ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಾಲೋಟದಲ್ಲಿರುವ ಕಾಂಗ್ರೆಸ್ಸಿಗೆ ಮತ್ತೊಂದು ಅಸ್ತ್ರ ಕೊಟ್ಟ ಬಿಜೆಪಿ

|
Google Oneindia Kannada News

ಚುನಾವಣಾ ವರ್ಷದಲ್ಲಿ ಇಡುವ ಹೆಜ್ಜೆ, ಆಡುವ ಮಾತು ಅಳೆದು ತೂಗುವಂತಿರಬೇಕು. ಯಾಕೆಂದರೆ, ಎಲ್ಲೋ ಎಡವಟ್ಟು ಮಾಡಿಕೊಂಡರೆ ವಿರೋಧಿಗಳಿಗೆ ಅದೇ ದೊಡ್ಡ ಅಸ್ತ್ರವಾಗಬಹುದು.

ನೀರಿಗಾಗಿ ಹೋರಾಟ ಎನ್ನುವ ಮೇಕೆದಾಟು ಪಾದಯಾತ್ರೆಯಿಂದ ಆರಂಭವಾದ ಕಾಂಗ್ರೆಸ್ಸಿನ ಚುನಾವಣಾ ನಡಿಗೆ ಮುಂದುವರಿಯುತ್ತಲೇ ಇದೆ. ಇದಾದ ನಂತರ ನಡೆದ ಸಿದ್ದರಾಮೋತ್ಸವ, ಸ್ವಾತಂತ್ರ್ಯೋತ್ಸವದ ನಡಿಗೆಯೂ ಕಾಂಗ್ರೆಸ್ಸಿಗೆ ಉತ್ತಮ ಮೈಲೇಜ್ ಅನ್ನು ತಂದು ಕೊಟ್ಟಿದೆ.

ಪಕ್ಷಕ್ಕೆ ಪೂರಕವಾದ ಸನ್ನಿವೇಶವಿದೆ ಎನ್ನುವ ಆಂತರಿಕ ಸಮೀಕ್ಷೆಯಿಂದ ಮತ್ತಷ್ಟು ಚುರುಕುಗೊಂಡಿರುವ ಕಾಂಗ್ರೆಸ್ಸಿಗೆ ಆಡಳಿತ ಪಕ್ಷ ಬಿಜೆಪಿ ಸುಖಾಸುಮ್ಮನೆ ಅಸ್ತ್ರವೊಂದನ್ನು ವರದಾನವಾಗಿ ನೀಡಿದೆ.

ಕಾಂಗ್ರೆಸ್ಸಿನಲ್ಲಿ ಮುಂದಿನ ಸಿಎಂ ಯಾರು ಎನ್ನುವ ರೇಸ್ ನಲ್ಲಿ ಸದ್ಯ ಮಂಚೂಣಿಯಲ್ಲಿರುವ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದ ಪ್ರಕರಣ ಮತ್ತು ಇದನ್ನು ಕೆಲವು ಬಿಜೆಪಿ ಮುಖಂಡರು ಸಮರ್ಥಿಸಿಕೊಂಡಿದ್ದು ಕಾಂಗ್ರೆಸ್ಸಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿಲ್ಲದಿಲ್ಲ.

 ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ

ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ

ಕೊಡಗು ಜಿಲ್ಲಾ ಪ್ರವಾಸದ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಇಟ್ಟುಕೊಂಡು ಕಾಂಗ್ರೆಸ್ ಈಗಾಗಲೇ ಹೋರಾಟ ಆರಂಭಿಸಿದೆ. ಪಕ್ಷದ ಎಲ್ಲಾ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗು ಮುತ್ತಿಗೆ, ಕೊಡಗು ಎಸ್ಪಿ ಕಚೇರಿ ಮುತ್ತಿಗೆ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. (ಫೈಲ್ ಫೋಟೋ)

