ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋರಿಸ್ ಜಾನ್ಸನ್: ರಾಜಕೀಯ ಜೀವನದ ಒಂದು ಟೈಮ್‌ಲೈನ್

|
Google Oneindia Kannada News

ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ಕೊಟ್ಟಾಗಿದೆ. ಹಲವು ವಿವಾದ, ಸಾಧನೆಗಳ ಮಧ್ಯೆ ಅಧಿಕಾರ ತ್ಯಜಿಸಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ 1964 ಜೂನ್ 19ರಂದು ಹುಟ್ಟಿದ ಬೋರಿಸ್ ಜಾನ್ಸನ್ ಚಿಕ್ಕಂದಿನಲ್ಲಿ ತಾನು ಲೋಕವನ್ನೇ ಆಳಬೇಕು ಎಂದು ಇಚ್ಛೆ ತೋಡಿಕೊಂಡಿದ್ದರಂತೆ. 1987ರಲ್ಲಿ ಪತ್ರಕರ್ತರಾಗಿ ಕೆಲಸ ಆರಂಭಿಸಿದರು. ದಿ ಟೈಮ್ಸ್ ಪತ್ರಿಕೆಯಲ್ಲಿ ಯಾವುದೋ ಸುಳ್ಳು ಮಾಹಿತಿ ಹಾಕಿದ್ದರಂದ ಕೆಲಸ ಕಳೆದುಕೊಂಡಿದ್ದರು.

ಬೋರಿಸ್ ಜಾನ್ಸನ್ ಪತನಕ್ಕೆ ಕಾರಣವಾಗಿದ್ದು ಈ ನಾಲ್ಕು ಹಗರಣಗಳುಬೋರಿಸ್ ಜಾನ್ಸನ್ ಪತನಕ್ಕೆ ಕಾರಣವಾಗಿದ್ದು ಈ ನಾಲ್ಕು ಹಗರಣಗಳು

ಅದಾದ ಬಳಿಕ ಬೋರಿಸ್ ಜಾನ್ಸನ್ ವರದಿಗಾರಿಕೆ ಮಾಡಿದ್ದಾರೆ. ಇಂಗ್ಲೆಂಡ್‌ನ ಪ್ರಮುಖ ಪತ್ರಿಕೆಗಳಿಗೆ ನಿಯಮಿತವಾಗಿ ಅಂಕಣಗಳನ್ನೂ ಬರೆದಿದ್ದಾರೆ.

ಐರೋಪ್ಯ ಒಕ್ಕೂಟದ ನೀತಿಗಳನ್ನು ಅತಿಹೆಚ್ಚಾಗಿ ಇವರು ಟೀಕಿಸುತ್ತಿದ್ದರು. ತಮ್ಮ ಲೇಖನಗಳ ಮೂಲಕ ಅವರು ಸಾಕಷ್ಟು ಗಮನ ಸೆಳೆದಿದ್ದರು. ನಮ್ಮ ಪ್ರತಾಪ್ ಸಿಂಹ ತಮ್ಮ ಅಂಕಣಗಳ ಮೂಲಕವೇ ಬಿಜೆಪಿಯ ಟಿಕೆಟ್ ಪಡೆದು ಸಂಸದರಾದಂತೆ ಬೋರಿಸ್ ಜಾನ್ಸನ್ ಕೂಡ ಕನ್ಸರ್ವೇಟಿವ್ ಪಕ್ಷದ ಮೂಲಕ ಸಂಸದರಾಗಿದ್ದರು.

ಭಾರತ ಮೂಲದ ರಿಷಿ ಸುನಕ್ ಮುಂದಿನ ಬ್ರಿಟನ್ ಪ್ರಧಾನಿ? ನಡೀತಿದೆ ಭರ್ಜರಿ ಬೆಟ್ಟಿಂಗ್ಭಾರತ ಮೂಲದ ರಿಷಿ ಸುನಕ್ ಮುಂದಿನ ಬ್ರಿಟನ್ ಪ್ರಧಾನಿ? ನಡೀತಿದೆ ಭರ್ಜರಿ ಬೆಟ್ಟಿಂಗ್

ಸಂಸದ ಸ್ಥಾನದಿಂದ ಆರಂಭವಾಗಿ ಬೋರಿಸ್ ಜಾನ್ಸನ್ ರಾಜಕೀಯ ಹಾದಿ ಮತ್ತು ವಿವಾದಗಳ ಸರಮಾಲೆ ಮುತ್ತಿಕೊಂಡಿದ್ದು ಈ ಎಲ್ಲಾ ಟೈಮ್‌ಲೈನ್ ಇಲ್ಲಿದೆ.

