ABP News-CVoter Survey: ಗೋವಾದಲ್ಲಿ ಬಿಜೆಪಿಗೆ ಮತ್ತೆ ಜಯ

ಪಣಜಿ, ಜನವರಿ 10: ಕರಾವಳಿ ರಾಜ್ಯ ಗೋವಾದ 40 ವಿಧಾನಸಭಾ ಕ್ಷೇತ್ರಗಳ ಈ ಬಾರಿ ಬಿರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ. ಬಿಜೆಪಿ, ಕಾಂಗ್ರೆಸ್ ಅಲ್ಲದೆ ಎಎಪಿ, ಬಿಎಸ್ಪಿ ಸೇರಿದಂತೆ ಎಂಟು ಪ್ರಮುಖ ಪಕ್ಷಗಳು ಕಣದಲ್ಲಿವೆ. ಸದ್ಯ
ಬಿಜೆಪಿ ಅಧಿಕಾರದಲ್ಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಮತ್ತೊಂದು ಅವಧಿಗೆ ಗದ್ದುಗೆ ಹಿಡಿಯಲಿದ್ದು, ಜಯಭೇರಿ ಬಾರಿಸಲಿದೆ ಎಂದಿವೆ. ಎಎಪಿ ಪ್ರತಿಪಕ್ಷ ಇಲ್ಲವೇ ಕಿಂಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.

ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಪಂಜಾಬ್, ಉತ್ತರಾಖಂಡ, ಗೋವಾ ಚುನಾವಣೆ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ಗೋವಾದ ಜೊತೆಗೆ ಉತ್ತರಾಖಂಡ್,ಉತ್ತರಪ್ರದೇಶ, ಮಣಿಪುರ, ಪಂಜಾಬ್ ರಾಜ್ಯಗಳಿಗೂ ಚುನಾವಣೆ ನಿಗದಿಯಾಗಿದೆ. ಎಲ್ಲಾ ರಾಜ್ಯಗಳಲ್ಲಿನ ಜನಾಭಿಪ್ರಾಯ ಸಂಗ್ರಹ ನಡೆಸಿರುವ ಎಬಿಪಿ -ಸಿ ವೋಟರ್ ಸಂಸ್ಥೆ ಸಮೀಕ್ಷೆ ವರದಿಗಳನ್ನು ಪ್ರಕಟಿಸುತ್ತಿದೆ. ಮೊದಲ ಹಂತದ ಮತದಾನ ಫೆಬ್ರವರಿ 10ರಂದು ನಿಗದಿಯಾಗಿದೆ. ಗೋವಾದಲ್ಲಿ ಎರಡನೇ ಹಂತದಲ್ಲಿ ಮತದಾನ (ಫೆ.14ರಂದು) ನಡೆಯಲಿದೆ. ಮಾರ್ಚ್ 10ರಂದು ಎಲ್ಲಾ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬರಲಿದೆ.

 ಗೋವಾದಲ್ಲಿ 2022ರ ಸ್ಥಾನ ಗಳಿಕೆ

ಗೋವಾದಲ್ಲಿ 2022ರ ಸ್ಥಾನ ಗಳಿಕೆ

ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಗೋವಾದಲ್ಲಿ 2022ರ ಚುನಾವಣೆಯಲ್ಲಿ ಬಿಜೆಪಿ 19-23, ಎಎಪಿ 5-9, ಕಾಂಗ್ರೆಸ್ 4-8, ಎಂಜಿಪಿ 2-6 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಹೇಳಿದೆ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಎಎಪಿ 2ನೇ ಅತಿ ದೊಡ್ಡ ಪಕ್ಷವಾಗಿ ಪ್ರತಿಪಕ್ಷ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

ಬಿಜೆಪಿ ಶೇ 32ರಷ್ಟು ಮತ ಗಳಿಕೆ, ಎಎಪಿ ಶೇ 22.5 ರಷ್ಟು ಹಾಗೂ ಕಾಂಗ್ರೆಸ್ 19.8 ರಷ್ಟು, ಎಂಜಿಪಿ ಶೇ 7.7 ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 8 ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಕಣದಲ್ಲಿದ್ದು, ಇತರರು ಶೇ 18.1 ರಷ್ಟು ಮತ ಗಳಿಸುವ ಸಾಧ್ಯತೆಯೂ ಇದೆ.

 ಎಎಪಿ ಕಿಂಗ್ ಮೇಕರ್?

ಎಎಪಿ ಕಿಂಗ್ ಮೇಕರ್?

