Dinesh Gundu Rao Profile: ಸತತ ಐದು ಬಾರಿ ಗೆಲುವು ಕಂಡ ದಿನೇಶ್‌ ಗಂಡೂರಾವ್ ವ್ಯಕ್ತಿ ಪರಿಚಯ

ಸೋಲಿಲ್ಲದ ಸರದಾರನಂತೆ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಅವರ ಪುತ್ರರಾಗಿರುವ ದಿನೇಶ್‌ ಗಂಡೂರಾವ್ ವ್ಯಕ್ತಿ ಪರಿಚಯ ಇಲ್ಲಿದೆ.

ಬೆಂಗಳೂರು, ಮಾರ್ಚ್ 3: ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಶಾಸಕ ದಿನೇಶ್‌ ಗಂಡೂರಾವ್ ಕೂಡ ಒಬ್ಬರು. ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಅವರ ಪುತ್ರರಾಗಿರುವ ದಿನೇಶ್‌ ಗಂಡೂರಾವ್ ಸೋಲಿಲ್ಲದ ಸರದಾರನಂತೆ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಬೆಂಗಳೂರು ನಗರದ ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜನಮನ್ನಣೆ ಗಳಿಸಿದ್ದು, ಈ ಬಾರಿಯೂ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಕಾಂಗ್ರೆಸ್‌ ಮುಖಂಡ ದಿನೇಶ್‌ ಗಂಡೂರಾವ್, ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಹಾಗೂ ವರಲಕ್ಷ್ಮೀ ಗುಂಡೂರಾವ್‌ ದಂಪತಿಯ ಪುತ್ರನಾಗಿ 1969 ಅಕ್ಟೋಬರ್‌ 9ರಂದು ಕೊಡಗಿನ ಕುಶಾಲ ನಗರದಲ್ಲಿ ಜನಿಸಿದರು. ಮೂಲತಃ ರಾಜಕೀಯ ಹಿನ್ನೆಲೆ ಹೊಂದಿರುವ ದಿನೇಶ್‌ ಗಂಡೂರಾವ್ ಅವರು ಇಂಜಿನಿಯರಿಂಗ್‌ ಪದವೀಧರರಾಗಿದ್ದಾರೆ.

Dinesh Gundu Rao Age, Biography, Education, Family, Net Worth & Political Career Details

ದಿನೇಶ್ ಗುಂಡೂರಾವ್ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. 1998ರಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದರು. ಈ ಮೂಲಕ ಪಕ್ಷ ಸಂಘಟನೆ ಆರಂಭಿಸಿದ ಅವರು 1999ರಲ್ಲಿ ಮೊದಲ ಮೊದಲ ಬಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ತಮ್ಮ ಅಧಿಕಾರವಧಿಯಲ್ಲಿ ಜನಪರ ಕೆಲಸಗಳನ್ನು ಮಾಡುವ ಮೂಲಕ ಜನರ ಮೆಚ್ಚುಗೆ ಪಡೆದರು.

ಶಾಸಕರ ಕರ್ತವ್ಯದ ಜೊತೆಗೆ ಪಕ್ಷ ಸಂಘಟನೆಯಲ್ಲೂ ಸಕ್ರಿಯರಾಗಿದ್ದ ದಿನೇಶ್ ಗುಂಡೂರಾವ್ ಅವರು, 2004ರಲ್ಲಿ ಎರಡನೇ ಬಾರಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲೇ 2008 ವಿಧಾನಸಭೆ ಚುನಾವಣೆಯ ಕಣಕ್ಕಿಳಿದ ದಿನೇಶ್ ಗುಂಡೂರಾವ್ ಭರ್ಜರಿ ಪ್ರಚಾರ ನಡೆಸಿ, 41,188 ಮತಗಳನ್ನು ಪಡೆದು ಮತ್ತೆ ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಂಡರು.

Dinesh Gundu Rao Age, Biography, Education, Family, Net Worth & Political Career Details

2013 ವಿಧಾನಸಭೆ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾದರು. ಇವರು ಸಚಿವರಾಗಿದ್ದ ಸಮಯದಲ್ಲಿ ಕರ್ನಾಟಕದಲ್ಲಿ ಅನ್ನಭಾಗ್ಯಯಂತಹ ಮಹತ್ವದ ಯೋಜನೆ ಜಾರಿಗೆ ಬಂದಿತು.

ಸತತ ಐದನೇ ಬಾರಿ ಶಾಸಕರಾಗುವ ಹುಮ್ಮಸ್ಸಿನಲ್ಲಿ ದಿನೇಶ್ ಗುಂಡೂರಾವ್ 2018ರಲ್ಲಿ ಬೆಂಗಳೂರು ನಗರದ ಗಾಂಧಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆಗಿಳಿದರು. ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ತೀವ್ರ ಪೈಪೋಟಿ ನೀಡಿದ್ದು, 47,354 ಮತಗಳನ್ನು ಪಡೆದು, ಸುಮಾರು 10,070 ಮತಗಳ ಅಂತರದಲ್ಲಿ ದಿನೇಶ್ ಗುಂಡೂರಾವ್ ಐದನೇ ಬಾರಿ ಗೆಲುವು ಸಾಧಿಸಿದರು. ಬಳಿಕ ಪಕ್ಷ ಸಂಘಟನೆಯ ದೃಷ್ಟಿಯಿಂದ 2018ರ ಜೂನ್‌ನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿತು.

ಬಳಿಕ 2020 ರಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿ ಸಹ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಗೋವಾ, ತಮಿಳುನಾಡು ಮತ್ತು ಪುದುಚೇರಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ವಹಿಸಿದ್ದಾರೆ.

ದಿನೇಶ್ ಗುಂಡೂರಾವ್ ಅವರ ಆಸ್ತಿ ವಿವರ

ಸಾ.ರಾ ಮಹೇಶ್‌ಅವರ ಒಟ್ಟು ಆಸ್ತಿ 27.16 ಕೋಟಿ ರೂಪಾಯಿ, ಸಾಲ 1.6 ಕೋಟಿ ರೂಪಾಯಿ ಎನ್ನಲಾಗಿದೆ. ಇನ್ನು ದಿನೇಶ್ ಗುಂಡೂರಾವ್ https://www.facebook.com/dineshgunduraoofficial/ ಫೇಸ್‌ಬುಕ್‌ ಖಾತೆ ಹಾಗೂ https://twitter.com/dineshgrao ಟ್ವಿಟರ್‌ ಮೂಲಕ ಸದಾ ಜನರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ದಿನೇಶ್‌ ಗುಂಡೂರಾವ್‌ ಅವರು, ಪ್ರಸ್ತುತ ಆಗುಹೋಗುಗಳನ್ನು ಹಾಗೂ ಬಿಜೆಪಿ ಸರ್ಕಾರದ ಲೋಪದೋಷಗಳ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+