 ಬ್ರೆಕ್ಸಿಟ್ ಆಂದೋಲನದ ಶಕ್ತಿ

ಬ್ರೆಕ್ಸಿಟ್ ಆಂದೋಲನದ ಶಕ್ತಿ

2001-2008: ಹೆನ್ಲೀ ಕ್ಷೇತ್ರದ ಸಂಸದ

2008-2016: ಲಂಡನ್ ಮೇಯರ್ ಆಗಿದ್ದರು. ಈ ಅವಧಿಯಲ್ಲೇ ಲಂಡನ್ ಒಲಿಂಪಿಕ್ಸ್ ಆಗಿದ್ದು.2016: ಯೂರೋಪ್ ಯೂನಿಯನ್‌ನಿಂದ ಬ್ರಿಟನ್ ಹೊರಬೇಕೆನ್ನುವ ಆಂದೋಲನದಲ್ಲಿ ಬೋರಿಸ್ ಜಾನ್ಸನ್ ಪ್ರಮುಖ ಪಾತ್ರ. ಇದು ಬ್ರೆಕ್ಸಿಟ್ ಅಭಿಯಾನ ಎಂದೇ ಖ್ಯಾತವಾಗಿದೆ. ಬ್ರೆಕ್ಸಿಟ್ ಎಂದರೆ ಬ್ರಿಟನ್ ಎಕ್ಸಿಟ್ ಎಂಬುದರ ಸಂಯೋಜನೆ. ಇಯು ಒಕ್ಕೂಟದ ಸದಸ್ಯತ್ವದಿಂದ ಬ್ರಿಟನ್ ಅನ್ನು ಹೊರತರುವ ಪ್ರಕ್ರಿಯೆಗೆ ಬ್ರೆಕ್ಸಿಟ್ ಎಂದು ಚಿಕ್ಕದಾಗಿ ಕರೆಯಲಾಗುತ್ತಿತ್ತು.2016-2018: ಪ್ರಧಾನಿ ತೆರೇಸಾ ಮೇ ಅವರ ಅಡಿಯಲ್ಲಿ ವಿದೇಶಾಂಗ ಸಚಿವರಾದರು. ಬ್ರೆಕ್ಸಿಟ್ ವಿಚಾರದಲ್ಲಿ ಪ್ರಧಾನಿ ಮೃದು ಧೋರಣೆ ಹೊಂದಿದ್ದರಿಂದ ಬೇಸರಗೊಂಡು ಬೋರಿಸ್ ಹೊರಬಂದರು.2019, ಜೂನ್ 7: ತೆರೆಸಾ ಮೇ ಕನ್ಸರ್‌ವೇಟಿವ್ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬ್ರೆಕ್ಸಿಟ್ ವಿಚಾರದಲ್ಲಿ ಪಕ್ಷದೊಳಗೆ ಎರಡು ಬಣ ಹುಟ್ಟಿಕೊಂಡವು. ಬ್ರೆಕ್ಸಿಟ್ ಪರವಾಗಿದ್ದ ಗುಂಪಿಗೆ ಬೋರಿಸ್ ಜಾನ್ಸನ್ ನಾಯಕತ್ವ ವಹಿಸಿದರು.
 ಪ್ರಧಾನಿ ಪಟ್ಟ

ಪ್ರಧಾನಿ ಪಟ್ಟ

2019 ಜುಲೈ 23: ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಜಾನ್ಸನ್ ಆಯ್ಕೆಯಾದರು. ಮರುದಿನ ಪ್ರಧಾನಿ ಪಟ್ಟಕ್ಕೂ ಏರಿದರು. ಆದರೆ, ಬ್ರೆಕ್ಸಿಟ್ ಕಾಯ್ದೆ ಜಾರಿಗೊಳಿಸುವಷ್ಟು ಸಂಖ್ಯಾಬಲ ಅವರಲ್ಲಿ ಇರಲಿಲ್ಲ. ಆದರೆ, ಶತಾಯಗತಾಯ ಬ್ರೆಕ್ಸಿಟ್ ಆಗಿಯೇ ತೀರುತ್ತದೆ ಎಂದು ಪಣತೊಟ್ಟರು.

