ಡೆಲ್ಟಾ ರೂಪಾಂತರಿ ವೈರಸ್‌ನ ಗಂಭೀರ ಸ್ವರೂಪದ ಹೊಸ ಲಕ್ಷಣಗಳು ಪತ್ತೆ
ನವದೆಹಲಿ, ಜೂನ್ 08: ಕೋವಿಡ್ 19ನ ರೂಪಾಂತರ ತಳಿ ಎನಿಸಿಕೊಂಡಿರುವ ಡೆಲ್ಟಾ B.1.617 ದೇಶದಲ್ಲಿ ಆತಂಕವನ್ನು ಹೆಚ್ಚು ಮಾಡುತ್ತಿದೆ. ಈ ರೂಪಾಂತರಿ ಕಾಣಿಸಿಕೊಂಡಿರುವ ವ್ಯಕ್ತಿಗಳಲ್ಲಿ ಗಂಭೀರ ಸ್ವರೂಪದ ಲಕ್ಷಣಗಳು ಗೋಚರಿಸಿವೆ.
ಡೆಲ್ಟಾ ತಳಿ ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ, ರಕ್ತ ಹೆಪ್ಪುಗಟ್ಟುವುದು, ಶ್ರವಣದೋಷ, ಗ್ಯಾಸ್ಟ್ರಿಕ್, ಇನ್ನೂ ಕೆಲಸವರಿಗೆ ಗ್ಯಾಂಗ್ರಿನ್‌ಕೂಡ ಉಂಟಾಗಬಹುದು ಎಂದು ಹೇಳಲಾಗಿದೆ.
ಅಲ್ಫಾ, ಬೀಟಾ, ಗಾಮಾ ರೂಪಾಂತರಿ ದಕ್ಷಿಣ ಆಫ್ರಿಕಾ, ಬ್ರೆಜಿಲ್‌ನಲ್ಲಿ ಕಾಣಸಿಕೊಂಡಿರುವ ತಳಿಯಾಗಿದೆ. ಕೆಲವು ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತಿದ್ದು, ಇದರಿಂದ ಹಾನಿಗೊಳಗಾದ ಕೋಶ ಸತ್ತು ಗ್ಯಾಂಗ್ರಿನ್‌ಗೆ ಕಾರಣವಾಗುತ್ತಿದೆ ಎಂದು ಮುಂಬೈನ ಹೃದ್ರೋಗ ತಜ್ಞ ಗಣೇಶ್ ಮಾನುಧಾನೆ ಮಾಹಿತಿ ನೀಡಿದ್ದಾರೆ.
ಹಾಗೆಯೇ ಕಳೆದ ಎರಡು ತಿಂಗಳಲ್ಲಿ ಈ ಸಮಸ್ಯೆ ಉಂಟಾದ ಎಂಟು ರೋಗಿಗಳಿಗೆ ಅವರು ಚಿಕಿತ್ಸೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

60 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆ
60 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿದೆ, ಯುಕೆಯಲ್ಲಿ ಹಿಂದೆಂದೂ ಆಸ್ಪತ್ರೆಗೆ ದಾಖಲಾಗದಷ್ಟು ಮಂದಿ ದಾಖಲಾಗುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಎರಡನೆಯ ಅಲೆಯು ಅನೇಕ ಹೊಸ ಹೊಸ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ.

ಮೊದಲ ಅಲೆಯಲ್ಲಿ ಕಾಣಿಸಿದ ಲಕ್ಷಣಗಳು
ಕೊರೊನಾ ಸೋಂಕಿನ ಮೊದಲ ಅಲೆಯಲ್ಲಿ ಕಂಡುಬರದ ಅನೇಕ ಹೊಸ ಲಕ್ಷಣಗಳನ್ನು ರೂಪಾಂತರವು ತೋರಿಸುತ್ತಿದೆ. ಈಗ ಕಂಡುಬರುತ್ತಿರುವ ಲಕ್ಷಣಗಳು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

ವೈಜ್ಞಾನಿಕ ಸಂಶೋಧನೆ
ಈ ಎಲ್ಲ ಹೊಸ ಆರೋಗ್ಯ ಸಮಸ್ಯೆಗಳು B.1.617.2ಕ್ಕೆ ಸಂಬಂಧಿಸಿದ್ದೇ ಅಥವಾ ಅಲ್ಲವೇ ಎಂಬುದನ್ನು ವಿಶ್ಲೇಷಿಸಲು ನಮಗೆ ಇನ್ನಷ್ಟು ವೈಜ್ಞಾನಿಕ ಸಂಶೋಧನೆಯ ಅಗತ್ಯವಿದೆ ಈ ವೈರಸ್ ಬಗ್ಗೆ ಕೆಲವು ಅಧ್ಯಯನಗಳು ನಡೆದರೂ ಅದನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸೋಂಕಿನ ಹಲವು ಲಕ್ಷಣಗಳು
ಹೊಟ್ಟೆನೋವು, ವಾಕರಿಕೆ, ಹಸಿವಿಲ್ಲದೆ ಇರುವಿಕೆ, ಶ್ರವಣ ದೋಷ ಮತ್ತು ಸಂದಿನೋವುಗಳು ಭಾರತದಲ್ಲಿನ ಕೋವಿಡ್ 19 ರೋಗಿಗಳಲ್ಲಿ ಕಂಡುಬರುತ್ತಿವೆ. ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ಗಳಲ್ಲಿ ಕಾಣಿಸಿಕೊಂಡ ಬೀಟಾ ಹಾಗೂ ಗಾಮಾ ತಳಿಗಳು ವಿಭಿನ್ನ ರೋಗ ಲಕ್ಷಣಗಳನ್ನು ಉಂಟುಮಾಡಿರುವುದಕ್ಕೆ ಪುರಾವೆಗಳಿಲ್ಲ.
Recommended Video

ಶ್ರವಣ ದೋಷ
ಅತೀವ ಗ್ಯಾಸ್ಟ್ರಿಕ್ ಶ್ರವಣ ಸಮಸ್ಯೆ, ಮತ್ತು ರಕ್ತ ಹೆಪ್ಪುಗಟ್ಟುವಿಕೆಯು ಗ್ಯಾಂಗ್ರಿನ್‌ಗೆ ಕಾರಣವಾಗುತ್ತಿವೆ. ಇದು ಕೋವಿಡ್ 19 ರೋಗಿಗಳಲ್ಲಿ ಸಾಮಾನ್ಯವಾಗಿ ಕಾಣಿಸದ ಲಕ್ಷಣ. ಇದು ಭಾರತದಲ್ಲಿ ಮಾರಕವಾಗಿರುವ ಡೆಲ್ಟಾ ವೈರಸ್‌ನಿಂದ ಉಂಟಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಹೊಸ ಅಪಾಯಕಾರಿ ತಳಿಯು ಆಸ್ಪತ್ರೆ ದಾಖಲೀಕರಣದ ಅಧಿಕ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ಗಳು ವರದಿ ಮಾಡಿವೆ.












Click it and Unblock the Notifications