ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ: ಮಕರ ಸಂಕ್ರಾಂತಿ ಚೂರ್ಣೋತ್ಸವದ ವೇಳೆ ನಡೆಯುವ ವಿಸ್ಮಯ

|
Google Oneindia Kannada News

ಕೃಷ್ಣನ ನಾಡು, ಕರಾವಳಿಯ ಉಡುಪಿಯಲ್ಲಿ ಈಗ ಪರ್ಯಾಯ ಮಹೋತ್ಸವದ ಸಂಭ್ರಮ. ನಾಲ್ಕನೇ ಬಾರಿಗೆ ಅಷ್ಟಮಠಗಳಲ್ಲೊಂದಾದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಪ್ರಸನ್ನರು ಸರ್ವಜ್ಞ ಪೀಠವನ್ನು ಏರಲಿದ್ದಾರೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಮಹೋತ್ಸವ ಜನವರಿ ಹದಿನೆಂಟರ ನಸುಕಿನಲ್ಲಿ ಆರಂಭವಾಗಲಿದೆ.

ಪ್ರತೀ ವರ್ಷ ಧನುರ್ಮಾಸದ ಶುಕ್ಲಪಕ್ಷದ ಸಪ್ತಮಿಯಂದು ಉಡುಪಿಯಲ್ಲಿ ಸಪ್ತೋತ್ಸವ ನಡೆಯುವ ಪದ್ದತಿಯಿದೆ. ಈ ಉತ್ಸವದ ಆರನೇ ದಿನ ಅಂದರೆ ಮಕರ ಸಂಕ್ರಾಂತಿಯ ಪರ್ವಕಾಲದಂದು ಮೂರು ತೇರು ಉತ್ಸವ ಮತ್ತು ಕೊನೆಯ ದಿನ ಬೆಳಗ್ಗೆ ಚೂರ್ಣೋತ್ಸವ ನಡೆಯುತ್ತದೆ.

ಉಡುಪಿ; ಕೋಟಾ ದೇವಾಲಯದ ಅಚ್ಚರಿ, ಲಿಂಗ ಪೂಜಿಸಿದರೆ ಸಂತಾನ ಭಾಗ್ಯ! ಉಡುಪಿ; ಕೋಟಾ ದೇವಾಲಯದ ಅಚ್ಚರಿ, ಲಿಂಗ ಪೂಜಿಸಿದರೆ ಸಂತಾನ ಭಾಗ್ಯ!

ಈ ತೇರಿನ ಸಮಯದಲ್ಲಿ ಅಷ್ಟಮಠದ ಬಹುತೇಕ ಎಲ್ಲಾ ಯತಿಗಳು ಪಾಲ್ಗೊಳ್ಳುತ್ತಾರೆ. ಅದರಂತೆಯೇ, ಈ ಬಾರಿಯೂ ಕೊರೊನಾ ನಿರ್ಬಂಧದ ನಡುವೆಯೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಉತ್ಸವ ವೈಭವದಿಂದ ಮುಕ್ತಾಯಗೊಂಡಿದೆ.

ಜನವರಿ ಹದಿನೈದರ ಬೆಳಗ್ಗೆ ಶ್ರೀಕೃಷ್ಣ, ಮುಖ್ಯಪ್ರಾಣನಿಗೆ ಪೂಜೆಯ ನಂತರ, ಉತ್ಸವ ಮೂರ್ತಿಯನ್ನು ಬ್ರಹ್ಮರಥದಲ್ಲಿ ಇರಿಸಿ ವೈಭವದ ಉತ್ಸವವು ನಡೆಯುತ್ತದೆ. ಆದರೆ, ಒಂದು ಕೌತುಕದ ಘಟನೆ ನಡೆದರೆ ಮಾತ್ರ ಬ್ರಹ್ಮರಥ ಮುಂದಕ್ಕೆ ಚಲಿಸಲು ಆರಂಭಿಸುವುದು ಎನ್ನುವ ಪ್ರತೀತಿಯಿದೆ.

