ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ಲಜನಕ ಸಿಲಿಂಡರ್ V/S ಸಾಂದ್ರಕ; ಕೊವಿಡ್ ರೋಗಿಗಳಿಗೆ ಯಾವುದು ಉತ್ತಮ?

|
Google Oneindia Kannada News

ನವದೆಹಲಿ, ಏಪ್ರಿಲ್ 30: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯು ಮೊದಲಿಗಿಂತ ಅಪಾಯಕಾರಿ ಎನಿಸಿದೆ. ಮೊದಲ ಅಲೆ ಕೆಮ್ಮು, ಜ್ವರ, ಶೀತ ಹಾಗೂ ಸ್ನಾಯು ಸೆಳತ ಸೇರಿದಂತೆ ಹಲವು ಲಕ್ಷಣಗಳನ್ನು ಹೊಂದಿತ್ತು. ಎರಡನೇ ಅಲೆಯಲ್ಲಿ ಸೋಂಕಿನ ಶ್ವಾಸಕೋಶದ ಮೇಲೆ ರೋಗಾಣು ನೇರವಾಗಿ ದಾಳಿ ಇಡುತ್ತಿದೆ.

2021ರ ಮಾರ್ಚ್ ತಿಂಗಳಿನಿಂದ ಈಚೆಗೆ ಕೊರೊನಾವೈರಸ್ ಸೋಂಕಿತರಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆ ಹೆಚ್ಚಾಗಿ ಕಾಡುತ್ತಿದೆ. ಉಸಿರಾಟ ಸಮಸ್ಯೆಯಿಂದಲೇ ಅತಿಹೆಚ್ಚು ಸೋಂಕಿತರು ಪ್ರಾಣ ಬಿಟ್ಟಿರುವುದು ಬಿಡುತ್ತಿರುವುದು ಪ್ರತಿನಿತ್ಯ ಅಂಕಿ-ಅಂಶಗಳ ಸಹಿತ ಸಾಬೀತಾಗುತ್ತಿದೆ.

ತೆಲಂಗಾಣದಲ್ಲಿ ಕೊರೊನಾವೈರಸ್ ರೋಗಿಗಳ ಸಾವಿಗೇನು ಕಾರಣ?ತೆಲಂಗಾಣದಲ್ಲಿ ಕೊರೊನಾವೈರಸ್ ರೋಗಿಗಳ ಸಾವಿಗೇನು ಕಾರಣ?

ಭಾರತದಲ್ಲಿ ಕೊವಿಡ್-19 ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ. ವಿದೇಶಗಳಿಂದ ವೈದ್ಯಕೀಯ ಆಮ್ಲಜನಕದ ಸಿಲಿಂಡರ್, ಆಕ್ಸಿಜನ್ ಸಾಂದ್ರಕ ತರಿಸಿಕೊಳ್ಳಲಾಗುತ್ತಿದೆ. ಈ ವೈದ್ಯಕೀಯ ಆಮ್ಲಜನಕ ಉಸಿರಾಟ ಸಂಬಂಧಿ ಕಾಯಿಲೆ ಹೊಂದಿದ ರೋಗಿಗಳ ಚಿಕಿತ್ಸೆಗೆ ಅತ್ಯವಶ್ಯಕವಾಗಿದೆ. ಹಾಗಿದ್ದಲ್ಲಿ ವೈದ್ಯಕೀಯ ಆಮ್ಲಜನಕ ಮತ್ತು ಆಮ್ಲಜನಕ ಸಾಂದ್ರಕ ಎಂದರೇನು. ಅದು ಹೇಗೆ ಕೆಲಸ ಮಾಡುತ್ತದೆ. ಭಾರತದಲ್ಲಿ ಪ್ರಸ್ತುತ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗುವುದರ ಹಿಂದಿನ ಕಾರಣವೇನು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ...