 ಬಿಜೆಪಿಯ ನಾಯಕರು ಉದಾಹರಣೆಗೆ ಪ್ರತಾಪ್ ಸಿಂಹ, ಬೋಪಯ್ಯ

ಬಿಜೆಪಿಯ ನಾಯಕರು ಉದಾಹರಣೆಗೆ ಪ್ರತಾಪ್ ಸಿಂಹ, ಬೋಪಯ್ಯ

ಇದೆಲ್ಲಾ ಒಂದು ಕಡೆಯಾದರೆ ಬಿಜೆಪಿಯ ನಾಯಕರು ಉದಾಹರಣೆಗೆ ಪ್ರತಾಪ್ ಸಿಂಹ, ಬೋಪಯ್ಯ ಮುಂತಾದವರು ಘಟನೆಯನ್ನು ಸಮರ್ಥಿಸಿಕೊಂಡಿದ್ದು ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿಲ್ಲದಿಲ್ಲ. ಸಿಎಂ ಬೊಮ್ಮಾಯಿ ಆದಿಯಾಗಿ ಬಿಜೆಪಿಯ ಪ್ರಮುಖ ಮುಖಂಡರು ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದರೂ, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸುತ್ತಿದೆ.

 ಘಟನೆಯ ನಂತರ ಸರಕಾರ ಸಿದ್ದರಾಮಯ್ಯನವರ ಭದ್ರತೆ ಹೆಚ್ಚಳ

ಘಟನೆಯ ನಂತರ ಸರಕಾರ ಸಿದ್ದರಾಮಯ್ಯನವರ ಭದ್ರತೆ ಹೆಚ್ಚಳ

ಘಟನೆಯ ನಂತರ ಸರಕಾರ ಸಿದ್ದರಾಮಯ್ಯನವರ ಭದ್ರತೆಯನ್ನು ಹೆಚ್ಚಿಸಿದರೂ, ಗೃಹಸಚಿವರ ಅಸಮರ್ಥತೆ ಮತ್ತೊಮ್ಮೆ ಸಾಬೀತಾಗಿದೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಕೆಯನ್ನು ನೀಡಿದ್ದಾರೆ. ಒಗ್ಗಟ್ಟಿನ ಮಂತ್ರವನ್ನು ಜಪಿಸಲು ಆರಂಭಿಸಿರುವ ಕಾಂಗ್ರೆಸ್ ನಾಯಕರು ಮೊಟ್ಟೆ ಪ್ರಕರಣವನ್ನು ಪಕ್ಷಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗುವುದಂತೂ ಹೌದು.

 ಯಡಿಯೂರಪ್ಪನವರ ಉನ್ನತ ಸಮಿತಿಗೆ ನೇಮಕ

ಯಡಿಯೂರಪ್ಪನವರ ಉನ್ನತ ಸಮಿತಿಗೆ ನೇಮಕ

ಯಡಿಯೂರಪ್ಪನವರ ಉನ್ನತ ಸಮಿತಿಗೆ ನೇಮಕದ ನಂತರ ಬಿಜೆಪಿಯಲ್ಲಿ ಹೊಸ ಉತ್ಸಾಹ ಆರಂಭವಾಗಿದೆ. ಈ ಸಂದರ್ಭದಲ್ಲಿ ಮೊಟ್ಟೆ ಪ್ರಕರಣ ಬಿಜೆಪಿಗೆ ಅನಾವಶ್ಯಕವಾಗಿತ್ತು. ಇನ್ನು ಘಟನೆಯನ್ನು ಸಮರ್ಥಿಸಿಕೊಂಡವರಿಗೆ ಮೌಕಿಕ ಎಚ್ಚರಿಕೆಯನ್ನೂ ಬಿಜೆಪಿ ನೀಡಿದೆ. ಆದರೆ, ಯಡಿಯೂರಪ್ಪ ಸಕ್ರಿಯರಾಗಿರುವುದರಿಂದ ಬದಲಾದ ಲೆಕ್ಕಾಚಾರಕ್ಕೆ ಮೊರೆ ಹೋಗಬೇಕಾಗುವ ಸಾಧ್ಯತೆ ಇರುವುದರಿಂದ, ಕಾಂಗ್ರೆಸ್ ಮೊಟ್ಟೆ ಪ್ರಕರಣವನ್ನು ದೊಡ್ಡದು ಮಾಡಬಹುದು.

Recommended Video

ಬೆಂಗಳೂರಿನಲ್ಲೊಂದು ದಾರುಣ ಘಟನೆ: ಕುಟುಂಬವೇ ದುರಂತ ಅಂತ್ಯ | OneIndia

English summary
Egg Thrown On Siddaramaiah, BJP Given One More Weapon To Congress. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X