• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮೊದಲು ಒಂದು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳಿ': ಪಾಕ್ ಗೆ ಛೀ ಥೂ...

By ಅನಿಲ್ ಆಚಾರ್
|
   Surgical Strike 2: ಮೊದಲು ಒಂದು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳಿ': ಪಾಕ್ ಗೆ ಛೀ ಥೂ.|Oneindia Kannada

   ಫೇಸ್ ಬುಕ್, ಟ್ವಿಟ್ಟರ್ ಇಂತಹ ಸಾಮಾಜಿಕ ಮಾಧ್ಯಮಗಳನ್ನು ಗಮನಿಸಿದಿರಾ? ಅಯ್ಯೋ ನಾನು ಕೇಳುತ್ತಿರುವುದು ಇವತ್ತಿನ ವಿಚಾರ. ಭಾರತವು ಪಾಕ್ ನ ಉಗ್ರಗಾಮಿ ನೆಲೆಗಳ ಮೇಲೆ ವಾಯು ದಾಳಿ ನಡೆಸಿದ ನಂತರ ಬರುತ್ತಿರುವ ಪ್ರತಿಕ್ರಿಯೆಗಳು, ಅದಕ್ಕೆ ಉತ್ತರ ಹೀಗೆ ರಾಶಿರಾಶಿ ಅಭಿಪ್ರಾಯಗಳು ಬರುತ್ತಿವೆ.

   ಭಾರತ ನಡೆಸಿದ ಆಕ್ರಮಣಕ್ಕೆ ಪ್ರತಿ ದಾಳಿ ನಡೆಸುವ ಹಕ್ಕು ಪಾಕ್ ಗೆ ಇದೆ ಎಂಬ ಅಲ್ಲಿನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಹೇಳಿಕೆಗೆ ಭಾರೀ ಖಾರವಾದ ಪ್ರತಿಕ್ರಿಯೆಗಳು ಸಿಕ್ಕಿವೆ. ಒಟ್ಟಾರೆಯಾಗಿ ಫೇಸ್ ಬುಕ್ ನಿಂದ ಆಯ್ದ ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ಹಾಕಲಾಗಿದೆ. ಖುರೇಶಿ ಪ್ರತಿಕ್ರಿಯೆಗೆ, ಓಹ್ ಭ್ರಮೆ ಎಂಬ ವಿಲನ್ ಸಿನಿಮಾ ಡೈಲಾಗ್ ನೇ ಪುನರಾವರ್ತನೆಯಾಗಿ ಹಾಕಿರುವುದು ಕಂಡುಬರುತ್ತದೆ.

   ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ

   ಮೊದಲು ಸರಿಯಾಗಿ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ನಿಮಗೆ ಭಿಕ್ಷೆ ಹಾಕುವುದಕ್ಕೂ ಜನರಿಲ್ಲ ಎಂದು ಖಾರವಾಗಿ ನೀಡಿದ ಉತ್ತರ ಸಹ ಇದೆ. ಒಟ್ಟಾರೆಯಾಗಿ ಪಾಕಿಸ್ತಾನವನ್ನು ಮತ್ತು ಅದು ಪೋಷಿಸುತ್ತಿರುವ ಭಯೋತ್ಪಾದನೆ ಎಂಬ ಕರಿನಾಗರವನ್ನು ಛೀ, ಥೂ ಎಂದು ಉಗುಳಲಾಗಿದೆ. ಇದರ ಜತೆಗೆ ಭಾರತೀಯ ವಾಯು ಪಡೆಯ ಕಾರ್ಯಾಚರಣೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

   ಪ್ರವೀಣ್ ಪಿ. ಹೂಗಾರ್

   ನಾವು ಭಾರತೀಯರಲ್ಲವೋ ವಿಶಾಲ ಹೃದಯದವರು. ಕೊಟ್ಟದನ್ನು ಬಡ್ಡಿ ಸಮೇತ ವಾಪಸ್ಸು ಕೊಟ್ಟೆ ರೂಢಿ.!! ಇದು ಹಿಂದೂಗಳ ನಿಜವಾದ ದೀಪಾವಳಿ ....ದೀಪಾವಳಿ ಹಬ್ಬದ ಶುಭಾಶಯಗಳು. ನಮ್ಮ ಸೈನಿಕ ನಮ್ಮ ಹೆಮ್ಮೆ.....ಜೈ ಮೋದಿ ಜೀ .....

   ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

   ಪಾಕಿಸ್ತಾನ ಟೊಮೆಟೊ ಬೇಕು, ಟೊಮೆಟೊ ಅಂತ ಬಾಯ್ ಬಾಯ್ ಬಡ್ಕೊತಿದ್ರು. ಭಾರತೀಯ ವಾಯು ಸೇನೆ ಟೊಮೆಟೊ ಕೆಚಪ್ ಮಾಡಿಬಿಟ್ಟರು. -ರಾಘವೇಂದ್ರ ಗೌಡ