ಯೂರೋಪ್ ಯೂನಿಯನ್ ಜೊತೆ ಒಪ್ಪಂದ ಮಾಡಿಕೊಂಡು ಹೊರಬರಬೇಕು ಬೇಡವೋ ಎಂಬ ಬಗ್ಗೆ ಅಭಿಪ್ರಾಯಭೇದಗಳಿದ್ದವು. ಬೋರಿಸ್ ಜಾನ್ಸನ್ ಅವರ ಬಣದವರು ಒಪ್ಪಂದ ಆಗಲಿ ಬಿಡಲಿ ಬ್ರಿಟನ್ ಹೊರಬರಬೇಕು ಎನ್ನುತ್ತಿದ್ದವರು. ಇನ್ನೊಂದು ಬಣದವರದ್ದು ಇಯು ಜೊತೆ ಒಪ್ಪಂದ ಮಾಡಿಕೊಂಡು ಎಕ್ಸಿಟ್ ಆಗಬೇಕೆಂಬುದು ಒತ್ತಾಯ.

2019, ಸೆ. 3: ಐರೋಪ್ಯ ಒಕ್ಕೂಟದ ಜೊತೆ ಒಪ್ಪಂದ ಮಾಡಿಕೊಳ್ಳಲು ಸರಕಾರಕ್ಕೆ ಸಾಧ್ಯವಿಲ್ಲವೆಂದಾದರೆ ಬ್ರೆಕ್ಸಿಟ್ ಮಾತುಕತೆಯ ಅವಧಿಯನ್ನು ವಿಸ್ತರಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಕಡ್ಡಾಯಪಡಿಸುವ ಕಾಯ್ದೆ ರೂಪಿಸಬೇಕೆಂದು 21 ಭಿನ್ನಮತೀಯ ಸಂಸದರು ಒತ್ತಾಯ ಮಾಡಿದರು. ಇದು ಯಶಸ್ವಿಯಾಗುತ್ತದೆ. ಆದರೆ, ಬೋರಿಸ್ ಜಾನ್ಸನ್ ಆ ಭಿನ್ನಮತೀಯರನ್ನು ಪಕ್ಷದಿಂದ ಉಚ್ಛಾಟಿಸುತ್ತಾರೆ.

2019, ಸೆ. 24: ಸಂಸತ್ ಅನ್ನು ಅಕ್ಟೋಬರ್‌ವರೆಗೂ ಮುಚ್ಚಲು ಪ್ರಧಾನಿ ಬೋರಿಸ್ ಆಗಸ್ಟ್‌ನಲ್ಲಿ ನಿರ್ಧರಿಸಿರುತ್ತಾರೆ. ಬ್ರಿಟನ್‌ನ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ಕಾನೂನುಬಾಹಿರ ಎಂದು ಘೋಷಿಸುತ್ತದೆ.

 ಬ್ರೆಕ್ಸಿಟ್‌ಗೆ ಸಿಕ್ತು ಜನಾದೇಶ

ಬ್ರೆಕ್ಸಿಟ್‌ಗೆ ಸಿಕ್ತು ಜನಾದೇಶ

2019, ನ. 6: ಸಂಸತ್ ಅನ್ನು ವಿಸರ್ಜಿಸಲಾಗುತ್ತದೆ. ಬ್ರೆಕ್ಸಿಟ್ ವಿಚಾರವನ್ನೇ ಇಟ್ಟುಕೊಂಡು ಬೋರಿಸ್ ಜಾನ್ಸನ್ ಜನಾದೇಶಕ್ಕೆ ಇಳಿಯುತ್ತಾರೆ. ಡಿಸೆಂಬರ್ ಎರಡನೇ ವಾರದಲ್ಲಿ ಚುನಾವಣೆ ನಡೆಯುತ್ತದೆ.