ಆಮ್ಲಜನಕ ಸಾಂದ್ರಕ ಮತ್ತು ಆಕ್ಸಿಜನ್ ಸಿಲಿಂಡರ್?

ಆಮ್ಲಜನಕ ಸಾಂದ್ರಕ ಮತ್ತು ಆಕ್ಸಿಜನ್ ಸಿಲಿಂಡರ್?

ಆಮ್ಲಜನಕ ಸಿಲಿಂಡರ್ ಮತ್ತು ಆಮ್ಲಜನಕ ಸಾಂದ್ರಕ ಎನ್ನುವುದು ಒಂದು ವೈದ್ಯಕೀಯ ಉಪಕರಣವಾಗಿದೆ. ದೇಹಕ್ಕೆ ಅಗತ್ಯವಿದ್ದಲ್ಲಿ ಆಮ್ಲಜನಕ ಉತ್ಪಾದಿಸಲಾಗದ ಸ್ಥಿತಿಯಲ್ಲಿ ಇರುವ ಜನರಿಗೆ ಚಿಕಿತ್ಸೆ ನೀಡಲು ಈ ಆಮ್ಲಜನಕದ ಸಿಲಿಂಡರ್ ಮತ್ತು ಸಾಂದ್ರಕವನ್ನು ಬಳಸಲಾಗುತ್ತದೆ. ಪ್ರಯಾಣದ ಸಂದರ್ಭ, ಆಸ್ಪತ್ರೆ ಅಥವಾ ಮನೆಗಳಲ್ಲೇ ರೋಗಿಗಳಿಗೆ ಆಮ್ಲಜನಕ ಒದಗಿಸುವ ಉದ್ದೇಶದಿಂದ ಈ ಸಿಲಿಂಡರ್ ಹಾಗೂ ಸಾಂದ್ರಕಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ.

ರೋಗಿಗಳ ಚಿಕಿತ್ಸೆಗೆ ಈ ಆಮ್ಲಜನಕದ ಬಳಕೆ ಹೇಗೆ?

ರೋಗಿಗಳ ಚಿಕಿತ್ಸೆಗೆ ಈ ಆಮ್ಲಜನಕದ ಬಳಕೆ ಹೇಗೆ?

ಲೋಹದ ಟ್ಯಾಂಕ್‌ನಲ್ಲಿ ವೈದ್ಯಕೀಯ ಆಮ್ಲಜನಕವನ್ನು ತುಂಬಿಸಲಾಗಿರುತ್ತದೆ. ಈ ಟ್ಯಾಂಕ್‌ನ ಒಂದು ತುದಿಯಿಂದ ರೋಗಿಯ ಮುಖಕ್ಕೆ ಹಾಕುವ ಮುಖ ಕವಚಕ್ಕೆ ಸಂಪರ್ಕ ಕಲ್ಪಿಸಿರಲಾಗುತ್ತದೆ. ಇದರಿಂದ ಆಮ್ಲಜನಕವು ಟ್ಯಾಂಕಿನಿಂದ ನೇರವಾಗಿ ರೋಗಿಯ ಮೂಗಿನ ಮೂಲಕ ಉಸಿರಾಟ ವ್ಯವಸ್ಥೆ ಕಲ್ಪಿಸುವುದಕ್ಕೆ ಸಾಧ್ಯವಾಗುತ್ತದೆ. ಇನ್ನು, ಈ ಆಕ್ಸಿಜನ್ ಸಿಲಿಂಡರ್ ಅನ್ನು ಹೆಚ್ಚಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಅನುಕೂಲವಾಗುವಂತೆ ಚಕ್ರವುಳ್ಳ ಸಾಧನಗಳಲ್ಲಿ ಇರಿಸಲಾಗಿರುತ್ತದೆ.

ಆಮ್ಲಜನಕ ಟ್ಯಾಂಕ್‌ಗಳ ಸಾಧಕಗಳು?

