• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

11 ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ವಾಗ್ದಂಡನೆ ಮಾಡುವುದು ಹೇಗೆ?: ಪ್ರಕ್ರಿಯೆ ಹೇಗೆ ನಡೆಯಲಿದೆ?

|

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಸೋಲೊಪ್ಪಿಕೊಳ್ಳಲು ಎರಡು ತಿಂಗಳಿನಿಂದ ಸತತ ತಕರಾರುಗಳನ್ನು ತೆಗೆದಿದ್ದ ಟ್ರಂಪ್, ಸಂಸತ್ತು ಜೋ ಬೈಡನ್ ಅವರ ಗೆಲುವನ್ನು ಘೋಷಿಸಿದ ಬಳಿಕ ಕೊನೆಗೂ ಜ. 20ರಂದು ಸುಗಮ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ ತಮ್ಮ ಸೋಲನ್ನು ಇನ್ನೂ ಸಂಪೂರ್ಣವಾಗಿ ಸ್ವೀಕರಿಸಲು ಅವರಿಗೆ ಮನಸಿಲ್ಲ.

ಬೈಡನ್ ಅವರಿಗೆ ಪ್ರಕ್ರಿಯೆಗಳಿಗೆ ಅನುಗುಣವಾಗಿ ಅಧಿಕಾರ ಹಸ್ತಾಂತರ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ ಅವರ ಹೇಳಿಕೆಗಳ ಬಗ್ಗೆ ಡೆಮಾಕ್ರಟಿಕ್ ಸದಸ್ಯರು ಹಾಗೂ ಜನತೆಗೆ ನಂಬಿಕೆ ಬಂದಿಲ್ಲ. ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆಸಿದ್ದಕ್ಕೆ ಅವರ ಕುಮ್ಮಕ್ಕು ಇತ್ತು ಎಂದು ಆರೋಪಿಸಲಾಗಿದೆ. ಅಮೆರಿಕದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆ ಎನಿಸಿರುವ ಈ ಹಿಂಸಾಚಾರದ ಘಟನೆ ಬಳಿಕ ಟ್ರಂಪ್ ಯಾವ ಸಮಜಾಯಿಷಿ ನೀಡಿದರೂ ನಂಬುವ ಸ್ಥಿತಿಯಲ್ಲಿ ಡೆಮಾಕ್ರಟಿಕ್ ಪಕ್ಷವಿಲ್ಲ. ಹೀಗಾಗಿ ಅವರನ್ನು ವಾಗ್ದಂಡನೆ ಮೂಲಕ ಅಧಿಕಾರದಿಂದ ಕೆಳಗಿಳಿಸಲು ಸಿದ್ಧತೆ ಕೂಡ ನಡೆದಿದೆ.

ಟ್ವಿಟ್ಟರ್ ಎಡಪಂಥೀಯರ ಪರ, ನನ್ನದೇ ಸೋಷಿಯಲ್ ಮೀಡಿಯಾ ಮಾಡ್ತೀನಿ: ಟ್ರಂಪ್ ಸೆಡ್ಡು

ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು 25ನೇ ತಿದ್ದುಪಡಿ ಜಾರಿಗೆ ತನ್ನಿ, ಇಲ್ಲವೇ ವಾಗ್ದಂಡನೆ ಪ್ರಕ್ರಿಯೆಯನ್ನು ಸಂಸತ್‌ನಲ್ಲಿ ಆರಂಭಿಸಿ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೇರಿದಂತೆ ಡೆಮಾಕ್ರಟಿಕ್ ಸಂಸದರು ಆಗ್ರಹಿಸಿದ್ದಾರೆ.

ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ನಡೆದಿರುವುದು ಇದು ಮೊದಲ ಸಲವೇನಲ್ಲ. 2019ರಲ್ಲಿ ವಾಗ್ದಂಡನೆಯ ಪ್ರಯತ್ನಗಳು ನಡೆದಿದ್ದವು. ಆದರೆ ಆಗ ಈ ಪ್ರಯತ್ನ ಬಿದ್ದುಹೋಗಿತ್ತು. ಮುಂದೆ ಓದಿ.

ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಟ್ರಂಪ್ ಬರದಿರುವುದೇ ಒಳ್ಳೆ ವಿಷಯ ಎಂದ ಬೈಡನ್

ಅಧಿಕಾರದಿಂದ ಕಿತ್ತುಹಾಕುವುದಲ್ಲ

ಅಧಿಕಾರದಿಂದ ಕಿತ್ತುಹಾಕುವುದಲ್ಲ

ವಾಗ್ದಂಡನೆ ಎಂದರೆ ಅಧ್ಯಕ್ಷರನ್ನು ಅವರ ಕಚೇರಿಯಿಂದ ಕಿತ್ತು ಹಾಕುವುದು ಎಂಬ ತಪ್ಪುಕಲ್ಪನೆ ಇದೆ. ವಾಸ್ತವವಾಗಿ ಇದು ಅಧ್ಯಕ್ಷರು ಅಪರಾಧ ಪ್ರಕರಣಕ್ಕೆ ಸಮನಾದ ದೋಷಾರೋಪಣೆಗೆ ಒಳಗಾಗುವಂತೆ ಅಧ್ಯಕ್ಷರ ವಿರುದ್ಧ ಉನ್ನತ ಅಪರಾಧ ಅಥವಾ ದುರ್ವರ್ತನೆ ಆರೋಪಗಳನ್ನು ಸಂಸತ್ತಿನ ಕೆಳಸದನವಾದ ಜನಪ್ರತಿನಿಧಿ ಸಭೆಯಲ್ಲಿ ಮಂಡಿಸುವುದಾಗಿದೆ.

ಸಭೆಯ 435 ಸದಸ್ಯರಲ್ಲಿ ಆರೋಪಗಳನ್ನು ಹೊರಿಸುವ ಪ್ರಸ್ತಾವಕ್ಕೆ ಸರಳ ಬಹುಮತ ವ್ಯಕ್ತವಾದರೆ 'ವಾಗ್ದಂಡನೆಯ ವಿಧಿ'ಯನ್ನು ಮೇಲ್ಮನೆಯಾದ ಸೆನೆಟ್‌ಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಆ ಕುರಿತು ವಿಚಾರಣೆ ನಡೆಯುತ್ತದೆ. ಇಲ್ಲಿ ಅಧ್ಯಕ್ಷರನ್ನು ಪದಚ್ಯುತಗೊಳಿಸಲು ಮತ್ತು ಶಿಕ್ಷಿಸಲು ಸೆನೆಟ್‌ನ ಮೂರನೇ ಎರಡರಷ್ಟು ಮತಗಳು ಬೇಕಾಗುತ್ತದೆ.

ಟ್ರಂಪ್ ಸ್ಪರ್ಧೆ ಅನರ್ಹ ಅವಕಾಶ

ಟ್ರಂಪ್ ಸ್ಪರ್ಧೆ ಅನರ್ಹ ಅವಕಾಶ

ಫೆಡರಲ್ ನ್ಯಾಯಾಧೀಶರನ್ನು ಒಳಗೊಂಡ ಎರಡು ಐತಿಹಾಸಿಕ ಪೂರ್ವನಿದರ್ಶನಗಳು ಡೊನಾಲ್ಡ್ ಟ್ರಂಪ್ ಅವರನ್ನು ಭವಿಷ್ಯದಲ್ಲಿ ಕಚೇರಿಯಲ್ಲಿ ಕೂರುವುದರಿಂದ ಅನರ್ಹಗೊಳಿಸಲು ಸೆನೆಟ್‌ನಲ್ಲಿ ಸರಳ ಬಹುಮತ ಸಾಕು ಎನ್ನುವುದನ್ನು ಸ್ಪಷ್ಟಪಡಿಸಿವೆ. ಜನವರಿ ಬಳಿಕ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಸಂಸದರ ಸಂಖ್ಯೆ ಹೆಚ್ಚುವುದರಿಂದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ಸ್ಪರ್ಧಿಸದಂತೆ ನಿಷೇಧಿಸಲು ಅವಕಾಶವಿದೆ ಎನ್ನುತ್ತಾರೆ ಕಾನೂನು ತಜ್ಞರು.

