ಊಟದ ಆರಂಭದಲ್ಲಿ ಸಿಹಿ ಏಕೆ ಸೇವಿಸಬೇಕು?; ಇಲ್ಲಿದೆ ಕಾರಣಗಳು

ಯಾವುದೇ ಊಟದ ನಂತರ ಸಿಹಿ ತಿನ್ನುವ ಸಾಮಾನ್ಯ ಅಭ್ಯಾಸವನ್ನು ನಾವೆಲ್ಲರೂ ಹೊಂದಿರುತ್ತೇವೆ. ಹೋಟೆಲ್‌ಗಳಲ್ಲಿ ಸಹ ಸ್ಟಾಟರ್‌ಗಳು ಮತ್ತು ಸೂಪ್‌ಗಳನ್ನು ಮೊದಲು ಕೊಡುತ್ತಾರೆ. ಊಟದ ಕೊನೆಯಲ್ಲಿ ಸಿಹಿ ತಿಂಡಿಗಳನ್ನು ನೀಡುವುದನ್ನು ನಾವು ಕಾಣಬಹುದು. ಈ ಅಭ್ಯಾಸವನ್ನು ಅನೇಕ ವರ್ಷಗಳಿಂದ ಅನುಸರಿಸುಕೊಂಡು ಬರಲಾಗುತ್ತಿದೆ.

ಆದರೆ ನಮ್ಮ ಪುರಾತನ ಭಾರತೀಯ ಸಂಸ್ಕೃತಿ ಊಟ ಪ್ರಾರಂಭಿಸುವ ಮುನ್ನ ಸಿಹಿ ತಿಂಡಿಗಳನ್ನು ತಿನ್ನಬೇಕು ಎಂದು ಹೇಳುತ್ತದೆ. ಇದನ್ನು ನಮ್ಮಲ್ಲಿ ಅನೇಕರು ತಿಳಿದಿರುವುದಿಲ್ಲ. ನಮ್ಮ ದೇಹವು ಪರಿಣಾಮಕಾರಿಯಾಗಿ ಕೆಲಸ ಮಾಡಲು ನಮ್ಮ ಪೂವರ್ಜರು ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ನಿಸ್ಸಂಶಯವಾಗಿ ಈ ನಿಯಮದ ಹಿಂದೆಯೂ ಒಂದು ಕಾರಣವಿರಬೇಕು. ಆಯುರ್ವೇದ ಆಹಾರ ಕ್ರಮವು ರುಚಿಗೆ ಅನುಗುಣವಾಗಿರುತ್ತದೆ. ಅಂದರೆ ನಮ್ಮ ಆಹಾರದಲ್ಲಿ ಸಿಹಿ, ಹುಳಿ, ಉಪ್ಪು, ಖಾರ, ಕಹಿ ಎಲ್ಲವೂ ಇರಬೇಕು ಎಂದು ಹೇಳುತ್ತದೆ. ಅದರ ಪ್ರಕಾರ ನಾವು ನಮ್ಮ ಆಹಾರದಲ್ಲಿ ಮೊದಲು ಸಿಹಿ ಪದಾರ್ಥವನ್ನು ತಿನ್ನಬೇಕು. ನಂತರ ಉಪ್ಪು ಅಂಶವುಳ್ಳ ಆಹಾರ ಹಾಗೂ ಕೊನೆಯಲ್ಲಿ ಖಾರ ಇರುವ ಪದಾರ್ಥಗಳನ್ನು ಸೇವಿಸಬೇಕು.

ಆಹಾರದಲ್ಲಿ ಎಲ್ಲಾ ಆರು ರುಚಿಗಳು ಇರಲಿ

ಆಹಾರದಲ್ಲಿ ಎಲ್ಲಾ ಆರು ರುಚಿಗಳು ಇರಲಿ

ಎಲ್ಲಾ ಆರು ರುಚಿಗಳು ಇರುವ ಆಹಾರವನ್ನು ಸೇವಿಸುವುದರಿಂದ ನಾವು ಆರೋಗ್ಯವಾಗಿರಲು ಸಹಾಯವಾಗುತ್ತದೆ. ಒಂದೇ ರುಚಿ ಅಥವಾ ಕೆಲವೇ ರುಚಿ ಇರುವ ಆಹಾರಗಳನ್ನು ಸೇವಿಸುತ್ತಿದ್ದರೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

