2021ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಗೂಗಲ್ ಸರ್ಚ್ ಆದ ವಿಷಯಗಳೇನು?

ಯಾವುದೇ ವಿಷಯಗಳ ಬಗ್ಗೆಯಾದರೂ ಮಾಹಿತಿ ಬೇಕಿರಲಿ ಮೊದಲು ನಮ್ಮ ಕಣ್ಣಮುಂದೆ ಬರುವುದೇ ಗೂಗಲ್. ಸದ್ಯ ಗೂಗಲ್ ಇಡೀ ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ.

ಇನ್ನು ಇಡೀ ವರ್ಷ ಜಗತ್ತಿನ ಜನರು ಗೂಗಲ್‌ನಲ್ಲಿ ಯಾವೆಲ್ಲಾ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ಮಾಡಿದ್ದಾರೆ ಎನ್ನುವುದನ್ನು ನೋಡೋಣ. ಹೌದು, ಗೂಗಲ್ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹೆಚ್ಚಿನ ಜನರು ಏನೆಲ್ಲಾ ಸರ್ಚ್ ಮಾಡಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದೆ.

ನಟರು ಹಾಗೂ ಅಥ್ಲೀಟ್‌ಗಳು
ಗೂಗಲ್‌ನಲ್ಲಿ 2021ರಲ್ಲಿ ನಟರು ಹಾಗೂ ಅಥ್ಲೀಟ್‌ಗಳ ಕುರಿತು ಹೆಚ್ಚು ಹುಡುಕಾಟ ನಡೆದಿದೆ. ಹಾಲಿವುಡ್‌ ನಟಿ ಕಿಮ್ ಕಾರ್ಡಶಿಯಾನ್ ಮತ್ತು ರಾಪರ್‌ ಕಾನ್ಯೆ ವೆಸ್ಟ್‌ ಡಿವೋರ್ಸ್‌ ಪಡೆದು ಬೇರೆಯಾಗಿದ್ದಾರೆ ಮತ್ತು ಸಹ ಪೋಷಕರಾಗಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಕಿಮ್‌ ಅವರ ಮಾಜಿ ಪತಿ ಕಾನ್ಯೆ ಹೆಂಡತಿಯನ್ನು ಮತ್ತೆ ಒಲಿಸಿಕೊಳ್ಳುವ ಎಲ್ಲಾ ಸಾರ್ವಜನಿಕ ಪ್ರಯತ್ನ ಮಾಡುತ್ತಿರುವುದು ಕಂಡುಬಂದಿತ್ತು.

Google Year in Search 2021: This is what People Googled most for during the year in World

ಕಾನ್ಯೆ ವೆಸ್ಟ್ ತಮ್ಮ ಮಾಜಿ ಪತ್ನಿ ಕಿಮ್‌ ಅವರನ್ನು ಮರಳಿ ಗೆಲ್ಲುವ ಸಾರ್ವಜನಿಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಕಿಮ್ ಕಾರ್ಡಶಿಯಾನ್ ನಿಜವಾಗಿಯೂ ಇದರ ಬಗ್ಗೆ ಆಸಕ್ತಿ ಹೊಂದಿಲ್ಲ ಅಥವಾ ಇಂಪ್ರೆಸ್‌ ಆಗಿಲ್ಲ ಎಂದು ತೋರುತ್ತಿದೆ.

ಕಿಮ್ ಕಾರ್ಡಶಿಯಾನ್ ಅವರನ್ನು ಮತ್ತೆ ಗೆಲ್ಲಲು ಕಾನ್ಯೆ ವೆಸ್ಟ್ ಮಾಡುತ್ತಿರುವ ಸಾರ್ವಜನಿಕ ಪ್ರಯತ್ನಗಳಿಂದ ಪ್ರಭಾವಿತರಾಗಿಲ್ಲ. ಈ ವಿಚಾರ ಕುರಿತು ಡೇವಿಡ್‌ಸನ್ ಹಾಗೂ ಕಿಮ್ ಕಾರ್ಡಶಿಯಾನ್ ಕುರಿತು ಹೆಚ್ಚು ಸರ್ಚ್ ಮಾಡಿದ್ದರು.

