ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೌಡ್ ಫಂಡಿಂಗ್ ಮೂಲಕ ದಾಖಲೆ ದೇಣಿಗೆ ಪಡೆದ ಕನ್ಹಯ್ಯ ಕುಮಾರ್

|
Google Oneindia Kannada News

ನವದೆಹಲಿ, ಏಪಿರ್ಲ್ 26: ಮತದಾರರಿಂದಲೇ ಹಣ ಸಂಗ್ರಹ ಮಾಡಿಕೊಂಡು ಚುನಾವಣೆ ಖರ್ಚು ವೆಚ್ಚ ಭರಿಸುವ ವಿಧಾನ ಭಾರತದಲ್ಲಿ ಹೊಸದೇನಲ್ಲ. ಆಮ್ ಆದ್ಮಿ ಪಕ್ಷ ಪ್ರತಿ ಚುನಾವಣೆಯಲ್ಲೂ ಈ ವಿಧಾನ ಬಳಸುತ್ತಿದೆ, ಈ ಸಲವೂ ಬಳಸಿದೆ.

ಲೋಕಸಭೆ ಚುನಾವಣೆ 2019ರಲ್ಲಿ ಸರಿ ಸುಮಾರು 80ಕ್ಕೂ ಅಧಿಕ ಅಭ್ಯರ್ಥಿಗಳು ಕ್ರೌಡ್ ಫಂಡಿಂಗ್ ವಿಧಾನ ಅನುಸರಿಸಿದ್ದಾರೆ. ಈ ಪೈಕಿ ಬಿಹಾರದ ಬೆಗುಸರಾಯ್ ಕ್ಷೇತ್ರದ ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ಅವರು ಅತ್ಯಧಿಕ ಪ್ರಮಾಣದಲ್ಲಿ ದೇಣಿಗೆ ಪಡೆದು ದಾಖಲೆ ಬರೆದಿದ್ದಾರೆ.

ಏಪ್ರಿಲ್ 23ರ ಅಂತ್ಯದ ವೇಳೆಗೆ ಸುಮಾರು 1.6 ಕೋಟಿ ಹಣ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಈ ಪೈಕಿ ಶೇ.2.84 ರಷ್ಟು ಹಣ ಮಾತ್ರ ಸ್ವತಂತ್ರ್ಯ ಅಭ್ಯರ್ಥಿಗಳ ಪಾಲಾಗಿದ್ದರೆ, ಉಳಿದ 97.1 ರಷ್ಟು ಹಣ 51 ವಿವಿಧ ಪಕ್ಷಗಳ ಪಾಲಾಗಿದೆ.

ಕನ್ಹಯ್ಯ ಕುಮಾರ್ ಅವರು ಕ್ರೌಡ್ ಫಂಡಿಂಗ್ ಮೂಲಕ ವೈಯಕ್ತಿಕವಾಗಿ 70 ಲಕ್ಷ ರು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಪೂರ್ವ ದೆಹಲಿಯ ಎಎಪಿ ಅಭ್ಯರ್ಥಿ ಅತಿಶಿ ಅವರು 61 ಲಕ್ಷ ರು ಸಂಗ್ರಹಿಸಿದ್ದಾರೆ ಎಂದು ಆನ್ಲೈನ್ ಕ್ರೌಡ್ ಫಂಡಿಂಗ್ ವೇದಿಕೆ ಹೇಳಿದೆ.

ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹ

ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹ

ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹವಾಗಿರುವ ಹಣದ ಪೈಕಿ ಶೇ.42.07 ರಷ್ಟು ಹಣವನ್ನು ಕನ್ಹಯ್ಯ ಕುಮಾರ್​ಪಡೆದಿದ್ದು, ಯಾವುದೆ ಪಕ್ಷ ಕೂಡಾ ಇಷ್ಟು ಮೊತ್ತ ಸಂಗ್ರಹಿಸಿಲ್ಲ. ಏಪ್ರಿಲ್ 29ರಂದು ನಡೆಯಲಿರುವ ನಾಲ್ಕನೆ ಹಂತದ ಚುನಾವಣೆಯಲ್ಲಿ ಕುಮಾರ್ ಅವರು ಅಭ್ಯರ್ಥಿಯಾಗಿದ್ದು, 100 ರು ನಿಂದ 5,00,000ರು ದೇಣಿಗೆ ಪಡೆದಿದ್ದಾರೆ. ಕೆಲವು ದಾನಿಗಳ ಹೆಸರು ಪ್ರಕಟಿಸಿದ್ದರೆ, ಮತ್ತೆ ಕೆಲವರ ಹೆಸರು ಬಹಿರಂಗಪಡಿಸಿಲ್ಲ. ಕನ್ಹಯ್ಯ ಕುಮಾರ್ ಅವರು ಬಿಜೆಪಿ ಮುಖಂಡ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹಾಗೂ ಆರ್ ಜೆಡಿಯ ತನ್ವೀರ್ ಹಸನ್ ವಿರುದ್ಧ ಸೆಣೆಸುತ್ತಿದ್ದಾರೆ.