   ಶತ್ರುಗಳ ಸಂಹಾರ ಪ್ರಾರಂಭ?? ಭಯೋತ್ಪಾದನೆಮುಕ್ತ ಪ್ರಪಂಚಕ್ಕೇ ಮೋದಿಯೇ ಮುನ್ನುಡಿ. ಇದೇ ನಮ್ಮ ಮಹಾನ್ ಭಾರತದ ಭವ್ಯ ಪ್ರಧಾನಿ ಮೋದಿಯವರ ಜನಪ್ರಿಯತೆಯ ಮತ್ತು ತಾಕತ್ತು. ಜಾಗ ಮತ್ತು ದೇಶ ಯಾವುದೇ ಇರಲಿ, ನಮೋ ಮತ್ತೊಮ್ಮೆ. -ಸಿದ್ದು ಗೌಡ

   ಏನ್ ಮೋಸ ಗುರು! ಏರ್ ಶೋ ಯಲಹಂಕ ದಲ್ಲಿ ಅಂತ ಹೇಳಿ. ಈಗ ಪಾಕಿಸ್ತಾನದಲ್ಲಿ ಮಾಡ್ತಾವ್ರೆ! ಜೈ ಜವಾನ್. -ಸಿದ್ದು ಗೌಡ

   ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್

   ಆತನಿಗೆ ಸ್ವರ್ಗದಲ್ಲಿ ಒಬ್ಬನೇ ಇದ್ದು ಬೇಜಾರಾದಂತಿದೆ. ಇದ್ದ ಬದ್ದ ಸ್ನೇಹಿತರನ್ನೆಲ್ಲ ಕರೆಸಿಕೊಳ್ಳುತ್ತಿದ್ದಾನೆ. -ಸಾಗರ್ ಗೌಡ್ರು

   ಪುಲ್ವಾಮಾದಲ್ಲಿ ವೀರ ಮರಣ ಹೊಂದಿದ ಯೋದರ ಆತ್ಮಕ್ಕೆ ಇಂದು ಶಾಂತಿ ಸಿಕ್ಕೀತು. -ವಿಶ್ವನಾಥ್ ಕೃಷ್ಣಮೂರ್ತಿ

   ಉಗ್ರಗಾಮಿಗಳ ತಾಯ್ನಾಡು ಪಾಪಿಸ್ತಾನ ಎಂಬುದು ಭೂ ಗ್ರಹದಲ್ಲಿರುವ ಎಲ್ಲಾ ದೇಶಗಳಿಗೂ ಗೊತ್ತು. ನಿಮ್ಮ ಸಂಬಂಧಿಕರೇ ನಮ್ಮ ಗಡಿ ದಾಟಿ ಬಂದು, ಮೋಸದಿಂದ ನಮ್ಮ ಸಂಬಂಧಿಕರನ್ನು (ನಮ್ಮ ವೀರ ಭಾರತಾಂಬೆಯ ಪುತ್ರರನ್ನು) ಹತ್ಯೆ ಮಾಡಿದರಲ್ಲಾ? ಆಗ ಇಲ್ಲದ ನಿಮ್ಮ ಹೇಳಿಕೆ ಈಗ ಏಕೆ? ನಾವು ನಿಮ್ಮ ಪಾಪಿಸ್ತಾನದ ನಾಗರಿಕರಿಗೆ ತೊಂದರೆ ಮಾಡಿಲ್ಲ. ಇದು ಏನಿದ್ದರೂ ಪಾಪಿಸ್ತಾದಲ್ಲಿರುವ ಉಗ್ರರನ್ನು ಚಿಂದಿ ಉಡಾಯಿಸಿರುವುದು. ಮೊದಲು ಇದನ್ನು ಅರ್ಥಮಾಡಿಕೊಳ್ಳಿ. ಜೈ ಭಾರತಾಂಭೆ. ನನ್ನ ಜನ್ಮ ಭೂಮಿ ಭಾರತ. ಭಾರತ ಮಾತೆಯ ಉಳಿವಿಗಾಗಿ ನಾನು ಪ್ರಾಣ ಬಿಡಲೂ ಸಿದ್ಧ. ಜೈ ಭಾರತಾಂಬೆ. -ಶ್ರೀನಿವಾಸ ಶೀನು

   ಹೊಟ್ಟೆ ತುಂಬ ಊಟ ಮಾಡಿ (ಪಾಕಿಸ್ತಾನಕ್ಕೆ) ಮೊದಲು. ನಂತರ ದಾಳಿ ಬಗ್ಗೆ ಯೋಚನೆ ಮಾಡಿ. ನಿಮಗೆ ಭಿಕ್ಷೇನೂ ಯಾರೂ ಹಾಕಲ್ಲ. -ಇಮ್ಯಾನ್ಯುಯಲ್ ಜಾಕೋಬ್ ಕರವಾಡಿ

   ನಿಮಗೆ ಉಗ್ರರನ್ನು ಕಳೆದುಕೊಂಡಾಗ ಈ ರೀತಿ ಉರೀತಿದೆ (ಪಾಕ್ ವಿದೇಶಾಂಗ ಸಚಿವ ಹೇಳಿಕೆಗೆ ಉತ್ತರ). ನಮಗೆ ಸೈನಿಕರನ್ನು ಕಳೆದುಕೊಂಡಾಗ ಎಷ್ಟು ಹಿಂಸೆಯಾಗಿರಬೇಕು? -ವಿಜಯ್ ಕುಮಾರ್

   English summary
   Here is the some of the reaction in Facebook for Indian army surgical 2 against Jaish e Mohammad terrorists camps along LOC.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X