2019, ಡಿ. 12: ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಭರ್ಜರಿಯಾಗಿ ಗೆಲುವು ಪಡೆಯುತ್ತಾರೆ. ಕನ್ಸರ್ವೇಟಿವ್ ಪಕ್ಷಕ್ಕೆ ಇದು ಐತಿಹಾಸಿಕ ಗೆಲುವು. ಮಾರ್ಗರೇಟ್ ಥ್ಯಾಚರ್ ಬಿಟ್ಟರೆ ಆ ಪರಿ ಯಶಸ್ಸು ಕಂಡಿದ್ದು ಬೋರಿಸ್ ಜಾನ್ಸನ್ ಮಾತ್ರವೇ.

2020, ಜ. 23: ಬ್ರೆಕ್ಸಿಟ್ ಕಾಯ್ದೆಗೆ ಬ್ರಿಟನ್ ಸಂಸತ್ತು ಅನುಮೋದನೆ ನೀಡುತ್ತದೆ. ಯೂರೋಪಿಯನ್ ಸಂಸತ್ ಕೂಡ ಒಪ್ಪಿಗೆಯ ಮುದ್ರೆ ನೀಡುತ್ತದೆ.

 ಕೋವಿಡ್ ಮತ್ತು ಹಗರಣಗಳು

ಕೋವಿಡ್ ಮತ್ತು ಹಗರಣಗಳು

2020 ಮಾರ್ಚ್ 23: ಕೋವಿಡ್ ಹಿನ್ನೆಲೆಯಲ್ಲಿ ಬ್ರಿಟನ್ ದೇಶದಲ್ಲಿ ಲಾಕ್‌ಡೌನ್ ಕ್ರಮ ಜಾರಿ

2020, ಏ. 5: ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಏಪ್ರಿಲ್ 12ಕ್ಕೆ ಚೇತರಿಕೆ ಕಂಡು ಬಿಡುಗಡೆಯಾಗುತ್ತಾರೆ.

2020 ನ. 3-4: ಬೋರಿಸ್ ಜಾನ್ಸನ್ ಆಪ್ತ ಓವನ್ ಪ್ಯಾಟರ್ಸನ್ ಹಣಕ್ಕಾಗಿ ಲಾಬಿ ಮಾಡುತ್ತಿದ್ದ ಆರೋಪದ ಮೇಲೆ ಪಕ್ಷದಿಂದ ಅಮಾನತುಗೊಳಿಸುವ ಒತ್ತಡ ಇರುತ್ತದೆ. ಇದನ್ನು ವಿಳಂಬಗೊಳಿಸುವಂತೆ ನಿಯಮಗಳಲ್ಲಿ ಬದಲಾವಣೆ ತರಲಾಗುತ್ತದೆ. ಆದರೆ, ಎಲ್ಲಾ ಪಕ್ಷಗಳ ಸಂಸದರೂ ಇದನ್ನು ಬಲವಾಗಿ ವಿರೋಧಿಸಿದ ಬಳಿಕ ನಿರ್ಧಾರ ಹಿಂಪಡೆಯಲಾಗುತ್ತದೆ. ಪ್ಯಾಟರ್ಸನ್ ರಾಜೀನಾಮೆ ನೀಡಬೇಕಾಗುತ್ತದೆ.

2021, ನ. 30: 2020ರ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಪಾರ್ಟಿ ಮಾಡಿದ್ರು. ಇದು ಲಾಕ್ ಡೌನ್ ನಿಯಮಾವಳಿಗಳ ಉಲ್ಲಂಘನೆ ಎಂಬ ಆರೋಪ ಮತ್ತು ಆಕ್ರೋಶ ವ್ಯಕ್ತವಾಯಿತು. ಪಾರ್ಟಿ ಮಾಡಿದ ಪ್ರಕರಣಗಳ ಸಂಖ್ಯೆ ಹೆಚ್ಚೆಚ್ಚು ಬೆಳಕಿಗೆ ಬರತೊಡಗಿತು. ಬೋರಿಸ್ ಜಾನ್ಸನ್ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ವಾದಿಸಿದರು. ಈ ಕೋವಿಡ್ ವೇಳೆಯ ಪಾರ್ಟಿಗಳು ನಡೆದಿರುವ ಪ್ರಕರಣಗಳನ್ನು ಪಾರ್ಟಿಗೇಟ್ ಎಂದೇ ಕರೆಯಲಾಯಿತು.