ಅದರ ಜತೆಗೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಹೆಸರನ್ನೂ ಹೆಚ್ಚು ಮಂದಿ ಸರ್ಚ್ ಮಾಡಿದ್ದಾರೆ. ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸಂದರ್ಭದಲ್ಲಿ ಅವರ ಹೆಸರನ್ನು ಹೆಚ್ಚು ಸರ್ಚ್ ಮಾಡಲಾಗಿತ್ತು.

ಹಾಗೆಯೇ ಅಮೆರಿಕದ ನಟ ಆರ್ಮಿ ಹ್ಯಾಮರ್ ಬಗ್ಗೆಯೂ ಹೆಚ್ಚು ಸರ್ಚ್ ಮಾಡಲಾಗಿತ್ತು. ಫುಟ್ಬಾಲ್ ಆಟಗಾರ ಡ್ಯಾನಿಶ್ ಹಾಗೆಯೇ ಅಮೆರಿಕದ ಗಾಲ್ಫರ್ ಕ್ರಿಶ್ಚಿಯನ್ ಎರಿಕ್‌ಸನ್ ಮೂರನೆಯದಾಗಿ ಅಮೆರಿಕದ ಜಿನ್ಮಾಸ್ಟ್‌ ಸೈಮನ್ , ಫುಟ್ಬಾಲರ್ ಹೆನ್ರಿ ರಗ್ಸ್ ಅವರ ಹೆಸರನ್ನೂ ಹೆಚ್ಚು ಸರ್ಚ್ ಮಾಡಿದ್ದಾರೆ.

ಹೆಚ್ಚು ಸರ್ಚ್ ಮಾಡಲಾದ ಆಹಾರ ಹಾಗೂ ಆಟಗಳು
ಈ ವರ್ಷ ಹುಡುಕಲ್ಪಟ್ಟ ಆಹಾರವೆಂದರೆ ಬಿರಿಯಾ ಟಾಕೋಸ್ ಫೆಟಾ ಪಾಸ್ತಾ ಹೆಚ್ಚು ಸರ್ಚ್ ಆಗಿದೆ. ಎರಡು ಸ್ಥಾನಗಳನ್ನು ಕ್ಯಾರ್ಕ್ಯುಟೆರಿ ಬೋರ್ಡ್ ಹಾಗೂ ಜಪಾನೀಸ್ ಆಹಾರ ಶೋಗಾಯಾಕಿ ಪಡೆದುಕೊಂಡಿದೆ.

2021ರಲ್ಲಿ ಹೆಚ್ಚು ಹುಡುಕಲಾದ ಆಟಗಳು ಪಾಪ್‌ಕ್ಯಾಟ್ ಆಗಿದೆ. ಫೀಫಾ 22 ಹಾಗೂ ಬ್ಯಾಟಲ್‌ಫೀಲ್ಡ್ 2042, ನಾಲ್ಕನೆಯದಾಗಿ ಮಾನ್ಸ್ಟರ್ ಹಂಟರ್ ಪಡೆದಿದ್ದು, ನಾಲ್ಕನೇ ಸ್ಥಾನವನ್ನು ರೆಸಿಡೆಂಟ್ ಇವಿಲ್ ವಿಲೇಜ್ ಪಡೆದಿದೆ.

ಸಿನಿಮಾಗಳು, ಟಿವಿ ಶೋ, ಹಾಡುಗಳು
ಬ್ಲ್ಯಾಕ್ ವಿಡೋ ಹಾಗೂ ಡ್ಯೂನ್, ನಾಲ್ಕನೇ ಸ್ಥಾನವನ್ನು ಶಾಂಗ್ ಚಿ ಸೇರಿದೆ. ಮಾರ್ವೆಲ್ ಪ್ರೊಡಕ್ಷನ್ ಹಾಗೂ ಸ್ಕ್ವಿಡ್ ಗೇಮ್ಸ್, ಬ್ರಿಗರ್ಟನ್, ವ್ಯಾಂಡ್‌ವಿಷನ್ ಟೆನ್ ರಿಂಗ್ಸ್ ಹಾಗೂ ಕೋಬ್ರಾ ಕೈ ಆಂಡ್ ಲೋಕಿ ನಂತರದ ಸ್ಥಾನದಲ್ಲಿದೆ.