ಆದರೆ ಈ ಯೋಜನೆಯಲ್ಲಿ ಒಂದು ಜಟಿಲ ಸಂಗತಿಯಿದೆ. ಅಧ್ಯಕ್ಷರನ್ನು ಶಿಕ್ಷಿಸುವ ಅಥವಾ ಕಚೇರಿಯಿಂದ ಪದಚ್ಯುತಗೊಳಿಸುವ ಸಂಬಂಧ ಮತ ಪ್ರಕ್ರಿಯೆ ನಡೆಸಿದ ಬಳಿಕವಷ್ಟೇ ಅನರ್ಹಗೊಳಿಸುವ ಮತ ಪ್ರಕ್ರಿಯೆ ನಡೆಸಲು ಸೆನೆಟ್‌ಗೆ ಅವಕಾಶ ಇದೆ.

ಟ್ರಂಪ್ ಕಿತ್ತೊಗೆಯಲು 25ನೇ ತಿದ್ದುಪಡಿ ತನ್ನಿ: ನ್ಯಾನ್ಸಿ ಒತ್ತಾಯ

ಅನರ್ಹ ಪ್ರಕ್ರಿಯೆಗೆ ಅವಕಾಶ

ಅನರ್ಹ ಪ್ರಕ್ರಿಯೆಗೆ ಅವಕಾಶ

'ಭವಿಷ್ಯದ ಅನರ್ಹ ಪ್ರಕ್ರಿಯೆಗೆ ಮತ ಚಲಾಯಿಸಲು ಮಾತ್ರವೇ ಸೆನೆಟ್‌ಗೆ ಅಧಿಕಾರವಿದೆ. ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಜನವರಿ 20ರಂದು ಅಂತ್ಯಗೊಂಡ ಬಳಿಕವೂ ವಾಗ್ದಂಡನೆ ಪ್ರಕ್ರಿಯೆ ಬಾಕಿ ಉಳಿದವರೆ ಮಾತ್ರ ಇದು ಸಾಧ್ಯ' ಎಂದು ಕೊಲೊರಾಡೊ ವಿಶ್ವವಿದ್ಯಾಲಯದ ಕಾನೂನು ಪ್ರೊಫೆಸರ್ ಪೌಲ್ ಕ್ಯಾಂಪಸ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಯಾವುದೇ ನ್ಯಾಯಾಲಯ ನಿರ್ಣಾಯಕ ತೀರ್ಪನ್ನು ಇದುವರೆಗೂ ನೀಡಿಲ್ಲ. ಆದರೆ ವಾಗ್ದಂಡನೆ ಪ್ರಕ್ರಿಯೆಯು ಟ್ರಂಪ್ ಅವರನ್ನು ಕಚೇರಿಯಿಂದ ಹೊರಹೋಗುವಂತೆ ಮಾಡಲಾರದು. ಅವರು ಭವಿಷ್ಯದಲ್ಲಿ ಕಚೇರಿಗೆ ಬಾರದಂತೆ ಅನರ್ಹಗೊಳಿಸುವುದು ಗರಿಷ್ಠ ಶಿಕ್ಷೆಯಾಗಿರಲಿದೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಎರಡು ಬಾರಿ ವಾಗ್ದಂಡನೆ ಇತಿಹಾಸ