2021, ಡಿ. 8: ಪಾರ್ಟಿಗೇಟ್ ಹಗರಣದ ತನಿಖೆಗೆ ಬೋರಿಸ್ ಜಾನ್ಸನ್ ಆದೇಶ ನೀಡುತ್ತಾರೆ.

 ರಾಜೀನಾಮೆ ಸರಣಿ

ರಾಜೀನಾಮೆ ಸರಣಿ

2023, ಫೆ. 3: ಪಾರ್ಟಿಗೇಟ್ ಹಗರಣದ ಬಳಿಕ ಬೋರಿಸ್ ಜಾನ್ಸನ್ ನಾಯಕತ್ವದ ವಿರುದ್ಧ ಧ್ವನಿ ಹೆಚ್ಚಾಗುತ್ತದೆ. ರಾಜೀನಾಮೆ ಸರಣಿ ಮೊದಲುಗೊಳ್ಳುತ್ತದೆ. ಬೋರಿಸ್ ಅವರ ಆಪ್ತ ಮುನೀರ ಮಿರ್ಜಾ ಸೇರಿದಂತೆ ನಾಲ್ವರು ರಾಜೀನಾಮೆ ನೀಡುತ್ತಾರೆ.

ಮಾ. 23: ಕೋವಿಡ್‌ನಿಂದ ಬ್ರಿಟನ್‌ನ ಆರ್ಥಿಕತೆ ಹಿನ್ನಡೆ ಅನುಭವಿಸಿರುತ್ತದೆ. ಈ ವೇಳೆ ಬಾಧಿತ ಜನರಿಗೆ ಸಹಾಯವಾಗಿ ಜಾನ್ಸನ್ ಸರಕಾರ ವಿವಿಧ ಯೋಜನೆಗಳನ್ನು ಘೋಷಿಸುತ್ತದೆ. ಇಷ್ಟು ಪರಿಹಾರ ಸಾಕಾಗುವುದಿಲ್ಲ ಎಂಬ ಟೀಕೆಯೂ ಕೇಳಿಬರುತ್ತದೆ. ಗಾಯದ ಮೇಲೆ ಬರೆ ಎಳೆದಂತೆ ಟ್ರೆಷರಿ ಮುಖ್ಯಸ್ಥ, ಅಥವಾ ಹಣಕಾಸು ಸಚಿವ ರಿಷಿ ಸುನಕ್ ಆದಾಯ ತೆರಿಗೆ ಏರಿಸುವ ನಿರ್ಧಾರವನ್ನು ವಿಳಂಬಗೊಳಿಸಲು ನಿರಾಕರಿಸುತ್ತಾರೆ.

ಏ. 9: ಪ್ರಧಾನಿ ಬೋರಿಸ್ ಜಾನ್ಸನ್ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರನ್ನು ಕೀವ್‌ನಲ್ಲಿ ಭೇಟಿಯಾಗುತ್ತಾರೆ. ರಷ್ಯಾದಿಂದ ಆಕ್ರಮಣಕ್ಕೊಳಗಾದ ಉಕ್ರೇನ್ ದೇಶಕ್ಕೆ ಬ್ರಿಟನ್‌ನಿಂದ ಮಿಲಿಟರಿ ಮತ್ತು ಆರ್ಥಿಕ ನೆರವು ಒದಗಿಸುವ ಭರವಸೆ ನೀಡುತ್ತಾರೆ. ಇದು ಆಂತರಿಕ ವಿವಾದಗಳನ್ನು ದೂರ ಇಡಲು ಜಾನ್ಸನ್‌ಗೆ ನೆರವಾಗುತ್ತದೆ.