"ಆರ್ಯುವೇದದ ಪ್ರಕಾರ ಸಿಹಿ ರುಚಿ ಇತರ ರುಚಿಗಳಿಗಿಂತ ನಮ್ಮ ಟೇಸ್ಟ್ ಬಡ್‌ಗಳ ಮೇಲೆ ತಕ್ಷಣವೇ ಕಾರ್ಯನಿರ್ವಹಿಸುತ್ತದೆ. ಆರಂಭದಲ್ಲಿ ಸಿಹಿ ಪದಾರ್ಥಗಳನ್ನು ತಿನ್ನುವುದು ಹೊಟ್ಟೆಗೆ ಸಂಬಂಧಿಸಿದ ರಸಗಳು ಹೆಚ್ಚಾಗಿ ಹೊರಹೊಮ್ಮಲು ಕಾರಣವಾಗುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಜತೆಗೆ ನಮ್ಮ ಟೇಸ್ಟ್ ಬಡ್‌ಗಳಿಗೆ ಸಹಾಯ ಮಾಡುತ್ತದೆ,'' ಎಂದು ಆಯುಶಕ್ತಿ ಸಂಸ್ಥೆಯ ಸಹ ಸಂಸ್ಥಾಪಕಿ ಡಾ. ಸ್ಮಿತಾ ನರಮ್ ಹೇಳಿದರು.

ಸಿಹಿ ಕೊನೆಯಲ್ಲಿ ತಿಂದರೆ ಸಮಸ್ಯೆ

ಸಿಹಿ ಕೊನೆಯಲ್ಲಿ ತಿಂದರೆ ಸಮಸ್ಯೆ

"ಇನ್ನೊಂದೆಡೆ ನೀವು ಸಿಹಿ ತಿಂಡಿಗಳೊಂದಿಗೆ ನಿಮ್ಮ ಊಟವನ್ನು ಕೊನೆಗೊಳಿಸಿದರೆ ಅದು ಆಮ್ಲದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ಹೊಟ್ಟೆ ಉಬ್ಬುವುದು, ಆಮ್ಲೀಯತೆ, ಗ್ಯಾಸ್ಟ್ರಿಕ್ ಸಮಸ್ಯೆ ಸೇರಿದಂತೆ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ,'' ಎಂದು ತಿಳಿಸಿದರು.

ಸಿಹಿ ತಿಂಡಿಗಳನ್ನು ಮೊದಲು ಸೇವಿಸಿ

ಸಿಹಿ ತಿಂಡಿಗಳನ್ನು ಮೊದಲು ಸೇವಿಸಿ

ಅಲ್ಲದೇ ಸಿಹಿ ತಿಂಡಿಗಳನ್ನು ಮೊದಲು ಸೇವಿಸಲು ಏಕೆ ಸುಚಿಸಲಾಗುತ್ತದೆ ಅಂದರೆ ಅವು ಭೂಮಿ ಮತ್ತು ನೀರಿನ ಕೂಡಿದ ಅಂಶಗಳಿಂದ ತಯಾರಿಸಲಾಗಿರುತ್ತದೆ. ಅದು ಸ್ವಭಾವತಃ ಹೆಚ್ಚು ಪೋಷಕಾಂಶಗಳಿಂದ ಕೂಡಿರುತ್ತದೆ. ಅದ್ದರಿಂದ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಊಟದ ಆರಂಭದಲ್ಲಿ ಜೀರ್ಣ ಶಕ್ತಿಯು ಅತ್ಯುನ್ನತ ಮಟ್ಟದಲ್ಲಿರುತ್ತದೆ. ಸಿಹಿ ಪದಾರ್ಥಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಮಧುಮೇಹಕ್ಕೆ ಕಾರಣವಾಗಬಹುದು

ಮಧುಮೇಹಕ್ಕೆ ಕಾರಣವಾಗಬಹುದು

ನೀವು ಊಟದ ನಂತರ ಸಿಹಿ ಪಾದಾರ್ಥಗಳನ್ನು ತಿನ್ನುವುದರಿಂದ ನಿಮ್ಮ ಚಾಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನಿಧಾನವಾದ ಚಾಯಾಪಚಯ ಕ್ರಿಯೆಯು ಮಧುಮೇಹ, ಬೊಜ್ಜು, ಥೈರಾಯ್ಡ, ಪಿಸಿಒಎಸ್ ನಂತಹ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸಲು ಕಾರಣ

ಜೀರ್ಣಕ್ರಿಯೆಯನ್ನು ಸುಧಾರಿಸಲು ಕಾರಣ

ಊಟಕ್ಕೆ ಮುಂಚೆ ಸಿಹಿ ತಿಂಡಿಗಳನ್ನು ಸೇವಿಸುವುದರಿಂದ ದೇಹದಲ್ಲಿ ಜೀರ್ಣಕಾರಿ ಹಾರ್ಮೋನ್‌ಗಳನ್ನು ಬಿಡುಗಡೆ ಆಗಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಕಾರಣವಾಗುತ್ತದೆ. ಊಟದ ನಂತರ ಸಿಹಿ ತಿಂಡಿಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಸೇವಿಸುವುದು ಉತ್ತಮ. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಊಟದ ನಂತರ ವೀಳ್ಯದೆಲೆ ಮತ್ತು ಅಡಕೆಯನ್ನು ಸಹ ಸೇವಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+