ಆಮ್ಲಜನಕ ಟ್ಯಾಂಕ್‌ಗಳ ಸಾಧಕಗಳು?

  • ವಿದ್ಯುತ್ ಸಂಪರ್ಕದ ಅವಶ್ಯಕತೆ ಇಲ್ಲ: ಆಮ್ಲಜನಕ ಟ್ಯಾಂಕ್‌ಗಳು ಕಾರ್ಯನಿರ್ವಹಿಸಲು ತಮ್ಮೊಳಗಿನ ಒತ್ತಡದ ಲಾಭ ಪಡೆದುಕೊಳ್ಳುವುದು ಒಂದು ಒಂದು ವಿಶಿಷ್ಟ ಪ್ರಯೋಜನವಾಗಿದೆ
  • ನಿಶಬ್ಧತೆ: ಟ್ಯಾಂಕ್‌ಗಳಿಂದ ನಿಗದಿತ ಸಮಯದಲ್ಲಿ ನಿರ್ದಿಷ್ಟ ಪ್ರಮಾಣದ ಆಮ್ಲಜನಕವು ದೇಹಕ್ಕೆ ಸರಬರಾಜು ಆಗುವುದರಿಂದ ಯಾವುದೇ ಬೀಪ್ ಅಥವಾ ದೊಡ್ಡ ಶಬ್ಧ ಕೇಳಿ ಬರುವುದಿಲ್ಲ
  • ಆರಂಭಿಕ ಹಂತದಲ್ಲಿ ಕಡಿಮೆ ವೆಚ್ಚ: ಆಮ್ಲಜನಕ ಟ್ಯಾಂಕ್‌ಗಳು ಸಾಂಪ್ರದಾಯಕ ರೂಪದಲ್ಲಿ ಇರುವ ಆರಂಭಿಕ ಹಂತದಲ್ಲಿ ಅಗ್ಗದ ಬೆಲೆಗೆ ಸಿಗುತ್ತವೆ
ಆಮ್ಲಜನಕ ಟ್ಯಾಂಕ್‌ಗಳ ಬಾಧಕಗಳು?

ಆಮ್ಲಜನಕ ಟ್ಯಾಂಕ್‌ಗಳ ಬಾಧಕಗಳು?

  • ಭಾರಿ ಪ್ರಮಾಣದಲ್ಲಿ ಇರುವುದು: ಆಕ್ಸಿಜನ್ ಟ್ಯಾಂಕ್‌ಗಳು ದೊಡ್ಡ ಹಾಗೂ ತುಂಬಾ ಭಾರವಾಗಿ ಇರುವುದರಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಅಥವಾ ತೆಗೆದುಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ
  • ನಿಗದಿತ ಪ್ರಮಾಣಕ್ಕೆ ಸೀಮಿತ: ಆಮ್ಲಜನಕದ ಟ್ಯಾಂಕ್‌ಗಳು ಒಂದು ನಿಗದಿತ ಪ್ರಮಾಣವನ್ನು ಹೊಂದಿದ್ದು, ಕೆಲವು ಸಮಯದವರೆಗೂ ಮಾತ್ರ ಪ್ರಯೋಜನಕಾರಿ ಆಗಿರುತ್ತದೆ. ಅದು ಖಾಲಿಯಾದ ನಂತರದಲ್ಲಿ ಹೊಸ ಟ್ಯಾಂಕ್‌ ತೆಗೆದುಕೊಳ್ಳಬೇಕು ಇಲ್ಲವೇ ಅದೇ ಟ್ಯಾಂಕ್‌ನ್ನು ಮತ್ತೊಮ್ಮೆ ತುಂಬಿಸಬೇಕು.
  • ದೀರ್ಘಾವಧಿಯಲ್ಲಿ ಬೆಲೆ ದುಬಾರಿ: ಆಮ್ಲಜನಕ ಟ್ಯಾಂಕ್‌ಗಳು ಆರಂಭಿಕ ಹಂತದಲ್ಲಿ ಕಡಿಮೆ ದರದಲ್ಲಿ ಸಿಗುತ್ತವೆ. ಕಾಲಾಂತರದಲ್ಲಿ ಅವುಗಳನ್ನು ಬದಲಿಸಬೇಕು ಅಥವಾ ಮತ್ತೆ ತುಂಬಿಸಬೇಕಾಗುತ್ತದೆ. ಆಗ ಈ ಆಮ್ಲಜನಕದ ಟ್ಯಾಂಕ್‌ಗಳು ದುಬಾರಿ ಎನಿಸುತ್ತವೆ.
ಆಮ್ಲಜನಕದ ಸಿಲಿಂಡರ್ ಬೇರೆ ಸಾಂದ್ರಕಗಳೇ ಬೇರೆ!