ಏ. 12: ಬೋರಿಸ್ ಜಾನ್ಸನ್‌ಗೆ ಪಾರ್ಟಿಗೇಟ್ ಭೂತ ಕಾಡುವುದು ಮುಂದುವರಿಯುತ್ತದೆ. ಲಾಕ್‌ಡೌನ್ ವೇಳೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಕ್ಕೆ ಬೋರಿಸ್ ಜಾನ್ಸನ್‌ಗೆ 50 ಪೌಂಡ್ ಹಣದ ದಂಡ ವಿಧಿಸಲಾಗುತ್ತದೆ. ಒಬ್ಬ ಬ್ರಿಟನ್ ಪ್ರಧಾನಿಗೆ ಕಾನೂನು ಉಲ್ಲಂಘನೆ ಕಾರಣಕ್ಕೆ ದಂಡ ವಿಧಿಸಿದ್ದು ಅದೇ ಮೊದಲು. ಜಾನ್ಸನ್ ಕ್ಷಮಾಪಣೆ ಕೋರುತ್ತಾರೆ. ಹಾಗೆಯೇ, ತಾನು ನಿಯಮ ಉಲ್ಲಂಘಿಸಿದ್ದು ಆಗ ಅರಿವಿನಲ್ಲಿ ಇರಲಿಲ್ಲ ಎಂದೂ ಸ್ಪಷ್ಟಪಡಿಸುತ್ತಾರೆ.

ಮೇ 22: ಪಾರ್ಟಿಗೇಟ್ ತನಿಖೆಯ ವರದಿ ಬರುತ್ತದೆ. 2020 ಮೇ ತಿಂಗಳಿಂದ ಹಿಡಿದು 2021 ಏಪ್ರಿಲ್ ತಿಂಗಳವರೆಗೆ ಬೋರಿಸ್ ಜಾನ್ಸನ್ ಅವರ ಮನೆ ಮತ್ತು ಕಚೇರಿ ಹಾಗೂ ಸರಕಾರಿ ಕಚೇರಿಗಳಲ್ಲಿ 16 ಸಮಾರಂಭ ಅಥವಾ ಪಾರ್ಟಿಗಳು ನಡೆದಿರುವುದು ತನಿಖೆಯಿಂದ ಬಹಿರಂಗವಾಗುತ್ತದೆ.

ಬೋರಿಸ್ ಜಾನ್ಸನ್ ಸಿಬ್ಬಂದಿವರ್ಗದಲ್ಲಿ ಕೆಲವರು ಅತಿಯಾಗಿ ಮದ್ಯಪಾನ ಮಾಡಿರುತ್ತಾರೆ. ಲಕ್ಷಾಂತರ ಜನರು ಕೋವಿಡ್ ಸಂಕಷ್ಟದಿಂದ ನಲುಗುತ್ತಿದ್ದರೆ ಇವರು ಕುಡಿದು ಮಜಾ ಮಾಡುತ್ತಿದ್ದರೆಂದು ವ್ಯಾಪಕ ಟೀಕೆ ಕೇಳಿಬರುತ್ತದೆ.

 ಅವಿಶ್ವಾಸ ನಿರ್ಣಯ ತಂದ ನಡುಕ

ಅವಿಶ್ವಾಸ ನಿರ್ಣಯ ತಂದ ನಡುಕ

ಜೂನ್ 6: ಬೋರಿಸ್ ಜಾನ್ಸನ್ ತಮ್ಮ ವಿರುದ್ಧ ಬಂದ ಅವಿಶ್ವಾಸ ನಿರ್ಣಯದಲ್ಲಿ ಗೆಲುವು ಪಡೆಯುತ್ತಾರೆ. ಆದರೆ, ಇದು ಬಹಳ ಕಡಿಮೆ ಅಂತರದ ಜಯ. ೨೧೧-೧೪೮ ಮತಗಳಿಂದ ಗೆಲುವು ಹೊಂದುತ್ತಾರೆ. ಆದರೆ, ತಮ್ಮ ವಿರುದ್ಧ ಪಕ್ಷದವರು ಇಷ್ಟು ಮತ ಹಾಕಿದ್ದು ಜಾನ್ಸನ್‌ಗೆ ಹಿನ್ನಡೆಯಾಗುತ್ತದೆ. ಪಕ್ಷದೊಳಗಿನ ಅವರ ಹಿಡಿತ ದುರ್ಬಲಗೊಳ್ಳುತ್ತದೆ.