ಉಡುಪಿ ಪರ್ಯಾಯಕ್ಕೆ ಸರ್ಕಾರದ ಕೊರೊನಾ ನಿಯಮ ಅಡ್ಡಿಉಡುಪಿ ಪರ್ಯಾಯಕ್ಕೆ ಸರ್ಕಾರದ ಕೊರೊನಾ ನಿಯಮ ಅಡ್ಡಿ

 ಸೋದೆ ಮಠದ ಪರ್ಯಾಯದ ಅವಧಿಯಲ್ಲಿ ಬ್ರಹ್ಮರಥ ನವೀಕರಣ

ಸೋದೆ ಮಠದ ಪರ್ಯಾಯದ ಅವಧಿಯಲ್ಲಿ ಬ್ರಹ್ಮರಥ ನವೀಕರಣ

ಕೆಲವು ವರ್ಷಗಳ ಹಿಂದೆ ಅಂದರೆ ಸೋದೆ ಮಠದ ಪರ್ಯಾಯದ ಅವಧಿಯಲ್ಲಿ ಬ್ರಹ್ಮರಥವನ್ನು ನವೀಕರಣವನ್ನು ಮಾಡಲಾಗಿತ್ತು. 250 ವರ್ಷಗಳಷ್ಟು ಹಳೆಯದಾದ ರಥವನ್ನು ವಿಶ್ವವಲ್ಲಭ ತೀರ್ಥರು ತಮ್ಮ ಪರ್ಯಾಯದ ಅವಧಿಯಲ್ಲಿ ಒಂದೂವರೆ ಕೋಟಿ ರೂಪಾಯಿ ವ್ಯಯಿಸಿ ಸಿದ್ದ ಪಡಿಸಿದ್ದರು. ರಥವನ್ನು ನವೀಕರಣ ಮಾಡುವ ಯೋಜನೆಯನ್ನು ಶ್ರೀಗಳು ಕೈಗೆತ್ತಿಕೊಂಡಾಗ ಬಹುತೇಕ ರಥವು ಶಿಥಿಲಗೊಂಡಿತ್ತು. ಹಾಗಾಗಿ, ನೂತನವಾಗಿಯೇ ಶ್ರೀಗಳು ರಥವನ್ನು ನಿರ್ಮಿಸಿ, ಶ್ರೀಕೃಷ್ಣನಿಗೆ ಅರ್ಪಿಸಿದ್ದರು. ಗೋಪಾಲ ಆಚಾರ್ಯ ನೇತೃತ್ವದ 50-60 ಜನರ ತಂಡ ರಥವನ್ನು ನವೀಕರಣಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

 ರಥವನ್ನು ರಥಬೀದಿಯಲ್ಲಿ ಒಂದು ಸುತ್ತು ಎಳೆಯಲಾಗುತ್ತದೆ

ರಥವನ್ನು ರಥಬೀದಿಯಲ್ಲಿ ಒಂದು ಸುತ್ತು ಎಳೆಯಲಾಗುತ್ತದೆ

ಸಪ್ತೋತ್ಸವದ ಭಾಗವಾಗಿ ನಡೆಯುವ ಚೂರ್ಣೋತ್ಸವದಲ್ಲಿ ಒಂದು ರಥವನ್ನು (ಬ್ರಹ್ಮರಥ) ಮಾತ್ರ ಎಳೆಯುವ ಪದ್ದತಿಯಿದೆ. ಈ ಉತ್ಸವದ ಉಳಿದ ದಿನಗಳಲ್ಲಿ ಎರಡು ರಥ, ಮಕರ ಸಂಕ್ರಾಂತಿಯಂದು ಮೂರು ರಥ ಎಳೆಯಲಾಗುತ್ತದೆ. ಕೊನೆಯ ದಿನ ದೇವರನ್ನು ರಥದದಲ್ಲಿ ಕೂರಿಸಿ, ಪರ್ಯಾಯ ಪೀಠಾಧಿಪತಿಗಳು ಪೂಜೆ ಸಲ್ಲಿಸಿದ ನಂತರ, ರಥವನ್ನು ರಥಬೀದಿಯಲ್ಲಿ ಒಂದು ಸುತ್ತು ಎಳೆಯಲಾಗುತ್ತದೆ. ಆದರೆ, ಅದಕ್ಕೆ ಮುನ್ನ ಗರುಡ ಮೂರು ಸುತ್ತು ರಥಕ್ಕೆ ಆಗಸದಲ್ಲಿ ಸುತ್ತು ಹಾಕುತ್ತಾನೆ.

