ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಆಸ್ತಿ ವಿವರ
'ರಂಗೀಲಾ', 'ದೌಡ್', 'ಜುದಾಯಿ' ಚಿತ್ರ ಖ್ಯಾತಿಯ ಜನಪ್ರಿಯ ನಟಿ ಊರ್ಮಿಳಾ ಮಾತೊಂಡ್ಕರ್ ಅವರು ಲೋಕಸಭೆ ರಣಕಣದಲ್ಲಿ ಮುಂಬೈ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯದಲ್ಲಿ ಸದ್ಯ ನಿರತರಾಗಿದ್ದಾರೆ. ಊರ್ಮಿಳಾ ಅವರು ಫಾರ್ಮ್ 26ರಲ್ಲಿ ಘೋಷಿಸಿಕೊಂಡಿರುವಂತೆ 68.88 ಕೋಟಿ ರು ಆಸ್ತಿ ಹೊಂದಿದ್ದಾರೆ.
45 ವರ್ಷ ವಯಸ್ಸಿನ ಊರ್ಮಿಳಾ ಹಿಂದಿ ಚಿತ್ರಗಳ ಜೊತೆ ಮಲಯಾಳಂ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಅಭಿನಯಿಸಿದ್ದಾರೆ. 1980 ರಲ್ಲಿ ಝಾಕೋಲ್ ಎಂಬ ಮರಾಠಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಕಲಿಯುಗ್ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದರು.
ಮುಂಬೈ ಉತ್ತರ ಕ್ಷೇತ್ರದ ಸಮಗ್ರ ಮಾಹಿತಿ
ಮುಂಬೈ ಉತ್ತರ ಕ್ಷೇತ್ರದ ಹಾಲಿ ಸಂಸದ, ಬಿಜೆಪಿಯ ಗೋಪಾಲ್ ಶೆಟ್ಟಿ ಅವರನ್ನು ಎದುರಿಸಲಿದ್ದಾರೆ. 2004ರಲ್ಲಿ ಇದೇ ಕ್ಷೇತ್ರದಿಂದ ನಟ ಗೋವಿಂದ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿ, ಆಗಿನ ಪೆಟ್ರೋಲಿಯಂ ಖಾತೆ ಮಾಜಿ ಸಚಿವ ರಾಮ್ ನಾಯ್ಕ್ ಅವರನ್ನು 50,000 ಮತಗಳ ಅಂತರದಿಂದ ಸೋಲಿಸಿದ್ದರು.

2014 ರಲ್ಲಿ ಬಿಜೆಪಿಯ ಗೋಪಾಲ್ ಶೆಟ್ಟಿ ಸ್ಪರ್ಧಿಸಿ, ಕಾಂಗ್ರೆಸ್ ನ ಸಂಜಯ್ ನಿರುಪಮ್ ಅವರನ್ನು ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಏಪ್ರಿಲ್ 11 ರಂದು ಆರಂಭವಾಗುವ ಲೋಕಸಭಾ ಚುನಾವಣೆ 7 ಹಂತಗಳಲ್ಲಿ ನಡೆಯಲಿದ್ದು, ಮೇ 19 ರಂದು ಮುಕ್ತಾಯವಾಗಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.
ಹೆಸರು : ಊರ್ಮಿಳಾ ಮಾತೊಂಡ್ಕರ್
ಕ್ಷೇತ್ರ: ಮುಂಬೈ ಉತ್ತರ
ಪಕ್ಷ : ಕಾಂಗ್ರೆಸ್
ಒಟ್ಟು ಘೋಷಿತಾ ಆಸ್ತಿ : 68.88(ಪತಿಯ ಆಸ್ತಿ ಸೇರಿಸಿ)
ಚರಾಸ್ತಿ : 27.64 ಕೋಟಿ ರು
ಸ್ಥಿರಾಸ್ತಿ : 41.24 ಕೋಟಿ ರು
* ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿಲ್ಲ.












Click it and Unblock the Notifications