ಎರಡು ಬಾರಿ ವಾಗ್ದಂಡನೆ ಇತಿಹಾಸ

ಇತಿಹಾಸದಲ್ಲಿ ಇದುವರೆಗೂ ಯಾವುದೇ ಅಧ್ಯಕ್ಷ ಅಮೆರಿಕದಲ್ಲಿ ಎರಡು ಬಾರಿ ವಾಗ್ದಂಡನೆಗೆ ಗುರಿಯಾಗಿಲ್ಲ. ಆದರೆ ಕಾಂಗ್ರೆಸ್ ವಾಗ್ದಂಡನೆ ನಡೆಸಲು ಸಂವಿಧಾನದಡಿ ಅವಕಾಶವಿದೆ. ಪ್ರಸ್ತುತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತಮ್ಮ ರಾಜಕೀಯ ಎದುರಾಳಿ ಜೋ ಬೈಡನ್ ಅವರನ್ನು ಅಧಿಕಾರಕ್ಕೆ ಬಾರದಂತೆ ತಡೆಯಲು ಉಕ್ರೇನ್ ಜತೆಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಅಧಿಕಾರ ದುರ್ಬಳಕೆ ಮತ್ತು ಸಂಸತ್ತಿನ ಕಾರ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ 2019ರ ಡಿಸೆಂಬರ್‌ನಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡಿಸಲಾಗಿತ್ತು. ಆದರೆ 2020ರ ಫೆಬ್ರವರಿಯಲ್ಲಿ ರಿಪಬ್ಲಿಕನ್ ಪ್ರಾಬಲ್ಯದ ಸೆನೆಟ್ ಅವರನ್ನು ಖುಲಾಸೆಗೊಳಿಸಿತ್ತು.

ಎಷ್ಟು ಬೇಗ ವಾಗ್ದಂಡನೆ ಮಾಡಬಹುದು?

ಎಷ್ಟು ಬೇಗ ವಾಗ್ದಂಡನೆ ಮಾಡಬಹುದು?

ಕೆಲವು ದಿನಗಳಲ್ಲಿಯೇ ವಾಗ್ದಂಡನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಎನ್ನುತ್ತಾರೆ ಪರಿಣತರು. ಏಕೆಂದರೆ ಎರಡೂ ಸದನಗಳು ನಿಯಮಗಳನ್ನು ಪಾಲಿಸುವಷ್ಟು ಸಹನೆ ಹೊಂದಿವೆ. ಆದರೆ ಪ್ರಸ್ತುತದ ನಿಯಮಗಳ ಪ್ರಕಾರ ಒಂದು ವಾರದ ಒಳಗೆ ವಾಗ್ದಂಡನೆ ಪ್ರಕ್ರಿಯೆ ಮುಗಿಸಲು ಸಾಧ್ಯವಿಲ್ಲ.

ಟ್ರಂಪ್ ವಿರುದ್ಧ ಯಾವ ಆರೋಪ ಹೊರಿಸಬಹುದು?

ಟ್ರಂಪ್ ವಿರುದ್ಧ ಯಾವ ಆರೋಪ ಹೊರಿಸಬಹುದು?

ವಾಗ್ದಂಡನೆಯನ್ನು ಜಾರಿಗೊಳಿಸಲು ಅಧ್ಯಕ್ಷರ ವಿರುದ್ಧ ಗುರುತರ ಆರೋಪ ಇರಬೇಕಾಗುತ್ತದೆ. 2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಲೆಕೆಳಗೆ ಮಾಡುವ ಸಲುವಾಗಿ ಯುನೈಟೆಡ್ ಸ್ಟೇಟ್ಸ್ ಸರ್ಕಾರದ ವಿರುದ್ಧದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪಗಳನ್ನು ಹೊರಿಸಲು ಡೆಮಾಕ್ರಟಿಕ್ ಸಂಸದರು ಮುಂದಾಗಿದ್ದಾರೆ. ಹಾಗೆಯೇ ಜಾರ್ಜಿಯಾದ ಕಾರ್ಯದರ್ಶಿ ಬ್ರಾಡ್ ರೆಫೆನ್ಸ್‌ಪರ್ಗರ್ ಅವರಿಗೆ ಕರೆ ಮಾಡಿ ರಾಜ್ಯದಲ್ಲಿ ಬೈಡನ್ ಗೆಲುವನ್ನು ಬದಲಿಸಲು ಸಾಕಾಗುವಷ್ಟು ಮತಗಳನ್ನು ಹುಡುಕುವಂತೆ ಕಳೆದ ವಾರ ಸುಮಾರು ಒಂದು ಗಂಟೆ ಮಾತನಾಡಿ ಒತ್ತಡ ಹಾಕಿದ ಆರೋಪವೂ ಇದೆ.