ಗರುಡ ಪ್ರದಕ್ಷಿಣೆ ಹಾಕುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆ

ಕೃಷ್ಣಮಠದ ಆವರಣದಲ್ಲಿ ಗರುಡನ ಗುಡಿಯೂ ಇದೆ, ಪ್ರತೀದಿನ ಕೃಷ್ಣ, ಮುಖ್ಯಪ್ರಾಣನ ನಂತರ ಗರುಡನಿಗೆ ಸ್ವಾಮೀಜಿಗಳು ಪೂಜೆ ಸಲ್ಲಿಸುತ್ತಾರೆ. ಗರುಡ ದೇವರು ಕೃಷ್ಣನಿಗೆ ನಮನ ಸಲ್ಲಿಸುವ ಸಲುವಾಗಿ ಉತ್ಸವ ಹೊರಡುವ ಮುನ್ನ ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತಾನೆ ಎನ್ನುವುದು ಪ್ರತೀತಿ. ಈ ವಿಸ್ಮಯವನ್ನು ಬಾಲ್ಯದಿಂದಲೂ ನೋಡಿದವರು ಇದಕ್ಕೆ ಸಾಕ್ಷಿಯಾಗುತ್ತಾರೆ. ಒಂದು ದಿನದ ಹಿಂದೆ ನಡೆದ ಉತ್ಸವದ ವೇಳೆಯೂ ಗರುಡ ಪ್ರದಕ್ಷಿಣೆ ಹಾಕುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

 ಗವಿ ಗಂಗಾಧರೇಶ್ವರಿನಿಗೆ ವರ್ಷಕ್ಕೊಮ್ಮೆ ಸೂರ್ಯ ರಶ್ಮಿ ಸಿಂಚನ

ಗವಿ ಗಂಗಾಧರೇಶ್ವರಿನಿಗೆ ವರ್ಷಕ್ಕೊಮ್ಮೆ ಸೂರ್ಯ ರಶ್ಮಿ ಸಿಂಚನ

ಬ್ರಹ್ಮರಥವನ್ನು ಎಳೆಯಲು ಸಾವಿರಾರು ಭಕ್ತರು ರಥಬೀದಿಯಲ್ಲಿ ಸೇರಿರುತ್ತಾರೆ. ಗರುಡ ಪ್ರದಕ್ಷಿಣೆ ಹಾಕುವ ವೇಳೆ, ಭಕ್ತರು ಗೋವಿಂದ..ಗೋವಿಂದ ಎಂದು ಉದ್ಘರಿಸುತ್ತಾರೆ. ಇದಾದ ನಂತರವಷ್ಟೇ ರಥದ ಮುಂದೆ ಈಡುಗಾಯಿಯನ್ನು ಸ್ವಾಮೀಜಿಗಳು ಒಡೆದು, ನಂತರ ರಥವನ್ನು ಎಳೆಯಲು ಆರಂಭಿಸಲಾಗುತ್ತದೆ. ಗವಿ ಗಂಗಾಧರೇಶ್ವರಿನಿಗೆ ವರ್ಷಕ್ಕೊಮ್ಮೆ ಸೂರ್ಯ ರಶ್ಮಿ ಸಿಂಚನ ಆಗುವ ಹಾಗೇ, ಉಡುಪಿಯಲ್ಲಿ ಚೂರ್ಣೋತ್ಸವದಂದು ಈ ವಿಸ್ಮಯಕ್ಕೆ ಭಕ್ತರು ಸಾಕ್ಷಿಯಾಗುತ್ತಾರೆ.

English summary
Garuda Pradakshina Before Pulling Brahma Ratha In Udupi, During Makara Sankranthi Festival. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X