ಆಮ್ಲಜನಕದ ಸಿಲಿಂಡರ್ ಬೇರೆ ಸಾಂದ್ರಕಗಳೇ ಬೇರೆ!

ಒಂದು ಹಂತದಲ್ಲಿ ವೈದ್ಯಕೀಯ ಟ್ಯಾಂಕ್‌ಗಳಂತೆ ಆಮ್ಲಜನಕ ಸಾಂದ್ರಕಗಳನ್ನು ಕೂಡ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಆಕ್ಸಿಜನ್ ಸಿಲಿಂಡರ್ ರೀತಿಯಲ್ಲೇ ಸಾಂದ್ರಕದಿಂದ ರೋಗಿಗಳ ಮುಖಕ್ಕೆ ಹಾಕುವ ಮಾಸ್ಕ್ ಮೂಲಕ ಆಮ್ಲಜನಕವನ್ನು ನೀಡಲಾಗುತ್ತದೆ. ಆದರೆ ಆಕ್ಸಿಜನ್ ಸಿಲಿಂಡರ್ ಮತ್ತು ಆಮ್ಲಜನಕ ಸಾಂದ್ರಕಗಳು ಭಿನ್ನವಾಗಿ ಕಾರ್ಯ ನಿರ್ವಹಿಸುತ್ತವೆ. ಆಕ್ಸಿಜನ್ ಸಿಲಿಂಡರ್ ತನ್ನಲ್ಲಿರುವ ಒತ್ತಡದ ಆಮ್ಲಜನಕವನ್ನು ರೋಗಿಗಳಿಗೆ ಪೂರೈಕೆ ಮಾಡಿದರೆ, ಆಮ್ಲಜನಕ ಸಾಂದ್ರಕವು ತನ್ನ ಸುತ್ತಲಿನ ಗಾಳಿಯಲ್ಲಿ ಇರುವ ಆಮ್ಲಜನಕವನ್ನು ಸಂಗ್ರಹಿಸಿ ಅದನ್ನು ಕೇಂದ್ರೀಕರಿಸಿ ನಂತರದಲ್ಲಿ ರೋಗಿಗಳಿಗೆ ಸರಬರಾಜು ಮಾಡುತ್ತದೆ. ಈ ಆಮ್ಲಜನಕ ಸಾಂದ್ರಕವನ್ನು ಬದಲಾಯಿಸುವ ಅಥವಾ ಮತ್ತೊಮ್ಮೆ ತುಂಬಿಸಬೇಕಾದ ಅವಶ್ಯಕತೆ ಇರುವುದಿಲ್ಲ.

ಆಮ್ಲಜನಕ ಸಾಂದ್ರಕದ ಸಾಧಕಗಳೇನು?

ಆಮ್ಲಜನಕ ಸಾಂದ್ರಕದ ಸಾಧಕಗಳೇನು?