ಜೂನ್ 15: ಬೋರಿಸ್ ಜಾನ್ಸನ್ ಅವರ ಎಥಿಕ್ಸ್ ಅಡ್ವೈಸರ್ ಸ್ಥಾನಕ್ಕೆ ಕ್ರಿಸ್ಟೋಫರ್ ಗೇಟ್ ರಾಜೀನಾಮೆ ನೀಡುತ್ತಾರೆ.
ಜೂನ್ 24: ಉಪಚುನಾವಣೆಗಳಲ್ಲಿ ಕನ್ಸರ್ವೇಟಿವ್ ಪಕ್ಷದ ಭದ್ರಕೋಟೆ ಎನಿಸಿದ ಎರಡು ಕ್ಷೇತ್ರಗಳಲ್ಲಿ ಸೋಲನುಭವಿಸುತ್ತದೆ.
 ಪಿಂಚರ್ ಲೈಂಗಿಕ ಹಗರಣ ಮತ್ತು ರಾಜೀನಾಮೆ

ಪಿಂಚರ್ ಲೈಂಗಿಕ ಹಗರಣ ಮತ್ತು ರಾಜೀನಾಮೆ

ಜೂನ್ 30: ಲಂಡನ್‌ನ ಪ್ರೈವೇಟ್ ಮೆಂಬರ್ಸ್ ಕ್ಲಬ್‌ನಲ್ಲಿ ಇಬ್ಬರು ಅತಿಥಿಗಳ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತು ಬೋರಿಸ್ ಜಾನ್ಸನ್ ಆಪ್ತ ಕ್ರಿಸ್ಟೋಫರ್ ಪಿಂಚರ್ ರಾಜೀನಾಮೆ ನೀಡುತ್ತಾರೆ. ಅದೇ ಅವಧಿಯಲ್ಲಿ ಪಿಂಚರ್ ಹಿಂದೆ ಲೈಂಗಿಕ ದುರ್ನಡತೆ ತೋರಿದ್ದ ಸಂಗತಿಯೂ ಬೆಳಕಿಗೆ ಬರುತ್ತದೆ. ಇದೆಲ್ಲಾ ಗೊತ್ತಿದ್ದೂ ಬೋರಿಸ್ ಜಾನ್ಸನ್ ಪಿಂಚರ್‌ಗೆ ಸ್ಥಾನಮಾನ ಕೊಟ್ಟರಾ ಎಂಬ ಪ್ರಶ್ನೆ ಹುಟ್ಟುತ್ತದೆ.

ಜುಲೈ 5: ಪಿಂಚರ್ ಹಗರಣವನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದು ತಪ್ಪೊಪ್ಪಿಕೊಳ್ಳುವ ಜಾನ್ಸನ್ ಕ್ಷಮಾಪಣೆ ಕೂಡ ಕೋರುತ್ತಾರೆ. ಅದೇ ವೇಳೆ, ಮಂತ್ರಿಗಳಾದ ಋಷಿ ಸುಣಕ್ ಮತ್ತು ಸಾಜಿದ್ ಜಾವಿದ್ ರಾಜೀನಾಮೆ ಕೊಟ್ಟು ಸರಕಾರದಿಂದ ಹೊರಹೋಗುತ್ತಾರೆ.

ಜುಲೈ 6: ಸುಮಾರು 40 ಕಿರಿಯ ಸಚಿವರು ರಾಜೀನಾಮೆ ನೀಡುತ್ತಾರೆ.

ಜುಲೈ 7: ಬೋರಿಸ್ ಜಾನ್ಸನ್ ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಹೊಸ ನಾಯಕತ್ವ ಆಯ್ಕೆಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ಧಾರೆ.

(ಒನ್ಇಂಡಿಯಾ ಸುದ್ದಿ)

English summary
Britain PM Boris Johnson has announced resignation after several cases emerge recently. Here is the timeline of his political career.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X