್ತಿದೆ. ಭಾರೀ ಲಾಭಕ್ಕೆ ಔಷಧಗಳು ಮಾರಾಟವಾಗುತ್ತಿವೆ. ಇದರಿಂದ ಜನಸಾಮಾನ್ಯರಿಗೆ ಔಷಧ ವೆಚ್ಚ ದಿನಗಳೆದಂತೆ ಏರುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೆಲ ಪ್ರಮುಖ ಔಷಧಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ ಆ ಮೂಲಕ ಬೆಲೆ ಇಳಿಕೆ ತರುವ ಪ್ರಯತ್ನ ಮಾಡುತ್ತಿದೆ.

ಕೇಂದ್ರದ ಕೆಲ ಕ್ರಮಗಳು

ಕೇಂದ್ರದ ಕೆಲ ಕ್ರಮಗಳು

ಈ ಹಿಂದೆಯೂ ಕೇಂದ್ರ ಸರಕಾರ ಕೆಲ ಔಷಧಗಳ ಬೆಲೆ ಇಳಿಕೆಗೆ ಕ್ರಮ ಕೈಗೊಂಡಿತ್ತು. ಕ್ಯಾನ್ಸರ್ ಸಂಬಂಧಿಸಿದ 41 ಔಷಧಗಳ ವ್ಯಾಪಾರ ಲಾಭದ ಅಂತರವನ್ನು ಶೇ. 30ರಷ್ಟು ಇಳಿಸಲು 2019ರಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದ 526 ಬ್ರ್ಯಾಂಡ್ ಔಷಧಗಳ ಎಂಆರ್‌ಪಿ ದರದಲ್ಲಿ ಶೇ. 90ರಷ್ಟು ಇಳಿಕೆಯಾಗಿತ್ತು.

ಹಾಗೆಯೇ, ಕೊರೊನರಿ ಸ್ಟೆಂಟ್, ಮಂಡಿ ಚಿಪ್ಪು ಜೋಡಿಸುವ ಸಾಧನದ ಬೆಲೆಯನ್ನು ಸರಕಾರವೇ ನಿಗದಿ ಮಾಡಿತು. ಇದರಿಂದ ಬಹಳ ದುಬಾರಿಯಾಗಿದ್ದ ಈ ವಸ್ತುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು.

ಸಿಟಗ್ಲಿಪ್ಟಿನ್ ಪೇಟೆಂಟ್ ಮುಕ್ತಾಯ; ಡಯಾಬಿಟಿಸ್ ರೋಗಿಗಳಿಗೆ ಅಗ್ಗಕ್ಕೆ ಸಿಗಲಿದೆ ಸೂಪರ್ ಹಿಟ್ ಔಷಧಸಿಟಗ್ಲಿಪ್ಟಿನ್ ಪೇಟೆಂಟ್ ಮುಕ್ತಾಯ; ಡಯಾಬಿಟಿಸ್ ರೋಗಿಗಳಿಗೆ ಅಗ್ಗಕ್ಕೆ ಸಿಗಲಿದೆ ಸೂಪರ್ ಹಿಟ್ ಔಷಧ

Recommended Video

35 ಎಸೆತ,3 ಫೋರ್,5 ಸಿಕ್ಸರ್: ಅಕ್ಷರ್ ಪಟೇಲ್ ಸ್ಫೋಟಕ ಆಟ ಹೇಗಿತ್ತು ನೋಡಿ | *Cricket | OneIndia Kanndaa
12,500 ಕೋಟಿ ರೂ ಉಳಿತಾಯ

12,500 ಕೋಟಿ ರೂ ಉಳಿತಾಯ

ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ ಪರಿಷ್ಕರಣೆ, ಡಯಾಬಿಟಿಸ್ ಮತ್ತು ಹೃದ್ರೋಗಗಳ ಔಷಧಗಳ ಬೆಲೆ ನಿಯಂತ್ರಣ, ಸ್ಟೆಂಟ್ ನೀ ಕ್ಯಾಪ್ ಬೆಲೆ ನಿಯಂತ್ರಣ, ಕ್ಯಾನ್ಸರ್ ನಿರೋಧಕ ಔಷಧ ಬೆಲೆ ನಿಯಂತ್ರಣ ಇವೇ ಮುಂತಾದ ಕ್ರಮಗಳಿಂದ ಸುಮಾರು 12,500 ಕೋಟಿ ರೂ ಹಣ ವಾರ್ಷಿಕವಾಗಿ ಉಳಿತಾಯ ಆಗುತ್ತದೆ ಎಂದು ಕಳೆದ ವರ್ಷ ಆರೋಗ್ಯ ಸಚಿವರು ಸಂಸತ್‌ಗೆ ಮಾಹಿತಿ ನೀಡಿದ್ದರು.

English summary
Central government is taking measures to drastically reduce the prices of critical drugs used for treating cancer, diabetic patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X