40 ಸದಸ್ಯ ಬಲದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಂದು ಸಮೀಕ್ಷೆಯಲ್ಲಿ ಎಎಪಿ 7-11 ಸ್ಥಾನಗಳನ್ನು ಗೆಲ್ಲಲಿದೆ ಎಂದು ವರದಿ ಬಂದಿತ್ತು. ಹೀಗಾಗಿ, ಹೊಸದಾಗಿ ಎಂಟ್ರಿ ಕೊಟ್ಟಿರುವ ಎಎಪಿ ಏನಾದರೂ ಇಷ್ಟು ಪ್ರಮಾಣದಲ್ಲಿ ಸ್ಥಾನ ಗಳಿಸಿದರೆ ಪ್ರತಿಪಕ್ಷದ ಸ್ಥಾನ ಪಡೆಯಲಿದೆ. ಇನ್ನು ಹೆಚ್ಚು ಸ್ಥಾನ ಬಂದರೆ ಕಿಂಗ್ ಮೇಕರ್ ಆಗಿ, ಜನರು ಬದಲಾವಣೆ ಬಯಸಿದ್ದಾರೆ ಎಂಬುದನ್ನು ಸಾಬೀತುಪಡಿಸಲಿದೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಪಕ್ಷ ಮತ್ತೊಂದು ರಾಜ್ಯದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲಿದೆ.

 ಕಂಗಾಲಾದ ಕಾಂಗ್ರೆಸ್

ಕಂಗಾಲಾದ ಕಾಂಗ್ರೆಸ್

ವಿಧಾನಸಭೆ ಚುನಾವಣೆ ಎದುರಾಗಿರುವಾಗಲೇ ಹಲವಾರು ನಾಯಕರ ರಾಜೀನಾಮೆಯಿಂದಾಗಿ ಗೋವಾ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು. ಈ ಬಾರಿಯ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ರಾಜ್ಯದಲ್ಲಿ ಈಗಾಗಲೇ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಆದರೆ, ಇತ್ತೀಚೆಗೆ ಬಂದಿರುವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದು, ಕಾಂಗ್ರೆಸ್ ಸ್ಥಾನವನ್ನು ಎಎಪಿ ಆಕ್ರಮಿಸುತ್ತಿರುವುದು ಸ್ಪಷ್ಟವಾಗಿದೆ.

 ಅಧಿಕಾರಕ್ಕೇರಲು 21 ಮ್ಯಾಜಿಕ್ ನಂಬರ್

ಅಧಿಕಾರಕ್ಕೇರಲು 21 ಮ್ಯಾಜಿಕ್ ನಂಬರ್

2017ರ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗಳಿಸಿದರೂ ಅಧಿಕಾರ ಗದ್ದುಗೆಗೇರಲು ಸಾಧ್ಯವಾಗಲಿಲ್ಲ. 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 13 ಸ್ಥಾನ ಹಾಗೂ ಇತರರು 10 ಸ್ಥಾನ ಗಳಿಸಿದ್ದರು. ನಂತರ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಸಾಧಿಸಿದ ಬಿಜೆಪಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಯಿತು. ಸದ್ಯ ಬಿಜೆಪಿ 27, ಕಾಂಗ್ರೆಸ್ 4, ಗೋವಾ ಫಾರ್ವಡ್ ಪಾರ್ಟಿ 3, ಎನ್ ಸಿ ಪಿ ಹಾಗೂ ಎಂಜಿಪಿ ತಲಾ 1 ಸ್ಥಾನ ಹೊಂದಿದ್ದು, ಮೂವರು ಪಕ್ಷೇತರ ಶಾಸಕರಿದ್ದಾರೆ. ಅಧಿಕಾರಕ್ಕೇರಲು 21 ಮ್ಯಾಜಿಕ್ ನಂಬರ್.

ಫೆ.14ರಂದು ಮತದಾನ

ಫೆ.14ರಂದು ಮತದಾನ

ಗೋವಾದ 40 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಜನವರಿ 21ರಂದು ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು. ಜನವರಿ 28ರಂದು ಎಲ್ಲ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಲಿದೆ. ಜನವರಿ 29ರಂದು ನಾಮಪತ್ರ ಮರುಪರಿಶೀಲನೆ ನಡೆಯಲಿದ್ದು, ಜನವರಿ 31 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿರುತ್ತದೆ. ಫೆಬ್ರವರಿ 14ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಪಂಚರಾಜ್ಯಗಳ ಚುನಾವಣಾ ಭವಿಷ್ಯ ಹೊರ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+