  • ಅನಿಯಮಿತ ಆಮ್ಲಜನಕ ಪೂರೈಕೆ: ವೈದ್ಯಕೀಯ ಆಮ್ಲಜನಕ ಸಾಂದ್ರಕಗಳು ಅನಿಯಮಿತವಾಗಿ ನಿರಂತರವಾಗಿ ಆಮ್ಲಜನಕವನ್ನು ಪೂರೈಕೆ ಮಾಡುತ್ತಿರುತ್ತವೆ. ಆಕ್ಸಿಜನ್ ಟ್ಯಾಂಕ್‌ಗಳ ರೀತಿ ಖಾಲಿಯಾಗುವ ಆತಂಕ ಅಥವಾ ಮತ್ತೊಮ್ಮೆ ತುಂಬಿಸುವ ಅಗತ್ಯ ಇರುವುದಿಲ್ಲ
  • ಅತಿಹೆಚ್ಚು ತೂಕ ಇರುವುದಿಲ್ಲ: ಆಕ್ಸಿಜನ್ ಟ್ಯಾಂಕ್‌ಗಳಿಗೆ ಹೋಲಿಸಿದರೆ ಈ ಆಮ್ಲಜನಕ ಸಾಂದ್ರಕಗಳು ಕಡಿಮೆ ತೂಕವನ್ನು ಹೊಂದಿರುತ್ತವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ಸಹಾಯಕವಾಗಿದೆ. ಈ ಸಾಂದ್ರಕಗಳಿಗೆ ಯಾವುದೇ ಲೋಹದ ಟ್ಯಾಂಕ್ ಅಗತ್ಯವಿರುವುದಿಲ್ಲ
ಆಮ್ಲಜನಕ ಸಾಂದ್ರಕದ ಬಾಧಕಗಳೇನು?

ಆಮ್ಲಜನಕ ಸಾಂದ್ರಕದ ಬಾಧಕಗಳೇನು?

  • ಬ್ಯಾಟರಿಗಳ ಅಗತ್ಯ: ಆಮ್ಲಜನಕ ಸಾಂದ್ರಕಗಳು ತನ್ನಲ್ಲಿರುವ ಆಮ್ಲಜನಕದ ಒತ್ತಡದ ಮೇಲೆ ಕೆಲಸ ಮಾಡುವುದಿಲ್ಲ. ಗಾಳಿಯನ್ನು ಕೇಂದ್ರೀಕರಿಸುವುದು ಮತ್ತು ಅದನ್ನು ಚಿಕಿತ್ಸೆಗೆ ಪೂರೈಸುವುದರಿಂದ ಈ ಸಾಂದ್ರಕಗಳಿಗೆ ವಿದ್ಯುತ್ ಅಥವಾ ಬ್ಯಾಟರಿಗಳು ಬೇಕಾಗುತ್ತವೆ.
  • ಹೆಚ್ಚಿನ ಸದ್ದು: ಆಮ್ಲಜನಕ ಸಾಂದ್ರಕವು ಗಾಳಿಯಲ್ಲಿನ ಆಮ್ಲಜನಕನ್ನು ಸಂಗ್ರಹಿಸಿ ಅದನ್ನು ಕೇಂದ್ರೀಕರಿಸಿ ಶುದ್ಧಗೊಳಿಸಿ ನಂತರದಲ್ಲಿ ಪೂರೈಕೆ ಮಾಡುವುದರಿಂದ ಈ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಸದ್ದು ಕೇಳಿ ಬರುತ್ತದೆ
  • ದುಬಾರಿ: ಆಮ್ಲಜನಕ ಸಾಂದ್ರಕಗಳು ಹೆಚ್ಚು ವಿದ್ಯುತೀಕರಣದಿಂದ ಕೂಡಿರುವ ಹಿನ್ನೆಲೆ ಆರಂಭಿಕ ಹಂತದಲ್ಲಿ ಹೆಚ್ಚು ದುಬಾರಿ ಎಂದು ಅನಿಸುತ್ತವೆ

English summary
Differences Between Oxygen Cylinders And Concentrators: Read Here Which One Is Better To Treat Covid-19 Patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X