ಆಲಿವಿಯಾ ರೋಡ್ರಿಗೋ ಮಾಂಟೆರೋ( ಕಾಲ್‌ ಮಿ ಬೈ ಯುವರ್ ನೇಮ್) ಲಿಲ್ ನಾಸ್ ಎಕ್ಸ್. ಮೂರನೇಯ ಹಾಡು ಜಾಕ್ ಹಾರ್ಲೋ ಅವರ ಇಂಡಸ್ಟ್ರಿ ಬೇಬಿ.

ಹೆಚ್ಚು ಹುಡುಕಲ್ಪಟ್ಟ ಕ್ರೀಡಾ ತಂಡಗಳು
ಹೆಚ್ಚು ಹುಡುಕಲ್ಪಟ್ಟ ಕ್ರೀಡಾ ತಂಡಗಳ ಪಟ್ಟಿಯಲ್ಲಿ ಫುಟ್ಬಾಲ್ ಕ್ಲಬ್‌ಗಳು ಮಾತ್ರ ಸೇರಿವೆ. ರಿಯಲ್ ಮ್ಯಾಡ್ರಿಡ್ ಅಗ್ರಸ್ಥಾನದಲ್ಲಿದೆ ಚೆನ್ಸಿಯಾ, ಪ್ಯಾರಿಸ್ ಸೇಂಟ್ -ಜರ್ಮನ್, ನಾಲ್ಕನೇ ಸ್ಥಾನ ಎಫ್‌ಸಿ ಬಾರ್ಸಿಲೋನಾ ಪಡೆದುಕೊಂಡಿದೆ.

ಇನ್ನು ಭಾರತದಲ್ಲಿ ಕ್ರಿಕೆಟ್ ಮತ್ತು ಪುಟ್ಬಾಲ್‌ ಗೂಗಲ್‌ ನೀಡಿರುವ ಮಾಹಿತಿಯಂತೆ 2021ರಲ್ಲಿ ಕೂಡ ಕ್ರಿಕೆಟ್ ವಿಚಾರದ ಬಗ್ಗೆ ಹೆಚ್ಚಿನ ಜನರು ಸರ್ಚ್‌ ಮಾಡಿರುವ ಪ್ರವೃತ್ತಿ ಮುಂದುವರೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ICC T20 ವಿಶ್ವಕಪ್ ಕ್ರಿಕೆಟ್‌ ಬಗ್ಗೆ ಸರ್ಚ್‌ ಮಾಡಿರುವುದು ಅಗ್ರಸ್ಥಾನ ಪಡೆದುಕೊಂಡಿದೆ.

ಅಲ್ಲದೆ ಕೋಪಾ ಅಮೇರಿಕಾ ಮತ್ತು ಯುರೋ ಕಪ್ ಪಂದ್ಯಾವಳಿ ಸಮಯದಲ್ಲೂ ಪುಟ್ಬಾಲ್‌ ಪ್ರಿಯರು ಹೆಚ್ಚಿನ ಸಮಯ ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದಾರೆ. ಇನ್ನು ಇದೇ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ ಸಮಯದಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಕೂಡ ಉತ್ತಮವಾಗಿತ್ತು.ಈ ಸಮಯದಲ್ಲಿ ಜಾವೆಲಿನ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಬಗ್ಗೆ ಕೂಡ ಗೂಗಲ್‌ನಲ್ಲಿ ಹೆಚ್ಚಿನ ಜನರು ಸರ್ಚ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+