ಚುನಾವಣಾ ಆಯೋಗದ ನಿಯಮವೇನು?:

ಚುನಾವಣಾ ಆಯೋಗದ ನಿಯಮವೇನು?:

ಚುನಾವಣಾ ಆಯೋಗ ನೀಡಿರುವ ಸೂಚನೆ ಪ್ರಕಾರ ಕ್ರೌಡ್ ಫಂಡಿಂಗ್ ಮೂಲಕ ಎಷ್ಟೇ ದೇಣಿಗೆ ಪಡೆದರೂ ಅಭ್ಯರ್ಥಿಯು 50 ರಿಂದ 70 ಲಕ್ಷ ರು ತನಕ ಹಣ ವ್ಯಯಿಸಬಹುದಾಗಿದೆ. ಇದು ಕೂಡಾ ಯಾವ ರಾಜ್ಯದಲ್ಲಿ ಸ್ಪರ್ಧಿಸಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗಲಿದೆ. ಅರುಣಾಚಲ ಪ್ರದೇಶ, ಗೋವಾ ಹಾಗೂ ಸಿಕ್ಕಿಂಗಳಲ್ಲಿ ಮಾತ್ರ 54 ಲಕ್ಷ ಗರಿಷ್ಠ ಮಿತಿಯಿದೆ. ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ 70 ಲಕ್ಷ ರು ಮಿತಿ ಇದೆ.

ಅವರ್ ಡೆಮೊಕ್ರಾಸಿ ಸಂಸ್ಥೆ ವರದಿ

ಅವರ್ ಡೆಮೊಕ್ರಾಸಿ ಸಂಸ್ಥೆ ವರದಿ

ಕ್ರೌಡ್ ಫಂಡಿಂಗ್​ನಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಮಾಕ್ಸಿಸ್ಟ್ ಕಮ್ಯೂನಿಸ್ಟ್ ಪಕ್ಷದ 18 ಅಭ್ಯರ್ಥಿಗಳು, ಆಮ್​ ಆದ್ಮಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ತಲಾ 5 ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಅವರ್ ಡೆಮೊಕ್ರಾಸಿ ಸಂಸ್ಥೆಯ ಸಹ ಸ್ಥಾಪಕ ಬಿಲಾಲ್ ಜೈದಿ ಹೇಳಿದ್ದಾರೆ.

ಕ್ರೌಡ್ ಫಂಡಿಂಗ್ ನಲ್ಲಿ ಎಎಪಿ ಮುಂದು

ಕ್ರೌಡ್ ಫಂಡಿಂಗ್ ನಲ್ಲಿ ಎಎಪಿ ಮುಂದು

ದೆಹಲಿಯಲ್ಲಿ ಮೇ 12ರಂದು ಆರನೆ ಹಂತದಲ್ಲಿ ಚುನಾವಣೆ ನಡೆಯಲಿದೆ. ಅತಿಶಿ ಅಲ್ಲದೆ, ಎಎಪಿಯ ದಿಲಿಪ್ ಕೆ ಪಾಂಡೆ, ರಾಘವ್ ಛಡ್ಡಾ ಅವರು ಇದೇ ವಿಧಾನದಲ್ಲಿ ಹಣ ಗಳಿಸಿದ್ದಾರೆ. ಪಾಂಡೆ 6,17,107 ರು ಹಾಗೂ ರಾಘವ್ 3,67,111 ರು ಗಳಿಸಿದ್ದಾರೆ.

ಇನ್ನೊಂದೆಡೆ, ಪ್ರಧಾನಿ ಮೋದಿ ವಿರುದ್ಧ ಸೆಣಸುತ್ತಿರುವ ಬಿಎಸ್ ಎಫ್ ನ ಪದಚ್ಯುತ ಸೈನಿಕ ತೇಜ್ ಬಹದ್ದೂರ್ ಯಾದವ್ ಅವರು ಕೂಡಾ ಜನರಿಂದ 46,752 ರು ಸಂಗ್ರಹಿಸಿದ್ದಾರೆ.

English summary
CPI candidate from Begusarai Kanhaiya Kumar has raised the highest amount of over Rs 70 lakh through crowd funding for Lok Sabha elections while Atishi, AAP candidate from Delhi East, has raised over Rs 61 lakh so far, according an online crowd funding platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X