ಬಳಿಕವೂ ಮಾಡಬಹುದು

ಬಳಿಕವೂ ಮಾಡಬಹುದು

ಟ್ರಂಪ್ ಅವರು ಅಧಿಕಾರಾವಧಿಯಿಂದ ಕೆಳಗಿಳಿಯಲು ಇನ್ನು 10 ದಿನಗಳಷ್ಟೇ ಬಾಕಿ ಇದೆ. ಹಾಗಾದರೆ ಟ್ರಂಪ್ ಅಧಿಕಾರ ತ್ಯಜಿಸಿದ ಬಳಿಕ ವಾಗ್ದಂಡನೆ ನಡೆಸಲು ಅವಕಾಶವಿಲ್ಲವೇ? ಇತಿಹಾಸದ ಕೆಲವು ಘಟನೆಗಳು ನೀಡುವ ಉದಾಹರಣೆಗಳ ಪ್ರಕಾರ ಇದೆ. 1876ರಲ್ಲಿ ಅಧ್ಯಕ್ಷ ಯುಲಿಸ್ಸೆಸ್ ಎಸ್ ಗ್ರಾಂಟ್ ಅವರ ಯುದ್ಧ ಕಾರ್ಯದರ್ಶಿಯು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕವೂ ಅವರನ್ನು ಸದನ ವಾಗ್ದಂಡನೆಗೆ ಒಳಪಡಿಸಿತ್ತು. ಆಗ ಮಾಜಿ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ತನಗೆ ಅಧಿಕಾರ ವ್ಯಾಪ್ತಿ ಇದೆಯೇ ಎಂಬ ಬಗ್ಗೆ ಸೆನೆಟ್ ಪರಿಶೀಲಿಸಿತ್ತು. ಬಳಿಕ ಇದೆ ಎಂದು ತೀರ್ಮಾನಿಸಲಾಗಿತ್ತು. ಕೊನೆಗೆ ಈ ಪ್ರಕರಣದಲ್ಲಿ ಕಾರ್ಯದರ್ಶಿ ಖುಲಾಸೆಯಾಗಿದ್ದರು.

'ಮಾಜಿ ಅಧಿಕಾರಿಗಳಾದ ಮಾತ್ರಕ್ಕೆ ಅಥವಾ ಅವರು ಅಧಿಕಾರದಿಂದ ಆ ಸಮಯಕ್ಕೆ ಕೆಳಗಿಳಿದಿದ್ದಾರೆ ಎಂಬ ಕಾರಣಕ್ಕೆ ನಿವಾರಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವ್ಯಕ್ತಿಯು ಕಚೇರಿಯಲ್ಲಿ ಇದ್ದ ಸಂದರ್ಭದಲ್ಲಿ ಮಾತ್ರವೇ ವಾಗ್ದಂಡನೆ ಆರಂಭಿಸಬೇಕು ಎನ್ನಲಾಗದು. ಅವರು ರಾಜೀನಾಮೆ ನೀಡಲಿ ಅಥವಾ ನಿರ್ಗಮಿಸಿರಲಿ ಪ್ರಕ್ರಿಯೆ ಖಂಡಿತವಾಗಿಯೂ ನಡೆಯಬಹುದು' ಎಂದು ನಾರ್ತ್ ಕೆರೋಲಿನಾ ವಿಶ್ವವಿದ್ಯಾಲಯದ ಮಿಖಾಯಲ್ ಜೆ. ಗೆರ್ಹಾರ್ಟ್ ಹೇಳಿದ್ದಾರೆ.

English summary
US Congress again wants to impeach US President Donald Trump with only days remaining his term. How to impeach him in few days?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X